ಸತ್ಸಂಗ 3 : ನಾಮಜಪದ ಲಾಭ

ನಾಮಜಪದ ಲಾಭ

ನಾವು ಹಿಂದಿನ ಸತ್ಸಂಗದಲ್ಲಿ ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವ ಮತ್ತು ಅದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಂಡಿದ್ದೆವು. ನಾಮಜಪ ಹೇಗೆ ಕಾರ್ಯ ಮಾಡುತ್ತದೆ, ಎಂಬುದನ್ನೂ ತಿಳಿದುಕೊಂಡೆವು. ಕಲಿಯುಗದಲ್ಲಿ ನಾಮಸ್ಮರಣೆಯೇ ಸರ್ವಶ್ರೇಷ್ಠ ಸಾಧನೆಯಾಗಿದೆ ಎಂದು ಪರಿಗಣಿಸಲಾಗಿದೆ. ತಮ್ಮಲ್ಲಿ ಅನೇಕರು ನಾಮಜಪ ಮಾಡಲು ಆರಂಭಿಸಿರಬಹುದು ಅಥವಾ ಕೆಲವರು ಮೊದಲಿಂದಲೇ ನಾಮಜಪ ಮಾಡುತ್ತಿರಬಹುದು. ನಮ್ಮಲ್ಲಿ ಕೆಲವರಿಗೆ ನಾಮಜಪದ ಅನುಭವವೂ ಆಗಿರಬಹುದು. ನಾಮಜಪವು ಸಾಧನೆಯ ಒಂದು ಅತ್ಯಂತ ಮಹತ್ವದ ಹಂತವಾಗಿದೆ. ಆದ್ದರಿಂದ ಇಂದಿನ ಸತ್ಸಂಗದಲ್ಲಿ ನಾವು ನಾಮಜಪದಿಂದ ಏನೇನು ಲಾಭವಾಗುತ್ತದೆ, ಎಂಬುದನ್ನು ತಿಳಿದುಕೊಳ್ಳಲಿಕ್ಕಿದ್ದೇವೆ. ವ್ಯಾವಹಾರದಲ್ಲಿಯೂ ಏನಾದರೂ ಮಾಡಿದರೆ ಏನು ಲಾಭವಾಗುತ್ತದೆ ಎಂಬುದು ತಿಳಿದರೆ ನಾವು ಅದನ್ನು ಹೆಚ್ಚು ಗಾಂಭೀರ್ಯದಿಂದ ಮಾಡುತ್ತೇವೆ. ಒಬ್ಬ ವಿದ್ಯಾರ್ಥಿಗೆ ಅಧ್ಯಯನ ಮಾಡು, ಎಂದು ಸುಮ್ಮನೆ ಹೇಳುವುದಕ್ಕಿಂತ ಅಧ್ಯಯನ ಮಾಡುವುದರಿಂದ ಅವನಿಗೆ ಏನು ಲಾಭವಾಗುತ್ತದೆ, ಹಾಗೂ ಮಾಡದಿದ್ದರೆ ಏನು ನಷ್ಟವಾಗುತ್ತದೆ, ಅಧ್ಯಯನ ಮಾಡಿದರೆ ಅವನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮುಂದಿನ ತರಗತಿಗೆ ಹೋಗಬಹುದು, ಎಂದೆಲ್ಲ ಹೇಳಿದರೆ ಅವನು ಅಧ್ಯಯನದ ಕಡೆಗೆ ನೋಡುವ ದೃಷ್ಟಿಕೋನ ಬದಲಾಗಬಹುದು. ಅಧ್ಯಾತ್ಮದಲ್ಲಿಯೂ ಅದೇ ರೀತಿ ಇರುತ್ತದೆ. ನಾಮಜಪದ ಮಹತ್ವ ಹಾಗೂ ಲಾಭವನ್ನು ನಾವು ತಿಳಿದುಕೊಂಡರೆ ನಮ್ಮ ನಾಮಜಪ ಸಂಖ್ಯಾತ್ಮಕ ಹಾಗೂ ಗುಣಾತ್ಮಕವಾಗಿ ಹೆಚ್ಚಾಗಬಹುದು!

ಅ. ಜಪ ಎಂದರೇನು?

