ಮಕರ ಸಂಕ್ರಾಂತಿಯ ಮಹತ್ವ
ಮಕರ ಸಂಕ್ರಾಂತಿಯ ದಿನದಂದು ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ.
‘ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. 2025 ರಲ್ಲಿ ಮಕರ ಸಂಕ್ರಾಂತಿಯು 14 ಜನವರಿ 2025, ಮಂಗಳವಾರದಂದು ಆಚರಿಸಲಾಗುವುದು. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ್ಲ (ಎಳ್ಳು ಬೆಲ್ಲದ ಜೊತೆ ಕಬ್ಬು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಕೂಡ) ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಾಧನೆಯ ದೃಷ್ಟಿಯಿಂದ ಮಕರ ಸಂಕ್ರಾಂತಿಯ ಮಹತ್ವ
ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.
ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಇವನ್ನು ಮಾಡಿ !
ಯಥಾಶಕ್ತಿ ದಾನ ಮಾಡುವುದು
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯಕ್ಕೆ ದಾನ ನೀಡಲು Donate ಕ್ಲಿಕ್ ಮಾಡಿ. ಈಗ ನಾವು ಮುಂದಿನ ಆವಶ್ಯಕತೆಗಳಿಗಾಗಿ ನಿಮ್ಮಿಂದ ಸಹಾಯವನ್ನು ಬಯಸುತ್ತೇವೆ…
ಅನ್ನದಾನ
1000 ಸಾಧಕರಿಗೆ ದಿನದ 2 ಹೊತ್ತಿನ ಪ್ರಸಾದಕ್ಕೆ ಒಂದು ತಿಂಗಳಿಗೆ ಬೇಕಾಗುವ ಧಾನ್ಯ, ತರಕಾರಿ, ಮಸಾಲೆಗಳ ವೆಚ್ಚ
ವೈದ್ಯಕೀಯ ಸಲಕರಣೆಗಳು
ವಯಸ್ಸಾದ ಹಾಗೂ ರೋಗಿಗಳ ಆರೈಕೆಗಾಗಿ ಡಿಫಿಬ್ರಿಲೇಟರ್, ಇಸಿಜಿ ಟ್ರಾಲಿ, ಇತ್ಯಾದಿ ಖರೀದಿಸಲು
ಅಡುಗೆಮನೆ ಉಪಕರಣಗಳು
ಪ್ರಸಾದ, ಮಹಾಪ್ರಸಾದ ತಯಾರಿಸಲು ಚಪಾತಿ ಯಂತ್ರ, ಹಿಟ್ಟು ಕಲಸುವ ಯಂತ್ರ, ದೊಡ್ಡ ಪಾತ್ರೆಗಳು ಇತ್ಯಾದಿ
ವಿದ್ಯುತ್ ಉಪಕರಣಗಳು
ಸನಾತನದ ಆಶ್ರಮಗಳಲ್ಲಿ ಅಳವಡಿಸಲು ನೀರಿನ ಫಿಲ್ಟರ್, ಬಿಸಿ ನೀರಿನ ಗೀಜರ್, ವಾಶಿಂಗ ಮಶೀನ್ ಇತ್ಯಾದಿ
ಗಣಕಯಂತ್ರದ ಉಪಕರಣಗಳು
ಗ್ರಂಥ ಹಾಗೂ ಜಾಲತಾಣದಲ್ಲಿ ಮಾಹಿತಿ ಪ್ರಸಾರಕ್ಕಾಗಿ Servers, Network switches, Software licences ಇತ್ಯಾದಿ
ಸಾರಿಗೆ ವ್ಯವಸ್ಥೆ
ಆಧ್ಯಾತ್ಮಪ್ರಸಾರಕ್ಕೆ ಬಳಸಲಾಗುವ ವಿದ್ಯುತ್ ವಾಹನಗಳು (ದ್ವಿಚಕ್ರ ಮತ್ತು ಚತುಶ್ಚಕ್ರ), ದುರುಸ್ತಿಗಾಗಿ ಸಾಮಗ್ರಿಗಳು, ಇತ್ಯಾದಿ
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯಕ್ಕೆ ದಾನ ನೀಡಲು Donate ಕ್ಲಿಕ್ ಮಾಡಿ. ಈಗ ನಾವು ಮುಂದಿನ ಆವಶ್ಯಕತೆಗಳಿಗಾಗಿ ನಿಮ್ಮಿಂದ ಸಹಾಯವನ್ನು ಬಯಸುತ್ತೇವೆ…
Donate !
