ಸದ್ಯ ಅನೇಕ ಪ್ರದೇಶಗಳಲ್ಲಿ ಕೆಂಗಣ್ಣು ಸೋಂಕು (conjunctivitis) ತಲೆ ಎತ್ತಿದೆ ಮತ್ತು ವೇಗವಾಗಿ ಹಬ್ಬುತ್ತಿದೆ. ಎಲ್ಲ ವಯೋವರ್ಗದ ವ್ಯಕ್ತಿಗಳು ಪ್ರಮುಖವಾಗಿ ಮಕ್ಕಳು ಈ ರೋಗದಿಂದ ಪೀಡಿತರಾಗಿದ್ದಾರೆ. ‘ಕೆಂಗಣ್ಣು ರೋಗ’ ಎಂದರೇನು, ಅದಕ್ಕೆ ಕಾರಣವೇನು, ಅದರ ಲಕ್ಷಣಗಳು ಯಾವವು, ಅದಕ್ಕಾಗಿ ಯಾವ ಚಿಕಿತ್ಸೆಯನ್ನು ಪಡೆಯಬಹುದು, ಮುಂತಾದ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕೆಂಗಣ್ಣು ರೋಗ ಬಂದಿದ್ದರೆ ಅಥವಾ ಕೆಂಗಣ್ಣು ರೋಗ ಬರಬಾರದೆಂದು ಮುಂದೆ ಕೊಟ್ಟಿರುವ ದೇವತೆಗಳ ಜಪವನ್ನು ಮಾಡಿ |
---|
ಕೆಂಗಣ್ಣು ರೋಗ ಬಂದರೆ ಅಥವಾ ಕೆಂಗಣ್ಣು ರೋಗ ಬರಬಾರದೆಂದು, ದೇವತೆಗಳ ಮುಂದಿನ ಜಪವನ್ನು ‘ಪ್ರತಿದಿನ ೧ ಗಂಟೆ’ಯಂತೆ ಕನಿಷ್ಠ ಪಕ್ಷ ೭ ದಿನಗಳಾದರೂ ಮಾಡಬೇಕು. ಈ ನಾಮಜಪವನ್ನು ಸತತ ೧ ಗಂಟೆ ಮಾಡದೇ ಅರ್ಧರ್ಧ ಗಂಟೆಯಂತೆ ೨ ಸಲ ಮಾಡಬಹುದು.
ಓಂ ನಮೋ ಭಗವತೇ ವಾಸುದೇವಾಯ | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |’ ಇಲ್ಲಿ ನೀಡಲಾದ ನಾಮಜಪವನ್ನು ಅದೇ ಕ್ರಮದಿಂದ ಹೇಳಿದರೆ, ಅದು ಒಂದು ನಾಮಜಪವಾಗುತ್ತದೆ. ಹೀಗೆ ಈ ನಾಮಜಪವನ್ನು ಆಯೋಜಿತ ಕಾಲಾವಧಿಯವರೆಗೆ (ಉದಾ. ಅರ್ಧ ಅಥವಾ ೧ ಗಂಟೆಯವರೆಗೆ) ಪುನಃ ಪುನಃ ಜಪಿಸಬೇಕು. – (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (4.8.2023) ಇದರೊಂದಿಗೆ ಕೆಳಗೆ ನೀಡಿರುವಂತೆ ತಜ್ಞ ವೈದ್ಯರ ಸಲಹೆಯನ್ನು ಪಡೆದು ವೈದ್ಯಕೀಯ ಉಪಚಾರವನ್ನೂ ಮಾಡಿ. |
ಕೆಂಗಣ್ಣು ರೋಗ ಎಂದರೇನು?
ಕೆಂಗಣ್ಣು ರೋಗ, ಇದೊಂದು ಕಣ್ಣುಗಳ ಸೋಂಕಿನ ರೋಗವಾಗಿದೆ. ಇದರಲ್ಲಿ ಕಣ್ಣುಗಳಿಂದ ಜಿಗುಟಾದ ಸ್ರಾವವಾಗಿ ಕಣ್ಣುಗಳು ಕೆಂಪಗಾಗುತ್ತವೆ.
ವೈಜ್ಞಾನಿಕ ಭಾಷೆಯಲ್ಲಿ ಈ ರೋಗಕ್ಕೆ ಏನೆನ್ನುತ್ತಾರೆ?