ಜಪವೆಂದರೆ ‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ‘. ಇದರ ಅರ್ಥ, ‘ಯಾವುದು ನಮ್ಮ ಪಾಪವನ್ನು ನಾಶಗೊಳಿಸಿ ಜನ್ಮ ಮೃತ್ಯುವಿನ ಚಕ್ರದಿಂದ ಬಿಡುಗಡೆ ಗೊಳಿಸುತ್ತದೆಯೋ, ಅದೇ ಜಪ!’ ನಾವು ಹಿಂದಿನ ಸತ್ಸಂಗದಲ್ಲಿ ಹೇಗೆ ನಾಮಜಪವು ಸುಲಭ ಹಾಗೂ ಪರಿಪೂರ್ಣ ಸಾಧನೆಯಾಗಿದೆ ಎಂಬುದನ್ನು ನೋಡಿದ್ದೇವೆ. ನಾಮಜಪವನ್ನು ನಾವು ಸಹಜವಾಗಿ ಎಲ್ಲಿಯೂ ಯಾವ ಕ್ಷಣದಲ್ಲಿಯೂ ಮಾಡಬಹುದು. ನಾಮಜಪಕ್ಕೆ ಯಾವುದೇ ಬಂಧನವಿಲ್ಲ. ಆದ್ದರಿಂದ ನಾಮಸ್ಮರಣೆಯ ಮೂಲಕ ಅಖಂಡ ಅನುಸಂಧಾನದಲ್ಲಿರಬಹುದು; ಆದ್ದರಿಂದ ಇದು ಅಖಂಡವಾಗಿ ಆಗುವಂತಹ ಸಾಧನೆಯಾಗಿದೆ. ನಾಮಸ್ಮರಣೆಯಾಗಲು ನಮ್ಮ ಶರೀರ ಮತ್ತು ಮನಸ್ಸಿನ ಸ್ಥಿತಿ ಹೇಗಿದ್ದರೂ ಅದರಿಂದ ಅಡಚಣೆಯಾಗುವುದಿಲ್ಲ. ಅಂದರೆ ಕಾಯಿಲೆಯಲ್ಲಿರುವಾಗ, ಸಂತೋಷದಿಂದಿರುವಾಗ ಅಥವಾ ಕಠಿಣ ಪ್ರಸಂಗಗಳಲ್ಲಿ, ಯಾವಾಗ ಬೇಕಾದರೂ ನಾಮಜಪ ಮಾಡಬಹುದು.

ಆ. ನಾಮಜಪದ ಮಹತ್ವ

ನಾಮಜಪಕ್ಕೆ ಸ್ಥಳ, ಕಾಲ, ಸಮಯ, ಮಡಿ-ಮೈಲಿಗೆ, ಋತು ಇತ್ಯಾದಿ ಯಾವುದರ ಬಂಧನವೂ ಇಲ್ಲ. ನಾಮಜಪದ ವೈಶಿಷ್ಟ್ಯವೆಂದರೆ, ನಾಮವು ಸದಾಚಾರಿ ಹಾಗೂ ಪಾಪಿ ಇಬ್ಬರನ್ನೂ ಉದ್ಧಾರ ಮಾಡುತ್ತದೆ. ಶ್ರೀಮದ್ಭಾಗವತದಲ್ಲಿ ಏನು ಹೇಳಲಾಗಿದೆ ಎಂದರೆ, ಹೇಗೆ ಉದ್ದೇಶಪೂರ್ವಕ ಉರಿಸಿದ ಅಥವಾ ತಿಳಿಯದೆ ಬಿದ್ದ ಬೆಂಕಿಯು ಕಟ್ಟಿಗೆಯನ್ನು ಸುಟ್ಟು ಹಾಕುತ್ತದೆಯೋ, ಅದೇ ರೀತಿ ಪರಮೇಶ್ವರನ ಹೆಸರೆಂದು ತಿಳಿದು ಉಚ್ಚರಿಸಿದರೆ ಅಥವಾ ಸುಮ್ಮನೆ ಸಹಜವಾಗಿ ಉಚ್ಚರಿಸಿದರೂ ಅದು ಮನುಷ್ಯನ ಪಾಪವನ್ನು ನಾಶಗೊಳಿಸುತ್ತದೆ. ಅದರ ಉದಾಹರಣೆಯೆಂದರೆ ರತ್ನಾಕರನು ‘ಮರಾ ಮರಾ’, ಎಂದು ಜಪಿಸಿದರೂ ಅವನ ಎಲ್ಲ ಪಾಪಗಳು ನಷ್ಟವಾಗಿ ಅವನು ವಾಲ್ಮೀಕಿ ಋಷಿಯಾದನು. ಇಷ್ಟು ಮಾತ್ರವಲ್ಲ, ಅವನು ರಾಮಾಯಣವನ್ನು ರಚಿಸಿದನು ಹಾಗೂ ಪ್ರಭು ಶ್ರೀರಾಮಚಂದ್ರನ ಕೃಪೆಗೆ ಪಾತ್ರನಾದನು. ಹಾಗೆಯೇ ನಾವು ಎಷ್ಟು ನಾಮಜಪ ಮಾಡುವೆವೊ, ಅಷ್ಟು ನಮ್ಮ ಪ್ರಾರಬ್ಧ ನಾಶವಾಗಲಿದೆ. ಅನೇಕ ಜನರು ನಾಮಜಪ ಕೇವಲ ಅಧ್ಯಾತ್ಮಕ್ಕೆ ಸಂಬಂಧಿಸಿದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಹಾಗಿಲ್ಲ. ನಾಮಸ್ಮರಣೆ ಮಾಡುವುದರಿಂದ ಹೇಗೆ ಆಧ್ಯಾತ್ಮಿಕ ಲಾಭವಾಗುತ್ತದೊ, ಹಾಗೆಯೆ ಶಾರೀರಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿಯೂ ಅನೇಕ ಲಾಭಗಳಾಗುತ್ತವೆ.

