ಕೊರೊನಾ ಮತ್ತು ಅಗ್ನಿಹೋತ್ರದ ಉಪಯುಕ್ತತೆ !

ಡಾ. ಉಲರಿಚ್ ಬರ್ಕ, ಅಗ್ನಿಹೋತ್ರ ಅಧ್ಯಯನಕಾರರು, ಜರ್ಮನಿ
ಡಾ. ಉಲರಿಚ್ ಬರ್ಕ, ಜರ್ಮನಿ

ಜಗತ್ತಿದಾದ್ಯಂತ ಕೊರೋನಾ ವೈರಾಣುಗಳ ಹಾಹಾಕಾರವೆದ್ದಾಗ ಅನೇಕ ಸಮಸ್ಯೆಗಳು ಉದ್ಭವಿಸಿದವು. ಈ ವೈರಾಣು ಹರಡದಂತೆ ನಾವು ಆಗಾಗ ಕೈ ತೊಳೆಯುವುದು, ಸೋಶಲ್ ಡಿಸ್ಟನ್ಸಿಂಗ್ (ಸಾಮಾಜಿಕ ಅಂತರ) ಎಂದೆಲ್ಲ ಪಾಲಿಸಿದೆವು. ನಮ್ಮ ಭಾರತೀಯ ಪರಂಪರೆಯಲ್ಲಿ ಅಗ್ನಿಹೋತ್ರದಿಂದ ವಾತಾವರಣದ ಶುದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ವೈರಾಣುಗಳು ಇತ್ತೀಚೆಗೆ ಉಲ್ಬಣವಾದಾಗ ‘ಅಗ್ನಿಹೋತ್ರದಿಂದ ಕೊರೋನಾ ವೈರಾಣುಗಳ ಮೇಲೆ ಏನು ಪರಿಣಾಮವಾಗುತ್ತದೆ ಎಂಬುವುದನ್ನು ಶಾಸ್ತ್ರೀಯವಾಗಿ ಅಧ್ಯಯನವಾಗಿಲ್ಲ. ಆದರೂ ಇಲ್ಲಿ ನೀಡಿರುವ ಕೆಲವು ಅನುಭವಗಳಿಂದ ಕೊರೋನಾ ವೈರಾಣುಗಳ ಸಮಸ್ಯೆಯನ್ನು ಬಗೆಹರಿಸಲು ಅಗ್ನಿಹೋತ್ರದಿಂದ ಸಹಾಯವಾಗಬಹುದು, ಎಂದು ನಾವು ಹೇಳಬಹುದು. ಈ ಕುರಿತು ಜರ್ಮನಿಯ ಅಗ್ನಿಹೋತ್ರದ ಅಧ್ಯಯನಕಾರರಾದ ಡಾ. ಉಲರಿಚ್ ಬರ್ಕ ಇವರು ಮಂಡಿಸಿದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಅಗ್ನಿಹೋತ್ರದಿಂದ ಮುಂದೆ ಕೊಟ್ಟಿರುವ ಸಹಾಯಗಳಾಗಬಹುದು

೧. ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

೨. ಒಂದು ವೇಳೆ ಮೊದಲೇ ಸೋಂಕು ತಗಲಿದ್ದಲ್ಲಿ, ಸಂಬಂಧಪಟ್ಟ ವೈರಾಣುಗಳ ಪ್ರಭಾವವು ಸ್ವಲ್ಪ ಕಡಿಮೆಯಾಗುವುದು.

೩. ಸೋಂಕು ತಗಲದಂತೆ ಶರೀರಕ್ಕೆ ಸಹಾಯ ಸಿಗುತ್ತದೆ.

೨. ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ

‘ಕೊರೋನಾ ವೈರಾಣುಗಳ ಸೋಂಕನ್ನು ಕಡಿಮೆ ಮಾಡಲು ಅಗ್ನಿಹೋತ್ರದಿಂದ ಸಹಾಯವಾಗುವುದು’, ಎಂದು ಒಂದು ಉತ್ತಮ ವರದಿ ಬಂದಿದೆ.

