ಸತ್ಸೇವೆ ಸತ್ಸಂಗ – 4

ತನು-ಮನ-ಧನದ ತ್ಯಾಗದ ವ್ಯತಿರಿಕ್ತ ಇತರ ಅಂಶಗಳು

ನಾವು ಕಳೆದ ಮೂರು ಲೇಖನಗಳಿಂದ ಸಾಧನೆಯ ಮಹತ್ವಪೂರ್ಣ ಹಂತವಾದ ತ್ಯಾಗದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ನಾವು ಈವರೆಗೆ ತನು-ಮನ-ಧನ ಇವುಗಳ ತ್ಯಾಗ ಮಾಡುವುದರ ಮಹತ್ವ ಮತ್ತು ಅದು ಹೇಗೆ ಮಾಡುವುದು ಎಂದು ನೋಡಿದ್ದೇವೆ. ತನು-ಮನ-ಧನ ಇವು ತ್ಯಾಗದ ಹಂತಗಳಾಗಿವೆ. ಅದರ ಜೊತೆಗೆ ಇಷ್ಟ-ಅನಿಷ್ಟಗಳ ತ್ಯಾಗ, ಸಮಯದ ತ್ಯಾಗ, ಬುದ್ಧಿಯ ತ್ಯಾಗ, ಕೌಶಲ್ಯದ ತ್ಯಾಗ, ಸ್ವಭಾವದೋಷ ಅಹಂನ ತ್ಯಾಗ, ಮುಂತಾದ ತ್ಯಾಗಗಳ ಬಗ್ಗೆಯೂ ತಿಳಿದುಕೊಂಡೆವು. ತ್ಯಾಗದಲ್ಲಿ ಆನಂದ ಅಡಗಿರುತ್ತದೆ. ಸಾಧಾರಣವಾಗಿ ನಾವೆಲ್ಲರೂ ಕಳೆದ ವರ್ಷದಿಂದ ಸತ್ಸಂಗಕ್ಕೆ ಉಪಸ್ಥಿತರಾಗುತ್ತಿದ್ದೇವೆ. ಸತ್ಸಂಗ ಪ್ರಾರಂಭವಾಗುವ ಮೊದಲು ಸತ್ಸಂಗದ ಸಮಯಕ್ಕೆ ನೀವು ಒಂದಿಲ್ಲ ಒಂದು ಕಾರ್ಯ ಮಾಡುತ್ತಿರುತ್ತೀರಿ. ಕೆಲವರು ಆ ಸಮಯದಲ್ಲಿ ಟಿವಿ ನೋಡುತ್ತಿರಬಹುದು. ಕೆಲವರು ಹರಟೆ ಹೊಡೆಯುತ್ತಿದ್ದರಬಹುದು. ಕೆಲವರು ಮನೆಯ ಕೆಲಸ ಮಾಡುತ್ತಿರಬಹುದು ಮತ್ತು ಕೆಲವರು ಇನ್ನೂ ಬೇರೆ ಕೆಲಸ ಮಾಡುತ್ತಿರಬಹುದು. ಆದರೆ ಈಗ ನೀವು ನಿಮ್ಮ ಸಮಯದ ತ್ಯಾಗ ಮಾಡಿ ಸತ್ಸಂಗಕ್ಕೆ ಬರುತ್ತೀರಿ. ಇದರಿಂದ ನಿಮಗೆ ಆನಂದ ಸಿಗುತ್ತದೆ ಅಲ್ಲವೇ ? ಇದರ ಅರ್ಥ ತ್ಯಾಗದಿಂದ ಸಿಗುವ ಆನಂದ ನಾವೆಲ್ಲರೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅನುಭವಿಸಿದ್ದೇವೆ. ಇಂದಿನ ಸತ್ಸಂಗದಲ್ಲಿ ನಾವು ತ್ಯಾಗದ ಇತರ ಕೆಲವು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