ಆ 1. ಮಾನಸಿಕ ದೃಷ್ಟಿಯಲ್ಲಿ ನಾಮಜಪದಿಂದಾಗುವ ಲಾಭ

ನಾಮಜಪದಿಂದ ಮಾನಸಿಕ ದೃಷ್ಟಿಯಲ್ಲಿ ಯಾವ ಲಾಭವಾಗುತ್ತದೆ ಎಂದು ತಿಳಿದುಕೊಳ್ಳೋಣ. ನಾಮಜಪದಿಂದ ಮನೋಬಲ ಹೆಚ್ಚಾಗುತ್ತದೆ. ಯಾವುದೇ ವಿಷಯವನ್ನು ಸಾಧಿಸಲು ಮನೋಬಲ ಒಳ್ಳೆಯದಾಗಿರಬೇಕಾಗುತ್ತದೆ. ಇಂದು ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಬಹಳಷ್ಟು ಜನರು ಒತ್ತಡದಲ್ಲಿರುವುದನ್ನು ನಾವು ನೋಡುತ್ತೇವೆ. ಸಣ್ಣ ಮಕ್ಕಳಿಗೆ ಅಧ್ಯಯನದ ಅಥವಾ ಪರೀಕ್ಷೆಯ ಒತ್ತಡವಿರುತ್ತದೆ, ಮಹಿಳೆಯರಿಗೆ ಮನೆಕೆಲಸದ ಒತ್ತಡವಿರುತ್ತದೆ, ನೌಕರಿ ಮಾಡುವವರಿಗೆ ಅವರ ಕೆಲಸ, ಮೇಲಧಿಕಾರಿಗಳ ಒತ್ತಡ, ವೇತನ ಹೆಚ್ಚಳದಂತಹ ಅನೇಕ ವಿಷಯಗಳ ಚಿಂತೆ ಇರುತ್ತದೆ. ವೃದ್ಧರಿಗೆ ಅವರ ಶಾರೀರಿಕ ವ್ಯಾಧಿಗಳ ಅಥವಾ ಮಕ್ಕಳ ಭವಿಷ್ಯದ ಚಿಂತೆ ಇರುತ್ತದೆ. ಶ್ರೀಮಂತರಿಗೆ ಇನ್ನೂ ಹೆಚ್ಚು ಹಣವನ್ನು ಹೇಗೆ ಸಂಪಾದಿಸಬಹುದು, ಎನ್ನುವುದರ ಚಿಂತೆ ಇರುತ್ತದೆ. ಬಡವರಿಗೆ ದೈನಂದಿನ ಜೀವನ ಹೇಗೆ ನಡೆಸುವುದು, ಎನ್ನುವುದರ ಚಿಂತೆ ಇರುತ್ತದೆ. ಜಾಗತಿಕ ಆರೋಗ್ಯ ಸಂಘಟನೆಯ ಒಂದು ಸಮೀಕ್ಷೆಗನುಸಾರ ಶೇ. 71ರಷ್ಟು ಜನರಿಗೆ ಮಾನಸಿಕ ಒತ್ತಡದಿಂದಾಗಿ ಆತ್ಮವಿಶ್ವಾಸದ ಕೊರತೆಯಿರುತ್ತದೆ ಹಾಗೂ ಅವರಲ್ಲಿ ನಕಾರಾತ್ಮಕತೆ ಹಾಗೂ ನಿರಾಶೆ ಇರುತ್ತದೆ. 2018ರ ಒಂದು ಸಮೀಕ್ಷೆಗನುಸಾರ ಭಾರತದ ಶೇ. 