ಈ ರೋಗಕ್ಕೆ ‘ಕನ್‌ಜಕ್ಟಿವೈಟಿಸ್’ (conjunctivitis) ಅಥವಾ ‘ರೆಡ್ ಐಜ್’ (red eyes) ಅಥವಾ ‘ಸೊರ್ ಐಜ್’ (sore eyes) ಎನ್ನುತ್ತಾರೆ. ಈ ರೋಗವು ಸಾಮಾನ್ಯವಾಗಿ ‘ಬ್ಯಾಕ್ಟೆರಿಯಲ್’ (ಜೀವಾಣು) ಅಥವಾ ‘ವೈರಲ್’ (ಸೋಂಕು) ಇರುತ್ತದೆ; ಆದರೆ ಪ್ರಸ್ತುತ ಸೋಂಕಿನ ಸ್ವರೂಪದ ಈ ಕಾಯಿಲೆ ‘ವೈರಲ್’ ಸ್ವರೂಪದ್ದಾಗಿದೆ, ಇದು ‘ಎಡೆನೋವೈರಸ್’ (Adenovirus) ಎಂಬ ವಿಷಾಣುವಿನಿಂದ ಬರುತ್ತದೆ.
ಈ ರೋಗದ ಲಕ್ಷಣಗಳೇನು?
ಮೊತ್ತಮೊದಲು ಕಣ್ಣುಗಳು ಕೆಂಪಾಗಿ ಕಣ್ಣುಗಳಿಂದ ಜಿಗುಟು ಸ್ವರೂಪದ ದ್ರವ ಬರುತ್ತದೆ. ಅನಂತರ ಕಣ್ಣುರೆಪ್ಪೆಗಳು ಊದಿಕೊಂಡು ವಿಶೇಷವಾಗಿ ಬೆಳಗ್ಗೆ ಪರಸ್ಪರ ಅಂಟಿಕೊಳ್ಳುತ್ತವೆ. ಒಟ್ಟಾರೆ ಕಣ್ಣುಗಳಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಸ್ರಾವವು ಹೆಚ್ಚಿದ್ದರೆ ಕೆಲವೊಮ್ಮೆ ಮಸುಕಾಗಿ ಕಾಣಿಸುತ್ತದೆ.
ಈ ಕಾಯಿಲೆಯ ಇತರ ಲಕ್ಷಣಗಳು ಯಾವುವು ?
ಈ ವಿಷಾಣುವಿನಿಂದಾಗಿ ಶೀತ, ಕೆಮ್ಮು, ತಲೆನೋವು, ಮೈಕೈ ನೋವು, ಕೆಲವೊಮ್ಮೆ ಜ್ವರ ಬರಬಹುದು.
ಈ ರೋಗ ಹರಡಲು ಕಾರಣವೇನು?
ಈ ರೋಗ ಸೋಂಕುಜನ್ಯವಾಗಿರುವುದರಿಂದ ತಕ್ಷಣ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಕೆಂಗಣ್ಣು ರೋಗ ಬಂದಿರುವ ವ್ಯಕ್ತಿಯು ತನ್ನ ಕಣ್ಣುಗಳನ್ನು ಸ್ಪರ್ಶಿಸಿ, ಹಾಗೆಯೇ ಆ ಕೈಗಳಿಂದ ಇತರ ವಸ್ತುಗಳನ್ನು ಸ್ಪರ್ಶಿಸಿದರೆ ಮತ್ತು ಎರಡನೇ ವ್ಯಕ್ತಿಯು ಆ ವಸ್ತುವನ್ನು ಸ್ಪರ್ಶಿಸಿ ಅದೇ ಕೈಯಿಂದ ಕಣ್ಣುಗಳನ್ನು ಮುಟ್ಟಿಕೊಂಡರೆ ಈ ರೋಗ ಆ ಎರಡನೇ ವ್ಯಕ್ತಿಗೆ ಬರುತ್ತದೆ. ಉದಾಹರಣೆಗೆ ಕೆಂಗಣ್ಣು ಬಂದಿರುವ ವ್ಯಕ್ತಿಯ ಕರವಸ್ತ್ರ, ಪೆನ್, ಟವೆಲ್, ಚಮಚ, ಕನ್ನಡಕ ಇತ್ಯಾದಿ ವಸ್ತುಗಳನ್ನು ಬಳಸಿದರೆ ಈ ರೋಗವು ಹೆಚ್ಚಾಗುತ್ತದೆ.
ಕೆಂಗಣ್ಣು ಬಂದಿರುವ ರೋಗಿಗಳು ವಹಿಸಬೇಕಾದ ಕಾಳಜಿಗಳೇನು?
