ಹೋಳಿ ಆಚರಿಸುವ ಪದ್ಧತಿ (Holi 2024)

ಹೋಳಿ ಹಬ್ಬವು ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಆಚರಿಸಲ್ಪಡುವ ಬಣ್ಣಗಳ ಆನಂದೋತ್ಸವ! ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ. 2024 ರಲ್ಲಿ ಹೋಳಿ ಹಬ್ಬವನ್ನು ಮಾರ್ಚ 24 ರಂದು ಆಚರಿಸಲಾಗುವುದು. 

ಹೋಳಿ ಅಥವಾ ಹೋಲಿಕೆ ಎಂದರೆ ಒಂದು ದೇವಿಯೇ. ಅರಿಷಡ್ವರ್ಗಗಳ ಮೇಲೆ ಜಯಗಳಿಸುವ ಕ್ಷಮತೆಯು ಈ ಹೋಲಿಕೆಯಲ್ಲಿರುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳ ನಾಶವಾಗಲೆಂದು ಹೋಲಿಕಾ ದೇವಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.

ಹೋಳಿಯನ್ನು ಏಕೆ ಆಚರಿಸುತ್ತೇವೆ ?

ಹೋಳಿ ಎಂದರೆ ಅಗ್ನಿ ದೇವತೆಯ ಉಪಾಸನೆಯ (ಪೂಜೆಯ) ಒಂದು ಅಂಶವಾಗಿದೆ. ಹೋಳಿಯ ದಿನದಂದು ಅಗ್ನಿ ದೇವತೆಯ ತತ್ತ್ವವು ಶೇ. ೨ ರಷ್ಟು ಕಾರ್ಯನಿರತವಾಗಿರುತ್ತದೆ. ಅಗ್ನಿ ದೇವತೆಯ ಉಪಾಸನೆಯಿಂದ ಮನುಷ್ಯನಲ್ಲಿ ತೇಜ ತತ್ತ್ವವು ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ರಜ-ತಮ ಇವುಗಳ ಪ್ರಮಾಣವು ಕಡಿಮೆಯಾಗುತ್ತದೆ. ಆದುದರಿಂದ ಹೋಳಿಯ ದಿನದಂದು ಅಗ್ನಿ ದೇವತೆಗೆ ಪೂಜೆಯನ್ನು ಸಲ್ಲಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. 

ಹೋಳಿ ಹಬ್ಬ. ಹೋಳಿ ಹೇಗೆ ಏಕೆ ಆಚರಿಸುತ್ತೇವೆ
ಹೋಳಿ ಹಬ್ಬ. ಹೋಳಿ ಹೇಗೆ ಏಕೆ ಆಚರಿಸುತ್ತೇವೆ

ಹೋಳಿ ಹಬ್ಬದ ಇತಿಹಾಸ

ಅ. ಹಿಂದಿನ ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ರಾಕ್ಷಸಿಯು ಒಂದೂರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು; ಆದರೆ ಅವಳು ಹೋಗಲಿಲ್ಲ. ಆಗ ನಾರದಮುನಿಗಳು ಸಾಮ್ರಾಟ್ ಯುಧಿಷ್ಠಿರನಿಗೆ ಒಂದು ಉಪಾಯವನ್ನು ಹೇಳಿದರು, ಅದೇ ಹೋಲಿಕಾ ಮಹೋತ್ಸವ. ಜನರು ಹೋಳಿ ಹೊತ್ತಿಸಿ, ವಾದ್ಯಗಳನ್ನು ಬಾರಿಸುತ್ತಾ ಆ ರಾಕ್ಷಸಿಯನ್ನು ಊರಿನಿಂದ ಓಡಿಹೋಗುವಂತೆ ಮಾಡಿದರು. (ಸ್ಮೃತಿಕೌಸ್ತುಭ- ಭವಿಷ್ಯೋತ್ತರ ಪುರಾಣ)

ಆ. ಉತ್ತರ ಭಾರತದಲ್ಲಿ ಹೋಳಿಯ ಮೊದಲ ಮೂರು ದಿನ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಮತ್ತು ಅವನ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಗೆ ಪೂತನಾ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ.

