
‘ಭಾವವಿರುವಲ್ಲಿ ದೇವರು’ ಎಂದು ನಾವು ಹೇಳುತ್ತೇವೆ, ಮನಸ್ಸಿಗೆ ಸಕಾರಾತ್ಮಕ ಸೂಚನೆ ನೀಡುವುದರಿಂದ ಮನಸ್ಸು ಸಕಾರಾತ್ಮಕವಾಗುತ್ತದೆ. ‘ಮನಸ್ಸು ಸಂಪೂರ್ಣವಾಗಿ ಸಕಾರಾತ್ಮಕವಾಗಿ ಇರುವುದು’ ಎಂದರೆ ಒಂದು ರೀತಿಯಲ್ಲಿ ದೇವರ ಬಗ್ಗೆ ಸಕಾರಾತ್ಮಕ ಭಾವವೇ ಆಯಿತು. ಇದರಿಂದ ಮನಸ್ಸು ಮತ್ತು ಅಂತರ್ಮನಸ್ಸಿನಲ್ಲಿರುವ ವಿಚಾರಗಳಲ್ಲಿ ಬದಲಾವಣೆಯಾಗುತ್ತದೆ. ಹಾಗೆಯೇ ನಮ್ಮ ಸುತ್ತಲಿನ ನಕಾರಾತ್ಮಕ ಆವರಣ ನಷ್ಟಗೊಂಡು ಸಕಾರಾತ್ಮಕತೆ ಹೆಚ್ಚಾಗುತ್ತದೆ. ಇದರಿಂದ ಸಾಧನೆಗೆ ಪ್ರಯತ್ನಿಸುವುದು, ಹಾಗೂ ಯಾವುದೇ ಕಠಿಣ ಪ್ರಸಂಗವನ್ನು ಎದುರಿಸಲು ಉತ್ಸಾಹ ಬರುತ್ತದೆ. ಇದರಿಂದ ಮನಸ್ಸು ಸ್ಥಿರ ಮತ್ತು ಶಾಂತ ಹಾಗೆಯೇ ಆನಂದಿತವಾಗುತ್ತದೆ.
ಭಾವನಿರ್ಮಿತಿಗಾಗಿ ಸೂಚನೆ
೧. ದೇವರ ಕೃಪೆಯಿಂದ ಜಗತ್ತು ಬಹಳ ಸುಂದರವಾಗಿದೆ ಮತ್ತು ನಾನು ಈ ಸೌಂದರ್ಯವನ್ನು ಆಸ್ವಾದಿಸಲು ಬಂದಿದ್ದೇನೆ.
೨. ದೇವರ ಕೃಪೆಯಿಂದ ನಾನು ಭೂತಕಾಲದ ಎಲ್ಲ ಘಟನೆಗಳನ್ನು ಮರೆತ್ತಿದ್ದೇನೆ ಈಗ ನಾನು ವರ್ತಮಾನದಲ್ಲಿದ್ದು ಆನಂದ ಅನುಭವಿಸುತ್ತಿದ್ದೇನೆ.
೩. ದೇವರ ಕೃಪೆಯಿಂದ ನನ್ನಲ್ಲಿ ಕ್ಷಮತೆ, ಊರ್ಜೆ, ಉತ್ಸಾಹ, ಬಲ ಮತ್ತು ಜಿಗುಟುತನವಿದೆ.
೪. ದೇವರ ಕೃಪೆಯಿಂದ ನಾನು ಜೀವನದ ಎಲ್ಲ ಪರಿಸ್ಥಿತಿಯನ್ನು ಆನಂದದಿಂದ ಸ್ವೀಕರಿಸುತ್ತೇನೆ.
೫. ಸಮರ್ಪಣೆ ಮಾಡಿದುದರಿಂದ ನನ್ನ ಚಿಂತೆ ದೂರವಾಗಿದೆ, ಮತ್ತು ನಾನು ದೇವರ ಕೃಪೆಯಿಂದ ಚಿಂತಾಮುಕ್ತನಾಗಿದ್ದೇನೆ.