ಅ. ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಮೊತ್ತಮೊದಲು ಸಾಧ್ಯವಾದರೆ ತಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು (isolation)
ಆ. ಕಣ್ಣುಗಳನ್ನು ಸ್ಪರ್ಶಿಸಬಾರದು ಮತ್ತು ಕಣ್ಣುಗಳನ್ನು ಉಜ್ಜಬಾರದು.
ಇ. ಕಣ್ಣುಗಳನ್ನು ಒರೆಸಿಕೊಳ್ಳಲು ‘ಟಿಶ್ಯು ಪೆಪರ್’ಅನ್ನು ಬಳಸಬೇಕು.
ಈ. ವೈದ್ಯಕೀಯ ಸಲಹೆಯಂತೆ ಚಿಕಿತ್ಸೆಯನ್ನು ಆರಂಭಿಸಬೇಕು. ಸ್ವಂತ ಮನಸ್ಸಿನಂತೆ ಔಷಧಿಗಳ ಅಂಗಡಿಗಳಿಂದ ಯಾವುದೇ ‘ಡ್ರಾಪ್ಸ್’ ಖರೀದಿಸಿ ಅದನ್ನು ಬಳಸಬಾರದು.
ಉ. ಹಗುರ ಮತ್ತು ತಾಜಾ ಆಹಾರವನ್ನು ಸೇವಿಸಬೇಕು.
ಊ. ಪದೇಪದೇ ಕೈಗಳನ್ನು ತೊಳೆಯುತ್ತಿರಬೇಕು.
ಎ. ನಮ್ಮ ವಸ್ತುಗಳನ್ನು ಇತರರಿಗೆ ಕೊಡಬಾರದು.
ಏ. ಚಿಕ್ಕ ಮಕ್ಕಳಲ್ಲಿ ಈ ರೋಗವು ಹೆಚ್ಚು ಇರುವುದರಿಂದ ಕೆಂಗಣ್ಣು ರೋಗ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
ಐ. ಬಟ್ಟಲಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಹತ್ತಿಯ ಉಂಡೆಯನ್ನು ನೆನೆಸಿ ಅದರಿಂದ ಕಣ್ಣುಗಳ ರೆಪ್ಪೆಗಳಿಗೆ ಹೊರಗಿನಿಂದ ಹಗುರವಾಗಿ ಶಾಖ ಕೊಡಬೇಕು.
ಔ. ಚುರುಕು (ತೀಕ್ಷ್ಣವಾದ) ಬೆಳಕಿನಿಂದ ರಕ್ಷಣೆ ಪಡೆಯಲು ಕಪ್ಪು ಕನ್ನಡಕ ಬಳಸಬೇಕು.
ನಿರೋಗಿ ವ್ಯಕ್ತಿಯು ಕೆಂಗಣ್ಣು ರೋಗ ಬರಬಾರದೆಂದು ಯಾವ ಕಾಳಜಿ ವಹಿಸಬೇಕು?
ಕಣ್ಣುಗಳನ್ನು ಅನಗತ್ಯ ಸ್ಪರ್ಶಿಸಬಾರದು ಅಥವಾ ಕಣ್ಣುಗಳನ್ನು ಉಜ್ಜಬಾರದು. ಸೋಂಕು ತಾಗಿದ ವ್ಯಕ್ತಿಯ ಸಂಪರ್ಕಕ್ಕೆ ಬಂದರೆ ನಿಯಮಿತ ಮಧ್ಯಂತರಗಳಲ್ಲಿ ನಿಮ್ಮ ಕೈಗಳನ್ನು ತೊಳೆಯಬೇಕು ಅಥವಾ ಸ್ಯಾನಿಟೈಸರ್ನ್ನು ಬಳಸಿ. ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಬಳಸಬೇಡಿ.
೮. ಈ ರೋಗವು ಎಷ್ಟು ಗಂಭೀರವಿದೆ?