೧. ಇಷ್ಟ, ಆಯ್ಕೆಗಳ ತ್ಯಾಗ

ಅ.  ಇಷ್ಟಾನಿಷ್ಟಗಳ ಸಂಸ್ಕಾರ ಎಂದರೇನು ? : ಸಾಧನೆಯ ಮಾಡುವ ಸಮಯದಲ್ಲಿ ನಮ್ಮ ಇಷ್ಟಾನಿಷ್ಟಗಳ ಮೇಲೆ ನಿಯಂತ್ರಣ ಪಡೆಯುವುದು ಅವಶ್ಯಕವಾಗಿರುತ್ತದೆ. ನಮ್ಮ ಪ್ರತಿಯೊಬ್ಬರ ಮನಸ್ಸಿನ ಮೇಲೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಇಷ್ಟಾನಿಷ್ಟಗಳ ಸಂಸ್ಕಾರ ಇರುತ್ತದೆ. ಕೆಲವು ಜನರ ಸಂದರ್ಭದಲ್ಲಿ ಈ ಸಂಸ್ಕಾರ ತೀವ್ರವಾಗಿರುತ್ತದೆ. ಆ ಸಮಯದಲ್ಲಿ ವ್ಯಕ್ತಿಯಿಂದ ಕೇವಲ ಸ್ವಂತ ವಿಚಾರ ಮಾತ್ರ ಮಾಡಲಾಗುತ್ತದೆ. ಉದಾ. ಊಟದಲ್ಲಿ ಯಾವುದೋ ಒಂದು ಪದಾರ್ಥ ಬೇಕಿದೆ ಎಂದರೆ ಬೇಕೇ ಬೇಕು, ಅದು ಇಲ್ಲವಾದರೆ ಊಟ ಮಾಡಲಾಗುವುದಿಲ್ಲ. ಮನೆಯಲ್ಲಿ ಅಥವಾ ಕಾರ್ಯಾಲಯದಲ್ಲಿ ಯಾವುದೋ ವಿಶಿಷ್ಟ ಜಾಗದಲ್ಲಿ ಕುಳಿತುಕೊಳ್ಳುವುದು, ಕೆಲವು ಜನರ ಜೊತೆ ಮಾತನಾಡುವುದು, ವಿಶಿಷ್ಟರೀತಿಯ ಬಟ್ಟೆಗಳನ್ನು ಉಪಯೋಗಿಸುವುದು ಇವೆಲ್ಲವೂ ಇಷ್ಟಾನಿಷ್ಟಗಳ ಪ್ರಕಾರಗಳಾಗಿವೆ. ನಮ್ಮ ಸಂದರ್ಭದಲ್ಲೂ ಹೀಗೆ ಆಗುತ್ತದೆ ಅಲ್ಲವೇ? ಇಂತಹ ತೀವ್ರಸ್ವರೂಪದ ಇಷ್ಟಾನಿಷ್ಟಗಳಿಂದ ನಮ್ಮ ಮೇಲೆ ಏನು  ಪರಿಣಾಮವಾಗುತ್ತಿರಬಹುದು ಎಂದು ವಿಚಾರ ಮಾಡಿ.

ಆ. ಇಷ್ಟಾನಿಷ್ಟಗಳನ್ನು ಜೋಪಾನ ಮಾಡುವುದರಿಂದಾಗುವ ಹಾನಿ : ಇಷ್ಟಾನಿಷ್ಟಗಳ ಮನೋಭೂಮಿಕೆಯಲ್ಲಿ ಇರುವುದರಿಂದ ಪರಿಸ್ಥಿತಿ ಸ್ವೀಕರಿಸಲು, ಬೇರೆಯವರ ಜೊತೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳಲು ಆಗದೆ ಇರುವುದರಿಂದ ವಾದ-ವಿವಾದಗಳ ಪ್ರಸಂಗ ನಿರ್ಮಾಣವಾಗುತ್ತದೆ. ಮನಸು ಅಸ್ವಸ್ಥವಾಗುತ್ತದೆ. ಮನಸ್ಸಿನಂತೆ ಆಗಲಿಲ್ಲವಾದರೆ ಕಿರಿಕಿರಿಯಾಗುತ್ತದೆ. ಅಪೇಕ್ಷೆಗಳ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಅಪೇಕ್ಷೆಗಳ ಪೂರ್ತಿಯಾಗದಿದ್ದರೆ ದುಃಖವಾಗುತ್ತದೆ. ಇದರಿಂದ ಇಷ್ಟಾನಿಷ್ಟಗಳ ಆಯ್ಕೆಯಾದ ಒಂದು ಪ್ರಬಲ ಸಂಸ್ಕಾರದ ಪರಿಣಾಮ ಎಷ್ಟಿರುತ್ತದೆ ಇದು ನಿಮಗೆ ತಿಳಿಯುತ್ತದೆ.

