ಹಿಂದೆ ಯಾರಾದರೂ ನನಗೆ ವ್ಯವಹಾರದಲ್ಲಿ ಸಹಾಯ ಮಾಡಿದರೆ ಅಥವಾ ನನಗೆ ಉಪಕಾರ ಮಾಡಿದರೆ, ನಾನು ಕೇವಲ ಔಪಚಾರಿಕತೆ ಎಂದು ‘ಧನ್ಯವಾದ (ಥ್ಯಾಂಕ್ ಯು), ನಾನು ನಿಮಗೆ ಋಣಿಯಾಗಿದ್ದೇನೆ’ ಅಥವಾ ‘ನಾನು ನಿಮ್ಮ ಉಪಕಾರವನ್ನು ಹೇಗೆ ತೀರಿಸಲಿ’, ಹೀಗೆ ಮೇಲುಮೇಲಿನ ಮಾತುಗಳನ್ನು ಹೇಳಿ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಬಿಡುತ್ತಿದ್ದೆ. ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ ‘ನಾನು ಇತರರಿಗೆ ಧನ್ಯವಾದಗಳನ್ನು ಹೇಳಿದ್ದೇನೆ’ ಅಥವಾ ‘ನಾನು ಇತರರಿಗಾಗಿ ಏನಾದರೂ ಮಾಡಿದ್ದೇನೆ ಆದ್ದರಿಂದ ನಾನೇ ಇತರರಿಗೆ ಉಪಕಾರ ಮಾಡಿದ್ದೇನೆ’, ಎಂಬಂತಹ ಅಹಂಕಾರದ ವಿಚಾರಗಳು ಬರುತ್ತಿದ್ದವು. ಅದರಿಂದ ನನ್ನಲ್ಲಿ ಕರ್ತೃತ್ವವನ್ನು ತೆಗೆದುಕೊಳ್ಳುವುದು, ಅಪೇಕ್ಷೆಯನ್ನು ಮಾಡುವುದು, ನಾನೇ ನನ್ನನ್ನು ಶ್ರೇಷ್ಠ ಎಂದು ತಿಳಿದುಕೊಳ್ಳುವುದು ಇತ್ಯಾದಿ ಅಹಂನ ಲಕ್ಷಣಗಳು ಸತತವಾಗಿ ಉಕ್ಕಿ ಬರುತ್ತಿದ್ದವು. ಇದರ ಪರಿಣಾಮವೆಂದು ಆ ಪ್ರತಿಯೊಬ್ಬ ವ್ಯಕ್ತಿಯೊಂದಿಗಿನ ನನ್ನ ಕೊಡು-ಕೊಳ್ಳುವಿಕೆ ಲೆಕ್ಕಾಚಾರ (ಪ್ರಾರಬ್ಧ) ಹೆಚ್ಚಾಗುತ್ತಿತ್ತು. ಆದುದರಿಂದ ನಾನು ಭವಸಾಗರದ ಸುಖ-ದುಃಖಗಳ ಅಲೆಗಳಲ್ಲಿ ಮುಳುಗಿ ಏಳುತ್ತಿದ್ದೆನು. 1989 ರಲ್ಲಿ ನನ್ನ 43 ನೇ ವಯಸ್ಸಿನಲ್ಲಿ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಭೇಟಿಯಾದ ನಂತರ ಈ ಲೆಕ್ಕವು ನಿಧಾನವಾಗಿ ಕಡಿಮೆಯಾಗತೊಡಗಿತು. ಅವರಿಂದಾಗಿ ನನಗೆ ಅರಿವಿಲ್ಲದೇ ‘ಕೃತಜ್ಞತೆ’ (ಗ್ರ್ಯಾಟಿಟ್ಯೂಡ್) ಈ ಶಬ್ದದಲ್ಲಿರುವ ಭಾವವು ನಿಧಾನವಾಗಿ ತಿಳಿಯತೊಡಗಿತು. ಅದರ ಬಗ್ಗೆ ನಾನು ಇಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ.
