೧. ‘ಪಿಪ್ ತಂತ್ರಜ್ಞಾನದ ಪರಿಚಯ
೧ ಅ. ಪರೀಕ್ಷಣೆಯಲ್ಲಿ ಉಪಯೋಗಿಸಲ್ಪಟ್ಟ ವಸ್ತುಗಳ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನದ ಮೂಲಕ ಅಧ್ಯಯನ ಮಾಡುವ ಉದ್ದೇಶ
ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿ) ಎಷ್ಟು ಶೇಕಡಾ ಸಕಾರಾತ್ಮಕ ಸ್ಪಂದನಗಳಿವೆ, ಆ ಘಟಕವು ಸಾತ್ತ್ವಿಕವಾಗಿದೆಯೋ ಅಥವಾ ಇಲ್ಲವೋ, ಹಾಗೆಯೇ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ. ಸಂತರು ಸೂಕ್ಷ್ಮದಲ್ಲಿನ ವಿಷಯಗಳನ್ನು ಅರಿಯಬಲ್ಲರು. ಆದ್ದರಿಂದ ಅವರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು ಕರಾರುವಾಕ್ಕಾಗಿ ಹೇಳಬಲ್ಲರು. ಭಕ್ತರು ಮತ್ತು ಸಾಧಕರು ಸಂತರು ಹೇಳಿರುವುದನ್ನು ಶಬ್ದ ‘ಪ್ರಮಾಣವೆಂದು ಒಪ್ಪಿಕೊಂಡು ಅದರ ಮೇಲೆ ಶ್ರದ್ಧೆಯನ್ನಿಡುತ್ತಾರೆ; ಆದರೆ ಬುದ್ಧಿಜೀವಿಗಳಿಗೆ ಮಾತ್ರ ‘ಶಬ್ದ ಪ್ರಮಾಣವಲ್ಲ, ‘ಪ್ರತ್ಯಕ್ಷ ಪ್ರಮಾಣ ಬೇಕಾಗುತ್ತದೆ. ಅವರಿಗೆ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನದಿಂದ ದೃಢಪಡಿಸಿ ತೋರಿಸಿದರೆ ಮಾತ್ರ ನಿಜವೆನಿಸುತ್ತದೆ.
೧ ಆ. ‘ಪಿಪ್ ತಂತ್ರಜ್ಞಾನದ ಸಹಾಯದಿಂದ ಘಟಕಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳು ಬಣ್ಣಗಳ ಮಾಧ್ಯಮದಿಂದ ಕಾಣಿಸುವ ಸೌಲಭ್ಯವಿದೆ
ಈ ತಂತ್ರಜ್ಞಾನದ ಮೂಲಕ ನಾವು ಯಾವುದಾದರೊಂದು ಘಟಕದ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿ) ಸಾಮಾನ್ಯವಾಗಿ ಕಣ್ಣುಗಳಿಗೆ ಕಾಣಿಸದ ಬಣ್ಣದ ಪ್ರಭಾವಳಿಯನ್ನು (ಔರಾ) ನೋಡಬಹುದು. ‘ಪಿಪ್ ಎಂಬ ಗಣಕಯಂತ್ರದ ತಂತ್ರಾಂಶಕ್ಕೆ ‘ವಿಡಿಯೋ ಕ್ಯಾಮರಾವನ್ನು ಜೋಡಿಸಿ ಅದರ ಮೂಲಕ ವಸ್ತು, ವಾಸ್ತು ಅಥವಾ ವ್ಯಕ್ತಿ ಇವುಗಳ ಇಂಧನಕ್ಷೇತ್ರಗಳನ್ನು ವಿವಿಧ ಬಣ್ಣಗಳಲ್ಲಿ ನೋಡಬಹುದು. ಇದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳು ಬಣ್ಣಗಳ ಮಾಧ್ಯಮದಿಂದ ಕಾಣಿಸುವ ಸೌಲಭ್ಯವಿದೆ.
