ಮೊದಲನೆಯ ಟಿ-ಶರ್ಟ್‌ನಲ್ಲಿ ಶ್ರೀ ಗಣೇಶನ ಚಿತ್ರವಿರುವಂತೆ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುತ್ತವೆ. ಆದರೆ ಇಂತಹ ಬಟ್ಟೆಗಳನ್ನು ನಾವು ಹಾಕಿದ ನಂತರ ಬಟ್ಟೆಯ ಮೇಲಿರುವ ದೇವತ್ವವನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ ಮಾಡುತ್ತೇವೆ, ಇದರಿಂದ ದೇವರ ಮೇಲೆ ಧೂಳು, ಕೊಳೆ ಬರುತ್ತವೆ. ನಂತರ ಬಟ್ಟೆ ಒಗೆಯಲು ಅದನ್ನು ಕಲ್ಲಿನ ಮೇಲೆ ಉಜ್ಜುತ್ತೇವೆ, ಬ್ರಶ್‌ನಿಂದ ಉಜ್ಜುತ್ತೇವೆ ಅಥವಾ ವಾಷಿಂಗ್ ಮೆಶಿನ್‌ಗೆ ಹಾಕಿ ನಮ್ಮ ದೇವರನ್ನು ನಾವೇ ತಿರುಗಿಸುತ್ತೇವೆ, ಒಣಗಿಸಲು ಡ್ರೈಯರ್‌ಗೆ ಹಾಕಿ ಕೊನೆಗೆ ಬಿಸಿಲಿನಲ್ಲಿ ನೇತಾಡಿಸುತ್ತೇವೆ. ಇದರಿಂದ ದೇವರ ಕೃಪೆಯಾಗಬಹುದೇ? ನಾವು ಹಾಕಿರುವ ಉದ್ದೇಶ ಸಫಲವಾಗಬಹುದೇ? ದೇವರಲ್ಲಿ ಭಕ್ತಿಯಿರಬೇಕು, ಧರ್ಮದ ಮೇಲೆ ಶ್ರದ್ಧೆಯಿರಬೇಕು, ಆದರೆ ಅದು ಈ ರೀತಿಯಲ್ಲಿ ಆಗಬಾರದು. ಹಾಗಾಗಿ ದಯವಿಟ್ಟು ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಎಲ್ಲ ಹಿಂದೂ ಬಾಂಧವರಿಗೂ ಈ ರೀತಿ ಮಾಡದಂತೆ ಪ್ರಬೋಧನೆ ಮಾಡಿ.
ಎರಡನೆಯ ಟಿ-ಶರ್ಟ್ ಏಕೆ ಬೇಡ ? ಹೇಗೆ ದೇವರ ಚಿತ್ರವಿರುವಲ್ಲಿ ದೇವರ ತತ್ತ್ವ, ಸ್ಪಂದನ, ದೇವರ ಅಸ್ತಿತ್ವವಿರುತ್ತದೆಯೋ, ಹಾಗೆಯೇ ಭೂತ, ಪಿಶಾಚಿ, ಮಾಂತ್ರಿಕರ ಚಿತ್ರ, ತಲೆ ಬುರುಡೆ, ಎಲುಬು ಮುಂತಾದ ಚಿತ್ರಗಳಿರುವ ಬಟ್ಟೆಗಳಲ್ಲಿ ಅಂತಹ ಸ್ಪಂದನಗಳೇ ಆಕರ್ಷಿಸುತ್ತವೆ ಮತ್ತು ನಮಗೆ ತಿಳಿಯದೇ ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯೆನಿಸುವುದು, ಸಿಟ್ಟು, ದ್ವೇಷ, ಹೊಡೆದಾಟ ಮುಂತಾದ ಅನೇಕ ವಿಕಾರಗಳು ಉಂಟಾಗುತ್ತವೆ. ಇಂತಹ ಬಟ್ಟೆಗಳಲ್ಲದೇ ಯಾವುದೇ ಕ್ರೀಡಾಪಟುವಾಗಲಿ, ನಟ-ನಟಿಯರದ್ದಾಗಲಿ ಚಿತ್ರವಿರುವ ಬಟ್ಟೆಗಳನ್ನು ಹಾಕಬೇಡಿ. ಪ್ರತಿಯೊಬ್ಬ ವ್ಯಕ್ತಿಯಿಂದ ಅವನ ವ್ಯಕ್ತಿತ್ವಕ್ಕೆ ತಕ್ಕ ಸ್ಪಂದನಗಳು ಬರುವುದರಿಂದ ಇಂತಹ ಯಾವುದೇ ಬಟ್ಟೆಗಳನ್ನು ಹಾಕದೇ ಸಾತ್ತ್ವಿಕ ಬಟ್ಟೆಗಳನ್ನೇ ಧರಿಸಿ. ಯಾರಾದರೂ ಇಂತಹ ಬಟ್ಟೆಗಳನ್ನು ಧರಿಸಿದ್ದರೆ ಅವರಿಗೆ ಈ ವಿಷಯಗಳನ್ನು ತಿಳಿಸಿಹೇಳಿ.
ಸಾತ್ತ್ವಿಕ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಓದಿ, ಸನಾತನ ಸಂಸ್ಥೆಯ ನಿರ್ಮಿಸಿದ ಗ್ರಂಥ ‘ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು ?’
Namaskar , felt blissful by understanding the meaning with reasons about navratri rituals particularly in the light of scientific connotations behind this . I believe essentially , its celebration of victory of positive energy over negative energy within our inner self . Keep posting more of this .
Pranam
We should avoid spoon.because god has given hands we should follow this in our daily life.🙏