೧. ಪ್ರಯೋಗಗಳಿಂದ ಸಿದ್ಧವಾಗಿರುವ ಕೃತಜ್ಞತಾಭಾವದ ಮಹತ್ವ
‘ಯಾರು ತಮ್ಮ ಜೀವನದಲ್ಲಿ ವಿಷಯಗಳನ್ನು ಮತ್ತು ಆಶೀರ್ವಾದಗಳನ್ನು ಮನಃಪೂರ್ವಕವಾಗಿ ತಮ್ಮ ಅಂತರ್ಮನದಲ್ಲಿ ನೋಂದಣಿ ಮಾಡಿಡುತ್ತಾರೆಯೋ ಮತ್ತು ಆ ಬಗ್ಗೆ ಎಲ್ಲಿಯಾದರೂ ಯಾರೊಂದಿಗಾದರೂ ಆ ಭಾವಗಳನ್ನು ವ್ಯಕ್ತಪಡಿಸುತ್ತಾರೆಯೋ, ಅವರು ಹೆಚ್ಚು ಆಶಾವಾದಿ, ಉತ್ಸಾಹಿ, ದೃಢನಿಶ್ಚಯದ ಮತ್ತು ಶ್ರದ್ಧಾವಂತರಾಗಿರುತ್ತಾರೆ’, ಎಂದು ಸಂಶೋಧನೆಯಿಂದ ಸಿದ್ಧವಾಗಿದೆ. ಅದೇ ರೀತಿ ಇಂತಹ ವ್ಯಕ್ತಿಗಳ ಮಾನಸಿಕ ಆರೋಗ್ಯವೂ ಉಚ್ಚಸ್ತರದ್ದಾಗಿರುತ್ತದೆ. ಒಂದು ಪ್ರಯೋಗದಲ್ಲಿ ಎರಡು ಗುಂಪುಗಳಿಗೆ ಅವರ ಜೀವನದ ವಿವಿಧ ಪ್ರಸಂಗಗಳ ಬಗ್ಗೆ ಏನಾದರೂ ಬರೆದಿಡಲು ಹೇಳಲಾಯಿತು. ಒಂದು ಗುಂಪಿಗೆ ‘ಕೃತಜ್ಞತೆ’ ಉಂಟುಮಾಡಿದ ಪ್ರಸಂಗಗಳನ್ನು ಸ್ಮರಿಸಲು ಹೇಳಿದರೆ, ಎರಡನೇ ಗುಂಪಿಗೆ ಯಾವ ಪ್ರಸಂಗಗಳಿಂದ ಅವರಿಗೆ ನಿರಾಶೆ ಬಂದಿತ್ತೋ, ಅಂತಹ ಪ್ರಸಂಗಗಳನ್ನು ಸ್ಮರಿಸಲು ಹೇಳಲಾಯಿತು. ಆ ಎರಡೂ ಗುಂಪುಗಳ ಸದಸ್ಯರ ಮೆದುಳಿನ ಲಹರಿಗಳನ್ನು ಮತ್ತು ಹೃದಯದ ಬಡಿತವನ್ನು ಯಂತ್ರಗಳಿಂದ ದಾಖಲಿಸಲಾಯಿತು. ಅದರಲ್ಲಿ ಮೊದಲ ಗುಂಪಿನ, ಅಂದರೆ ಕೃತಜ್ಞತೆ ಅನಿಸುವ ಜನರು ಹೆಚ್ಚು ಉತ್ತಮ ಇರುವುದಾಗಿ ಗಮನಕ್ಕೆ ಬಂದಿತು. ಸ್ವಲ್ಪದರಲ್ಲಿ ‘ಕೃತಜ್ಞತೆಯ ಭಾವನೆಗಳು ನಮ್ಮ ಶಾರೀರಿಕ ಮತ್ತು ಮಾನಸಿಕ ಸಮತೋಲನದಲ್ಲಿಯೂ ಸಹಾಯ ಮಾಡುತ್ತವೆ’, ಎಂದು ಇದರಿಂದ ಕಂಡು ಬಂದಿತು.