ಸ್ಪೇನ್ ರಾಷ್ಟ್ರದ ಏಲಿಸಾಬೆಥ್ ಎಮ್. ಇವರ ಆಶ್ಚರ್ಯಗೊಳಿಸುವ ಅನುಭವಗಳು

ಸ್ಪೇನದಲ್ಲಿ ಕೊರೋನಾ ಹರಡುವಿಕೆಯ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲರಾಗಿರುವ ಮಾದ್ರಿದ ನಗರದಲ್ಲಿರುವ ಏಲಿಸಾಬೆಥ್ ಎಮ್. ಇವರು ತಮ್ಮ ಅನುಭವವನ್ನು ಹೇಳಿದರು. (ಯುರೋಪಿನ ಇಟಲಿಯ ನಂತರ ಕೊರೋನಾದ ಅತ್ಯಧಿಕ ಸೋಂಕು ಸ್ಪೇನನಲ್ಲಿತ್ತು) ಏಲಿಸಾಬೆಥ್ ಇವರ ಪತಿಯೊಂದಿಗೆ ಒಂದು ಮನೆಯಲ್ಲಿರುತ್ತಾರೆ. ಆ ಮನೆಯಲ್ಲಿನ ಒಂದು ಕೋಣೆಯನ್ನು ಅವರು ನಗರದಲ್ಲಿ ಉಪಹಾರಗೃಹವನ್ನು ನಡೆಸುತ್ತಿರುವ ಓರ್ವ ವ್ಯಕ್ತಿಗೆ ಬಾಡಿಗೆ ಕೊಟ್ಟಿದ್ದಾರೆ. ಅಲ್ಲಿನ ಸಂಚಾರ ನಿಷೇಧದ ಮೊದಲು ಆ ವ್ಯಕ್ತಿಗೆ ಅನೇಕ ಜನರ ಸಂಪರ್ಕವಿತ್ತು. ಅವನ ಕೊರೋನಾ ವಿಷಾಣುಗಳ ಪರೀಕ್ಷಣೆಯು ಪೊಸಿಟಿವ್ ಬಂತು. ಆದುದರಿಂದ ಏಲಿಸಾಬೆಥ್ ಮತ್ತು ಅವರ ಯಜಮಾನರಿಗೆ ಕಾಳಜಿಯಾಗತೊಡಗಿತು. ಅವರು ಕೊರೋನಾ ವೈರಾಣುಗಳ ಬಗ್ಗೆ ತಮ್ಮ ಪರೀಕ್ಷಣೆಯನ್ನು ಮಾಡಿಸಿದರು, ಆಗ ಅದು ಮಾತ್ರ ನೆಗೆಟಿವ್  ಬಂತು. ಏಲಿಸಾಬೆಥ್ ಮತ್ತು ಆ ಬಾಡಿಗೆದಾರರ ಅಡುಗೆ ಮನೆಯು ಒಂದೇ ಇದೆ. ಅವರಿಬ್ಬರೂ ಒಟ್ಟಿಗೆ ಊಟವನ್ನು ಮಾಡುತ್ತಿದ್ದರು, ಒಂದೇ ಬಚ್ಚಲುಮನೆಯನ್ನು ಬಳಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರು ಒಟ್ಟಿಗೆ ಸೇರಿ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಪರೀಕ್ಷಣೆಯನ್ನು ಮಾಡಿದ್ದ ಆಧುನಿಕ ವೈದ್ಯರಿಗೆ ‘ಸೋಂಕು ತಗಲಿದ ಮನುಷ್ಯನ ಜೊತೆಯಲ್ಲಿದ್ದರೂ ಏಲಿಸಾಬೆಥ್ ಮತ್ತು ಅವರ ಪತಿಗೆ ವೈರಾಣುವಿನಿಂದ ಸೋಂಕು ತಗಲಿಲ್ಲ’, ಎಂಬ ಬಗ್ಗೆ ಬಹಳ ಆಶ್ಚರ್ಯವೆನಿಸಿತು. ಏಲಿಸಾಬೆಥ್ ಎಮ್. ಇವರು ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಿದ್ದರು, ಹಾಗೆಯೇ ಅಗ್ನಿಹೋತ್ರದ ವಿಭೂತಿಯನ್ನು ದಿನನಿತ್ಯ ಸೇವಿಸುತ್ತಿದ್ದರು. ಇದರಿಂದಾಗಿ ಅವರಿಗೆ ಬಹುಶಃ ಕೊರೋನಾದ ಸೋಂಕು ತಗಲಲಿಲ್ಲದಿರಬಹುದು.