89 ರಷ್ಟು ಜನರು ಒತ್ತಡಕ್ಕೀಡಾಗಿದ್ದಾರೆ, 2019 ರ ಒಂದು ಸಮೀಕ್ಷೆಗನುಸಾರ ಶೇ. 6.5 ರಷ್ಟು ಜನರಿಗೆ ಗಂಭೀರವಾದ ಮಾನಸಿಕ ಕಾಯಿಲೆಗಳಿವೆ. ಈ ಹಿಂದೆ ಬಂದಿರುವ ಕೋವಿಡ್ ಆಘಾತದಿಂದ ಅವರ ನಿರಾಶೆ ಇನ್ನೂ ಹೆಚ್ಚಾಗಿದೆ. ಈ ಒತ್ತಡಗಳಿಗೆ ಬಾಹ್ಯ ಪರಿಸ್ಥಿತಿ ಕೇವಲ ಶೇ. 5 ರಿಂದ 10 ರಷ್ಟು ಕಾರಣೀಭೂತವಾಗಿದೆ. ಶೇ. 90 ರಿಂದ 95 ರಷ್ಟು ಕಾರಣ ಆಂತರಿಕವಾಗಿರುತ್ತದೆ. ಈ ಒತ್ತಡದಿಂದ ಶರೀರ ಮತ್ತು ಮನಸ್ಸು ಇವೆರಡರ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಇಂತಹ ಒತ್ತಡದ ನಿರ್ಮೂಲನೆಗಾಗಿ ನಾಮಜಪ ಲಾಭದಾಯಕವಾಗಿದೆ. ಬಹಳಷ್ಟು ಮನೋವಿಕಾರಗಳಿಗೆ ನಾಮಜಪದಿಂದ ಲಾಭವಾಗುತ್ತದೆ.

ಅ. ನಾಮಜಪದಿಂದ ಚಿತ್ತದ ಮೇಲೆ ನಾಮದ ಸಂಸ್ಕಾರವಾಗುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ. ನಾವು ಪ್ರವಚನದಲ್ಲಿ ತಿಳಿದುಕೊಂಡಿರುವ ಹಾಗೆ ನಮ್ಮ ಚಿತ್ತದ ಮೇಲೆ ನಾವು ಮಾಡುತ್ತಿರುವ ಕೃತಿ ಹಾಗೂ ವಿಚಾರಗಳ ಸಂಸ್ಕಾರವಾಗುತ್ತದೆ. ನಾವು ನಿರಂತರ ನಾಮಜಪ ಮಾಡುತ್ತಲೇ ಇದ್ದರೆ, ನಾಮಜಪದ ಸಂಸ್ಕಾರವೂ ಆಗುತ್ತದೆ.

ಆ. ನಾಮಜಪದಿಂದ ಮನಸ್ಸಿನ ವಿಚಾರಗಳು ಕಡಿಮೆಯಾಗುವುದರಿಂದ ಮನಃಶಾಂತಿ ಸಿಗುತ್ತದೆ.

ಇ. ‘ಅಬ್ಸೆಶನ್’ (obsession) ಅಂದರೆ ನಿರರ್ಥಕ ವಿಚಾರಗಳನ್ನು ಕಡಿಮೆ ಮಾಡಲು ನಾಮಜಪವು ರಾಮಬಾಣ ಉಪಾಯವಾಗಿದೆ.

