ಸಾಮಾನ್ಯವಾಗಿ ಸಾಧಕರಿಗೆ ತಮ್ಮ ಸೇವೆಯನ್ನು (ಉದಾ. ಗ್ರಂಥಸಂಕಲನ, ಗಣಕಯಂತ್ರದಲ್ಲಿ ಚಿತ್ರಗಳನ್ನು ಸಿದ್ಧಪಡಿಸುವುದು) ಮಾಡಲು ಇಷ್ಟವಾಗುತ್ತದೆ. ಆದುದರಿಂದ ಅವರು ಈ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆ. ಈ ಸೇವೆಗಳಲ್ಲಿ ಅವರ ಮನಃಪೂರ್ವಕ ಪಾಲ್ಗೊಳ್ಳುವಿಕೆ ಚೆನ್ನಾಗಿರುವುದರಿಂದ ಅವರಿಂದ ಸೇವೆಯನ್ನು ಮಾಡುವಾಗ ಭಾವದ ಸ್ತರದಲ್ಲಿ ಪ್ರಯತ್ನಗಳಾಗುತ್ತವೆ. ಆದ್ದರಿಂದ ಅವರಿಗೆ ಸೇವೆಯಿಂದ ಹೆಚ್ಚು ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ; ಆದರೆ ಕೆಲವರು ಸಾಧಕರು ಆಶ್ರಮ ಸ್ವಚ್ಛತೆಯ ಸೇವೆ, ಅನಾರೋಗ್ಯದಲ್ಲಿರುವ ಅಥವಾ ವೃದ್ಧರ ಸೇವೆ ಇತ್ಯಾದಿ ಸೇವೆಗಳನ್ನು ‘ಸೇವೆಯನ್ನು ಮಾಡಲು ಹೇಳಿದ್ದಾರೆಂದು ಮಾಡುವುದು’, ಈ ರೀತಿಯಲ್ಲಿ ಮಾಡುತ್ತಾರೆ. ಇದರಲ್ಲಿ ಅವರ ಮನಸ್ಸಿನ ಪಾಲ್ಗೊಳ್ಳುವಿಕೆ ಕಡಿಮೆ ಇರುವುದರಿಂದ ಅವರಿಂದ ಸೇವೆಯಲ್ಲಿ ಭಾವದ ಸ್ತರದಲ್ಲಿ ವಿಶೇಷ ಪ್ರಯತ್ನವಾಗುವುದಿಲ್ಲ, ಹಾಗೆಯೇ ‘ಈ ಸೇವೆಯನ್ನು ಹೆಚ್ಚೆಚ್ಚು ಚೆನ್ನಾಗಿ ಹೇಗೆ ಮಾಡಲಿ’, ಎಂಬುದರ ಬಗ್ಗೆ ಅವರಿಗೆ ಹೊಳೆಯುವುದಿಲ್ಲ. ಆದುದರಿಂದ ಇಂತಹ ಸೇವೆಗಳಿಂದ ಅವರು ಅಪೇಕ್ಷಿತ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರ ಅರ್ಥ, ಸೇವೆ ಮಾಡುವ ಉದ್ದೇಶವೇ ಸಾರ್ಥಕವಾಗುವುದಿಲ್ಲ. ಸಾಧಕರು ‘ತಮ್ಮಿಂದ ಈ ರೀತಿ ಆಗುತ್ತಿಲ್ಲವಲ್ಲ’, ಎಂಬುದನ್ನು ಅಂತರ್ಮುಖವಾಗಿ ವಿಚಾರ ಮಾಡಬೇಕು.
ಪ್ರತಿಯೊಂದು ಸೇವೆಯನ್ನು ಮಾಡುವಾಗ ‘ದೇವರು ಈ ಸೇವೆಯಿಂದ ನನ್ನ ಪ್ರೇಮಭಾವ ಮತ್ತು ಸೇವಾಭಾವವನ್ನು ಹೆಚ್ಚಿಸಲಿದ್ದಾನೆ’, ‘ದೇವರು ಈ ಸೇವೆಯಿಂದ ನನ್ನ ಮನೋಲಯ ಮತ್ತು ಬುದ್ಧಿಲಯವನ್ನು ಮಾಡಿಸಿಕೊಳ್ಳಲಿದ್ದಾನೆ’, ಇತ್ಯಾದಿ ದೃಷ್ಟಿಕೋನವನ್ನಿಟ್ಟರೆ ಆ ಸೇವೆಯಲ್ಲಿ ಮನಃಪೂರ್ವವಾಗಿ ತೊಡಗಿ ಆ ಸೇವೆಯು ಭಾವಪೂರ್ಣವಾಗಲು ಸಹಾಯವಾಗುತ್ತದೆ.’
– (ಪೂ.) ಸಂದೀಪ ಆಳಶಿ (೧೪.೧೨.೨೦೨೨)