ಭಾರತೀಯ ಕಾಲಗಣನೆಯ ಪದ್ಧತಿಯಲ್ಲಿ ತಿಥಿಗೆ ಮಹತ್ವ ನೀಡಲಾಗಿದೆ; ಆದರೆ ಈಗಿನ ಗ್ರೆಗೋರಿಯನ್ (ಯುರೋಪಿಯನ) ಕಾಲಗಣೆಯಿಂದ ಭಾರತದಲ್ಲಿ ತಿಥಿಯ ಉಪಯೋಗವು ದಿನನಿತ್ಯದ ವ್ಯವಹಾರದಲ್ಲಿ ಆಗದೇ ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿದೆ. ಈ ಲೇಖನದ ಮೂಲಕ ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿಯನ್ನು ಖಚಿತಪಡಿಸುವ ಪದ್ಧತಿಯನ್ನು ತಿಳಿದುಕೊಳ್ಳೋಣ.
ತಿಥಿ ಎಂದರೇನು ?
ಅಮಾವಾಸ್ಯೆಗೆ ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಆನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನಿಗಿಂತ ಮುಂದೆ ಹೋಗಲಾರಂಭಿಸುತ್ತಾನೆ. ಈ ರೀತಿ ಸೂರ್ಯ ಮತ್ತು ಚಂದ್ರ ಇವರಲ್ಲಿ ಕೋನೀಯ ಅಂತರ ೧೨ ಕೋನಮಾನವಾದ ಮೇಲೆ ೧ ತಿಥಿ ಪೂರ್ಣವಾಗುತ್ತದೆ ಮತ್ತು ೨೪ ಕೋನಮಾನ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ. ಇದೇ ರೀತಿ ಮುಂದುವೆರೆದು ಮುಂದಿನ ಅಮಾವಾಸ್ಯೆಯ ವರೆಗೆ ಒಟ್ಟು ೩೦ ತಿಥಿಗಳಾಗುತ್ತವೆ.
೨. ತಿಥಿ – ಹಿಂದೂ ಧರ್ಮದಲ್ಲಿ ಮಹತ್ವವಿರುವುದಕ್ಕೆ ಕಾರಣ
ಭಾರತೀಯ ಕಾಲಗಣನೆಯ ಪದ್ಧತಿಯಲ್ಲಿ ಮಾಸವು (ತಿಂಗಳು) ಚಂದ್ರನಿಂದ ಎಣಿಸಲ್ಪಡುತ್ತದೆ. ಅಮಾವಾಸ್ಯಾಂತ್ಯ (ಅಮಾವಾಸ್ಯೆಗೆ ಮುಗಿಯುವ) ಅಥವಾ ಪೌರ್ಣಿಮಾಂತ್ಯ (ಹುಣ್ಣಿಮಿಗೆ ಮುಗುಯುವ) ಎಂದು ಮಾಸ ಗಣನೆಯನ್ನು ಮಾಡಲಾಗುತ್ತದೆ. ನಮ್ಮ ಹೆಚ್ಚಿನ ಹಬ್ಬಗಳು, ಉತ್ಸವಗಳು, ದೇವತೆಗಳ ಜಯಂತಿ ಇತ್ಯಾದಿ ಚಾಂದ್ರಮಾಸಕ್ಕನುಸಾರ ಅಂದರೆ ತಿಥಿಗನುಸಾರವಾಗಿ ಆಚರಿಸಲ್ಪಡುತ್ತವೆ. ಇದಕ್ಕೆ ಕಾರಣವೇನೆಂದರೆ ಸೂರ್ಯನ ಪರಿಣಾಮವು ಹಚ್ಚಾಗಿ ಸ್ಥೂಲ ಸೃಷ್ಟಿಯ ಮೇಲೆ ಮತ್ತು ಸ್ಥೂಲ ದೇಹದ ಮೇಲೆ ಆಗುತ್ತದೆ, ಆದರೆ ಚಂದ್ರನ ಪರಿಣಾಮ ಸೂಕ್ಷ್ಮ ಸೃಷ್ಟಿಯ ಮೇಲೆ ಮತ್ತು ಸೂಕ್ಷ್ಮ ದೇಹದ ಮೇಲೆ ಆಗುತ್ತದೆ. ಸ್ಥೂಲ ಉರ್ಜೆಗಿಂತ ಸೂಕ್ಷ್ಮ ಉರ್ಜೆಯು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಶಾರೀರಿಕ ಬಲಕ್ಕಿಂತ ಮಾನಸಿಕ ಬಲ ಹೆಚ್ಚು ಮಹತ್ವದಾಗಿರುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ತಿಥಿಗೆ ಸೂರ್ಯ ಚಂದ್ರರ ಸಂಯುಕ್ತ ಪರಿಣಾಮವು ಪೃಥ್ವಿಯ ಮೇಲಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ತಾರೀಖಿನ ಬದಲಾಗಿ ಚಂದ್ರನ ತಿಥಿಗೆ ಮಹತ್ವ ನೀಡಲಾಗಿದೆ.