For the spread of Dharma
Empower Spread of Spirituality, Receive Eternal Merit!
Donate your might during this Mahakumbh Mela
ಮಹಾಕುಂಭ ಮೇಳದಲ್ಲಿ, 200 ಪೂರ್ಣವೇಳೆ ಸಾಧಕರ ತಂಡವು ಸನಾತನ ಧರ್ಮದ ಸೇವೆಗಾಗಿ ಅವಿರತವಾಗಿ ಶ್ರಮಿಸಲಿದೆ. ಅಧ್ಯಾತ್ಮ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಪುಸ್ತಕ ಮಳಿಗೆಗಳು ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಹಿಡಿದು ಪ್ರತಿಯೊಬ್ಬರಿಗೂ ಆನಂದ ಮತ್ತು ಸ್ಪರ್ಧಾತ್ಮಕ ಜೀವನವನ್ನು ಎದುರಿಸಲು ಸ್ಫೂರ್ತಿ ನೀಡುವ ದೈನಂದಿನ ಸತ್ಸಂಗಗಳನ್ನು ಆಯೋಜಿಸುವ ವರೆಗೆ, ನಮ್ಮ ಚಟುವಟಿಕೆಗಳು ಸಾಧ್ಯವಾದಷ್ಟು ಭಕ್ತರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ (ಕುಂಭ ಮೇಳದಲ್ಲಿ 40 ಕೋಟಿಗೂ ಹೆಚ್ಚು ಭಕ್ತರನ್ನು ನಿರೀಕ್ಷಿಸಲಾಗಿದೆ). ಸನಾತನ ಸಂಸ್ಥೆಯ ಸಾಧಕರು ಮಹಾಕುಂಭದ ಪ್ರಮುಖ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕೊಡುಗೆ ನೀಡಿ, ಸಾತ್ವಿಕ ವಾತಾವರಣವನ್ನು ನಿರ್ಮಿಸುವಲ್ಲಿ ಪ್ರಯತ್ನಿಸಲಿದ್ದಾರೆ. ನಿಮ್ಮ ಉದಾರ ದೇಣಿಗೆಗಳು ಈ ಬೃಹತ್ ಕಾರ್ಯವನ್ನು ಸಾಧ್ಯವಾಗಿಸಲು, ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಅನುವು ಮಾಡಿಕೊಡಲಿವೆ.
ಶಾಸ್ತ್ರಗಳ ಪ್ರಕಾರ, ಪವಿತ್ರ ಕ್ಷೇತ್ರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳದ ಉದ್ದೇಶಕ್ಕಾಗಿ ದಾನ ನೀಡುವುದರಿಂದ ದಾನಿಗೆ ಅಪಾರ ಪುಣ್ಯ ಸಿಗುತ್ತದೆ. ಆದ್ದರಿಂದ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಹಣ, ಆಹಾರ ಅಥವಾ ಅಗತ್ಯ ವಸ್ತುಗಳ ಕೊಡುಗೆ ನೀಡಲು ಮತ್ತು ಈ ಉದಾತ್ತ ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ!
ನಿವಾಸ ವ್ಯವಸ್ಥೆ
₹19,35,000
Blankets, mattresses, bedsheets, pillows, thermal insulation, flat or tent for residence, generator & inverter
ಆಹಾರ
₹28,50,000
Meals & breakfast / snacks for 200 volunteers, meals & breakfast / snacks for guests, drinking water
ಪ್ರದರ್ಶನ – ಮಳಿಗೆಗಳು
₹26,00,000
Tents and Canopies, boards, banners for exhibition, 200 tables & chairs, red & green carpets
ಪ್ರಚಾರ ಪ್ರಸಾರ
₹4,85,000
Publicity of press conferences & other activities through newspapers, tv channels, print cost for invitation cards, hoarding, posters
ವಿದ್ಯುತ್ ಉಪಕರಣಗಳು
₹10,25,000
Sound system & lights for satsangs, electrical equipment, projector, screens etc.