ಅಗ್ನಿಹೋತ್ರದಿಂದ ವೈರಾಣುಗಳು ನಾಶವಾಗುತ್ತವೆಯೇ ಎಂಬುದು ನಿಖರವಾಗಿ ತಿಳಿದಿಲ್ಲ. ಅಗ್ನಿಹೋತ್ರದಿಂದ ವಿಷಾಣುಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಯಾವುದು ಜೀವಾಣುಗಳ ಸಂದರ್ಭದಲ್ಲಿ ಆಯಿತೋ, ಅದು ವೈರಾಣುಗಳ ಬಗ್ಗೆಯೂ ಆಗುತ್ತದೆಯೇ ಎಂಬುದನ್ನು ಶೀಘ್ರವಾಗಿ ಸಂಶೋಧನೆಯನ್ನು ಮಾಡುವುದು ಆವಶ್ಯಕವಾಗಿದೆ.

೩. ಅಗ್ನಿಹೋತ್ರದಿಂದ ಜೀವಾಣುಗಳ ಮೇಲಾಗುವ ಪರಿಣಾಮದ ಕುರಿತು ವಿವಿಧ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾಡಿದ ಸಂಶೋಧನೆಗಳು

೩ ಅ. ಪುಣೆಯ ಫರ್ಗ್ಯುಸನ್ ಕಾಲೇಜ್ ನಡೆಸಿದ ಸಂಶೋಧನೆ

ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಅಗ್ನಿಹೋತ್ರದಿಂದ ಜೀವಾಣುಗಳ ಬೆಳವಣಿಗೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವ ಪ್ರಯೋಗ ಮಾಡಲಾಯಿತು. ಈ ಪ್ರಯೋಗದ ಫಲಿತಾಂಶವು ದೊರಕಿದ ನಂತರ ಸಂಶೋಧಕರು ‘ಅಗ್ನಿಹೋತ್ರದ ಹೊಗೆಯಿಂದಾಗಿ ಗಾಳಿಯಲ್ಲಿರುವ ಸೂಕ್ಷ್ಮ ಜಂತುಗಳ ಸಂಖ್ಯೆಯು ಕಡಿಮೆಯಾಯಿತು’, ಎಂಬ ನಿಷ್ಕರ್ಷಕ್ಕೆ ಬಂದಿದ್ದಾರೆ.

