ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

Article also available in :

ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವಂತ ರಕ್ಷಣೆಯ ಸಿದ್ಧತೆ ಮಾಡಿಕೊಳ್ಳಿ!

‘ದೇವತೆಗಳು ಆಸುರೀ ಶಕ್ತಿಗಳ ಮೇಲೆ ವಿಜಯ ಸಾಧಿಸಿದ ದಿನವೆಂದರೆ ವಿಜಯದಶಮಿ! ವಿಜಯದಶಮಿಯ ಹಬ್ಬವೆಂದರೆ ಸೀಮೋಲ್ಲಂಘನ ಮಾಡಿ ಶತ್ರುಗಳ ರಾಜ್ಯವನ್ನು ಪ್ರವೇಶಿಸಿ ವಿಜಯವನ್ನು ಸಾಧಿಸುವ ಸನಾತನ ಸಂಪ್ರದಾಯವನ್ನು ಹೇಳುವ ಹಬ್ಬವಾಗಿದೆ.

ಇಂದು ಆಸುರೀ ಶಕ್ತಿಗಳು ಭಾರತವನ್ನು ವಿಭಜಿಸಲು ಕಾತುರಗೊಂಡಿವೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಹರಡಿದ್ದು ಭಯೋತ್ಪಾದಕ ಶಕ್ತಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತಿಯಾದ ದೌರ್ಜನ್ಯವನ್ನು ಎಸಗುತ್ತಿವೆ. ಕಾಶ್ಮೀರ, ಬಂಗಾಲ, ಆಸ್ಸಾಂ ಮತ್ತು ಪೂರ್ವೊತ್ತರ ರಾಜ್ಯಗಳು ಅಕ್ಷರಶಃ ಭಯೋತ್ಪಾದಕ ಶಕ್ತಿಗಳಿಂದ ನಲುಗಿ ಹೋಗಿವೆ. ನಕ್ಸಲ್‌ ಪಡೆಗಳು ಭಾರತದ ಶೇ. 30ರಷ್ಟು ಭೂಪ್ರದೇಶದಲ್ಲಿ ಸಮಾನಾಂತರ ಸರಕಾರ ನಡೆಸುತ್ತಿವೆ. ಭಯೋತ್ಪಾದಕ ಮತ್ತು ನಕ್ಸಲ್ ಶಕ್ತಿಗಳ ತೆರೆಮರೆಯ ಹಿಂದಿನ ಕೈಗಳು ಭಾರತದಾದ್ಯಂತ ಅಂತರ್ಯುದ್ಧದ ಸಂಚು ರೂಪಿಸುತ್ತಿವೆ. ಭಯೋತ್ಪಾದಕ ಶಕ್ತಿಗಳು ದೆಹಲಿಯಿಂದ ಹಿಡಿದು ಓಣಿಓಣಿಗಳವರೆಗೆ ಗಲಭೆಗಳ ಮಾಧ್ಯಮದಿಂದ ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಿ ಹಿಂದೂಗಳನ್ನು ಸೋಲಿಸುತ್ತಿವೆ. ಹಿಂದೂಗಳೇ, ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ವಂತ ರಕ್ಷಣೆಯ ಸಿದ್ಧತೆಯನ್ನು ಮಾಡಿಕೊಳ್ಳಿ. ಏಕೆಂದರೆ ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ!

ಹಿಂದೂಗಳೇ, ವಿಜಯದಶಮಿಯನ್ನು ಏಕೆ ಆಚರಿಸಬೇಕು? ಅಥವಾ ಅಪರಾಜಿತಾ ಪೂಜೆ ಮತ್ತು ಆಯುಧಪೂಜೆಯನ್ನು ಏಕೆ ಮಾಡಲಾಗುತ್ತದೆ ಎಂಬುದರ ಧರ್ಮಬೋಧನೆಯನ್ನು ಪಡೆಯಿರಿ. ನಿಜವಾದ ಸೀಮೋಲ್ಲಂಘನವೆಂದರೆ ‘ವಿಜಯಕ್ಕಾಗಿ ಶತ್ರುಗಳ ಸೀಮೆಯನ್ನು ಉಲ್ಲಂಘಿಸಿ ಯುದ್ಧವನ್ನು ಸಾರುವುದು’, ಅಪರಾಜಿತಾ ದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯ ಬಳಿ ಶಕ್ತಿಯನ್ನು ಬೇಡುವುದು’ ಮತ್ತು ಮಹಾನ್‌ ವ್ಯಕ್ತಿಗಳಿಗೆ, ಹಿರಿಯರಿಗೆ ಮಂದಾರದ ಎಲೆಗಳನ್ನು ನೀಡುವುದು ಎಂದರೆ ‘ವಿಜಯಶ್ರೀಯನ್ನು ಪಡೆಯಲು ಅವರ ಆರ್ಶೀವಾದ ಪಡೆಯುವುದಾಗಿದೆ’!

– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.

Leave a Comment