ಇತರ
₹ 17,05,000
Stage for programmes, fuel for five 4-wheelers & ten 2-wheelers, medical supplies, stationery
Payment Options
ಯಥಾಶಕ್ತಿ ದಾನ ಮಾಡುವುದು
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯಕ್ಕೆ ದಾನ ನೀಡಲು Donate ಕ್ಲಿಕ್ ಮಾಡಿ –
ದಾನ ಮಾಡುವಂತಹ ವಸ್ತುಗಳು : ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’
ಬಾಗಿನ ನೀಡುವುದು
‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿರುವ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.
ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? : ಇತ್ತೀಚೆಗೆ ಸಾಬೂನು ಇಡುವ ಡಬ್ಬಿ, ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್‌ನ ವಸ್ತುಗಳಂತಹ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಸಾಧನೆಗೆ ಪೂರಕ ಹಾಗೂ ಮಾರ್ಗದರ್ಶಕವಾಗಿರುವ ವಸ್ತುಗಳನ್ನು ಕೊಡಬೇಕು.
ಅಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ
ಅಸಾತ್ತ್ವಿಕ ವಸ್ತುಗಳಲ್ಲಿ ಮಾಯಾವಿ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದರಿಂದ ಜೀವದಲ್ಲಿನ ಆಸಕ್ತಿಯು ಹೆಚ್ಚುತ್ತದೆ. ಅಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ಕೊಡುವಾಗ ಅಪೇಕ್ಷೆ, ಆಸಕ್ತಿಗಳ ಪ್ರಮಾಣವು ಹೆಚ್ಚಿರುವುದರಿಂದ ಕೊಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ. ಅದು ಹೇಗೆಂದು ನೋಡೋಣ…
ಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ
ಸಾತ್ತ್ವಿಕ ವಸ್ತುಗಳಿಂದಾಗಿ ಜೀವದಲ್ಲಿನ ಜ್ಞಾನಶಕ್ತಿ (ಪ್ರಜ್ಞಾಶಕ್ತಿ) ಮತ್ತು ಭಕ್ತಿಯು ಜಾಗೃತವಾಗುತ್ತದೆ. ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವಾಗ ಉದ್ದೇಶವು ಶುದ್ಧ ಮತ್ತು ಪ್ರೇಮಭಾವವು ಅಧಿಕವಾಗಿರುವುದರಿಂದ ನಿರಪೇಕ್ಷತೆಯು ಬರುತ್ತದೆ. ಇದರಿಂದ ಕೊಡು – ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ. ಅದು ಹೇಗೆಂದು ನೋಡೋಣ…
ಸನಾತನದ ಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳಿಗೋಸ್ಕರ ಭೇಟಿ ನೀಡಿ !
ತೀರ್ಥಸ್ನಾನವನ್ನು ಮಾಡುವುದು
ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.
ಎಳ್ಳು ಮತ್ತು ಸಂಕ್ರಾಂತಿಯ ಸಂಬಂಧ
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.
ಮಡಕೆ ಹಂಚುವುದು
ಸಂಕ್ರಾಂತಿಯ ಹಬ್ಬಕ್ಕೆ ಮುತ್ತೈದೆಯರು ಸಣ್ಣ ಮಣ್ಣಿನ ಮಡಕೆಗಳನ್ನು ಹಂಚುತ್ತಾರೆ. ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.
ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಿಸುವುದು
ಈ ದಿನ ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಣೆ ಮಾಡುವ ಅಥವಾ ಎಳ್ಳು-ಅಕ್ಕಿ ಮಿಶ್ರಿತ ಅರ್ಘ್ಯವನ್ನು ಅರ್ಪಣೆ ಮಾಡುತ್ತಾರೆ. ಪರ್ವದ ಈ ದಿನದಂದು ಎಳ್ಳಿಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಎಳ್ಳಿನ ಉಟಣೆ, ಎಳ್ಳುಮಿಶ್ರಿತ ನೀರಿನಿಂದ ಸ್ನಾನ, ಎಳ್ಳುಮಿಶ್ರಿತ ನೀರನ್ನು ಕುಡಿಯುವುದು, ಎಳ್ಳಿನಿಂದ ಹವನ ಮಾಡುವುದು, ಅಡುಗೆಯಲ್ಲಿ ಎಳ್ಳನ್ನು ಉಪಯೋಗಿಸುವುದು ಹಾಗೂ ಎಳ್ಳನ್ನು ದಾನ ಮಾಡುವುದು ಇವೆಲ್ಲ ಪಾಪನಾಶಕ ಕೃತಿಗಳಾಗಿವೆ.