ಇ. ಇಷ್ಟಾನಿಷ್ಟಗಳ ತ್ಯಾಗದಿಂದಾಗುವ ಲಾಭ : ತೀವ್ರ ಇಷ್ಟಾನಿಷ್ಟ ಎಂದರೆ ಸ್ವಾರ್ಥ ಮತ್ತು ಸಂಕುಚಿತತ್ವ. ಎಲ್ಲಿ ಸ್ವಾರ್ಥ ಇರುತ್ತದೆಯೋ ಅಲ್ಲಿ ಸಂಕುಚಿತತ್ವ ಇರುತ್ತದೆ, ಹಾಗಾದರೆ ಅಲ್ಲಿ ಈಶ್ವರನ ಅಸ್ತಿತ್ವ ಇರುವುದೇ? ಇಲ್ಲ ಅಲ್ಲವೇ? ಈಶ್ವರ ಸರ್ವವ್ಯಾಪಿಯಾಗಿದ್ದಾನೆ. ನೀವೂ ಇಂತಹ ವ್ಯಕ್ತಿಗಳನ್ನು ನೋಡಿರಬಹುದು, ಅವರಿಗೆ ಯಾವುದು ವಿಶೇಷವಾಗಿ ಇಷ್ಟಾನಿಷ್ಟಗಳು ಇರುವುದಿಲ್ಲ. ಅವರಿಗೆ ಮಲಗಲು ಇಂತಹುದೇ ಹಾಸಿಗೆ ಬೇಕು ಅಥವಾ ದಿಂಬು ಬೇಕು ಹೀಗೆ ಇರುವುದಿಲ್ಲ, ಊಟದಲ್ಲಿ ಯಾವ ಪದಾರ್ಥ ಇದ್ದರೂ ನಡೆಯುತ್ತದೆ. ಇಂತಹ ವ್ಯಕ್ತಿಗಳಿಗೆ ಎಲ್ಲಿಯೂ ಏನು ತೊಂದರೆಯಿರುವುದಿಲ್ಲ. ಇಷ್ಟಾನಿಷ್ಟಗಳ ತ್ಯಾಗ ಕೇವಲ ಸಾಧನೆಯ ಮಾರ್ಗದಲ್ಲಿ ಅಲ್ಲದೆ, ವ್ಯಾವಹಾರಿಕ ಹಾಗೂ ಕೌಟುಂಬಿಕ ಜೀವನದಲ್ಲಿಯೂ ಲಾಭದಾಯಕವಾಗಿದೆ. ಇಷ್ಟಾನಿಷ್ಟಗಳ ತ್ಯಾಗ ಮಾಡುವುದರಿಂದ ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಅಪೇಕ್ಷೆಗಳ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಸ್ಥಿರತೆ ಇರುತ್ತದೆ. ಬರುವ ಕೆಲವು ವರ್ಷಗಳಲ್ಲಿ ಆಪತ್ಕಾಲದ ಭೀಷಣತೆ ಹೆಚ್ಚಾಗಲಿದೆ ಎಂದು ಸಂತರು ಹೇಳಿದ್ದಾರೆ. ಆ ಸಮಯದಲ್ಲಿ ಅನ್ನ, ಧಾನ್ಯ ಮತ್ತು ಜೀವನಾವಶ್ಯಕ ವಸ್ತುಗಳ ಕೊರತೆ ಆಗಬಹುದು. ಆದ್ದರಿಂದ ನಾವು ಈಗಲೇ ಇಷ್ಟ ಆಯ್ಕೆಗಳ ತ್ಯಾಗ ಮಾಡಲು ಕಲಿತರೆ, ಬರುವ ಆಪತ್ಕಾಲದಲ್ಲಿ ನಮಗೆ ಜೀವನ ಸಾಗಿಸಲು ಸಾಧ್ಯವಾಗಬಹುದು. ಆದ್ದರಿಂದ ನಾವು ಇಂದಿನಿಂದಲೇ ಈ ದೃಷ್ಟಿಕೋನದಿಂದ ಪ್ರಯತ್ನ ಮಾಡೋಣ.