ಈ. ನಾಮಜಪದಿಂದ ಮನಸ್ಸು ಶಾಂತವಾದೊಡನೆ ಮಾನಸಿಕ ಒತ್ತಡದಿಂದಾಗುವ ಶಾರೀರಿಕ ವಿಕಾರಗಳಾಗುವುದಿಲ್ಲ ಹಾಗೂ ಶರೀರ ಆರೋಗ್ಯಕರವಾಗಿರುತ್ತದೆ.

ಉ. ಬಹಳಷ್ಟು ಪ್ರಾಪಂಚಿಕ ಸಮಸ್ಯೆಗಳು ಅಯೋಗ್ಯ ಮಾತುಗಳಿಂದಾಗಿ ಉದ್ಭವಿಸುತ್ತವೆ. ನಾಮಜಪವು ಒಂದು ರೀತಿಯ ಮೌನವೇ ಆಗಿರುವುದರಿಂದ ಪ್ರಾಪಂಚಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.

ಊ. ನಾಮಜಪದಿಂದಾಗಿ ಸುಳ್ಳು ಹೇಳುವುದು, ಕೋಪ ಬರುವುದು ಇತ್ಯಾದಿ ಕೆಟ್ಟ ಚಟಗಳು ಹಾಗೂ ಸ್ವಭಾವದೋಷಗಳನ್ನು ನಿಯಂತ್ರಿಸಬಹುದು.

ಎ. ನಮ್ಮ ಅಂತರಂಗದಲ್ಲಿ ಸದ್ಗುಣಗಳು ಹೆಚ್ಚಾಗಲು ಅಂತರ್ಮುಖತೆ ಹಾಗೂ ಅಂತರ್ನಿರೀಕ್ಷಣೆಯ ಆವಶ್ಯಕತೆಯಿರುತ್ತದೆ. ನಾಮಜಪ ಇವೆರಡೂ ವಿಷಯಗಳನ್ನು ಹೆಚ್ಚಿಸಲು ಸಹಕರಿಸುತ್ತದೆ.

ಆ 2. ಶಾರೀರಿಕ ದೃಷ್ಟಿಯಲ್ಲಿ ನಾಮಜಪದಿಂದಾಗುವ ಲಾಭ

ಈಗ ನಾವು ನಾಮಜಪದಿಂದ ಶಾರೀರಿಕ ದೃಷ್ಟಿಯಲ್ಲಿ ಯಾವ ಲಾಭಗಳಾಗುತ್ತವೆ ಎಂಬುದನ್ನು ನೋಡೋಣ. ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳು ಶೇ. 30 ರಷ್ಟಾದಾಗ ಲಕ್ಷಣಗಳು ಕಾಣಿಸುತ್ತವೆ. ನಾಮಜಪದಿಂದ ಏನಾಗುತ್ತದೆ ಎಂದರೆ ರೋಗದ ಸ್ವರೂಪ ಪ್ರಕಟವಾಗುವ ಮೊದಲೇ ಅದರ ಲಕ್ಷಣಗಳನ್ನು ತಿಳಿದುಕೊಳ್ಳಬಹುದು. ನಾಮಜಪದಿಂದ ಆಧ್ಯಾತ್ಮಿಕ ಊರ್ಜೆ ಸಿಗುವುದರಿಂದ ಆಧ್ಯಾತ್ಮಿಕ ಕಾರಣವಿರುವ ಗಂಭೀರ ಶಾರೀರಿಕ ವ್ಯಾಧಿಗಳನ್ನು ಕೂಡ ಸಹಜವಾಗಿ ತಪ್ಪಿಸಬಹುದು.