ಅರಿಶಿಣ ಕುಂಕುಮದ ಮಹತ್ವ
ಮುತ್ತೈದೆಯರು ಮಕರ ಸಂಕ್ರಾಂತಿಯಿಂದ ರಥ ಸಪ್ತಮಿಯ ವರೆಗೆ ಅರಿಶಿಣ ಕುಂಕುಮದ ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ಕಾಲಾವಧಿಯ ನಂತರ ತೇಜದ ಪ್ರಾಬಲ್ಯ ಕ್ರಮೇಣ ಕಾಡಿಮೆಯಾಗುವುದರಿಂದ, ಈ ವಿಧಿಯಿಂದ ದೊರೆಯುವಂತಹ ಪುಣ್ಯದರ್ಶಕ ಫಲಪ್ರಾಪ್ತಿಯ ಪ್ರಮಾಣವೂ ಕಡಿಮೆಯಾಗುತ್ತದೆ. ಅರಿಶಿಣ ಕುಂಕುಮದ ಕಾರ್ಯಕ್ರಮದ ಮಾಧ್ಯಮದಿಂದ ಮುತ್ತೈದೆಯರ ರೂಪದಲ್ಲಿ ಮನೆಗೆ ಆಗಮಿಸಿರುವ ಸಾಕ್ಷಾತ್ ಆದಿಶಕ್ತಿಯ ಪೂಜೆಯನ್ನು ನೆರವೇರಿಸಿದಂತಾಗುತ್ತದೆ.
ಅರಿಶಿಣ ಕುಂಕುಮ ಕಾರ್ಯಕ್ರಮದ ಪಂಚೋಪಚಾರ
ಅರಶಿನ ಕುಂಕುಮ ಹಚ್ಚುವುದು
ಅರಶಿನ ಕುಂಕುಮ ಹಚ್ಚುವುದರಿಂದ ಮುತ್ತೈದೆಯಲ್ಲಿರುವ ಶ್ರೀದುರ್ಗಾದೇವಿಯ ಸುಪ್ತ ತತ್ತ್ವವು ಜಾಗೃತವಾಗಿ ಮುತ್ತೈದೆಯ ಕಲ್ಯಾಣವು ಆಗುತ್ತದೆ.
ಅತ್ತರು ಹಚ್ಚುವುದು
ಅತ್ತರಿನಿಂದ ಪ್ರಕ್ಷೇಪಿತವಾಗುವ ಗಂಧಕಣಗಳಿಂದ ದೇವತೆಯ ತತ್ತ್ವವು ಪ್ರಸನ್ನವಾಗಿ ಆ ಮುತ್ತೈದೆಗಾಗಿ ಕಡಿಮೆ ಕಾಲಾವಧಿಯಲ್ಲಿ ಕಾರ್ಯ ಮಾಡುತ್ತದೆ. (ಆ ಮುತ್ತೈದೆಯ ಕಲ್ಯಾಣವಾಗುತ್ತದೆ)
ಪನ್ನೀರನ್ನು ಸಿಂಪಡಿಸುವುದು
ಪನ್ನೀರಿನಿಂದ (ಗುಲಾಬ್ ಜಲ) ಪ್ರಕ್ಷೇಪಿಸುವ ಸುಗಂಧಿತ ಲಹರಿಗಳಿಂದ ದೇವತೆಯ ಲಹರಿಗಳು ಕಾರ್ಯನಿರತವಾಗಿ ವಾತಾವರಣವು ಶುದ್ಧವಾಗುತ್ತದೆ ಮತ್ತು ಉಪಚಾರ ಮಾಡುವ ಮುತ್ತೈದೆಗೆ ಕಾರ್ಯನಿರತ ದೇವತೆಯ ಸಗುಣ ತತ್ತ್ವದಿಂದ ಹೆಚ್ಚು ಲಾಭ ಸಿಗುತ್ತದೆ.