೨. ಬುದ್ಧಿಯ ತ್ಯಾಗ

ತ್ಯಾಗದ ಇನ್ನೊಂದು ಪ್ರಕಾರವಿದೆ. ಬುದ್ಧಿಯ ತ್ಯಾಗ ! ಬುದ್ಧಿಯ ತ್ಯಾಗ ಎಂದರೆ ಏನು? ಅಂದರೆ ನಮಗೆ ನೀಡಿರುವ ಸೇವೆಯನ್ನು ಆದಷ್ಟು ಪರಿಪೂರ್ಣ ಮಾಡಲು ಪ್ರಯತ್ನಿಸುವುದು. ಉದಾ. ನಮ್ಮ ಮನೆಗೆ ಬಂದಿರುವ ನೆಂಟರಿಗೆ ಸಾಧನೆಯ ವಿಷಯ ಹೇಳುವ, ಅಂದರೆ ಕುಲದೇವಿ ಮತ್ತು ದತ್ತ ಗುರುಗಳ ನಾಮಜಪ ಮತ್ತು ಅದನ್ನು ಹೇಗೆ ಮಾಡುವುದು ಎಂದು ಹೇಳುವ ಇಚ್ಛೆಯಿದೆ ಎಂದಿಟ್ಟುಕೊಳ್ಳೋಣ. ಅಂದರೆ ಸಂಬಂಧಿಕರಿಗೆ ಆ ವಿಷಯ ಯಾವ ಸಮಯದಲ್ಲಿ ಸವಿಸ್ತಾರವಾಗಿ ಹೇಳಬಹುದು, ಅವರ ಆಸಕ್ತಿ ನೋಡಿ ಅವರಿಗೆ ಹೇಗೆ ಪರಿಣಾಮಕಾರಿಯಾಗಿ ಹೇಳಬಹುದು, ಇವುಗಳ ಅಭ್ಯಾಸ ಮಾಡಿ ಆಮೇಲೆ ಹಾಗೆ ಕೃತಿ ಮಾಡಬೇಕು. ಆಗ ಅದು ನಿಶ್ಚಿತವಾಗಿ ಹೆಚ್ಚು ಒಳ್ಳೆಯ ಪ್ರಯತ್ನವಾಗುವುದು. ನಾವು ಇನ್ನೊಂದು ಉದಾಹರಣೆ ನೋಡೋಣ. ನಮ್ಮ ಪರಿಚಿತರಿಗೆಲ್ಲ ರಾಷ್ಟ್ರ-ಧರ್ಮದ ಬಗ್ಗೆ ಇರುವ ಕಾರ್ಯಕ್ರಮಕ್ಕೆ ನಿಮಂತ್ರಿಸುವ ಸೇವೆ ನಮಗಿದೆ ಎಂದಿಟ್ಟುಕೊಳ್ಳೋಣ. ಪ್ರತಿಯೊಬ್ಬರಿಗೂ ಯಾವ ಸಮಯದಲ್ಲಿ ಕರೆ ಮಾಡಿದರೆ ಅನುಕೂಲವಾಗುವುದು, ಇದರ ಯೋಚನೆ ಮಾಡಿ ಅದೇ ರೀತಿ ಕರೆ ಮಾಡುವ ಆಯೋಜನೆ ಮಾಡಿದರೆ, ಕಾರ್ಯಕ್ರಮದ ಬಗ್ಗೆ ಯಾವ ಯಾವ ಅಂಶಗಳನ್ನು ಹೇಳಬಹುದು ಎಂದು ಯೋಚಿಸಿ, ಕರೆ ಮಾಡುವಾಗ ಕೆಲವು ಅಂಶಗಳನ್ನು ಬರೆದಿಟ್ಟುಕೊಂಡು, ತಮ್ಮ ಹತ್ತಿರ ಪುಸ್ತಕ ಪೆನ್ನು ಇಟ್ಟುಕೊಂಡು, ಸೇವೆ ಪ್ರಾರಂಭ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಿ ನಂತರ ಕರೆ ಮಾಡಿದರೆ ಆಗ ಅದು ಒಳ್ಳೆಯ ಸೇವೆಯಾಗಲು ಮಾಡಿರುವ ನಿಯೋಜನೆ ಮತ್ತು ಪೂರ್ವಸಿದ್ಧತೆ ! ಇದುವೇ ಬುದ್ಧಿಯ ತ್ಯಾಗ !