ಆ 3. ನಾಮಜಪದಿಂದಾಗುವ ಆಧ್ಯಾತ್ಮಿಕ ಲಾಭ

ಈಗ ನಾವು ನಾಮಜಪದಿಂದಾಗುವ ಶಾರೀರಿಕ ಹಾಗೂ ಮಾನಸಿಕ ಸ್ತರದ ಲಾಭಗಳನ್ನು ತಿಳಿದುಕೊಂಡೆವು. ನಾಮಜಪದ ಅನೇಕ ಆಧ್ಯಾತ್ಮಿಕ ಲಾಭಗಳೂ ಇವೆ. ಮನುಷ್ಯನ ಬಹಳಷ್ಟು ಶಾರೀರಿಕ ಹಾಗೂ ಮಾನಸಿಕ ವಿಕಾರಗಳ ಮೂಲ ಕಾರಣ ಆಧ್ಯಾತ್ಮಿಕವಾಗಿರುತ್ತದೆ. ಯಾವುದಾದರೊಂದು ಸಮಸ್ಯೆಯ ಕಾರಣ ಆಧ್ಯಾತ್ಮಿಕವಾಗಿದ್ದರೆ, ಅದರ ನಿವಾರಣೋಪಾಯವನ್ನೂ ಆಧ್ಯಾತ್ಮಿಕ ಸ್ತರದಲ್ಲಿಯೇ ಮಾಡಬೇಕಾಗುತ್ತದೆ. ನಾಮಜಪವು ಉತ್ತಮವಾದ ಆಧ್ಯಾತ್ಮಿಕ ಉಪಾಯವಾಗಿದೆ. ನಮ್ಮಲ್ಲಿ ಅನೇಕರು ಅನುಭವಿಸಿರಬಹುದು, ಒಬ್ಬರಿಗೆ ಯಾವುದಾದರೊಂದು ವ್ಯಾಧಿ ಇರುತ್ತದೆ, ಆದರೆ ಅದು ವೈದ್ಯಕೀಯ ತಪಾಸಣೆಯಿಂದ ತಿಳಿಯುವುದಿಲ್ಲ, ಎಲ್ಲ ವೈದ್ಯಕೀಯ ವರದಿಗಳು ನಾರ್ಮಲ್ ಆಗಿರುತ್ತವೆ. ಈ ವಿಷಯದಲ್ಲಿ ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ವಿಕಾರಗಳ ಹಿಂದೆ ಪ್ರಾರಬ್ಧವು ಮಹತ್ವದ ಕಾರಣವಾಗಿದೆ, ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾಮಜಪದಿಂದ ರೋಗಿಯ ಮಂದ ಪ್ರಾರಬ್ಧವು ನಷ್ಟವಾಗುತ್ತದೆ, ಮಧ್ಯಮ ಪ್ರಾರಬ್ಧವು ಕಡಿಮೆಯಾಗುತ್ತದೆ ಹಾಗೂ ತೀವ್ರ ಪ್ರಾರಬ್ಧವನ್ನು ಭೋಗಿಸಿ ಮುಗಿಸಲು ಮನಸ್ಸಿನ ಸಿದ್ಧತೆಯಾಗುತ್ತದೆ.

ಹಲವಾರು ಬಾರಿ ಮಾನಸಿಕ ಒತ್ತಡ, ಸುತ್ತಮುತ್ತಲಿನ ವಾತಾವರಣ, ಇವುಗಳಿಂದ ದೇಹದ ಮೇಲೆ ತೊಂದರೆದಾಯಕ ಆವರಣ ಬರುತ್ತದೆ. ಅದನ್ನು ದೂರಮಾಡಲು ಅಥವಾ ಅತೃಪ್ತ ಪೂರ್ವಜರಿಂದಾಗುವ ತೊಂದರೆಗಳ ನಿವಾರಣೆಗಾಗಿ ನಾಮಜಪ ಉಪಯುಕ್ತವಾಗಿದೆ. ವಾಸ್ತುದೋಷಗಳನ್ನು ದೂರಗೊಳಿಸಲು ವಾಸ್ತುಶಾಂತಿ, ಉದಕಶಾಂತಿಯನ್ನು ಮಾಡಲಾಗುತ್ತದೆ, ಆದರೂ ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳಾಗದಿರಲು ನಾಮಜಪ ಅತ್ಯಂತ ಉಪಯುಕ್ತವಾಗಿದೆ.