೨. ಪರೀಕ್ಷಣೆಯ ಬಗ್ಗೆ ತೆಗೆದುಕೊಂಡ ಜಾಗರೂಕತೆ
ಅ. ಈ ಪರೀಕ್ಷಣೆಯ ‘ಪಿಪ್ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ವಿಶಿಷ್ಟ ಕೋಣೆಯನ್ನು ಉಪಯೋಗಿಸಲಾಯಿತು. ಈ ಕೋಣೆಯ ಗೋಡೆಗಳು, ಛಾವಣಿ ಇತ್ಯಾದಿಗಳ ಬಣ್ಣಗಳಿಂದ ಸಾಧಕಿಯ ಪ್ರಭಾವಲಯದ ಬಣ್ಣಗಳ ಮೇಲೆ ಪರಿಣಾಮವಾಗಬಾರದೆಂದು ಗೋಡೆ, ಛಾವಣಿ ಇತ್ಯಾದಿಗಳಿಗೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು.
ಆ. ಸಂಪೂರ್ಣ ಪರೀಕ್ಷಣೆಯ ಸಮಯದಲ್ಲಿ ಕೋಣೆಯ ಪ್ರಕಾಶ ವ್ಯವಸ್ಥೆಯನ್ನು ಒಂದೇ ರೀತಿ ಇಡಲಾಗಿತ್ತು, ಹಾಗೆಯೇ ಕೋಣೆಯ ಹೊರಗಿನ ಗಾಳಿ, ಬೆಳಕು, ಉಷ್ಣತೆ ಇವುಗಳಿಂದ ಕೋಣೆಯಲ್ಲಿನ ಪರೀಕ್ಷಣೆಯ ಮೇಲೆ ಪರಿಣಾಮವಾಗಬಾರದೆಂದು ಪರೀಕ್ಷಣೆಯ ಸಮಯದಲ್ಲಿ ಕೋಣೆಯನ್ನು ಮುಚ್ಚಲಾಗಿತ್ತು.
೩. ಪರೀಕ್ಷಣೆಯಲ್ಲಿನ ‘ಪಿಪ್ ಛಾಯಾಚಿತ್ರಗಳನ್ನು ಮತ್ತು ನಿರೀಕ್ಷಣೆಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಉಪಯುಕ್ತ ಅಂಶಗಳು
೩ ಅ. ಮೂಲ ನೊಂದಣಿ (ವಾತಾವರಣದ ಮೂಲಭೂತ ಪ್ರಭಾವಳಿ)
ಪರೀಕ್ಷಣೆಯಲ್ಲಿ ಯಾವುದಾದರೊಂದು ಘಟಕದಿಂದಾಗಿ ವಾತಾವರಣದಲ್ಲಾದ ಬದಲಾವಣೆಯನ್ನು ಅಧ್ಯಯನ ಮಾಡಲು ಆ ಘಟಕದ ‘ಪಿಪ್ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಾರೆ; ಆದರೆ ವಾತಾವರಣದಲ್ಲಿ ಸತತವಾಗಿ ಬದಲಾವಣೆಗಳು ಆಗುವುದರಿಂದ ಘಟಕವನ್ನು ಪರೀಕ್ಷಣೆಗೊಳಪಡಿಸುವ ಮುನ್ನ ಘಟಕವನ್ನಿಡುವ ವಾತಾವರಣದ ‘ಪಿಪ್ ಛಾಯಾಚಿತ್ರವನ್ನು ಮೊದಲು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ‘ಮೂಲ ನೊಂದಣಿ ಎನ್ನುತ್ತಾರೆ. ನಂತರ ಘಟಕದ ‘ಪಿಪ್ ಛಾಯಾಚಿತ್ರವನ್ನು ‘ಮೂಲ ನೊಂದಣಿಯೊಂದಿಗೆ (ವಾತಾವರಣದ ಮೂಲಭೂತ ಪ್ರಭಾವಳಿಯನ್ನು ತೋರಿಸುವ ‘ಪಿಪ್ ಛಾಯಾಚಿತ್ರದೊಂದಿಗೆ) ತುಲನೆಯನ್ನು ಮಾಡಿದಾಗ ಆ ಘಟಕದಿಂದಾಗಿ ವಾತಾವರಣದಲ್ಲಾದ ಬದಲಾವಣೆ ಗಮನಕ್ಕೆ ಬರುತ್ತದೆ.