ಇ. ಒಮ್ಮೆ ಭಗವಾನ ಶಂಕರನು ತಪಾಚರಣೆಯಲ್ಲಿ ಮಗ್ನರಾಗಿದ್ದನು. ಅವನು ಸಮಾಧಿಯಲ್ಲಿದ್ದನು. ಆಗ ಮನ್ಮಥನು ಶಿವನ ಅಂತಃಕರಣದಲ್ಲಿ ಪ್ರವೇಶಿಸಿದನು. ‘ನನ್ನನ್ನು ಯಾರು ಚಂಚಲಗೊಳಿಸುತ್ತಿದ್ದಾರೆ’, ಎಂದು ಶಂಕರನು ಕಣ್ಣುಗಳನ್ನು ತೆರೆದ ಮತ್ತು ಮನ್ಮಥನನ್ನು ನೋಡಿದ ಕೂಡಲೇ ಮನ್ಮಥ ಸುಟ್ಟು ಭಸ್ಮವಾದ! ದಕ್ಷಿಣ ಭಾರತದ ಜನರು ಕಾಮದೇವನ ದಹನದ ಈ ಉತ್ಸವವನ್ನು ಆಚರಿಸುತ್ತಾರೆ. ಈ ದಿನದಂದು ಮನ್ಮಥನ ಪ್ರತಿಮೆಯನ್ನು ಮಾಡಿ ಅದರೆ ದಹನ ಮಾಡುತ್ತಾರೆ. ಈ ಮನ್ಮಥನನ್ನು ಗೆಲ್ಲುವ ಕ್ಷಮತೆಯು ಹೋಳಿಯಲ್ಲಿದೆ!

ಹೋಳಿ ಹಬ್ಬವನ್ನು ಆಚರಿಸುವ ಪದ್ಧತಿ

ಅ. ಸ್ಥಾನ ಮತ್ತು ಸಮಯ

ದೇವಸ್ಥಾನದ ಮುಂದೆ ಅಥವಾ ಅನುಕೂಲತೆ ಇರುವಲ್ಲಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಬೇಕು. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.

ಆ. ಹೋಳಿಯ ರಚನೆ

೧. ಹೋಳಿಯನ್ನು ಆಚರಿಸುವ ಸ್ಥಳವನ್ನು ಸೂರ್ಯಾಸ್ತವಾಗುವ ಮೊದಲು ಗುಡಿಸಿ ಸಾರಿಸಿಕೊಳ್ಳಬೇಕು. 

೨. ಅಲ್ಲಿ ಸೆಗಣಿಯ ನೀರುವ ಚಿಮುಕಿಸಬೇಕು. 

೩. ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡ, ಅಡಿಕೆ ಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಯಾವುದು ಸುಲಭವಾಗಿ ಸಿಗುತ್ತದೆಯೋ ಅದನ್ನು ಉಪಯೋಗಿಸಬಹುದು.

೪. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ರಚಿಸುತ್ತಾರೆ. ಕಟ್ಟಿಗೆಗಳ ಎತ್ತರ ಸಾಧಾರಣ ೪-೬ ಅಡಿಯಿರಬೇಕು.

೫. ಇದರ ಸುತ್ತಲೂ ರಂಗೋಲಿಯನ್ನು ಬಿಡಿಸಿ.

ಹೋಳಿಯ ರಚನೆಯ ಚಿತ್ರವನ್ನು ಕೆಳಗೆ ನೀಡಲಾಗಿದೆ.

holi+rachana.jpg

ಇ. ಹೋಳಿಯ ಪೂಜೆ

೧. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ ಹೋಳಿಯ ಮುಂದೆ ಮಣೆಯ ಮೇಲೆ ಕುಳಿತುಕೊಳ್ಳಬೇಕು.

೨. ಆಚಮನ ಮಾಡಿ ದೇಶಕಾಲದ ಕಥನ ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಪೂಜೆಯ ಸಂಕಲ್ಪ ಮಾಡಬೇಕು. 