ಈ ರೋಗವು ಗಂಭೀರ ಸ್ವರೂಪದ್ದೇನಲ್ಲ; ಆದರೆ ಯೋಗ್ಯ ಕಾಳಜಿ ತೆಗೆದುಕೊಳ್ಳದಿದ್ದರೆ ಅಥವಾ ದುರ್ಲಕ್ಷಿಸಿದರೆ, ಹಾಗೆಯೇ ಔಷಧಿ ಚಿಕಿತ್ಸೆ ಮಾಡದಿದ್ದರೆ ಈ ರೋಗದಿಂದ ತೊಂದರೆಗಳು ಉದ್ಭವಿಸುತ್ತವೆ ಮತ್ತು ನಂತರ ಈ ರೋಗವು ಗಂಭೀರ ಸ್ವರೂಪವನ್ನು ತಾಳುತ್ತದೆ. ಸೂಕ್ತವಾದ ಚಿಕಿತ್ಸೆ ಪಡೆದರೆ ಈ ರೋಗವು ಸಾಮಾನ್ಯವಾಗಿ 3 ರಿಂದ 7 ದಿನಗಳಲ್ಲಿ ಗುಣಮುಖವಾಗುತ್ತದೆ.
ಈ ರೀತಿ ಯೋಗ್ಯ ಕಾಳಜಿ ತೆಗೆದುಕೊಂಡರೆ ಕಣ್ಣುಗಳ ಈ ಸಮಸ್ಯೆಯನ್ನು ನಾವು ಜಯಿಸಬಹುದು. ವೈದ್ಯಕೀಯ ಸಲಹೆಯಂತೆ ಹೊಟ್ಟೆಯಲ್ಲಿ ನಿರ್ದಿಷ್ಟ ಆಯುರ್ವೇದಿಕ ಔಷಧಿಗಳನ್ನು ತೆಗೆದುಕೊಂಡರೆ ಈ ರೋಗವು ಗುಣಮುಖವಾಗಲು ಸಹಾಯವಾಗುತ್ತದೆ.
– ಡಾ. ನಿಖಿಲ ಮಾಳಿ, ಆಯುರ್ವೇದ ನೇತ್ರರೋಗತಜ್ಞರು, ಚಿಪಳೂಣ, ಮಹಾರಾಷ್ಟ್ರ.
ಕೆಂಗಣ್ಣು ಬಂದಿರುವವರು ಪಾಲಿಸಬೇಕಾದ ಆಹಾರ ಮತ್ತು ಔಷಧಿಯ ನಿಯಮಗಳು
ಅ. ಕಣ್ಣುಗಳು ಚೇತರಿಸಿಕೊಳ್ಳುವವರೆಗೆ ಬೇಳೆ ಸಾರು ಮತ್ತು ಅನ್ನ, ಬೇಳೆಯನ್ನು ಬೇಯಿಸಿ ಅದಕ್ಕೆ ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ತಯಾರಿಸಿದ ಸೂಪ್, ರವೆ ಉಪ್ಪಿಟ್ಟು ಅಥವಾ ಶಿರಾ, ಗಂಜಿ, ಅಕ್ಕಿ-ಬೇಳೆಯಿಂದ ಮಾಡಿದ ಖಿಚಡಿ, ರೊಟ್ಟಿಯಂತಹ ಪಚನಕ್ಕೆ ಹಗುರವಾದ ಆಹಾರವನ್ನು ಸೇವಿಸಬೇಕು.
ಆ. ದಿನಕ್ಕೆ 4-5 ಬಾರಿ 2-2 ಚಿಟಿಕೆ ತ್ರಿಫಲಾ ಚೂರ್ಣವನ್ನು ಅಗಿಯಿರಿ.
ಇ. ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಹೋಳುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ನುಗ್ಗೆ ಸೊಪ್ಪನ್ನು ಸಹ ಜಜ್ಜಿ ಕಣ್ಣುಗಳ ಮೇಲೆ ಕಟ್ಟಬಹುದು.
ಈ. ಒಂದು ಚಿಟಿಕೆ ಭೀಮಸೇನಿ ಕರ್ಪೂರವನ್ನು ಅಂಗೈಗಳ ನಡುವೆ ಉಜ್ಜಿಕೊಳ್ಳಬೇಕು. ಕಣ್ಣುಗಳನ್ನು ತೆರೆದು ಕಣ್ಣುಗಳ ಮುಂದೆ ಅಂಗೈಗಳನ್ನು ಇರಿಸಬೇಕು. ಅಂಗೈ ಕಣ್ಣಿಗೆ ಮುಟ್ಟಿಸಬಾರದು. ಈ ಪರಿಹಾರವು ಕಣ್ಣಿನ ಉರಿಯೂತವನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
– ವೈದ್ಯ ಮೇಘರಾಜ ಮಾಧವ ಪರಾಡ್ಕರ್, ಸನಾತನ ಆಶ್ರಮ, ರಾಮನಾಥಿ, ಗೋವಾ. (1.8.2023)