೩ ಆ. ಕಾಯಿಲೆಗಳಿರುವ ಜನರಿಗೆ ಅಗ್ನಿಹೋತ್ರದಿಂದಾಗುವ ಸಹಾಯದ ಬಗ್ಗೆ ಸಂಶೋಧನೆ

ಹೃದ್ರೋಗ ಅಥವಾ ಉಚ್ಚ ರಕ್ತದೊತ್ತಡ, ಶ್ವಸನಾಂಗವ್ಯೂಹದಲ್ಲಿ ಉದ್ಭವಿಸುವ ದಮ್ಮು ಮುಂತಾದ ಗಂಭೀರ ಕಾಯಿಲೆ, ಮಧುಮೇಹ, ಅರ್ಬುದರೋಗ, ರೋಗನಿರೋಧಕ ಶಕ್ತಿಯು ಕಡಿಮೆ ಇರುವವರು ಹಾಗೆಯೇ ಹಿರಿಯರಿಗೆ ಕೊರೋನಾದಿಂದ ಹೆಚ್ಚು ಅಪಾಯವಿರುತ್ತದೆ. ವಯಸ್ಸು ಹೆಚ್ಚಾದಂತೆ ಮನುಷ್ಯನ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಇದುವರೆಗೆ ಕೊರೋನಾದ ವೈರಾಣುಗಳಿಂದ ಯಾವ ಜನರು ಮೃತರಾಗಿದ್ದಾರೆಯೋ, ಅವರಲ್ಲಿ ಅನೇಕ ಜನರಿಗೆ ಮೇಲಿನ ಕಾಯಿಲೆಗಳಿದ್ದವು.

ಹೃದ್ರೋಗ ಮತ್ತು ಉಚ್ಚ ರಕ್ತದೊತ್ತಡ : ಅಗ್ನಿಹೋತ್ರದಿಂದ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಇದಕ್ಕಾಗಿ ಅಗ್ನಿಹೋತ್ರವನ್ನು ಮಾಡುವ ಮೊದಲು ಮತ್ತು ಅಗ್ನಿ ಹೋತ್ರವನ್ನು ಮಾಡಿದ ನಂತರ ಕೆಲವು ವ್ಯಕ್ತಿಗಳ ರಕ್ತದೊತ್ತಡವನ್ನು ಪರಿಶೀಲಿಸಲಾಯಿತು. ಈ ಪ್ರಯೋಗದಲ್ಲಿ ಅಗ್ನಿಹೋತ್ರದ ನಂತರ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಬಂದಿರುವುದು ಕಂಡುಬಂದಿದೆ.