ನಾಮಜಪದಿಂದ ವಿಷಯಾಸಕ್ತಿ ಕಡಿಮೆಯಾಗುತ್ತದೆ, ಅಸಕ್ತಿಯೇ ಎಲ್ಲ ದುಃಖಗಳ ಮೂಲ ಹಾಗೂ ರೋಗಗಳ ಅಡಿಪಾಯವಾಗಿದೆ. ಭಗವಂತನು ಆನಂದಸ್ವರೂಪನಾಗಿರುವುದರಿಂದ ಅವನನ್ನು ನಾಮದಿಂದ ಗಟ್ಟಿಯಾಗಿ ಹಿಡಿದುಕೊಂಡರೆ ಅಲ್ಲಿ ದುಃಖ ಇರಲು ಸಾಧ್ಯವಿಲ್ಲ. ನಾಮ ಜಪಿಸುವುದರಿಂದ ಭಗವಂತನ ಬಗ್ಗೆ ಪ್ರೇಮ ಮೂಡುತ್ತದೆ ಹಾಗೂ ಆಸಕ್ತಿ ಇಲ್ಲದಂತಾಗಿ ದುಃಖ ದೂರವಾಗುತ್ತದೆ. ಆದ್ದರಿಂದ ಅನೇಕ ಸಂತರು ಕೂಡ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ. ನಾವು ದಿನವಿಡೀ ಸ್ಮರಿಸುವ ಭಗವಂತನ ನಾಮಜಪವನ್ನು ಹೆಚ್ಚು ಏಕಾಗ್ರತೆಯಿಂದ, ಮನಃಪೂರ್ವಕ ಹಾಗೂ ಪ್ರೇಮಪೂರ್ವಕ ಮಾಡಲು ಪ್ರಯತ್ನಿಸೋಣ.
ಸಂದೇಹ ನಿವಾರಣೆ

ಇ. ನಾಮಜಪ ಮಾಡುವುದರಿಂದ ಬಂದ ಕೆಲವು ಅನುಭೂತಿಗಳು

1. ಮುಂಬಯಿಯಲ್ಲಿ ನಡೆಯುವ ಸತ್ಸಂಗದ ಓರ್ವ ಜಿಜ್ಞಾಸುವಿಗೆ ನಾಮಜಪದಿಂದ ಮನಸ್ಸು ಶಾಂತ ಎನಿಸಿತು ಹಾಗೂ ‘ಮನಸ್ಸು ಮತ್ತು ಚಿತ್ತದ ಶುದ್ಧಿಯಾಗುತ್ತಿದೆ’ ಎಂದು ಅರಿವಾಯಿತು. ಅವರು ಆತ್ಮಬಲ ಹೆಚ್ಚಿಸಲು ನಾಮಜಪ ಆವಶ್ಯಕವಾಗಿದೆ, ಎಂಬುದರ ಅರಿವಾಯಿತು, ಎಂದು ಹೇಳಿದರು.

2. ಓರ್ವ ಸಾಧಕಿಗೆ ನಾಮಜಪದಿಂದ ಅಡಚಣೆಗಳು ದೂರವಾಗಿ ಮನಸ್ಸು ಶಾಂತವಾಗುತ್ತಿದೆ, ಮನಸ್ಸಿನಲ್ಲಿರುವ ನಕಾರಾತ್ಮಕ ಹಾಗೂ ಅಯೋಗ್ಯ ವಿಚಾರಗಳು ಕಡಿಮೆಯಾಗುತ್ತಿವೆ, ಎಂಬ ಅನುಭವ ಬರುತ್ತಿದೆ.

3. ಒಬ್ಬರ ಮನೆಯಲ್ಲಿ ಯಾವಾಗಲೂ ಅಶಾಂತಿಯಿತ್ತು. ಅತೃಪ್ತ ಪೂರ್ವಜರ ತೀವ್ರ ತೊಂದರೆಯೂ ಇತ್ತು. ಅವರು ಶ್ರೀ ಗುರುದೇವ ದತ್ತ ಜಪವನ್ನು ಶ್ರದ್ಧೆಯಿಂದ ಜಪಿಸಲು ಪ್ರಾರಂಭಿಸಿದ ಕೇವಲ 6 ತಿಂಗಳುಗಳಲ್ಲಿ ಮನೆಯ ವಾತಾವರಣದಲ್ಲಿ ಬದಲಾವಣೆಗಳಾಗಿ ಶಾಂತಿ ನೆಲೆಸಿತು, ಪೂರ್ವಜರ ತೊಂದರೆಯೂ ಕಡಿಮೆಯಾಯಿತು.

Leave a Comment