ಸಂಕ್ಷಿಪ್ತವಾಗಿ, ಯಾವುದಾದರೂ ಸೇವೆ ಒಳ್ಳೆಯದಾಗಿ ಆಗಲು ನಾವು ಅದರ ಅಭ್ಯಾಸ ಮಾಡುತ್ತೇವೆ, ಚಿಂತನೆ ಮಾಡುತ್ತೇವೆ, ಅದರಿಂದ ನಮ್ಮ ಬುದ್ಧಿಯ ತ್ಯಾಗವಾಗುತ್ತದೆ. ಸೇವೆ ಚೆನ್ನಾಗಿ ಆಗಲು ಮೊತ್ತಮೊದಲಿಗೆ ಸೇವೆಯ ಸ್ವರೂಪ, ಅದರ ವ್ಯಾಪ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಭಗವದ್ಗೀತೆಯಲ್ಲಿ ಯೋಗಃ ಕರ್ಮಸು ಕೌಶಲಮ್ ಎಂದು ಹೇಳಲಾಗಿದೆ. ಅಂದರೆ ಯಾವುದೇ ಕೃತಿ ಕುಶಲತೆಯಿಂದ ಮಾಡುವುದರಿಂದ ಯೋಗವು ಸಾಧ್ಯವಾಗುತ್ತದೆ. ನಾವು ನಮ್ಮ ಸೇವೆ ಅಥವಾ ಯಾವುದೇ ಕೆಲಸ ಆಯೋಜನಪೂರ್ವಕ ಮತ್ತು ಕುಶಲತೆಯಿಂದ ಮಾಡಲು ಪ್ರಯತ್ನ ಮಾಡೋಣ. ಬುದ್ಧಿಯ ತ್ಯಾಗದ ಜೊತೆಗೆ ಸಮಯದ ತ್ಯಾಗ, ಕೌಶಲ್ಯದ ತ್ಯಾಗ, ಸ್ವಭಾವದೋಷ ಮತ್ತು ಅಹಂ ತ್ಯಾಗ ಇವು ಕೂಡ ಮಹತ್ವದ ಹಂತಗಳಾಗಿವೆ. ಸಮಯದ ತ್ಯಾಗ ಅಂದರೆ ಹೆಚ್ಚೆಚ್ಚು ಸಮಯ ಸಾಧನೆಗಾಗಿ, ಸೇವೆಗಾಗಿ ನೀಡಲು ಪ್ರಯತ್ನ ಮಾಡುವುದು. ಕೌಶಲ್ಯದ ತ್ಯಾಗ ಅಂದರೆ ನಮ್ಮಲ್ಲಿ ಯಾವ ಕೌಶಲ್ಯ ಇದೆ ಅದನ್ನು ಗುರುಕಾರ್ಯಕ್ಕಾಗಿ ಉಪಯೋಗಿಸುವುದು. ಸ್ವಭಾವದೋಷ ಮತ್ತು ಅಹಂ ಇದರ ತ್ಯಾಗ ಅಂದರೆ ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ದೂರಮಾಡುವ ಪ್ರಯತ್ನ ಮಾಡುವುದು.