೨. ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವ
ಕೃತಜ್ಞತೆಯನ್ನು ವ್ಯಕ್ತಪಡಿಸುವ ಅನೇಕ ಪದ್ಧತಿಗಳಿರುತ್ತವೆ. ಕೆಲವು ಪದ್ಧತಿಗಳು ಪ್ರತ್ಯಕ್ಷ ಮತ್ತು ಕೆಲವು ಪರೋಕ್ಷವಾಗಿರುತ್ತವೆ. ಸನಾತನ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಕೃತಜ್ಞತೆಯ ಪ್ರತೀಕವೆಂದು ಅನೇಕ ವಿಶೇಷ ಪರಂಪರೆ, ಸಂಸ್ಕಾರ ಮತ್ತು ವಿಧಿಗಳನ್ನು ಮಾಡಲಾಗುತ್ತದೆ. ‘ತರ್ಪಣ ಕೊಡುವುದು’ ಅಥವಾ ‘ಶ್ರಾದ್ಧವಿಧಿಗಳನ್ನು ಮಾಡುವುದು’ ಇದು ಅದರ ಒಂದು ಉದಾಹರಣೆಯಾಗಿದೆ. ಅದರಲ್ಲಿ ಧರ್ಮಾಚರಣೆಯೊಂದಿಗೆ ಕೃತಜ್ಞತಾಭಾವವೂ ಇರುತ್ತದೆ, ಆದರೆ ದುರದೃಷ್ಟವಶಾತ್ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರಿಂದ ಅದರ ಮೂಲ ಉದ್ದೇಶ ಇಲ್ಲವಾಗುತ್ತಿದೆ. ಕೆಲವೆಡೆ ಔಪಚಾರಿಕತೆಗಾಗಿ ಮಾತ್ರ ಕರ್ಮಕಾಂಡ ಉಳಿದುಕೊಂಡಿದೆ. ವಾಸ್ತವವಾಗಿ ಪೂರ್ವಜರ ಪುಣ್ಯ ಮತ್ತು ಆಶೀರ್ವಾದದಿಂದ ಅವರ ಮುಂದಿನ ಪೀಳಿಗೆಗೆ ಜೀವಿಸಲು ಬಲ ಸಿಗುತ್ತದೆ. ಅದಕ್ಕಾಗಿ ಅವರ ಬಗ್ಗೆ ಮನಃಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಸಿಸುವುದು ಆವಶ್ಯಕವಾಗಿದೆ. ‘ಎಲ್ಲಿಯಾದರೂ ಸಿಲುಕಿರುವ ಪೂರ್ವಜರ ಲಿಂಗದೇಹಗಳಿಗೆ ಮುಕ್ತಿ ಸಿಗಬೇಕು’ ಎಂದು ಮಾಡಲಾಗುವ ವಿಧಿಗಳೆಂದರೆ ಶ್ರಾದ್ಧವಿಧಿ.
ಸಮಾಜಕ್ಕೆ ಇದರ ಶಾಸ್ತ್ರವನ್ನು ಹೇಳಿ ಶಾದ್ಧವಿಧಿಯನ್ನು ಮಾಡಲು ಪ್ರೇರಣೆ ನೀಡುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಎಷ್ಟು ಕೃತಜ್ಞತೆ ವ್ಯಕ್ತಮಾಡಿದರೂ ಕಡಿಮೆಯೇ ಆಗಿದೆ.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಕೃತಜ್ಞತೆಯ ಅರಿವಿನಿಂದ ಜೀವನದಲ್ಲಿ ಸಕಾರಾತ್ಮಕತೆ, ಸಹಜತೆ ಮತ್ತು ಆನಂದ ನಿರ್ಮಾಣ ಆಗುವುದು
‘ಕೃತಜ್ಞತೆಯು ಚಿತ್ತವನ್ನು ಶುದ್ಧ ಮತ್ತು ವಿಶಾಲ ಮಾಡುವ ವೃತ್ತಿ ಮತ್ತು ಕೃತಿಯಾಗಿದೆ’, ಎಂದು ನನಗೆ ಅನಿಸುತ್ತದೆ. ನನ್ನ ಮನಸ್ಸಿನಲ್ಲಿ ನಿರಾಸೆಯ ಮೋಡಗಳು ಕವಿದಾಗ, ‘ನಾನು ಸೋತೆ’, ಎಂದು ಅನಿಸಿದಾಗ ಅಥವಾ ‘ಒಬ್ಬಂಟಿಗನಾಗಿದ್ದೇನೆಂಬ’ ಅರಿವು ನನ್ನ ಮನಸ್ಸನ್ನು ಕೊರೆಯತೊಡಗಿದಾಗ ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಜೀವನದುದ್ದಕ್ಕೂ ನನಗೆ ತಿಳಿದೋ-ತಿಳಿಯದೆಯೋ ನೀಡಿದ ಅಸಂಖ್ಯ ಆಶೀರ್ವಾದಗಳು, ಕಲಿಕೆ, ಅವಕಾಶ ಮತ್ತು ಪ್ರಾಪ್ತಿ ಇವುಗಳ ಸ್ಮರಣೆಯಾಗುತ್ತದೆ. ಅವರು ನನ್ನ ಜೋಳಿಗೆಯಲ್ಲಿ ತುಂಬಾ ಹಾಕಿದ್ದಾರೆ ಮತ್ತು ಅದು ಖಾಲಿ ಆಗುವುದೇ ಇಲ್ಲ ಎಂಬ ಕೃತಜ್ಞತೆಯ ಅರಿವಿನಿಂದ ನನ್ನ ಜೀವನದಲ್ಲಿ ಸಕಾರಾತ್ಮಕತೆ, ಸಹಜತೆ ಮತ್ತು ಆನಂದ ನಿರ್ಮಾಣವಾಗಿದೆ.