(ದೇಶಕಾಲಕ್ಕಾಗಿ ಪಂಚಾಂಗವನ್ನು ನೋಡಿ. ಅಥವಾ ಸನಾತನ ಪಂಚಾಂಗ ಆ್ಯಪ್ ಡೌನ್‌ಲೋಡ್ ಮಾಡಿ)

೩. ಗಂಧ-ಪುಷ್ಪ ಅರ್ಪಿಸಿ ಕಲಶ ಹಾಗೂ ಘಂಟೆಯ ಪೂಜೆ ಮಾಡಬೇಕು.

೪. ತುಲಸಿ ದಳದಿಂದ ಪೂಜೆಯ ಸಾಹಿತ್ಯದ ಮೇಲೆ ನೀರು ಪ್ರೋಕ್ಷಣೆ ಮಾಡಬೇಕು.

೫. ಕರ್ಪೂರ ಬಳಸಿ ‘ಹೋಲಿಕಾಯೈ ನಮಃ|’ ಎಂದು ಹೇಳಿ ಹೋಳಿಯನ್ನು ಹೊತ್ತಿಸಬೇಕು.

೬. ಹೋಳಿಗೆ ಗಂಧ, ಅರಿಸಿನ, ಕುಂಕುಮವನ್ನು ಅರ್ಪಿಸಿ ಪೂಜೆಯನ್ನು ಆರಂಭಿಸಬೇಕು. ಹೂವುಗಳನ್ನು ಅರ್ಪಿಸಿ, ಊದುಬತ್ತಿ ಹಾಗೂ ದೇಪವನ್ನು ತೋರಿಸಬೇಕು. 

೭. ಹೋಳಿಯಲ್ಲಿ ಹೋಳಿಗೆಯ ನೈವೇದ್ಯವನ್ನು ಅರ್ಪಿಸಬೇಕು.

೮. ಹೋಳಿಯ ಮೇಲೆ ಹಾಲು-ತುಪ್ಪದ ಮಿಶ್ರಣವನ್ನು ಪ್ರೋಕ್ಷಣೆ ಮಾಡಬೇಕು.

೯. ಹೋಳಿ ಹೊತ್ತಿದ ನಂತರ ಅದರ ಸುತ್ತ ೩ ಬಾರಿ ಪ್ರದಕ್ಷಿಣೆ ಹಾಕಬೇಕು.

೧೦. ಪ್ರದಕ್ಷಿಣೆ ಹಾಕಿದ ನಂತರ ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು.

೧೧. ಎಲ್ಲರೂ ಸೇರಿ ಅಗ್ನಿಯ ಭಯದಿಂದ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸಿ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಸಿಹಿಕಂಚಿ (ಚಕೋತ) ಮುಂತಾದ ಹಣ್ಣುಗಳನ್ನು ಹಂಚಬೇಕು. ಆ ರಾತ್ರಿಯನ್ನು ನೃತ್ಯಗಾಯನ ಗಳಲ್ಲಿ ಕಳೆಯಬೇಕು.

೧೨. ಮರುದಿನ ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು. 

holi+sukshma+chitre.jpg

ಚಿತ್ರದಲ್ಲಿರುವ ಮಾಹಿತಿಯನ್ನು ಓದಲು ಚಿತ್ರಕ್ಕೆ ಕ್ಲಿಕ್ ಮಾಡಿ

ಬೊಬ್ಬೆ ಹೊಡೆಯುವುದರ ಅರ್ಥ

ಫಾಲ್ಗುಣ ಹುಣ್ಣಿಮೆಗೆ ಪೂರ್ವಾ ಫಾಲ್ಗುಣ ನಕ್ಷತ್ರ ಬರುತ್ತದೆ. ‘ಭಗ’ ದೇವತೆಯು ಈ ನಕ್ಷತ್ರದ ದೇವತೆಯಾಗಿದ್ದಾಳೆ. ‘ಭಗ’ದ ಪ್ರಚಲಿತ ಅರ್ಥವೆಂದರೆ ಜನನೇಂದ್ರಿಯ ಅಂದರೆ ಸ್ತ್ರೀಯ ಜನನೇಂದ್ರಿಯ. ಆದುದರಿಂದ ಭಗದ ಹೆಸರಿನಿಂದ ಬೊಬ್ಬೆ ಹೊಡೆಯಬೇಕು. ಇದು ಒಂದು ರೀತಿಯ ಪೂಜೆಯೇ ಆಗಿದೆ. ಇದು ಆ ದೇವತೆಯ ಸನ್ಮಾನವೇ ಆಗಿದೆ ಎಂದು ತಿಳಿಯಬೇಕು. ಇದು ಉಪಾಸನೆಯಾಗಿರುವುದರಿಂದ ಅಲ್ಲಿ ಅವಾಚ್ಯ ಶಬ್ದಗಳನ್ನು ಬಳಸಬಾರದು.  ಕೆಲವೆಡೆ ಹೋಳಿಯ ಬೂದಿ, ಸಗಣಿ, ಕೆಸರು ಮುಂತಾದವುಗಳನ್ನು ಮೈಗೆ ಬಳಿದುಕೊಂಡು ನೃತ್ಯ ಮಾಡುವ ಪದ್ಧತಿಯೂ ಇದೆ.

ಧೂಳಿವಂದನ

ತಿಥಿ

ಫಾಲ್ಗುಣ ಕೃಷ್ಣ ಪ್ರತಿಪದೆ ಅಂದರೆ ಹೋಳಿ ಹಬ್ಬದ ಮಾರನೇ ದಿನ.

ಪೂಜೆ

ಈ ದಿನ ಸೂರ್ಯೋದಯದ ಸಮಯದಲ್ಲಿ ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುಬೇಕು. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಙ್ಕರೇಣ ಚ|
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ||

ಅರ್ಥ : ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ; ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು.

ಈ ರೀತಿ ಪ್ರಾರ್ಥನೆಯನ್ನು ಮಾಡಿ ಹೋಳಿಯ ಬೂದಿಯನ್ನು ವಂದಿಸಬೇಕು. ನಂತರ ಕೆಳಗೆ ಕುಳಿತು ಬಲಗೈಯ ಹೆಬ್ಬೆರಳು ಮತ್ತು ಮಧ್ಯಮೆಯಿಂದ ಚಿಟಿಕೆ ವಿಭೂತಿಯನ್ನು ತೆಗೆದುಕೊಂಡು ಮಧ್ಯಮೆಯಿಂದ ಹಣೆಗೆ (ಆಜ್ಞಾಚಕ್ರದ ಸ್ಥಾನದಲ್ಲಿ) ಹಚ್ಚಿಕೊಳ್ಳಬೇಕು. ನಂತರ ಆ ಬೂದಿಯನ್ನು ಇಡೀ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ. (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ.) ಬೆಳಗ್ಗೆ ಅಶ್ಲೀಲ ಮಾತುಗಳನ್ನಾಡಿ ಹೋಳಿಯ ರಕ್ಷೆಯನ್ನು ವಿಸರ್ಜಿಸಬೇಕು. ಅನಂತರ ಹೋಳಿಯ ಪ್ರಾರ್ಥನೆ ಮಾಡಬೇಕು.

ರಂಗಪಂಚಮಿ

ತಿಥಿ

ಫಾಲ್ಗುಣ ಕೃಷ್ಣ ಪಂಚಮಿ (ಇತ್ತೀಚೆಗೆ ಹಲವೆಡೆ ಹೋಳಿಯ ಮರುದಿನ ರಂಗಪಂಚಮಿಯನ್ನು ಆಚರಿಸಲಾಗುತ್ತದೆ.)

ಉತ್ಸವ

ಈ ದಿನದಂದು ಇತರರ ಮೇಲೆ ಗುಲಾಲು, ಬಣ್ಣದ ನೀರು ಮುಂತಾದವುಗಳನ್ನು ಎರಚುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಙ್ಕರೇಣ ಚ|
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ||

ಅರ್ಥ : ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ; ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು.