೩ ಇ. ಅಗ್ನಿಹೋತ್ರವನ್ನು ನಿಯಮಿತವಾಗಿ ಮಾಡುವ ಪೆರು ದೇಶದ ಮ್ಯಾಗ್ಡಾ ಲೋಪೆಝ್ ಇವರ ಅನುಭವ

ಪೆರು ದೇಶದ ಮ್ಯಾಗ್ಡಾ ಲೋಪೆಝ್ ಇವರು ಅಗ್ನಿಹೋತ್ರದಿಂದ ಹೃದಯದ ಮೇಲಾಗುವ ಪರಿಣಾಮದ ಕುರಿತು ಒಂದು ಅನುಭವವನ್ನು ಹೇಳಿದ್ದಾರೆ. ಅವರು, “೧೦ ವರ್ಷಗಳ ಹಿಂದೆ ನನ್ನ ತಾಯಿಗೆ ಕಾಯಿಲೆಯಾಗಿತ್ತು. ಅವಳ ಇಲೆಕ್ಟ್ರೋಕಾರ್ಡಿಯೋಗ್ರಾಮ್ (ಇ.ಸಿ.ಜಿ.) ತೆಗೆದ ನಂತರ ಅವಳಿಗೆ ಮೊದಲೇ ತಿಳಿಯದ ಹೃದಯಾಘಾತವಾಗಿತ್ತು ಎಂಬುದು ಕಂಡು ಬಂದಿತು; ಅವಳ ಹೃದಯದ ಒಂದು ಭಾಗವು ಮೃತವಾಗಿತ್ತು ಮತ್ತು ಅದರಲ್ಲಿ ಪುನಃ ಸುಧಾರಣೆಯಾಗಲು ಸಾಧ್ಯವಿರಲಿಲ್ಲ. ಕಳೆದ ೪ ವರ್ಷಗಳಿಂದ ನಾವು ಅನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಿದ್ದೆವು; ಆದರೆ ಕಳೆದ ಕೆಲವು ತಿಂಗಳಿನಿಂದ ನಾವು ದಿನನಿತ್ಯವು ಅಗ್ನಿಹೋತ್ರವನ್ನು ಮಾಡುತ್ತಿದ್ದೇವೆ. ೨ ವಾರಗಳ ಹಿಂದೆ ತಾಯಿಯವರ ಎರಡನೆಯ ಬಾರಿ ‘ಇ.ಸಿ.ಜಿ.’ ತೆಗೆದು ಅದಕ್ಕೆ ಸಂಬಂಧಪಟ್ಟ ಆಧುನಿಕ ವೈದ್ಯರಿಗೆ ಕೇಳಿದ ನಂತರ ಅವರು, “ತಾಯಿಯ ಹೃದಯವು ಸರಿಯಾಗಿದೆ ಮತ್ತು ಅವಳಿಗೆ ಈ ಮೊದಲು ಹೃದಯಾಘಾತವಾಗಿರುವ ಬಗ್ಗೆ ಯಾವುದೇ ಲಕ್ಷಣಗಳಿಲ್ಲ” ಎಂದು ಕೇಳಿ ನಮಗೆ ಆಶ್ಚರ್ಯವೆನಿಸಿತು. ನಾವು ಪ್ರತಿದಿನ ಅಗ್ನಿಹೋತ್ರವನ್ನು ಮಾಡಿ ದಿನದಲ್ಲಿ ೩-೪ ಸಲ ಅಗ್ನಿಹೋತ್ರದ ವಿಭೂತಿ ಸೇವಿಸಲು ಕೊಡುತ್ತಿದ್ದೆವು.

೪. ಅಗ್ನಿಹೋತ್ರದಿಂದ ದಮ್ಮಿನ ಕಾಯಿಲೆಯೂ ಗುಣವಾಗಿರುವ ಉದಾಹರಣೆಗಳು

ಕೊರೋನಾದಿಂದ ಪಪ್ಫುಸಗಳ ಮೇಲೆ ಹೆಚ್ಚು ಪರಿಣಾಮವಾಗುವುದರಿಂದ ‘ಅಸ್ತಮಾ’ ಇರುವವರು ವಿಶೇಷ ಕಾಳಜಿ ವಹಿಸುವ ಬಗ್ಗೆ ಹೇಳಲಾಗುತ್ತದೆ. ಅಗ್ನಿಹೋತ್ರದಿಂದ ನಮ್ಮ ಪಪ್ಫುಸವು ಬಲಿಷ್ಠವಾಗಲು ಸಹಾಯವಾಗುತ್ತದೆ ಮತ್ತು ಉಸಿರಾಟದ ಬಗ್ಗೆ ಶರೀರದ ಸಂತುಲನವು ಹೆಚ್ಚುತ್ತದೆ. ಈ ಕುರಿತು ಅನೇಕ ಉದಾಹರಣೆಗಳು ಎದುರಿಗೆ ಬಂದಿವೆ. ಅವುಗಳಲ್ಲಿ ೨ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೪ ಅ. ಅಗ್ನಿಹೋತ್ರ ಮಾಡುವುದರಿಂದ ಅಸ್ತಮಾದ ಕಾಯಿಲೆಯು ಪೂರ್ಣ ಗುಣವಾಗಿದೆ ಎಂದು ಹೇಳಿದ ಅಮೇರಿಕಾದ ಡೊನ್ನಾ