ಉಡಿ ತುಂಬಿಸುವುದು
ಉಡಿ ತುಂಬಿಸುವುದು ಅಂದರೆ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯನ್ನು ಆಹ್ವಾನಿಸುವುದು. ಉಡಿ ತುಂಬಿಸುವ ಪ್ರಕ್ರಿಯೆಯಿಂದ ಬ್ರಹ್ಮಾಂಡದಲ್ಲಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯು ಕಾರ್ಯನಿರತವಾಗುವುದರಿಂದ ಶ್ರದ್ಧೆಯಿಂದ ಉಡಿ ತುಂಬಿಸುವ ಜೀವದ ಅಪೇಕ್ಷಿತ ಇಚ್ಛೆಯು ಪೂರ್ಣವಾಗುತ್ತದೆ.
ಬಾಗಿನ ನೀಡುವುದು
ಬಾಗಿನ ನೀಡುವಾಗ ಯಾವಾಗಲೂ ಸೆರಗಿನ ತುದಿಯನ್ನು ಬಾಗಿನಕ್ಕೆ ಆಧಾರ ನೀಡಿ ನಂತರ ಅದನ್ನು ಕೊಡಲಾಗುತ್ತದೆ. ಬಾಗಿನ ನೀಡುವುದು ಅಂದರೆ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದ ತ್ಯಾಗದೊಂದಿಗೆ ಶರಣಾಗುವುದು. ಸೆರಗಿನ ತುದಿಯ ಆಧಾರ ನೀಡುವುದು ಅಂದರೆ ಶರೀರದ ಮೇಲಿರುವ ವಸ್ತ್ರದ ಆಸಕ್ತಿಯನ್ನು ಸಹ ತ್ಯಾಗ ಮಾಡಿ ದೇಹಬುದ್ಧಿಯನ್ನು ತ್ಯಾಗ ಮಾಡಲು ಕಲಿಯುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಗಳು ಬೇಗನೇ ಪ್ರಸನ್ನರಾಗಿ ಬಾಗಿನ ನೀಡುವ ಮುತ್ತೈದೆಗೆ ಇಚ್ಛಿತ ಫಲಪ್ರಾಪ್ತಿಯಾಗುತ್ತದ
ಕಿಂಕ್ರಾಂತ
ಸಂಕ್ರಾಂತಿಯ ಮರುದಿನವನ್ನು ಕಿಂಕ್ರಾಂತ ಅಥವಾ ಕರಿದಿನ ಎನ್ನಲಾಗುತ್ತದೆ. ಈ ದಿನ ದೇವಿಯು ಕಿಂಕರಾಸುರನೆಂಬ ಅಸುರನನ್ನು ವಧಿಸಿದ್ದಳು.
ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ !
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.
ಮಕರ ಸಂಕ್ರಾಂತಿಯ ದಿನ ಸೂರ್ಯನ ಉತ್ತರಾಯಣವು ಆರಂಭವಾಗುತ್ತದೆ. ಸೂರ್ಯನ ಉತ್ತರಾಯಣ ಆರಂಭವಾಗುವುದನ್ನೇ ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದೆಂದು ಹೇಳುತ್ತಾರೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದರಿಂದ ಸೂರ್ಯನ ಉತ್ತರಾಯಣದಲ್ಲಿ, ಬ್ರಹ್ಮಾಂಡದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣವು ಅಧಿಕ ವಾಗಿರುತ್ತದೆ. ಆದುದರಿಂದ ಈ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿರುತ್ತದೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗಿರುವುದರಿಂದ ಈ ಕಾಲದಲ್ಲಿ ವಾತಾವರಣವು ಕೂಡ ಎಂದಿಗಿಂತಲೂ ಹೆಚ್ಚು ಶೀತಲವಾಗಿರುತ್ತದೆ. ಈ ಕಾಲದಲ್ಲಿ ಎಳ್ಳನ್ನು ತಿನ್ನುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಳ್ಳೆಣ್ಣೆಯಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಕ್ಷಮತೆಯು ಅಧಿಕವಾಗಿರುತ್ತದೆ, ಅಲ್ಲದೆ ಎಳ್ಳನ್ನು ತಿನ್ನುವುದರಿಂದ ಶರೀರದಲ್ಲಿನ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ.