೩. ಸ್ವಭಾವದೋಷ ಮತ್ತು ಅಹಂ ಇದರ ತ್ಯಾಗ

ಸಾಧನೆಯಲ್ಲಿ ಕೇವಲ ತನು ಮನ ಮತ್ತು ಧನ ಇವುಗಳ ತ್ಯಾಗ ಸಾಕಾಗುವುದಿಲ್ಲ. ಅಹಂನ ತ್ಯಾಗವೂ ಮಹತ್ವದ್ದಾಗಿರುತ್ತದೆ. ಅಹಂ ತ್ಯಜಿಸುವುದು ಅತ್ಯಂತ ಕಠಿಣವಾಗಿರುವುದರಿಂದ ಮೊದಲು ತನು ಮನ ಮತ್ತು ಧನ ಇದರ ತ್ಯಾಗಮಾಡಲು ಹೇಳಲಾಗುತ್ತದೆ. ಅದರ ತ್ಯಾಗ ಮಾಡದಿದ್ದರೆ, ನಾನು ತ್ಯಾಗ ಮಾಡಿದೆ ಎಂಬ ಅಹಂ ಇರುತ್ತದೆ. ಅದರ ಜೊತೆಗೆ ಕೆಲವು ಸ್ವಭಾವದೋಷಗಳೂ ಉಳಿಯುತ್ತವೆ. ಅದಕ್ಕಾಗಿ ಸಾಧನೆಯಲ್ಲಿ ತನು, ಮನ ಮತ್ತು ಧನ ಇದರ ತ್ಯಾಗಕ್ಕಿಂತಲೂ ಸ್ವಭಾವದೋಷ ಮತ್ತು ಅಹಂನ ತ್ಯಾಗ ಹೆಚ್ಚು ಮಹತ್ವದ್ದಾಗಿದೆ. ಇದರ ತ್ಯಾಗ ಮಾಡಿದ ನಂತರ ತನು-ಮನ-ಧನದ ತ್ಯಾಗ ಮಾಡಿದರೂ ಅಥವಾ ಮಾಡದೇ ಇದ್ದರೂ ಅದು ಸಮಾನವಾಗಿದೆ. ಒಂದು ಉದಾಹರಣೆಯ ಮೂಲಕ ನಾವು ಅದನ್ನು ತಿಳಿದುಕೊಳ್ಳೋಣ. ನಾವು ಈ ಹಿಂದೆ ಧನದ ತ್ಯಾಗದ ಬಗ್ಗೆ ತಿಳಿದುಕೊಂಡಿದ್ದೇವೆ. ಯಾರಾದರೂ ಒಂದು ಲಕ್ಷ ರೂಪಾಯಿ ಅರ್ಪಣೆ ನೀಡಿದ್ದಾರೆ ಮತ್ತು ಅದರ ಬಗ್ಗೆ ಎಲ್ಲೆಡೆ ಹೇಳಿಕೊಂಡು ಬರುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಆಗ ಅದರ ಉಪಯೋಗವೇನು ? ಬಲಗೈಯಿಂದ ಕೊಟ್ಟಿರುವ ದಾನ ಎಡಗೈಗೆ ತಿಳಿಯಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ನೀಡಿರುವ ಅರ್ಪಣೆ ಬಗ್ಗೆ ದೊಡ್ಡಸ್ತಿಕೆ ಅನಿಸುತ್ತಿದ್ದರೆ, ಅದರಿಂದ ಸಾಧನೆ ಆಗುವುದೇ ? ಅರ್ಪಣೆ ನೀಡುವುದರಿಂದ ಆಗುವ ಅಧ್ಯಾತ್ಮಿಕ ಲಾಭಕ್ಕಿಂತ ದೊಡ್ಡಸ್ತಿಕೆಯಿಂದ ಅಹಂ ಇಟ್ಟುಕೊಳ್ಳುವುದು ಹೆಚ್ಚು ಅಪಾಯಕರವಾಗಿದೆ. ಆದ್ದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಹೆಚ್ಚು ಮಹತ್ವ ಇದೆ ಎಂದು ಹೇಳಲಾಗಿದೆ.

