ಸಮಾಜದಲ್ಲಿ ಪ್ರಸಾರವನ್ನು ಮಾಡುವಾಗ ಅನೇಕರಿಗೆ ‘ಯೋಗ್ಯ ಸಾಧನೆ’ ಎಂದರೇನು ? ಎಂಬುದೇ ಗೊತ್ತಿರುವುದಿಲ್ಲ, ಅದರಲ್ಲಿ ಕೆಲವರು ಸಾಧನೆ ಎಂದು ಏನು ಮಾಡುತ್ತಿರುತ್ತಾರೆಯೋ, ಅದೆಲ್ಲವನ್ನು ಅವರು ತಮ್ಮ ಮನಸ್ಸಿನಂತೆ ಮಾಡುತ್ತಿರುತ್ತಾರೆ, ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಸಾಧನೆಯಲ್ಲಿ ‘ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು’, ಇದು ಸಾಧನೆಯ ಮೊದಲ ಮತ್ತು ದೊಡ್ಡ ತಪ್ಪಾಗಿದೆ. ಅವರು ‘ಸಾಧನೆಯಲ್ಲಿ ಯೋಗ್ಯವೇನು ಮತ್ತು ಅಯೋಗ್ಯವೇನು’, ಎಂಬುದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಆದುದರಿಂದ ಅವರಿಂದ ಯೋಗ್ಯ ‘ಸಾಧನೆ’ ಆಗುವುದೇ ಇಲ್ಲ; ತದ್ವಿರುದ್ಧ ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಕೃತಿಗನುಸಾರ ಸಾಧನೆ ಮತ್ತು ಸೇವೆಯನ್ನು ಹೇಳಲಾಗುತ್ತದೆ ಹಾಗೂ ಅವನು ಆಜ್ಞಾಪಾಲನೆ ಎಂದು ಅದನ್ನು ಮನಃಪೂರ್ವಕವಾಗಿ ಮಾಡುತ್ತಿರುತ್ತಾನೆ. ಆದುದರಿಂದ ಅವನ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತಿರುತ್ತದೆ. ಈ ನಿಟ್ಟಿನಲ್ಲಿ ‘ಸನಾತನದ ಸಾಧಕರು ಹೇಗೆ ಆದರ್ಶರಾಗಿದ್ದಾರೆ ?’, ಎಂಬುದರ ಬಗ್ಗೆ ಭಗವಂತನು ನನಗೆ ಮುಂದಿನ ವಿಚಾರಗಳನ್ನು ನೀಡಿದನು.
೧. ಕಲಿಯುಗದ ಈ ಮಾಯಾಲೋಕದಲ್ಲಿ ಈಶ್ವರನ ನಾಮವನ್ನು ಉಚ್ಚರಿಸುವುದು, ಸಾಧನೆ ಮಾಡುವುದು, ಇದು ಅಪಹಾಸ್ಯದ ವಿಷಯವಾಗಿರುವಾಗ ತನು, ಮನ ಮತ್ತು ಧನ ಇವುಗಳ ತ್ಯಾಗವನ್ನು ಮಾಡಿ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿ ನಿಷ್ಕಾಮ ಸಾಧನೆಯನ್ನು ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.
೨. ಕುಟುಂಬದವರು, ಸಮಾಜ, ಹಾಗೆಯೇ ಎಲ್ಲ ಸ್ತರಗಳಲ್ಲಿ ವಿರೋಧವಾಗುತ್ತಿರುವಾಗ ಅದನ್ನು ಧೈರ್ಯದಿಂದ ಎದುರಿಸುತ್ತ, ಕೇವಲ ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.
೩. ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ, ಸಮಷ್ಟಿ ಸಾಧನೆಯೆಂದು ಪ್ರತಿದಿನ ಮತ್ತು ನಿಯಮಿತವಾಗಿ ಸಮಾಜಕ್ಕೆ ಹೋಗಿ ಧರ್ಮಪ್ರಸಾರ ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.
೪. ಸಾಧನೆಯ ಕುರಿತು ಮಾರ್ಗದರ್ಶನವನ್ನು ಮಾಡುವಾಗ ಕೇವಲ ‘ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ’ ಎಂಬಂತೆ ಕೇವಲ ತಾತ್ತ್ವಿಕ ವಿಷಯಗಳನ್ನು ಹೇಳದೇ ತಾವು ಸ್ವತಃ ಸಾಧನೆಯ ಎಲ್ಲ ಅಂಗಗಳನ್ನು ಕೃತಿಯಲ್ಲಿ ತರುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.
೫. ‘ಅನೇಕದಿಂದ ಏಕಕ್ಕೆ ಬರುವುದು, ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು, ಕಾಲಾನುಸಾರ ಸಾಧನೆ, ವರ್ಣಾನುಸಾರ ಸಾಧನೆ, ಮಟ್ಟಾನುಸಾರ ಸಾಧನೆ’, ಈ ಸಾಧನೆಯ ಮೂಲಭೂತ ತತ್ತ್ವಗಳಿಗನುಸಾರ ಸನಾತನದ ಸಾಧಕರಿಗೆ ಯಾವ ಸಾಧನೆಯನ್ನು ಹೇಳಲಾಗುತ್ತದೆಯೋ, ಅವರು ಅದನ್ನು ಬುದ್ಧಿಯ ಅಡಚಣೆ ಇಲ್ಲದೇ ಶ್ರದ್ಧೆಯಿಂದ ಮಾಡುತ್ತಾರೆ; ಆದುದರಿಂದ ಅವರು ಆದರ್ಶರಾಗಿದ್ದಾರೆ.
