ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ‘ಭಾರತ ಗೌರವ’ ಪ್ರಶಸ್ತಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಪ್ರಶಸ್ತಿ ಸ್ವೀಕಾರ !

ಪ್ಯಾರಿಸ್ (ಫ್ರಾನ್ಸ್) – ಮನುಕುಲದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುವ, ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಾ ಜಗತ್ತಿನಾದ್ಯಂತ ಸಾಧಕರ ಜೀವನವನ್ನು ಆನಂದಮಯವನ್ನಾಗಿಸಿದ, ವಿಜ್ಞಾನಯುಗದಲ್ಲಿ ಸುಲಭ ಭಾಷೆಯಲ್ಲಿ ಅಧ್ಯಾತ್ಮಪ್ರಸಾರವನ್ನು ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ 5 ಜೂನ್ 2024 ರಂದು ಫ್ರಾನ್ಸ್ ಸೆನೆಟ್ (ಸಂಸತ್ತು) ನಲ್ಲಿ ‘ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಫ್ರೆಂಚ್ ಸಂಸತ್ತಿನ ಉಪಾಧ್ಯಕ್ಷ ಡೊಮಿನಿಕ್ ಥಿಯೋಫಿಲ್, ಮೆಹೆಂದಿಪುರ ಬಾಲಾಜಿ ಟ್ರಸ್ಟ್ ನ ಶ್ರೀ ನರೇಶಪುರಿ ಜೀ ಮಹಾರಾಜ್, ‘ಸಂಸ್ಕೃತಿ ಯುವಾ ಸಂಸ್ಥೆ’ಯ ಅಧ್ಯಕ್ಷ ಪಂ. ಸುರೇಶ ಮಿಶ್ರಾ ಹಾಗೂ ಫ್ರೆಂಚ್ ಸಂಸತ್ತಿನ ಸದಸ್ಯರಾದ ಫ್ರೆಡೆರಿಕ್ ಬೌವೆಲ್ ಇವರ ಹಸ್ತದಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಜಾಗತಿಕ ಪ್ರಸಾರಕ್ಕಾಗಿ ನೀಡಿದ ಅನನ್ಯ ಕೊಡುಗೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ‘ಸಂಸ್ಕೃತಿ ಯುವಾ ಸಂಸ್ಥೆ’ ಈ ಪ್ರಶಸ್ತಿಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಹೆಸರನ್ನು ಆರಿಸಿತ್ತು.

ಈ ಸಂದರ್ಭದಲ್ಲಿ ‘ಸಂಸ್ಕೃತಿ ಯುವಾ ಸಂಸ್ಥೆ’ಯ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ಮಾತನಾಡಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರ ನೇತೃತ್ವದಲ್ಲಿ ಸನಾತನ ಸಂಸ್ಥೆಯು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ ಎಂದು ಶ್ಲಾಘಿಸಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು
ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಮಾಡಿದ ದಿವ್ಯ ಕಾರ್ಯದ ಗೌರವ !

ಈ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಅವರು ಮಾತನಾಡಿ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ಫ್ರಾನ್ಸ್ ಸಂಸತ್ತಿನಲ್ಲಿ ‘ಭಾರತ ಗೌರವ ಪ್ರಶಸ್ತಿ’ಯಿಂದ ಗೌರವಿಸಿದ್ದಕ್ಕೆ ಸನಾತನ ಸಂಸ್ಥೆಯಿಂದ ‘ಸಂಸ್ಕೃತಿ ಯುವಾ ಸಂಸ್ಥೆ’ ಮತ್ತು ಸಂಸ್ಥೆಯ ಅಧ್ಯಕ್ಷ ಪಂ. ಸುರೇಶ್ ಮಿಶ್ರಾ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಉಚ್ಛ ಮಟ್ಟದ ಸಂತರಾಗಿದ್ದು ಈ ಪ್ರಶಸ್ತಿ ಮತ್ತು ಗೌರವಗಳ ಆಚೆಗೆ ತಲುಪಿದ್ದರೂ, ಅವರಿಗೆ ಸಂದ ಗೌರವವು ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಅವರು ನೀಡಿದ ದಿವ್ಯ ಆಧ್ಯಾತ್ಮಿಕ ಕಾರ್ಯವನ್ನು ಗೌರವವಿಸಿದಂತಾಗಿದೆ. ಈ ಗೌರವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಅಧ್ಯಾತ್ಮಶಾಸ್ತ್ರದ ಬಗ್ಗೆ ಮಾಡಿದ ಅಸಾಧಾರಣ ಸಂಶೋಧನೆಯ ಕಾರ್ಯ ಮತ್ತು ಗ್ರಂಥ ಲೇಖನ ಹಾಗೆಯೇ ಮನುಕುಲದ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ‘ಗುರುಕೃಪಾಯೋಗ’ ಎಂಬ ಸಾಧನಾಮಾರ್ಗ ಇವುಗಳಿಗೇ ಸಲ್ಲುತ್ತದೆ ಎಂದು ನಾವು ನಂಬಿದ್ದೇವೆ’ ಎಂದರು.

Leave a Comment