೩ ಆ. ಮೂಲ ನೊಂದಣಿಯ ತುಲನೆಯಲ್ಲಿ ವಸ್ತುವಿನ ಪ್ರಭಾವಳಿಯನ್ನು ತೋರಿಸುವ ‘ಪಿಪ್ ಛಾಯಾಚಿತ್ರದಲ್ಲಿನ ಬಣ್ಣಗಳ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆಯಾಗುವುದರ ಹಿಂದಿನ ತತ್ತ್ವ
ಪರೀಕ್ಷಣೆಗಾಗಿ ಘಟಕವನ್ನು ಇಡುವ ಮೊದಲಿನ (‘ಮೂಲ ನೊಂದಣಿಯ) ತುಲನೆಯಲ್ಲಿ ಘಟಕವನ್ನಿಟ್ಟ ನಂತರದ ಪ್ರಭಾವಳಿಯಲ್ಲಿನ ಬಣ್ಣದ ಪ್ರಮಾಣವು ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಈ ಹೆಚ್ಚು ಅಥವಾ ಕಡಿಮೆಯು ಆ ಘಟಕದಿಂದ ಪ್ರಕ್ಷೇಪಿತವಾಗುವ ಆ ಬಣ್ಣಕ್ಕೆ ಸಂಬಂಧಿಸಿದ ಸ್ಪಂದನಗಳ ಪ್ರಮಾಣಕ್ಕನುಸಾರ ಇರುತ್ತದೆ, ಉದಾ. ಪರೀಕ್ಷಣೆಗಾಗಿ ಘಟಕವನ್ನು ಇಟ್ಟ ನಂತರ ಅದರಿಂದ ಚೈತನ್ಯದ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸಿದರೆ ಪ್ರಭಾವಳಿಯಲ್ಲಿನ ಹಳದಿ ಬಣ್ಣವು ಹೆಚ್ಚಾಗುತ್ತದೆ, ಚೈತನ್ಯದ ಸ್ಪಂದನಗಳು ಪ್ರಕ್ಷೇಪಿಸದಿದ್ದರೆ ಅಥವಾ ಇತರ ಸ್ಪಂದನಗಳ ತುಲನೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕ್ಷೇಪಿತವಾದರೆ ಪ್ರಭಾವಳಿಯಲ್ಲಿನ ಹಳದಿ ಬಣ್ಣದ ಪ್ರಮಾಣವು ಕಡಿಮೆಯಾಗುತ್ತದೆ.
೩ ಇ. ಪ್ರಭಾವಲಯದಲ್ಲಿ ಕಾಣಿಸುವ ಬಣ್ಣಗಳ ಮಾಹಿತಿ
ಪರೀಕ್ಷಣೆಯಲ್ಲಿನ ವಸ್ತುವಿನ (ಅಥವಾ ವ್ಯಕ್ತಿಯ) ‘ಪಿಪ್ ಛಾಯಾಚಿತ್ರದಲ್ಲಿ ಕಾಣಿಸುವ ಪ್ರಭಾವಲಯದ ಬಣ್ಣಗಳು ಆ ವಸ್ತುವಿನ ಊರ್ಜಾಕ್ಷೇತ್ರದಲ್ಲಿನ ವಿಶಿಷ್ಟ ಸ್ಪಂದನಗಳನ್ನು ತೋರಿಸುತ್ತವೆ. ಪ್ರಭಾವಲಯದಲ್ಲಿನ ಪ್ರತಿಯೊಂದು ಬಣ್ಣದ ಬಗ್ಗೆ ‘ಪಿಪ್ ಗಣಕಯಂತ್ರ ತಂತ್ರಾಂಶದ ನಿರ್ಮಾಪಕನು ಪ್ರಕಾಶಿಸಿರುವ ಕೈಪಿಡಿಯಲ್ಲಿರುವ (‘ಮ್ಯಾನ್ಯುಯಲ್ನಲ್ಲಿರುವ) ಮಾಹಿತಿ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನಡೆಸಿರುವ ನೂರಾರು ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ಅನುಭವಗಳ ಆಧಾರದಲ್ಲಿ ‘ಪ್ರತಿಯೊಂದು ಬಣ್ಣವು ಯಾವ ಸ್ಪಂದನಗಳ ಪ್ರತೀಕವಾಗಿದೆ ? ಎಂಬುದನ್ನು ನಿಗದಿಪಡಿಸಲಾಗಿದೆ. ಅದು ಮುಂದಿನಂತಿದೆ.