ಈಶ್ವರ ಮತ್ತು ಈಶ್ವರೀ ಶಕ್ತಿ ಇವುಗಳ ಮೇಲೆ ಶ್ರದ್ಧೆ ಹೆಚ್ಚಿಸಲು ಸೂಚನೆ
೧. ದೇವರ ಕೃಪೆಯಿಂದ ನನ್ನಲ್ಲಿ ಸುಪ್ತವಾದ ಈಶ್ವರೀಶಕ್ತಿ ವಾಸವಾಗಿದೆ.
೨. ನಾನು ಸರ್ವಶಕ್ತಿಮಾನ ಪರಮೇಶ್ವರನ ಅಂಶವಾಗಿದ್ದೇನೆ.
೩. ಈಶ್ವರ ನನ್ನಲ್ಲಿದ್ದಾನೆ ಮತ್ತು ನಾನು ಈಶ್ವರನಲ್ಲಿದ್ದೇನೆ.
೪. ನಕಾರಾತ್ಮಕ ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ವಿಚಾರ ಮಾಡುವುದು, ಸಕಾರಾತ್ಮಕತೆ ಶೋಧಿಸುವುದು, ‘ದೇವರು ನನ್ನ ಒಳ್ಳೆಯದಕ್ಕಾಗಿಯೇ ಮಾಡುತ್ತಾನೆ’, ಎನ್ನುವ ಭಾವ ಇಡುವುದು, ಇದು ನನಗೆ ಶ್ರೀ ವಿಷ್ಣುವಿನ ಕೃಪೆಯಿಂದಲೇ ಮಾಡಲು ಸಾಧ್ಯವಾಗುತ್ತಿದೆ.
೫. ನಾನು ನಿರಂತರವಾಗಿ ನಿಶ್ಚಿಂತನಾಗಿ ಇರುತ್ತೇನೆ; ಏಕೆಂದರೆ ನನ್ನ ಭಾರವನ್ನು ಶ್ರೀ ವಿಷ್ಣುವಿನ ಚರಣಗಳಿಗೆ ಅರ್ಪಿಸಿದ್ದೇನೆ. ಅವನೇ ನನ್ನ ಸಂಪೂರ್ಣ ಕಾಳಜಿಯನ್ನು ನೋಡಿಕೊಳ್ಳಲಿದ್ದಾನೆ.
೬. ನಾನು ನನ್ನನ್ನು ಈಶ್ವರನ ವಿರಾಟ ಸ್ವರೂಪದ ಎದುರು ಸಮರ್ಪಿಸಿಕೊಂಡಿದ್ದೇನೆ.
೭. ನಾನು ಆ ವಿರಾಟ ಸರ್ವಶಕ್ತಿಮಾನ ಈಶ್ವರನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.
೮. ನಮಸ್ಕಾರ ಮಾಡುವುದರಿಂದ ದೇವರ ಕೃಪೆಯಿಂದ ನನ್ನಲ್ಲಿರುವ ‘ನನ್ನತನ’ (ಅಹಂ) ನಷ್ಟವಾಗುತ್ತಿದೆ.
ದೇವರ ಕೃಪೆಯಿಂದ ಈಗ ಕೇವಲ ಒಂದೇ ಅರಿವು ನನ್ನಲ್ಲಿ ನಿರ್ಮಾಣವಾಗುತ್ತಿದೆ.
ನಾನು ನಿನ್ನವನಾಗಿದ್ದೇನೆ ! ಹೇ ಜಗತ್ಪಿತಾ, ನಾನು ನಿನ್ನವನಾಗಿದ್ದೇನೆ !
ಹೇ ಅನಾದಿ ಅನಂತಾ, ನಾನು ನಿನ್ನವನಾಗಿದ್ದೇನೆ !
ಹೇ ದಯಾಘನಾ, ನಾನು ನಿನ್ನವನಾಗಿದ್ದೇನೆ !
ಹೇ ಸಚ್ಚಿದಾನಂದಾ, ನಾನು ದಯಾಘನಾ !
– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.
‘ಭಾವಜಾಗೃತಿಗಾಗಿ ಪ್ರಯತ್ನ’ ಎಂದರೇನು ಎಂದು ತಿಳಿದುಕೊಳ್ಳಲು – ಕ್ಲಿಕ್ ಮಾಡಿ! |
---|