ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ-ದಿವ್ಯ ಶ್ರೀರಾಮ ಮಂದಿರದಲ್ಲಿ ೨೨.೧.೨೦೨೪ ರಂದು ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆ ವಿಧಿವತ್ತಾಗಿ ನಡೆಯಲಿದೆ. ಈ ಪ್ರಾಣಪ್ರತಿಷ್ಠೆಯಿಂದ ಶ್ರೀರಾಮನ ಸ್ಪಂದನಗಳು ಅಯೋಧ್ಯೆಯಿಂದ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ನಿಯಮಿತವಾಗಿ ಪ್ರಕ್ಷೇಪಿಸಲ್ಪಡಲಿವೆ. ಇದು ಒಂದು ರೀತಿಯಲ್ಲಿ ಪ್ರಭು ಶ್ರೀರಾಮನ ಸೂಕ್ಷ್ಮ ಅವತರಣವಾಗಿದೆ. ಪ್ರಭು ಶ್ರೀರಾಮ ಅಯೋಧ್ಯಾಪತಿಯಾದ ನಂತರ ಪೃಥ್ವಿಯಲ್ಲಿ ರಾಮರಾಜ್ಯವು ಅವತರಿಸಿತ್ತು. ‘ಸ್ಥೂಲದಿಂದ ಯಾವುದೇ ಘಟನೆ ಘಟಿಸುವ ಮೊದಲು ಅದು ಸೂಕ್ಷ್ಮದಲ್ಲಿ ಘಟಿಸುತ್ತದೆ’, ಎಂಬ ಶಾಸ್ತ್ರವಿದೆ. ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯಿಂದ ಸೂಕ್ಷ್ಮದಲ್ಲಿ ರಾಮರಾಜ್ಯದ, ಅಂದರೆ ಮುಂಬರುವ ಹಿಂದೂ ರಾಷ್ಟ್ರದ ಆರಂಭವಾಗಲಿದೆ.
ಸುಮಾರು ೨೦೦೫ ರಲ್ಲಿ ನಾನು ಕೊನೆಯದಾಗಿ ಮಹಾರಾಷ್ಟ್ರದ ಸಾಧಕರನ್ನು ಭೇಟಿಯಾಗಲು ಹೋಗಿದ್ದೆ. ಈ ಪ್ರವಾಸದಲ್ಲಿ ನಾನು, ‘ನನಗೆ ಇನ್ನು ಮುಂದೆ ನಿಮ್ಮ ಜಿಲ್ಲೆಗೆ ವೈಯಕ್ತಿಕವಾಗಿ ಬರಲು ಅಥವಾ ಮಾರ್ಗದರ್ಶನ ಮಾಡಲು ಆಗುವುದಿಲ್ಲ’, ಎಂದು ಹೇಳಿದ್ದೆ. ‘ಆದುದರಿಂದ ಮುಂಬರುವ ಕಾಲದಲ್ಲಿ ಯಾವ ನಾಮಜಪ ಮಾಡಬೇಕು ಎಂದು ಸಾಧಕರ ಮನಸ್ಸಿನಲ್ಲಿ ಪ್ರಶ್ನೆ ಮೂಡಬಾರದೆಂದು, ಈಗಲೇ ಹೇಳುತ್ತೇನೆ. ಸದ್ಯ (೨೦೦೫ ರಲ್ಲಿ) ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುವ ಧ್ಯೇಯವಿರುವುದರಿಂದ ಭಗವಾನ ಶ್ರೀಕೃಷ್ಣನ (ಓಂ ನಮೋ ಭಗವತೇ ವಾಸುದೇವಾಯ |) ನಾಮಜಪವನ್ನು ಮಾಡಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಅದು ರಾಮರಾಜ್ಯದಂತಾಗಲು ಶ್ರೀರಾಮನ (ಶ್ರೀರಾಮ ಜಯರಾಮ ಜಯ ಜಯ ರಾಮ |) ನಾಮಜಪವನ್ನು ಮಾಡಿ’ ಎಂದು ಹೇಳಿದ್ದೆ. ಸಾಧಕರು ನಾಮಜಪದ ಸಂದರ್ಭದಲ್ಲಿ ಇದೇ ಬೋಧನೆಯನ್ನು ಮುಂದೆ ಆಚರಣೆಯಲ್ಲಿ ತರಬೇಕು !
ಇಂದು ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣದಲ್ಲಿ ಸ್ವಾತಂತ್ರ್ಯದ ನಂತರದ ೩ ತಲೆಮಾರುಗಳ ಪ್ರತ್ಯಕ್ಷ ಕೊಡುಗೆ ಇದೆ. ಕೋಟ್ಯಂತರ ಕುಟುಂಬಗಳು ಇದಕ್ಕಾಗಿ ಮನಃಪೂರ್ವಕ ಧನಾರ್ಪಣೆ ಮಾಡಿದ್ದಾರೆ. ನಾನು ಕೂಡ ಆಠವಲೆ ಕುಟುಂಬದ ವತಿಯಿಂದ ಕಾಮಗಾರಿಗೆ ಆವಶ್ಯಕವಿರುವ ಶಿಲೆಗಳಿಗಾಗಿ ಅರ್ಪಣೆಯನ್ನು ನೀಡಿದ್ದೆ. ಅದರ ರಶೀದಿಯನ್ನೂ ನಾನು ನನ್ನ ಕಾಗದಪತ್ರಗಳೊಂದಿಗೆ ಬಹಳ ವರ್ಷಗಳ ಕಾಲ ಜೋಪಾಸನೆ ಮಾಡಿಟ್ಟಿದ್ದೆ. ಭವಿಷ್ಯದಲ್ಲಿ ಶ್ರೀರಾಮಮಂದಿರದ ನಿರ್ಮಾಣವಾದಾಗ ಮುಂದಿನ ಪೀಳಿಗೆಗೆ ‘ಅದರಲ್ಲಿ ನಮ್ಮ ಕುಟುಂಬವೂ ಅಳಿಲು ಸೇವೆ ಸಲ್ಲಿಸಿತ್ತು’ ಎಂದು ಹೇಳಲು ಆಗುತ್ತದೆ ಎಂಬುದೇ ಅದರ ಉದ್ದೇಶವಾಗಿತ್ತು.
ಶ್ರೀರಾಮಮಂದಿರದಂತೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವೂ ೩ ತಲೆಮಾರುಗಳದ್ದಾಗಿದೆ. ೨೦೨೩ ರಿಂದ ೨೦೨೫ ಈ ಕಾಲಾವಧಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆರಂಭವಾಗುವುದು, ಎಂದು ಇಂತಹ ವಿಷಯಗಳ ಸಂದರ್ಭದಲ್ಲಿ ನಾನು ನಿಯಮಿತವಾಗಿ ಗ್ರಂಥ ಮತ್ತು ‘ಸನಾತನ ಪ್ರಭಾತ’ ನಿಯತಕಾಲಿಕೆಗಳಲ್ಲಿ ಬರೆದಿದ್ದೇನೆ. ಇದರಲ್ಲಿ ಈಗ ಭಾರತಕ್ಕೆ ಪ್ರಭು ಶ್ರೀರಾಮನ ಅಧಿಷ್ಠಾನ ಪ್ರಾಪ್ತವಾದುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಸ್ಥೂಲದ ಕಾರ್ಯಕ್ಕೆ ಬಲ ಸಿಗುವುದು ಮತ್ತು ಪ್ರತ್ಯಕ್ಷ ಸ್ಥೂಲದಲ್ಲಿ ಕಾರ್ಯವು ೫-೭ ವರ್ಷಗಳಲ್ಲಿ ಪೂರ್ಣಗೊಳ್ಳುವುದು. ಅಂದರೆ ಹಿಂದೂ ರಾಷ್ಟ್ರವನ್ನು ಸ್ಥೂಲದಲ್ಲಿ ರಾಮರಾಜ್ಯದಂತೆ ಆದರ್ಶವಾಗಿರಿಸಲು ಮುಂದಿನ ೨ ತಲೆಮಾರುಗಳು ಅಂದರೆ ಮುಂದಿನ ೫೦ ವರ್ಷಗಳ ಕಾಲ ಕೆಲಸ ಮಾಡಬೇಕಾಗುತ್ತದೆ.’
– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.