ಅಮೇರಿಕಾದ ಸಾಂತಾ ಕ್ಲಾರಿಟಾದಲ್ಲಿರುವ ಡೊನ್ನಾ ಎಸ್. ಇವರು ಅವರ ಅನುಭವವನ್ನು ಬರೆದಿದ್ದಾರೆ. ಅವರು, “ನನ್ನ ಆರೋಗ್ಯ ತುಂಬಾ ಹದೆಗಿಟ್ಟಿತ್ತು. ಆಗ ಯುನಿರ್ವಸಿಟಿ ಆಫ್ ವರ್ಜಿನಿಯಾದಲ್ಲಿ ಉಸಿರಾಟದ ತೊಂದರೆಯ ಬಗ್ಗೆ ನಾನು ಅಲ್ಲಿನ ತಜ್ಞರನ್ನು ಭೇಟಿಯಾದೆ. ಅವರು ನನ್ನ ಪಪ್ಫುಸಗಳ ‘ಕ್ಷ ಕಿರಣ (ಎಕ್ಸ-ರೆ)’ ವರದಿಯನ್ನು ನನಗೆ ತೋರಿಸಿದರು. ಅದರಲ್ಲಿ ನನ್ನ ಪಪ್ಫುಸಗಳು ಪೂರ್ಣ ಕಪ್ಪು ಕಾಣಿಸುತ್ತಿದ್ದವು. ಕೇವಲ ೪ ಸೆಂಟಿಮೀಟರ್ ಜಾಗವು ಖಾಲಿ ಕಾಣಿಸುತ್ತಿತ್ತು. ನಾನು ಅಗ್ನಿಹೋತ್ರವನ್ನು ಮಾಡಲು ಆರಂಭಿಸಿದೆನು. ೩ ತಿಂಗಳ ನಂತರ ನಾನು ಆಧುನಿಕ ವೈದ್ಯರ ಬಳಿ ಹೋದೆ. ಅವರು ನನ್ನ ಪಪ್ಫುಸಗಳ ಕ್ಷ-ಕಿರಣದ ಪರೀಕ್ಷಣೆ ಮಾಡಿದರು. ಅದರ ವರದಿಯನ್ನು ನೋಡಿದ ನಂತರ ಅವರು, “ನೀವು ಏನು ಮಾಡಿದ್ದೀರಿ ಎಂಬುದು ನನಗೆ ಗೊತ್ತಿಲ್ಲ; ಆದರೆ ನಿಮ್ಮ ಪಪ್ಫುಸಗಳು ಸಂಪೂರ್ಣವಾಗಿ ಗುಣವಾಗಿದೆ. ನಿಮಗೆ ಈಗ ಔಷಧಿ ಸೇವಿಸುವ ಆವಶ್ಯಕತೆಯಿಲ್ಲ”, ಎಂದು ಹೇಳಿದರು.

೪ ಆ. ಪೊಲಂಡಿನ ಫ್ರಾನ್ ಬಿ ಇವರ ೧೪ ವರ್ಷಗಳ ಅಸ್ತಮಾ ಗುಣವಾದ ಅನುಭವ

ವಾಯಸೊಕಾ, ಪೊಲಂಡದಲ್ಲಿರುವ ಫ್ರಾನ್ ಬಿ ಇವರು, “೧೧ ನೆ ವಯಸ್ಸಿನಿಂದ ನನಗೆ ದಮ್ಮಿನ ತೀವ್ರ ಕಾಯಿಲೆ ಇತ್ತು. ೨೦ ವರ್ಷವಾದ ನಂತರ ನನ್ನ ಸ್ಥಿತಿಯು ಇನ್ನೂ ಹದೆಗೆಟ್ಟಿತು. ನನಗೆ ದಮ್ಮಿನ ತೊಂದರೆಯು ತಡರಾತ್ರಿಯ ಉಲ್ಬಣಿಸುತ್ತಿತ್ತು ಮತ್ತು ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗುತ್ತಿತ್ತು. ‘ದಮ್ಮು ಇದು ವಾಯು ಮಾಲಿನ್ಯಕ್ಕೆ ಸಂಬಂಧಪಟ್ಟಿದೆ’, ಎಂದು ನನಗೆ ಅನಿಸುತ್ತಿತ್ತು. ೨೫ ನೇ ವಯಸ್ಸಿನಲ್ಲಿ ನಾನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರ ಮಾಡತೊಡಗಿದೆನು. ೨ ವಾರಗಳಲ್ಲಿಯೇ ನನ್ನ ದಮ್ಮಿನ ಕಾಯಿಲೆಯು ಗುಣವಾಯಿತು. ಆನಂತರ ನನಗೆ ಆ ಕಾಯಿಲೆ ಪುನಃ ಬರಲಿಲ್ಲ”, ಎಂದರು.