ಟಿಪ್ಪಣಿ ೧ – ಘಟಕದ ಅಂತರ್ಬಾಹ್ಯ ಸ್ತರದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ಕಡಿಮೆ ಅಥವಾ ನಾಶಗೊಳಿಸುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಗೊಳಿಸುವ ಕ್ಷಮತೆ
ಟಿಪ್ಪಣಿ ೨ – ಘಟಕದ ಕೇವಲ ಬಾಹ್ಯ ಸ್ತರದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ಕಡಿಮೆ ಅಥವಾ ನಾಶಗೊಳಿಸುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಗೊಳಿಸುವ ಕ್ಷಮತೆ
೩ ಈ. ಸಕಾರಾತ್ಮಕ ಸ್ಪಂದನಗಳು
ಆಧ್ಯಾತ್ಮಿಕ ದೃಷ್ಟಿಯಿಂದ ‘ಪಿಪ್ ಛಾಯಾಚಿತ್ರದಲ್ಲಿನ ತಿಳಿ ಗುಲಾಬಿ, ಗಿಳಿಹಸಿರು, ನೀಲಿಮಿಶ್ರಿತ ಬಿಳಿ, ಹಳದಿ, ಗಾಢ ಹಸಿರು, ಹಸಿರು, ನೀಲಿ ಮತ್ತು ನೇರಳೆ ಈ ಬಣ್ಣಗಳು ಕ್ರಮವಾಗಿ ಹೆಚ್ಚು ಲಾಭದಾಯಕದಿಂದ ಕಡಿಮೆ ಲಾಭದಾಯಕ ಸ್ಪಂದನ (ಬಣ್ಣ) ಗಳನ್ನು ತೋರಿಸುತ್ತವೆ. ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿರುವ ಸ್ಪಂದನಗಳಿಗೆ (ಬಣ್ಣಗಳಿಗೆ) ಲೇಖನದಲ್ಲಿ ‘ಸಕಾರಾತ್ಮಕ ಸ್ಪಂದನಗಳು ಎಂದು ಹೇಳಲಾಗಿದೆ.
೩ ಉ. ನಕಾರಾತ್ಮಕ ಸ್ಪಂದನಗಳು
ಆಧ್ಯಾತ್ಮಿಕ ದೃಷ್ಟಿಯಿಂದ ‘ಪಿಪ್ ಛಾಯಾಚಿತ್ರದಲ್ಲಿನ ಬೂದು ಬಣ್ಣ, ಗುಲಾಬಿ, ಕಿತ್ತಳೆ ಮತ್ತು ಕೇಸರಿ ಬಣ್ಣಗಳು ಕ್ರಮವಾಗಿ ಹೆಚ್ಚು ತ್ರಾಸದಾಯಕದಿಂದ ಕಡಿಮೆ ತ್ರಾಸದಾಯಕ ಸ್ಪಂದನಗಳನ್ನು ತೋರಿಸುತ್ತವೆ. ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ತ್ರಾಸದಾಯಕವಾಗಿರುವ ಸ್ಪಂದನ (ಬಣ್ಣಗಳಿಗೆ) ಗಳಿಗೆ ಲೇಖನದಲ್ಲಿ ‘ನಕಾರಾತ್ಮಕ ಸ್ಪಂದನಗಳು ಎಂದು ಹೇಳಲಾಗಿದೆ.