ಈ ರೀತಿ ಪ್ರಾರ್ಥನೆಯನ್ನು ಮಾಡಿ ಹೋಳಿಯ ಬೂದಿಯನ್ನು ವಂದಿಸಬೇಕು. ನಂತರ ಕೆಳಗೆ ಕುಳಿತು ಬಲಗೈಯ ಹೆಬ್ಬೆರಳು ಮತ್ತು ಮಧ್ಯಮೆಯಿಂದ ಚಿಟಿಕೆ ವಿಭೂತಿಯನ್ನು ತೆಗೆದುಕೊಂಡು ಮಧ್ಯಮೆಯಿಂದ ಹಣೆಗೆ (ಆಜ್ಞಾಚಕ್ರದ ಸ್ಥಾನದಲ್ಲಿ) ಹಚ್ಚಿಕೊಳ್ಳಬೇಕು. ನಂತರ ಆ ಬೂದಿಯನ್ನು ಇಡೀ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ. (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ.) ಬೆಳಗ್ಗೆ ಅಶ್ಲೀಲ ಮಾತುಗಳನ್ನಾಡಿ ಹೋಳಿಯ ರಕ್ಷೆಯನ್ನು ವಿಸರ್ಜಿಸಬೇಕು. ಅನಂತರ ಹೋಳಿಯ ಪ್ರಾರ್ಥನೆ ಮಾಡಬೇಕು.

ಹೋಳಿ ಆಚರಿಸುವುದರ ಲಾಭಗಳು

ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನ, ಹಾಗೆಯೇ ನೈಸರ್ಗಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳೊಂದಿಗೆ ಹೋಳಿಯ ಸಂಬಂಧವಿದೆ. ಹೋಳಿ ಜಯದ ಪ್ರತೀಕ. ಕೆಟ್ಟ ಚಟಗಳನ್ನು, ವಿಚಾರಗಳನ್ನು ಹೋಗಲಾಡಿಸಿ ಸದಾಚಾರದ ಹಾದಿಯನ್ನು ತೋರಿಸುವ ಹಬ್ಬವಿದು. ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸಿ ಚೈತನ್ಯವನ್ನು ಪಡೆಯುವ ದಿನವಿದು. ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿಯಲು ಶಕ್ತಿಯನ್ನು ಪಡೆಯಲು ಇದು ಒಂದು ಸುವರ್ಣ ಅವಕಾಶ. ವಸಂತ ಋತುವಿನ ಆಗಮನದ ಪ್ರೀತ್ಯರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಗ್ನಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಇದಾಗಿದೆ.

ಹೋಳಿಯ ದಿನದಂದು ಹೋಳಿ ಪ್ರಜ್ವಲಿಸುವ ಮಾಧ್ಯಮದಿಂದ ಯಜ್ಞ ಮಾಡುವುದರಿಂದ, ವಿಶ್ವದಲ್ಲಿರುವ ದೇವತೆಗಳ ತತ್ತ್ವದ ತರಂಗಗಳು ಸಕ್ರಿಯಗೊಂಡು ಯಜ್ಞದ ಕಡೆಗೆ ಆಕರ್ಷಿಸಲ್ಪಡುತ್ತವೆ. ಈ ತರಂಗಗಳನ್ನು ಮಂತ್ರಗಳಿಂದ ಆಹ್ವಾನಿಸಲಾಗುತ್ತದೆ, ಅಂದರೆ, ಅವುಗಳನ್ನು ಸಕ್ರಿಯಗೊಸಿಲಾಗುತ್ತದೆ. ಯಜ್ಞದಲ್ಲಿ ಹವಿರ್ದ್ರವಗಳನ್ನು ಅರ್ಪಿಸುವ ಮೂಲಕ ಅಗ್ನಿಯನ್ನು ಹೊತ್ತಿಸಲಾಗುತ್ತದೆ. ಅದರ ಜ್ವಾಲೆಯಿಂದ ಉಂಟಾಗುವ ವಾಯು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧ ಮತ್ತು ಸಾತ್ವಿಕವಾಗಿಸುತ್ತದೆ. ಇದರರ್ಥ, ವಾತಾವರಣವು ಆಗ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಪಡೆಯುತ್ತದೆ. ಪಂಚ ತತ್ತ್ವಗಳ ಸಹಾಯದಿಂದ, ದೇವತೆಗಳ ತತ್ತ್ವಗಳ ತರಂಗಗಳು ಈ ವಾತಾವರಣದ ಕಕ್ಷೆಯನ್ನು ಪ್ರವೇಶಿಸುತ್ತವೆ. ಅದರಿಂದ ಜೀವಕ್ಕೂ ಆ ದೇವತೆಗಳ ತತ್ತ್ವಗಳ ಅನುಭೂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಹೋಳಿ ಮತ್ತು ನಮ್ಮ ಧರ್ಮ ಕರ್ತವ್ಯ

ಹೋಲಿಕೋತ್ಸವದಲ್ಲಿನ ಅಯೋಗ್ಯ ರೂಢಿಗಳನ್ನು ತಡೆಗಟ್ಟುವುದು
ನಮ್ಮ ಧರ್ಮಕರ್ತವ್ಯವಾಗಿದೆ!

ಸದ್ಯ ಹೋಳಿಯ ಹೆಸರಿನಲ್ಲಿ ಅಯೋಗ್ಯ ಪದ್ಧತಿಗಳಾಗುತ್ತಿವೆ. ಉದಾ. ಒತ್ತಾಯದಿಂದ ಹಣ ವಸೂಲಿ ಮಾಡಲಾಗುತ್ತದೆ, ಯಾರದ್ದೋ ಮನೆಯ ಗಿಡಮರಗಳನ್ನು ಕಡಿಯಲಾಗುತ್ತದೆ, ವಸ್ತುಗಳ ಕಳ್ಳತನವಾಗುತ್ತದೆ, ಸರಾಯಿ ಕುಡಿದು ಗೊಂದಲ ಮಾಡಲಾಗುತ್ತದೆ. ಹಾಗೆಯೇ ರಂಗಪಂಚಮಿಯ ನಿಮಿತ್ತ ಒಬ್ಬರಿಗೊಬ್ಬರು ಹೊಲಸು ನೀರಿನ ಪುಗ್ಗೆಗಳಿಂದ ಹೊಡೆಯುವುದು, ಅಪಾಯಕಾರಿ ಬಣ್ಣಗಳನ್ನು ಮೈಗೆ ಹಚ್ಚುವುದು ಮುಂತಾದವುಗಳು ಅಯೋಗ್ಯ ರೂಢಿಗಳಾಗಿವೆ. ಈ ಅಯೋಗ್ಯ ರೂಢಿಗಳಿಂದಾಗಿ ಧರ್ಮಹಾನಿಯಾಗುತ್ತದೆ. ಅದನ್ನು ನಿಲ್ಲಿಸುವುದು ನಮ್ಮ ಧರ್ಮಕರ್ತವ್ಯವಾಗಿದೆ. ಇದಕ್ಕಾಗಿ ಸಮಾಜದಲ್ಲಿ ಪ್ರಬೋಧನೆ ಮಾಡಿ!

ಹೋಳಿ ಹಬ್ಬದ ಬಗ್ಗೆ ಇನ್ನಷ್ಟು ಲೇಖನಗಳು

ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳಿಸುವ ಸಮಯ ಬಂದಿದೆ ! –…

Read More

ಜ್ಞಾನಶಕ್ತಿ ಪ್ರಸಾರ ಅಭಿಯಾನ

ಸನಾತನದ ಗ್ರಂಥಗಳು ಜ್ಞಾನಭಂಡಾರವಾಗಿವೆ, ಜ್ಞಾನದ ಸಾಗರವಾಗಿವೆ. ‘ಸನಾತನ ಧರ್ಮದ ಜ್ಞಾನವನ್ನು ಆಚರಣೆಯಲ್ಲಿ ತಂದರೆ ನಮಗೆ ಮೋಕ್ಷಪ್ರಾಪ್ತಿಯಾಗುತ್ತದೆ’, ಎಂಬುವುದು ಸತ್ಯ.
Read More

ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಶ್ರೀ ಗುರುಗಳ ಧರ್ಮಸಂಸ್ಥಾಪನೆಯ ಐತಿಹಾಸಿಕ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ…
Read More

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

Leave a Comment