೪. ಕೃತಜ್ಞತಾಭಾವವು ಮನಸ್ಸು ಮತ್ತು ಬುದ್ಧಿಯನ್ನು ಲಯಗೊಳಿಸಿ ಆತ್ಮಾನಂದವನ್ನು ಪ್ರಾಪ್ತಮಾಡಿಕೊಳ್ಳಲು ಈಶ್ವರನಿಂದ ದೊರಕಿದ ಒಂದು ಮಹತ್ವದ ಕೊಡುಗೆಯಾಗಿದೆ
‘ಕೃತಜ್ಞತೆ’ ಶಬ್ದವೆಂದರೆ ಯಾರಾದರೂ ನನಗಾಗಿ ಏನಾದರೂ ಉಪಕಾರ ಮಾಡಿದಾಗ ಸ್ವಪ್ರೇರಣೆಯಿಂದ ವ್ಯಕ್ತಪಡಿಸುವ ಭಾವವಾಗಿದೆ. ಪ್ರತ್ಯಕ್ಷದಲ್ಲಿ ಈಶ್ವರನೇ ಎಲ್ಲರಿಗಾಗಿ ಎಲ್ಲವನ್ನೂ ಮಾಡುತ್ತಿರುತ್ತಾನೆ. ನನ್ನ ಈಶ್ವರ ಮತ್ತು ಎಲ್ಲವೂ ಪರಾತ್ಪರ ಗುರು ಡಾ. ಆಠವಲೆಯವರೇ ಆಗಿದ್ದಾರೆ. ಪ್ರತಿಯೊಂದು ಪ್ರಸಂಗದಲ್ಲಿ ನಾನು ಅವರ ಬಗ್ಗೆ ಕೃತಜ್ಞತಾಭಾವವನ್ನು ವ್ಯಕ್ತ ಮಾಡಿದುದರಿಂದ ನನ್ನ ಮನಸ್ಸು ಮತ್ತು ಬುದ್ಧಿ ಲಯವಾಗಿ ನನಗೆ ಆತ್ಮಾನಂದವು ಸಿಗುತ್ತಿದೆ. ಆದುದರಿಂದ ‘ಕೃತಜ್ಞತಾಭಾವವೆಂದರೆ ಮನಸ್ಸು ಮತ್ತು ಬುದ್ಧಿಲಯವಾಗಿ ಆತ್ಮಾನಂದ ಪ್ರಾಪ್ತಮಾಡಿಕೊಳ್ಳಲು ಈಶ್ವರನಿಂದ ದೊರಕಿದ ಒಂದು ಮಹತ್ವದ ಕೊಡುಗೆಯಾಗಿದೆ’, ಎಂದು ನನಗೆ ಅನಿಸುತ್ತದೆ.