೬. ಅನೇಕ ಸಂಪ್ರದಾಯಗಳಲ್ಲಿ ಜವಾಬ್ದಾರ ಸಾಧಕರು ಸಾಧನೆಯನ್ನು ಮಾಡುವವರಿಗೆ ಅವರ ತಪ್ಪುಗಳನ್ನು ಹೇಳುವುದಿಲ್ಲ, ಏಕೆಂದರೆ ಅವರಲ್ಲಿ ಕೇಳುವ ಮತ್ತು ಸ್ವೀಕರಿಸುವ ಸ್ಥಿತಿ ಇರುವುದಿಲ್ಲ; ಆದುದರಿಂದ ಅವರಿಂದ ಪುನಃ ಪುನಃ ತಪ್ಪುಗಳು ಆಗುತ್ತಿರುತ್ತವೆ. ಇದರಿಂದ ಸಾಧಕರು ಅಹಂನ ಹಂತದಲ್ಲಿ ಸಿಲುಕಿರುತ್ತಾರೆ. ಅದರ ತುಲನೆಯಲ್ಲಿ ತಮ್ಮ ತಪ್ಪುಗಳನ್ನು ತಾವಾಗಿಯೇ ಇತರರಿಗೆ ಹೇಳುವ, ಆ ತಪ್ಪುಗಳನ್ನು ಆಶ್ರಮದ ಫಲಕದಲ್ಲಿ ಬರೆಯುವ, ಸತ್ಸಂಗದಲ್ಲಿ ಹೇಳುವ, ಆ ತಪ್ಪುಗಳನ್ನು ಪ್ರತಿದಿನ ಸ್ವಭಾವದೋಷ ನಿರ್ಮೂಲನಾ ಕೋಷ್ಟಕದಲ್ಲಿ ಬರೆಯುವ ಮತ್ತು ಆ ತಪ್ಪುಗಳ ಹಿಂದಿನ ಸ್ವಭಾವದೋಷವನ್ನು ದೂರಗೊಳಿಸಲು ದಿನನಿತ್ಯ ಪ್ರಯತ್ನಗಳನ್ನು ಮಾಡುವ ಮತ್ತು ಆಗಿರುವ ತಪ್ಪುಗಳಿಗಾಗಿ ಕ್ಷಮಾಯಾಚನೆಯನ್ನು ಮಾಡಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವ ಸನಾತನದ ಸಾಧಕರು ಆದರ್ಶರೇ ಆಗಿದ್ದಾರೆ.
೭. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರತ್ಯಕ್ಷ ಭೇಟಿಯಾಗದೇ ಇದ್ದರೂ ಕೇವಲ ಅವರ ಶಬ್ದ, ತೇಜಸ್ವಿ ವಿಚಾರ ಮತ್ತು ಅವರ ಮೇಲಿನ ಶ್ರದ್ಧೆಯ ಬಲದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.
೮. ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕೆ ಸ್ಥೂಲದಲ್ಲಿ ಹೇಗೆ ವಿರೋಧವಾಗುತ್ತಿದೆಯೋ, ಹಾಗೆಯೇ ಸೂಕ್ಷ್ಮದಲ್ಲಿಯೂ ಕೆಟ್ಟ ಶಕ್ತಿಗಳಿಂದ ತೀವ್ರ ವಿರೋಧ ಆಗುತ್ತಿದೆ. ಈ ವಿರೋಧದಿಂದಾಗಿ ಸಾಧಕರಿಗೆ ಅನೇಕ ರೀತಿಯ ತೀವ್ರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತಿದೆ. ಆದರೆ ಕೇವಲ ತಮ್ಮ ಸಾಧನೆಯಾಗಬೇಕು ಹಾಗೂ ರಾಷ್ಟ್ರ ಮತ್ತು ಧರ್ಮದ ಉತ್ಕರ್ಷಕ್ಕಾಗಿ ಈ ತೊಂದರೆಗಳನ್ನು ಸಹಿಸಿಕೊಂಡು ಧೈರ್ಯದಿಂದ ಹಾಗೂ ಆನಂದದಿಂದ ಕಾರ್ಯವನ್ನು ಮಾಡುವ ಸನಾತನದ ಸಾಧಕರು ಸರ್ವಾರ್ಥದಿಂದಆದರ್ಶರಾಗಿದ್ದಾರೆ !
೯. ‘ಹೇ ದೇವಿ, ನಮ್ಮನ್ನು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡಿಸು. ನಾವು ನಿನಗೆ ಶರಣಾಗಿದ್ದೇವೆ. ನಮ್ಮ ಮೇಲಿನ ಈ ಸಂಕಟವನ್ನು ನೀನೇ ದೂರಗೊಳಿಸು’, ಎಂದು ದೇವಿಯ ಆರತಿಯ ಈ ಸಾಲುಗಳನ್ನು ಕೇವಲ ಹೇಳದೇ, ಅದಕ್ಕಾಗಿ ಸಾಧ್ಯವಿದ್ದ ಸಾಧನೆಯ ಎಲ್ಲ ಪ್ರಯತ್ನಗಳನ್ನೂ ನಿರಂತರವಾಗಿ ಮಾಡಿ ಇದೇ ಜನ್ಮದಲ್ಲಿ ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗಲು ಪ್ರಯತ್ನಿಸುವ ಸನಾತನದ ಸಾಧಕರು ಆದರ್ಶರೇ!
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಈ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಪಾವನ ಚರಣಗಳಲ್ಲಿ ಅರ್ಪಿಸುತ್ತೇನೆ !
ಇದಂ ನ ಮಮ |
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೮.೮.೨೦೨೨)