30.3.2023 ರಂದು ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಯುಗಯುಗಾಂತರಗಳಿಂದ ಜನಮಾನಸದಲ್ಲಿ ತನ್ನ ದಿವ್ಯ ಅವತಾರತ್ವವನ್ನು ಅಚ್ಚೊತ್ತಿರುವ ಅಯೋಧ್ಯೆಯ ರಾಜ ಭಗವಾನ ಶ್ರೀರಾಮಚಂದ್ರನು ಈ ಘೋರ ಕಲಿಯುಗದಲ್ಲಿ ಮತ್ತೊಮ್ಮೆ ಶ್ರೀರಾಮ ನವಮಿಯಂದು ಬಂದು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ಈಗ ಶ್ರೀರಾಮಭಕ್ತ ಮಹಾಬಲಿ ಹನುಮಂತ ಅವತರಿಸುವನು. 6.4.2023 ರಂದು ಹನುಮಾನ ಜಯಂತಿಯನ್ನು ಆಚರಿಸಲಿದ್ದೇವೆ.
ಯಾರಿಗೆ ‘ರಾಮಭಕ್ತಿ’ಯೇ ಮಂತ್ರವಾಗಿದ್ದು ‘ರಾಮಸೇವೆ’ಗಾಗಿಯೇ ಹಂಬಲಿಸುತ್ತಿದ್ದನೋ, ಆತ ಹನುಮಂತ! ಶ್ರೀರಾಮನ ಪಟ್ಟಾಭಿಷೇಕದ ನಂತರ, ಹನುಮಂತನು ಪ್ರಭುವಿನ ಚರಣಕಮಲಗಳ ಬಳಿ ಕುಳಿತು, ತನ್ನ ಪ್ರಾಣನಾಥ ಭಗವಂತನಿಗೆ ಈ ಕೆಳಗಿನ ಪ್ರಾರ್ಥನೆಯನ್ನು ಮಾಡಿದನು.
ಭಗವಾನ ಶ್ರೀರಾಮನ ದಿವ್ಯ ಅವತಾರಿ ಚರಿತ್ರೆಯ ಸ್ಮರಣೆ, ಅದರಲ್ಲಿರುವ ಭಗವಾನ ಶ್ರೀರಾಮನ ಭಾವಾರ್ಥದ ಚಿಂತನೆ, ರಾಮಚರಿತ್ರೆಯ ಗಾಯನ, ಇವುಗಳಿಂದಲೂ ಭಗವಾನ ಶ್ರೀರಾಮನ ನಿರ್ಗುಣ (ಅಮೂರ್ತ) ರೂಪದ ದರ್ಶನ ಪಡೆದ ಆನಂದವನ್ನು ಅನುಭವಿಸಬಹುದ. “ಹೇ ಪ್ರಭು, ಈ ಪ್ರಯತ್ನಗಳ ಮೂಲಕ, ದಾಸ ಹನುಮಂತನಿಗೆ ‘ಬಯಸಿದಾಗ, ರಘುಕುಲದೀಪಕ ಪ್ರಭು ಶ್ರೀರಾಮನ ದರ್ಶನ ದೊರೆಯಲಿ’ ಎಂಬ ವರವನ್ನು ನೀಡಿ.”
ಈ ಕಲಿಯುಗದಲ್ಲಿ ಅವತರಿಸಿರುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ) ಅವತಾರತ್ವವನ್ನು ಅನುಭೂತಿಯನ್ನು ಸತತವಾಗಿ ಪಡೆಯುವುದು ‘ಗುರುಭಕ್ತಿ’ಯಾದರೆ ಅವರ ಅವತಾರತ್ವದ ಕೀರ್ತನೆ ‘ಗುರುಸೇವೆ’! ಈ ಘೋರ ಕಲಿಯುಗದಿಂದ ಪಾರಾಗಲು ನಮಗೆ ದೇವರು ನೀಡಿರುವ ಅತ್ಯುತ್ತಮ ವರಗಳೆಂದರೆ ‘ಗುರುಭಕ್ತಿ’ ಮತ್ತು ‘ಗುರುಸೇವೆ’.
ಸಾಧಕರೇ, ‘ಗುರುಭಕ್ತಿ’ ಮತ್ತು ‘ಗುರುಸೇವೆ’ಯ ಮೂಲಕ ರಾಮಾವತಾರಿ ಶ್ರೀ ಗುರುಗಳ ಚೈತನ್ಯ ಸ್ವರೂಪದ ದರ್ಶನ ಪಡೆದು ಅಖಂಡವಾಗಿ ಆ ಚೈತನ್ಯವನ್ನು ಅನುಭವಿಸೋಣ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
good information 🙏