೫. ಕೃತಜ್ಞತಾಭಾವವು ಕೇವಲ ಜೀವನಮೌಲ್ಯವಲ್ಲ, ಗುರು-ಶಿಷ್ಯರ ಸಂಬಂಧವನ್ನು ಬಲಿಷ್ಠಗೊಳಿಸುವ ಸಾಧನವಾಗಿದೆ
ಕೃತಜ್ಞತೆಯ ಅರಿವಿನಿಂದ ನನ್ನಲ್ಲಿರುವ ಕರ್ತೃತ್ವ, ನಕಾರಾತ್ಮಕ ವಿಚಾರಗಳು, ಭಾವನೆಗಳು, ಇವುಗಳೊಂದಿಗೆ ನನ್ನಲ್ಲಿರುವ ಅಸಂಖ್ಯಾತ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣಗಳನ್ನು ದೂರ ಮಾಡಲು ಸಹಾಯವಾಗುತ್ತದೆ. ಕೃತಜ್ಞತೆಯ ಅರಿವು ನನ್ನನ್ನು ‘ನನ್ನ’ತನವನ್ನು ಹಿಂದೆ ಬಿಟ್ಟು ಮುಂದೆ ಕರೆದುಕೊಂಡು ಹೋಗುವ ಸಾಧನವಾಗಿದೆ. ಆದುದರಿಂದ ನನ್ನಲ್ಲಿ ನಮ್ರತೆ, ನಿರ್ಮಲತೆ ಮತ್ತು ಪ್ರೀತಿಯ ಗುಣಗಳಲ್ಲಿ ಹೆಚ್ಚಳವಾಗುತ್ತಿದೆ. ಕೃತಜ್ಞತೆಯ ವೃತ್ತಿಯು ನನಗಾಗಿ ಕೇವಲ ಜೀವನಮೌಲ್ಯವಲ್ಲ; ಅದು ನನ್ನ ಆತ್ಮಶಕ್ತಿಯೂ ಆಗಿದೆ. ಕೃತಜ್ಞತಾಭಾವವೆಂದರೆ ‘ಪರಾತ್ಪರ ಗುರು ಡಾಕ್ಟರ್ ಮತ್ತು ಸಾಧಕ ಇವರಲ್ಲಿನ ಗುರುಶಿಷ್ಯರ ನಡುವಿನ ಸಂಬಂಧವನ್ನು ಬಲಶಾಲಿಗೊಳಿಸುವ ಅಮೂಲ್ಯ ಸಾಧನವಾಗಿದೆ’, ಎಂದು ನನಗೆ ಅನಿಸುತ್ತದೆ.
೬. ‘ಪರಾತ್ಪರ ಗುರು ಡಾ. ಆಠವಲೆಯವರು ಎಲ್ಲವನ್ನೂ ನೀಡಿ ನನ್ನನ್ನು ಮೋಕ್ಷದತ್ತ ಕರೆದುಕೊಂಡು ಹೋಗುತ್ತಿದ್ದಾರೆ’ ಎಂಬುದರ ಅರಿವಿನಿಂದ ಸತತ ಕೃತಜ್ಞತಾಭಾವದಲ್ಲಿ ಇರಲು ಸಾಧ್ಯವಾಗುವುದು
‘ಕೃತಜ್ಞತೆ ಈ ಶಬ್ದದಿಂದ ಉಂಟಾದ ಸ್ಪರ್ಶ, ರಸ, ಗಂಧ ಮತ್ತು ಶಕ್ತಿಯು ನನ್ನನ್ನು ತಾನಾಗಿಯೇ ವಿನೀತನನ್ನಾಗಿಸುತ್ತದೆ. ಆ ಅರಿವು ನನಗೆ ಇತರರ ಕೃತಿ ಮತ್ತು ವಿಚಾರಗಳನ್ನು ಗೌರವಿಸಲು ಕಲಿಸುತ್ತದೆ. ದೈನಂದಿನ ಜೀವನದಲ್ಲಿ ನನಗೆ ಎಷ್ಟೋ ವಿಷಯಗಳು ಇತರರಲ್ಲಿ ಬೇಡಿಕೊಳ್ಳದೇ ಸಹಜವಾಗಿ ಸಿಗುತ್ತವೆ. ನನಗೆ ತಿಳಿಯದೇ ಅವುಗಳನ್ನು ಉಪಯೋಗಿಸುತ್ತೇನೆ. ಅದುದರಿಂದ ನನಗೆ ಅವುಗಳ ಮೌಲ್ಯ ತಿಳಿಯುವುದಿಲ್ಲ. ಪ್ರತಿ ದಿನ ದೊರಕುವ ಸೂರ್ಯಪ್ರಕಾಶದಿಂದ ಹಿಡಿದು ನನ್ನ ಜೀವನಕ್ಕೆ ಅರ್ಥ ನೀಡುವಂತಹ ಅಸಂಖ್ಯಾತ ವಿಷಯಗಳು, ನನಗೆ ಪರಿಚಿತ ಮತ್ತು ಅಪರಿಚಿತವಿರುವ ಅಸಂಖ್ಯಾತ ಜನರಿಂದ ಮತ್ತು ಸೃಷ್ಟಿಯಿಂದ ದೊರಕುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರು ನನಗೆ ನನ್ನ ಹಿಂದಿನ ಅನಂತ ಜನ್ಮಗಳಿಂದ ಮತ್ತು ಈ ಜನ್ಮದಲ್ಲಿಯೂ ಎಲ್ಲವನ್ನೂ ನೀಡುತ್ತಿದ್ದು ಅವರು ನನ್ನನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತಿದ್ದಾರೆ. ಯಾವುದನ್ನು ಯಾರೂ ಕೊಡಲಾರರು ಅಥವಾ ಯಾವುದು ಸಿಗುವುದೆಂಬ ವಿಚಾರವನ್ನೂ ಮಾಡಲಾರೆನೋ, ಅದೆಲ್ಲವನ್ನೂ ನನಗೆ ಪರಾತ್ಪರ ಗುರು ಡಾಕ್ಟರರು ಹೇರಳವಾಗಿ ನೀಡುತ್ತಿದ್ದಾರೆ. ಈ ನಿರಂತರ ಅರಿವಿನಿಂದ ಮತ್ತು ಅವರ ಕೃಪೆಯಿಂದ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಕೃತಜ್ಞತೆಯ ಭಾವನೆ ಅಖಂಡವಾಗಿರುತ್ತದೆ.