ಇದರಿಂದಾಗಿ ಜೀವವು ವಾತಾವರಣದೊಂದಿಗೆ ಬೇಗನೆ ಹೊಂದಿಕೊಳ್ಳುತ್ತದೆ; ಏಕೆಂದರೆ ಈ ಸಮಯದಲ್ಲಿ ಬ್ರಹ್ಮಾಂಡದ ಚಂದ್ರನಾಡಿಯೇ ಕಾರ್ಯನಿರತವಾಗಿರುತ್ತದೆ. ಜೀವದ ಶರೀರದಲ್ಲಿನ ವಾತಾವರಣ ಮತ್ತು ಬ್ರಹ್ಮಾಂಡದಲ್ಲಿನ ವಾತಾವರಣ ಒಂದಾಗುವುದರಿಂದ ಸಾಧನೆ ಮಾಡುವಾಗ ಜೀವಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.
– ಶ್ರೀಗುರುತತ್ತ್ವ (೧೪.೧.೨೦೦೪, ಮಧ್ಯಾಹ್ನ ೩.೩೩)
ಮಕರ ಸಂಕ್ರಾಂತಿ ದಿನದ ಇತರ ವೈಶಿಷ್ಟ್ಯಗಳು
ಭೀಷ್ಮಾಚಾರ್ಯರು ಪ್ರಾಣ ತ್ಯಜಿಸಿದ ದಿನ
ಮಹಾಭಾರತ ಯುದ್ಧದ ಸಮಯದಲ್ಲಿ ೧೦ನೇ ದಿನ ಅರ್ಜುನನ ಅಸಂಖ್ಯ ಬಾಣಗಳಿಂದ ತಯಾರಾದ ಶರಶಯ್ಯೆಯಲ್ಲಿ ೫೮ ದಿನಗಳ ಕಾಲ ಮಲಗಿದ್ದು, ಉತ್ತರಾಯಣದ ಮೊದಲನೇ ದಿನ ಆ ಇಚ್ಛಾಮರಣಿ ಭೀಷ್ಮಾಚಾರ್ಯರು ತನ್ನ ಪ್ರಾಣವನ್ನು ತ್ಯಜಿಸಿದರು.
ಪ್ರಕಾಶಮಯ ಕಾಲಾವಧಿ
ಈ ದಿನದಂದು ಯಜ್ಞದಲ್ಲಿ ಅರ್ಪಿಸಿದ ಹವಿರ್ದ್ರವ್ಯಗಳನ್ನು (ಆಹುತಿ) ಸ್ವೀಕರಿಸಲು ದೇವತೆಗಳು ಅವತರಿಸುತ್ತಾರೆ. ಅವರು ಆಗಮಿಸುವ ಪ್ರಕಾಶಮಯ ಮಾರ್ಗದಿಂದಲೇ ಪುಣ್ಯಾತ್ಮಗಳು ಶರೀರ ತ್ಯಜಿಸಿ ಸ್ವರ್ಗಾದಿ ಲೋಕಗಳನ್ನು ಪ್ರವೇಶಿಸುತ್ತಾರೆ. ಆದುದರಿಂದ ಈ ಕಾಲಾವಧಿಯನ್ನು ಪ್ರಕಾಶಮಯ ಕಾಲಾವಧಿ ಎಂದು ಪರಿಗಣಿಸಲಾಗಿದೆ.
Very good
Very nice information
ಸಂಕ್ರಾತಿ ಹಬ್ಬದ ವಿಶೇಷ ಮತ್ತು ಏಕೆ ಆಚರಿಸಬೇಕು, ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಓದಿದೆ, ಧನ್ಯವಾದ.
ನಮಸ್ಕಾರ
ಈ ಮಾಹಿತಿಯನ್ನು ನಿಮ್ಮ ಪರಿಚಯದವರಿಗೂ ಕಳುಹಿಸಿ, ಅವರೂ ಸಂಕ್ರಾಂತಿಯ ಲಾಭವನ್ನು ಪಡೆಯುವಂತೆ ಆಗಲಿ!
ಇಂದಿನ ಮಕರ ಸಂಕ್ರಾಂತಿ ಯ ವಿಶೇಷತೆ ಹಾಗೂ ಆಚರಣೆಯ ಪದ್ಧತಿ ವಿಧಿ ವಿಧಾನಗಳನ್ನು ಬಹಳ ಚೆನ್ನಾಗಿ ವಿವರಿಸಿ ಹೇಳಿದ್ದೀರಿ. ಧನ್ಯವಾದಗಳು
🙏