೩. ಜನ್ಮತಿಥಿಯ ಮಹತ್ವ
ವ್ಯಕ್ತಿಯ ಜನ್ಮದ ಹೊತ್ತಿನಲ್ಲಿರುವ ತಿಥಿಗೆ ‘ಜನ್ಮತಿಥಿ’ ಎನ್ನುತ್ತಾರೆ. ವಿಶಿಷ್ಟ ಮಾಸ, ತಿಥಿ ಮತ್ತು ನಕ್ಷತ್ರ ಇವುಗಳು ಯಾವಾಗಲೂ ಒಟ್ಟಿಗೆ ಇರುತ್ತವೆ. ಉದಾ. ಮಾರ್ಗಶೀರ್ಷ ಹುಣ್ಣಿಮೆಗೆ ಚಂದ್ರನು ಮೃಗಶಿರಾ ನಕ್ಷತ್ರದಲ್ಲಿ ಅಥವಾ ಮೃಗಶಿರಾ ನಕ್ಷತ್ರದ ಹತ್ತಿರದಲ್ಲಿರುವ ನಕ್ಷತ್ರದಲ್ಲಿ ಇರುತ್ತಾನೆ. ಜನನದ ಸಮಯದಲ್ಲಿರುವ ತಿಥಿ ಮತ್ತು ನಕ್ಷತ್ರಗಳ ಪರಿಣಾಮವು ವ್ಯಕ್ತಿಯ ಮನಸ್ಸಿನ ಮೇಲೆ ಆಗಿ ಅವನ ವ್ಯಕ್ತಿಮತ್ವ ರೂಪಗೊಳ್ಳುತ್ತದೆ.
ಹಿಂದೂ ಧರ್ಮದಲ್ಲಿ ಹೇಳಿದ ಪ್ರಕಾರ ಹುಟ್ಟುಹಬ್ಬವನ್ನು ಜನ್ಮತಿಥಿಗೆ ಆಚರಿಸಿದರೆ, ಆರತಿ ಬೆಳಗುವುದು, ಸ್ತೋತ್ರಪಠಣ, ಹಿರಿಯರ ಆಶೀರ್ವಾದ ಪಡೆಯುವಂತಹ ಕೃತಿಗಳಿಂದ ವ್ಯಕ್ತಿಯ ಸೂಕ್ಷ್ಮ ದೇಹದ (ಮನಸ್ಸಿನ) ಸಾತ್ತ್ವಿಕತೆಯು ಹೆಚ್ಚಾಗುತ್ತದೆ, ಇದಕ್ಕೆ ವಿರುದ್ಧವಾಗಿ ಹುಟ್ಟುಹಬ್ಬವನ್ನು ಜನ್ಮ ತಾರೀಖಿನ ಪ್ರಕಾರ ಆಚರಿಸಿದರೆ ಕೇವಲ ಸ್ಥೂಲ ದೇಹಕ್ಕೆ ಸ್ವಲ್ಪ ಮಟ್ಟಿಗೆ ಲಾಭವಾಗುತ್ತದೆ. ಹುಟ್ಟುಹಬ್ಬವನ್ನು ಪಾಶ್ಚಾತ್ಯ ಪದ್ಧತಿಯಂತೆ ಮೇಣದ ಬತ್ತಿ ಆರಿಸಿ ಕೇಕ್ ಕತ್ತರಿಸಿ ಮಾಡಿದರೆ ಯಾವ ಅಧ್ಯಾತ್ಮಿಕ ಲಾಭವೂ ಆಗುವುದಿಲ್ಲ.
ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಆಧ್ಯಾತ್ಮಿಕ ಲಾಭ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ |
೪. ಜನ್ಮದ ಕ್ಷಣಕ್ಕೆ ಯಾವ ತಿಥಿ ಇರುತ್ತದೆಯೋ, ಆದೇ ತಿಥಿಯು ವ್ಯಕ್ತಿಯ ‘ಜನ್ಮತಿಥಿ’ ಯಾಗಿರುತ್ತದೆ.
ನಾವು ಪ್ರತಿದಿನ ಬಳಸುವ ದಿನದರ್ಶಿಕೆಯಲ್ಲಿ ದಿನಾಂಕದ ಹತ್ತಿರ ತಿಥಿ ಬರೆದಿರುತ್ತಾರೆ. ಆ ತಿಥಿಯು ಅಂದು ಸೂರ್ಯೋದಯಕ್ಕೆ ಸ್ಪರ್ಷ ಮಾಡುವ ತಿಥಿಯಾಗಿರುತ್ತದೆ. ಸುರ್ಯೋದಯದ ಸಮಯದಲ್ಲಿರುವ ತಿಥಿಯೇ ಅಂದು ದಿನವಿಡೀ ಇರುತ್ತದೆ ಎಂದೇನಿಲ್ಲ. ಆದುದರಿಂದ ಜನ್ಮತಿಥಿಯನ್ನು ನಿರ್ಧರಿಸುವಾಗ ‘ಮಗುವಿನ ಜನ್ಮದ ಕ್ಷಣಕ್ಕೆ ಯಾವ ತಿಥಿ ಇರುತ್ತದೆಯೋ ಆ ತಿಥಿಯನ್ನೇ ಜನ್ಮತಿಥಿ’ ಎಂದು ತೆಗೆದುಕೊಳ್ಳಬೇಕು. ಉದಾಹರಣೆಗೆ, ‘ನವಮಿ’ ಈ ತಿಥಿಯು ಒಂದೊಮ್ಮೆ ಮಧ್ಯಾಹ್ನ ೧ ಗಂಟೆ ವರೆಗೆ ಇದ್ದು ಮಗುವಿನ ಜನ್ಮ ಅಂದು ಮಧ್ಯಾಹ್ನ ೧ ರ ನಂತರ ಆದರೆ ಅದರ ಜನ್ಮ ತಿಥಿಯು ‘ದಶಮಿ’ ಯಾಗಿರುತ್ತದೆ. ತಿಥಿಗಳ ಸಮಾಪ್ತಿಯ ಸಮಯವನ್ನು ಆಯಾ ವರ್ಷದ ಪಂಚಾಂಗದಲ್ಲಿ ಅಥವಾ ಸ್ಥಳೀಯ ದಿನದರ್ಶಿಕೆಯ ಹಿಂದಿನ ಪುಟದ ಮೇಲೆ ಕೊಟ್ಟಿರುತ್ತಾರೆ.
ತಿಥಿಯ ಸಂದರ್ಭದಲ್ಲಿ ಏನಾದರು ಸಂದೇಹವಿದ್ದರೆ ಸ್ಥಳೀಯ ಜ್ಯೋತಿಷಿಗಳಿಂದ ನಮ್ಮ ಜನ್ಮತಿಥಿಯು ಯೋಗ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಪ್ರತಿಯೊಂದು ತಿಥಿಯ ವೈಶಿಷ್ಟ್ಯ ತಿಳಿಸಿ, ಧರ್ಮಾಚರಣೆಯಲ್ಲಿ ಸಹಾಯ ಮಾಡುವ ಸನಾತನ ಪಂಚಾಂಗ ಆ್ಯಪ್ ಇಂದೇ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ ! |
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧೧.೨೦೨೨)