೫. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವ ಅಗ್ನಿಹೋತ್ರ

೫ ಅ. ಎಚ್.ಐ.ವಿ. ಮೇಲೆ ಅಗ್ನಿಹೋತ್ರದ ಪರಿಣಾಮ

‘ಕೊರೋನಾ ವೈರಾಣುಗಳ ಮೇಲೆ ಅಗ್ನಿಹೋತ್ರದಿಂದ ಏನು ಪರಿಣಾಮವಾಗುತ್ತದೆ ?’, ಎಂಬುದರ ಬಗ್ಗೆ ಅಧ್ಯಯನವಾಗಲಿಲ್ಲ; ಆದರೆ ಎಚ್.ಐ.ವಿ. ವೈರಾಣುಗಳಿಂದಾಗುವ ಏಡ್ಸ್ ರೋಗವನ್ನು ಹಿಡಿತದಲ್ಲಿಡುವಲ್ಲಿ ಅಗ್ನಿಹೋತ್ರ ಮತ್ತು ಅಗ್ನಿಹೋತ್ರದ ವಿಭೂತಿ ಇವುಗಳಿಂದ ಒಳ್ಳೆಯ ಪರಿಣಾಮ ಕಂಡುಬಂತು. ಈ ಕುರಿತು ಮಾಡಿದ ಪ್ರಯೋಗದಲ್ಲಿ ಎಚ್.ಐ.ವಿ. ಸೋಂಕು ತಗಲಿದ ಮಕ್ಕಳು ಅಗ್ನಿಹೋತ್ರವನ್ನು ಮಾಡಲು ಆರಂಭಿಸಿದರು. ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯರು ಸ್ವತಂತ್ರವಾಗಿ ಅಗ್ನಿಹೋತ್ರವನ್ನು ಮಾಡಿದರು. ಸ್ವಲ್ಪ ಹೊತ್ತಿನ ನಂತರ ಮುಂದಿನ ಪರಿಣಾಮಗಳು ಕಂಡುಬಂದವು.

೧. ವೈರಾಣುಗಳ ಪ್ರಮಾಣವು ಕಡಿಮೆಯಾಯಿತು.

೨. ಸೀ.ಡಿ-೪ ಎಂಬ ಜೀವಕೋಶಗಳ ಸಂಖ್ಯೆಯು ಹೆಚ್ಚಾಯಿತು.

೩. ಒಟ್ಟಿನಲ್ಲಿ ಮಕ್ಕಳ ಆರೋಗ್ಯವು ಸುಧಾರಿಸಿತು. ಅವರ ರೋಗ ನಿರೋಧಕಶಕ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು.

