ಸದ್ಯದ ಸ್ಥಿತಿಯಲ್ಲಿ ಸಮಾಜಕ್ಕೆ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುವ ಸಂತರು ಬಹಳ ಕಡಿಮೆ ಇದ್ದಾರೆ. ಅನೇಕ ಸಂಪ್ರದಾಯದವರು ಆಧಿದೈವಿಕ ಉಪಾಸನೆಯನ್ನು ಮಾಡಲು ಕಲಿಸುತ್ತಾರೆ.
೧. ಆಧಿದೈವಿಕ ಸಾಧನೆ
ಯಜ್ಞಕರ್ಮ, ದೇವತೆಗಳ ಉಪಾಸನೆ, ಮಂತ್ರಜಪ, ಅನುಷ್ಠಾನ ಇತ್ಯಾದಿಗಳು ಆಧಿದೈವಿಕ ಸಾಧನೆಗಳಾಗಿವೆ. ಈ ಸಾಧನೆಗಳು ಸೂಕ್ಷ್ಮ ಊರ್ಜೆಗೆ (ಶಕ್ತಿಗೆ) ಸಂಬಂಧಿಸಿವೆ. ವೈದಿಕ ಪರಿಭಾಷೆಯಲ್ಲಿ ಈ ಸೂಕ್ಷ್ಮ ಊರ್ಜೆಗಳಿಗೆ ‘ದೇವತೆ’ಗಳು ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಆಧಿದೈವಿಕ ಸಾಧನೆಯು ಸಕಾಮ ಸಾಧನೆಯಾಗಿದ್ದು ಅದು ಯಶಸ್ಸು, ಬಲ, ಬುದ್ಧಿ, ಸಿದ್ಧಿ ಇತ್ಯಾದಿ ಇಚ್ಛಿತ ವಿಷಯಗಳನ್ನು ಪ್ರಾಪ್ತಮಾಡಿಕೊಡುತ್ತದೆ, ಆದರೆ ಕೇವಲ ಆಧಿದೈವಿಕ ಸಾಧನೆಯನ್ನೇ ಜೀವಮಾನವಿಡೀ ಮಾಡುತ್ತಾ ಹೋದರೆ ಅವರ ಆಧ್ಯಾತ್ಮಿಕ ಪ್ರಗತಿ (ಉನ್ನತಿ) ಆಗುವುದಿಲ್ಲ.
೨. ಆಧ್ಯಾತ್ಮಿಕ ಸಾಧನೆ
ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂ ಇವುಗಳ ಲಯಕ್ಕಾಗಿ ಪ್ರಯತ್ನ ಮಾಡುವುದೆಂದರೆ ಆಧ್ಯಾತ್ಮಿಕ ಸಾಧನೆ. ಆತ್ಮಕ್ಕೆ ಅದರ ಸ್ವ-ಸ್ವರೂಪದ ಅರಿವು ಮಾಡಿಕೊಡುವುದೇ ಆಧ್ಯಾತ್ಮಿಕ ಸಾಧನೆಯ ಉದ್ದೇಶವಾಗಿದೆ. ಜ್ಞಾನ, ಭಕ್ತಿ, ಕರ್ಮ, ಧ್ಯಾನಮಾರ್ಗ ಇತ್ಯಾದಿ ಸಾಧನಾಮಾರ್ಗಗಳು ಇದರಲ್ಲಿ ಬರುತ್ತವೆ. ಆಧ್ಯಾತ್ಮಿಕ ಸಾಧನೆಯಿಂದ ಮನುಷ್ಯನಿಗೆ ಚಿರಂತನ ಸುಖ (ಆನಂದ) ಪ್ರಾಪ್ತವಾಗುತ್ತದೆ. ಅವನು ಜನನ-ಮರಣದ ಚಕ್ರದಿಂದ ಶಾಶ್ವತವಾಗಿ ಮುಕ್ತನಾಗುತ್ತಾನೆ.
೩. ಸಪ್ತರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ತ್ರಿಗುಣಾತೀತ ಪರಮೇಶ್ವರನ ಪದವಿಯನ್ನು ನೀಡಿ ಗೌರವಿಸುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಮಾಜಕ್ಕೆ ಯೋಗ್ಯ ಆಧ್ಯಾತ್ಮಿಕ ಸಾಧನೆಯನ್ನು ಕಲಿಸಲು ‘ಸನಾತನ ಸಂಸ್ಥೆ’ಯನ್ನು ಸ್ಥಾಪಿಸಿದ್ದಾರೆ. ವಿಹಂಗಮ ಗತಿಯಲ್ಲಿ ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗಲು ಅವರು ‘ಗುರುಕೃಪಾಯೋಗ’ವನ್ನು ನಿರ್ಮಿಸಿದ್ದಾರೆ. ಚಿತ್ತದಲ್ಲಿ ಸಂಗ್ರಹವಾಗಿರುವ ಜನ್ಮಜನ್ಮಾಂತರದ ಸ್ವಭಾವದೋಷಗಳ ಸಂಸ್ಕಾರಗಳನ್ನು ಅಳಿಸಲು ‘ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ’ಯನ್ನು ಹೇಳಿದ್ದಾರೆ. ಬುದ್ಧಿಲಯವಾಗಲು ಪ್ರತಿಯೊಂದು ವಿಷಯವನ್ನು ಇತರರಿಗೆ ವಿಚಾರಿಸಿ (ಕೇಳಿ) ಮಾಡುವುದರ ಮಹತ್ವವನ್ನು ಬಿಂಬಿಸಿದ್ದಾರೆ. ಒಂದೇ ಸಾಧನಾಮಾರ್ಗವನ್ನು ಅನುಸರಿಸದೇ ಎಲ್ಲ ಸಾಧನಾ ಮಾರ್ಗಗಳ ಸಮನ್ವಯವನ್ನು ಸಾಧಿಸಿದ್ದಾರೆ. ಗುರುಗಳ ದೇಹಕ್ಕಿಂತ ಗುರುತತ್ತ್ವದ ಸೇವೆಯನ್ನು ಮಾಡಲು ಕಲಿಸಿದ್ದಾರೆ. ಆದ್ದರಿಂದ ಸನಾತನದ ಸಾಧನೆಯು ನಿರ್ಗುಣ, ನಿರಪೇಕ್ಷ, ಆಕಾಶತತ್ತ್ವ ಮತ್ತು ಆತ್ಮತತ್ತ್ವಕ್ಕೆ ಸಂಬಂಧಿಸಿದೆ. ಆದ್ದರಿಂದಲೇ ಸಪ್ತರ್ಷಿಗಳು ಪರಾತ್ಮರ ಗುರು ಡಾಕ್ಟರರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ತ್ರಿಗುಣಾತೀತ ಪರಮೇಶ್ವರನ ಪದವಿಯನ್ನು (ಉಪಾಧಿಯನ್ನು) ನೀಡಿದ್ದಾರೆ. ಅಜ್ಞಾನಮಯ ಕಲಿಯುಗದಲ್ಲಿ ಆಧ್ಯಾತ್ಮಿಕ ಸಾಧನೆಯ ಮರ್ಮವನ್ನು ತಿಳಿದುಕೊಂಡು ಅದನ್ನು ಜನರಿಗೆ ಕಲಿಸಿದಂತಹ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಿಗೆ ಕೋಟಿ-ಕೋಟಿ ಬಾರಿ ಕೃತಜ್ಞತೆಗಳು !
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೧೦.೨೦೨೨)