೩ ಊ. ‘ಪಿಪ್ ಛಾಯಾಚಿತ್ರದಲ್ಲಿ ಸಾಮಾನ್ಯಕ್ಕಿಂತ ಉಚ್ಚ ಸಕಾರಾತ್ಮಕ ಸ್ಪಂದನಗಳ ಪ್ರತೀಕವಾಗಿರುವ ಬಣ್ಣಗಳು ಕಾಣಿಸುವುದು ಹೆಚ್ಚು ಒಳ್ಳೆಯದಾಗಿದೆ.
‘ಪಿಪ್ ಛಾಯಾಚಿತ್ರದಲ್ಲಿ ಗಿಳಿಹಸಿರು ಅಥವಾ ನೀಲಿಮಿಶ್ರಿತ ಬಿಳಿ ಬಣ್ಣ ಈ ಉಚ್ಚ ಸಕಾರಾತ್ಮಕ ಸ್ಪಂದನಗಳ ಪ್ರತೀಕವಾಗಿರುವ ಬಣ್ಣಗಳು ಕಾಣಿಸಿದರೆ ಕೆಲವೊಮ್ಮೆ ಹಳದಿ, ಗಾಢ ಹಸಿರು ಅಥವಾ ಹಸಿರು ಬಣ್ಣಗಳ ಸಾಧಾರಣ ಸಕಾರಾತ್ಮಕ ಸ್ಪಂದನಗಳ ಪ್ರತೀಕವಾಗಿರುವ ಬಣ್ಣಗಳು ಕಡಿಮೆಯಾಗುತ್ತವೆ ಅಥವಾ ಆ ಬಣ್ಣಗಳು ಸಂಪೂರ್ಣ ಇಲ್ಲವಾಗುತ್ತವೆ. ಇದನ್ನು ಒಳ್ಳೆಯ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ; ಏಕೆಂದರೆ ಆಗ ಸಾಧಾರಣ ಸಕಾರಾತ್ಮಕ ಸ್ಪಂದನಗಳ ಸ್ಥಾನವನ್ನು ಅದಕ್ಕಿಂತಲೂ ಉಚ್ಚ ಮಟ್ಟದ ಸಕಾರಾತ್ಮಕ ಸ್ಪಂದನಗಳು ತೆಗೆದುಕೊಂಡಿರುತ್ತವೆ.
೩ ಎ. ‘ಪಿಪ್ ಛಾಯಾಚಿತ್ರದಲ್ಲಿನ ಬಣ್ಣಗಳ ವೈಶಿಷ್ಟ್ಯ ಮತ್ತು ಆ ಬಣ್ಣಗಳ ಪ್ರತ್ಯಕ್ಷ ಆಧ್ಯಾತ್ಮಿಕ ವೈಶಿಷ್ಟ್ಯ ಇವುಗಳಿಗೆ ಸಂಬಂಧವಿಲ್ಲ
‘ಪಿಪ್ ಗಣಕಯಂತ್ರ ತಂತ್ರಾಂಶದ ನಿರ್ಮಾಪಕರು ‘ಪಿಪ್ ಛಾಯಾಚಿತ್ರದಲ್ಲಿ ನಕಾರಾತ್ಮಕ ಸ್ಪಂದನಗಳಿಗಾಗಿ ಕೇಸರಿ ಮತ್ತು ಕಿತ್ತಳೆ ಈ ಬಣ್ಣಗಳನ್ನು ನಿಗದಿಪಡಿಸಿದ್ದಾರೆ. ಅದಕ್ಕೆ ಮತ್ತು ಆ ಬಣ್ಣಗಳ ನಿಜವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳಿಗೆ (ಉದಾ. ಕೇಸರಿ ಬಣ್ಣವು ತ್ಯಾಗ ಮತ್ತು ವೈರಾಗ್ಯದ ಪ್ರತೀಕವಾಗಿದೆ.) ಯಾವುದೇ ಸಂಬಂಧವಿಲ್ಲ.
‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್) ಉಪಕರಣದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !