ನನಗೆ ಮಹತ್ವ ಸಿಗಬೇಕು ಎಂದೆನಿಸುವುದು – ಅಹಂನ ಈ ಲಕ್ಷಣದಿಂದಾಗಿ ‘ಸಹಸಾಧಕರು ನನ್ನ ಮಾತನ್ನು ಕೇಳುವುದಿಲ್ಲ ಅಥವಾ ಜವಾಬ್ದಾರ ಸಾಧಕರು ನನ್ನ ಅಭಿಪ್ರಾಯವನ್ನು ಪಡೆಯುವುದಿಲ್ಲ’ ಎಂದು ಕೆಲವು ಸಾಧಕರಿಗೆ ಅನಿಸುತ್ತದೆ ಮತ್ತು ಅವರ ನಕಾರಾತ್ಮತೆಯಲ್ಲಿ ಹೆಚ್ಚಳವಾಗುತ್ತದೆ. ಅಹಂನ ಈ ವಿಚಾರಗಳಿಂದಾಗಿ ‘ಸೇವೆಯನ್ನು ಮಾಡುವಾಗ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳುವುದು, ಸೇವೆಯಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳದಿರುವುದು, ಜವಾಬ್ದಾರಿ ವಹಿಸಿಕೊಂಡು ಸೇವೆ ಮಾಡುವುದು ಬೇಡ ಎಂದೆನಿಸುವುದು’ ಇಂತಹ ರೀತಿಯಲ್ಲಿ ಸಾಧಕರ ಮೇಲೆ ಪರಿಣಾಮವಾಗುವುದು ಗಮನಕ್ಕೆ ಬರುತ್ತದೆ.
ಸಾಧನೆಯಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಗೆ ಅಸಾಧಾರಣ ಮಹತ್ವವಿದೆ. ಸಾಧನೆಯಲ್ಲಿ ನಮ್ಮ ಮನಸ್ಸಿನ ವಿಚಾರಪ್ರಕ್ರಿಯೆಯು ಯೋಗ್ಯ ದಿಶೆಯತ್ತ ಆಗುತ್ತಿದೆಯಲ್ಲ ಎಂಬುದರ ಬಗ್ಗೆ ಅಂತರ್ಮುಖತೆಯಿಂದ ಚಿಂತನೆ ಮಾಡುವುದು ಆವಶ್ಯಕವಾಗಿದೆ. ಅದಕ್ಕೆ ಮುಂದಿನ ಪ್ರಯತ್ನಗಳನ್ನು ಮಾಡಿ –
೧. ಮನಸ್ಸಿನ ಸಂದೇಹಗಳನ್ನು ಜವಾಬ್ದಾರ ಸಾಧಕರಿಗೆ ಕೇಳುವುದು
೨. ಅವರು ಹೇಳಿದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನವನ್ನು ಒಪ್ಪಿಕೊಳ್ಳುವುದು
೩. ಅವರು ನೀಡಿದ ನಿರ್ಣಯವನ್ನು ಮನಃಪೂರ್ವಕವಾಗಿ ಸ್ವೀಕರಿಸುವುದು
೪. ಗುರುಗಳು ನಮ್ಮನ್ನು ಯಾವ ರೀತಿ ಅಂತರ್ಮುಖಗೊಳಿಸುತ್ತಿದ್ದಾರೆ ಎಂದು ಕಲಿಯುವುದು
೫. ಪ್ರಯತ್ನಗಳ ವರದಿಯನ್ನು ನೀಡುವುದು
ಈ ಪಂಚಸೂತ್ರಗಳಿಗನುಸಾರ ಶ್ರದ್ಧೆಯಿಂದ ಸಾಧನೆಯ ಪ್ರಯತ್ನವನ್ನು ಮಾಡಿದರೆ ಅಂತರ್ಮುಖತೆ ಉಂಟಾಗಿ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.
ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ನಿಯಮಿತವಾಗಿ ಮತ್ತು ಗಾಂಭೀರ್ಯದಿಂದ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮಾಡಿ ಸಕಾಲದಲ್ಲಿ ಅಯೋಗ್ಯ ವಿಚಾರಗಳನ್ನು ಜಯಿಸಬೇಕು, ಹಾಗೆಯೇ ಅಂತರ್ಮುಖತೆಯನ್ನು ಉಂಟು ಮಾಡಲು ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಸ್ವಯಂಸೂಚನೆಯನ್ನು ನೀಡಬೇಕು.
ಸಾಧಕರೇ, ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಜಾಗರೂಕತೆಯಿಂದ ಮತ್ತು ತಳಮಳದಿಂದ ಪ್ರಯತ್ನಿಸಿ ಆಧ್ಯಾತ್ಮಿಕ ಪ್ರಗತಿಯ ದಿಶೆಯತ್ತ ಮಾರ್ಗಕ್ರಮಣ ಮಾಡಿ!
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೨.೨೦೨೩)