೬. ಮೇಲೆ ನೀಡಿರುವ ಅಧ್ಯಯನಗಳ ನಿ‌‌ಷ್ಕರ್ಷ

ಅಗ್ನಿಹೋತ್ರದಿಂದ ಕೊರೋನಾ ವೈರಾಣುಗಳ ಸೋಂಕು ಕಡಿಮೆಯಾಗಲು ಉಪಯೋಗವಾಗುತ್ತದೆ. ಈ ಕುರಿತು ನಮ್ಮ ಬಳಿ ಪ್ರತ್ಯಕ್ಷ ಪುರಾವೆಗಳಿಲ್ಲ. ಆದರೂ ಮೇಲಿನ ಎಲ್ಲ ವರದಿಗಳ ಅಧ್ಯಯನ ಮಾಡಿದಾಗ ಕೊರೋನಾ ಸೋಂಕಿನಂತಹ ಕಠಿಣ ಪರಿಸ್ಥಿತಿಯಲ್ಲಿ ಮನೆಯಲ್ಲಿ ಅಗ್ನಿಹೋತ್ರವನ್ನು ಮಾಡುವುದು ಉಪಯುಕ್ತವಾಗಬಲ್ಲದು. ಅದಕ್ಕಾಗಿ ಇವೆಲ್ಲ ಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನವಾಗುವುದು ಆವಶ್ಯವಾಗಿದೆ.

ಅ. ಕೊರೋನಾ ಸೋಂಕು ತಗಲಿರುವ ರೋಗಿಗಳಿಗೆ ಅಗ್ನಿಹೋತ್ರವನ್ನು ಮಾಡಲು ಹೇಳಿ ಅಥವಾ ಅವರಿಗಾಗಿ ಅಗ್ನಿಹೋತ್ರವನ್ನು ಮಾಡಿ ಅದರ ಪರಿಣಾಮವನ್ನು ಪರೀಕ್ಷಿಸುವುದು.

ಆ. ಅಗ್ನಿಹೋತ್ರ ಮಾಡುವ ಮೊದಲು ಮತ್ತು ಅಗ್ನಿಹೋತ್ರ ಮಾಡಿದ ನಂತರ ‘ಆಸ್ಪತ್ರೆಯ ಗಾಳಿಯಲ್ಲಿ ಕೊರೋನಾ ವೈರಾಣುಗಳ ಪ್ರಮಾಣವು ಎಷ್ಟಿದೆ’, ‘ಆಸ್ಪತ್ರೆಯ ವಸ್ತುಗಳ ಮೇಲೆ ಕೊರೋನಾ ವೈರಾಣುಗಳ ಪ್ರಮಾಣದಲ್ಲಿ ಏನು ಬದಲಾವಣೆಯಾಗುತ್ತದೆ’, ಎಂಬ ಅಧ್ಯಯನ ಮಾಡಬೇಕು.

ಇ. ಅಗ್ನಿಹೋತ್ರ ಮತ್ತು ಅಗ್ನಿಹೋತ್ರದಲ್ಲಿನ ವಿಭೂತಿ ಇವುಗಳಿಂದ ‘ಕೊರೋನಾ ವೈರಾಣುಗಳಿರುವ ಕೋಶಗಳ ಮೇಲೆ ಏನು ಪರಿಣಾಮವಾಗುತ್ತದೆ’, ಎಂದು ಅಧ್ಯಯನ ಮಾಡಬೇಕು.

ಈ. ಈ ಕಾಲದಲ್ಲಿ ಆಧುನಿಕ ವೈದ್ಯರ ಮತ್ತು ದಾದಿಯರ ರಕ್ಷಣೆ ಮುಖ್ಯವಾಗಿದೆ. ‘ಈ ವೈದ್ಯಕೀಯ ಸಮೂಹದ ಮೇಲೆ ಅಗ್ನಿಹೋತ್ರದಿಂದ ಏನು ಪರಿಣಾಮವಾಗುತ್ತದೆ’, ಎಂಬ ಬಗ್ಗೆ ಅಧ್ಯಯನ ಮಾಡಬಹುದು.

– ಡಾ. ಉಲರಿಚ್ ಬರ್ಕ

ಇದೆಲ್ಲವನ್ನು ಓದಿ ನಿಮಗೂ ಅಗ್ನಿಹೋತ್ರವನ್ನು ಮಾಡಬೇಕು ಎಂದೆನಿಸಿದ್ದಲ್ಲಿ, ಇಲ್ಲಿ ಕ್ಲಿಕ್ ಮಾಡಿ!

Leave a Comment