ಕೃತಜ್ಞತೆ
ವ್ಯಕ್ತಿ, ದೇಶ, ಧರ್ಮ, ಕರ್ಮ ಮತ್ತು ಸಾಧನೆ ಇವುಗಳಿಗಾಗಿ ನನಗೆ ಪರಾತ್ಪರ ಗುರು ಡಾಕ್ಟರರು ಕೃತಜ್ಞತಾಭಾವದ ಮಹತ್ವವನ್ನು ಕಲಿಸಿದರು ಮತ್ತು ಆ ಕೃತಜ್ಞತಾಭಾವವನ್ನು ಅನುಭವಿಸಲು ಮತ್ತು ವ್ಯಕ್ತಡಿಸಲು ಪಾತ್ರನನ್ನಾಗಿಸಿದರು. ಅದಕ್ಕಾಗಿ ನನಗೆ ಈ ಕೆಳಗಿನಂತೆ ಹೇಳಬೇಕೆನಿಸುತ್ತದೆ,
ನಾನು ಜೀವನವನ್ನು ನಡೆಸುವಾಗ ಹೆಜ್ಜೆಹೆಜ್ಜೆಗೂ
ಶ್ರೀಹರಿಯ ನಾಮಸ್ಮರಣೆ ಮಾಡುತ್ತೇನೆ |
ಗುರುದೇವರ ಸ್ಮರಣೆಯು ಕೃತಜ್ಞತೆಯೊಂದಿಗೆ
ಉಸಿರಾಟದೊಂದಿಗೆ ಸಹಜವಾಗಿ ಆಗುತ್ತದೆ ||
ನಾನು ಅನುಭವಿಸಿದ ಅನೇಕ ಪ್ರಸಂಗಳಿಂದ ಕಲಿಯಲು ಸಿಕ್ಕಿದ ಸ್ವಲ್ಪ ಮಟ್ಟಿಗಿನ ಸಾರವೆಂದರೆ ಮೇಲಿನ ವಿವೇಚನೆಯಾಗಿದೆ. ಕೊನೆಗೆ ನನಗೆ ಇಷ್ಟೇ ಹೇಳಬೇಕೆನಿಸುತ್ತದೆ, ‘ಸದ್ಯದ ಕಾಲದಲ್ಲಿ ಸಾಧಕರಿಗೆ ಕೃತಜ್ಞತಾಭಾವ ವ್ಯಕ್ತಡಿಸಲು ಸರ್ವೋಚ್ಚ ಶ್ರದ್ಧಾಸ್ಥಾನವೆಂದರೆ ಪರಾತ್ಪರ ಗುರು ಡಾ. ಜಯಂತ ಆಠವಲೆ, ಇವರೇ ಆಗಿದ್ದಾರೆ. ನಾನು ಅವರ ಚರಣಗಳಲ್ಲಿ ಯಾವಾಗಲೂ ನತಮಸ್ತಕನಾಗಿ ಕೋಟಿಶಃ ಕೃತಜ್ಞತೆಗಳನ್ನು ವ್ಯಕ್ತ ಮಾಡುತ್ತೇನೆ.
– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೬.೩.೨೦೨೨)