ಸ್ವಭಾವದೋಷ ಮತ್ತು ಅಹಂ ಇದರ ತ್ಯಾಗ ಹೇಗೆ ಮಾಡಬಹುದು ? ಅಂದರೆ ಅದರ ನಿರ್ಮೂಲನೆಯ ಪ್ರಕ್ರಿಯೆ ಮಾಡುವುದರಿಂದ! ನಾವು ಈ ಮೊದಲಿನ ಸತ್ಸಂಗದಲ್ಲಿ ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ತಿಳಿದುಕೊಂಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲ ಒಂದು ದೋಷ ಇದ್ದೇ ಇರುತ್ತದೆ. ಈ ಸ್ವಭಾವದೋಷಗಳಿಂದ ವ್ಯಕ್ತಿಗೆ ಸಣ್ಣಪುಟ್ಟ ವಿಷಯಗಳ ಒತ್ತಡ ಇರುತ್ತದೆ ಮತ್ತು ಆ ವ್ಯಕ್ತಿ ಆನಂದದಿಂದ ದೂರ ಹೋಗುತ್ತಾನೆ. ಈ ಸ್ವಭಾವದೋಷಗಳು ಹೇಗೆ ಸಾಧನಾಮಾರ್ಗದಲ್ಲಿ ಅಡಚಣೆಗಳಾಗಿವೆಯೋ ಹಾಗೆಯೇ ನಮ್ಮ ಕೌಟುಂಬಿಕ, ವ್ಯಾವಸಾಯಿಕ, ವ್ಯಾವಹಾರಿಕ ಜೀವನಕ್ಕೆ ಮಾರಕವಾಗುತ್ತವೆ. ಅದಕ್ಕೆ ನಾವು ಈ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಮನಸ್ಸಿಟ್ಟು ಮತ್ತು ಜಿಗುಟುತನದಿಂದ ಮಾಡಬೇಕು. ಸ್ವಯಂಸೂಚನೆಯ ಸತ್ರಗಳು, ತಖ್ತೆ ಬರೆಯುವುದು, ಇವು ಪ್ರಕ್ರಿಯೆಯ ಮುಖ್ಯ ಅಂಶಗಳಾಗಿವೆ. ಆದ್ದರಿಂದ ಸ್ವಭಾವದೋಷ ಮತ್ತು ಆಹಂ ನಿರ್ಮೂಲನೆಯ ಪ್ರಕ್ರಿಯೆ ಗಾಂಭೀರ್ಯತೆಯಿಂದ ಮಾಡಲು ಪ್ರಯತ್ನ ಮಾಡೋಣ.

ಅನುಭೂತಿ : ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ ಸಂದರ್ಭದಲ್ಲಿ ಮನಸ್ಸಿನಿಂದ ಪ್ರಯತ್ನ ಮಾಡಿ ಅನೇಕರು ಅನುಭೂತಿ ಪಡೆದಿದ್ದಾರೆ. ಇಂತಹ ಒಂದು ಅನುಭೂತಿಯನ್ನು ನಾವೀಗ ನೋಡೋಣ. ಜಾರ್ಖಂಡ್ ರಾಜ್ಯದ ಧನಬಾದಿನ ಓರ್ವ ಸಾಧಕಿ ಸ್ವಭಾವದೋಷ-ನಿರ್ಮೂಲನೆಗಾಗಿ ಸ್ವಯಂಸೂಚನೆ ನೀಡುತ್ತಿದ್ದರು. ನಿಯಮಿತವಾಗಿ ಸ್ವಯಂಸೂಚನೆಯ ಸತ್ರಗಳು ಮಾಡಿರುವುದರಿಂದ ಅವರಿಗೆ ಲಾಭವು ಆಗುತ್ತಿತ್ತೂ. ಒಮ್ಮೆ ಬೆಳಿಗ್ಗೆ ೫.೩೦ ಸಮಯಕ್ಕೆ ಅವರು ಪ್ರಾರ್ಥನೆ ಮಾಡಿ ನಾಮಜಪ ಮಾಡಿದರು ಮತ್ತು ಅದರ ನಂತರ ಸ್ವಯಂಸೂಚನೆಯ ಸತ್ರ ಮಾಡುವ ಮೊದಲು ಪ್ರಾರ್ಥನೆ ಮಾಡಿ ‘ನನ್ನಲ್ಲಿನ ಕಿರಿಕಿರಿ ಮಾಡಿಕೊಳ್ಳುವ ಮತ್ತು ಆಲಸ್ಯದ ಅರಿವು ನನಗೆ ಆಗಲಿ ಮತ್ತು ಅದು ದೂರವಾಗಿ ನನ್ನಲ್ಲಿ ಸುಧಾರಣೆಯಾಗಲಿ’ ಎಂದು ಪ್ರಾರ್ಥನೆ ಮಾಡಿದಾಗ, ಆ ಸಮಯದಲ್ಲಿ ‘ಹಾಗೆಯೇ ಆಗಲಿದೆ’ ಎಂದು ಯಾರೋ ಹೇಳಿದ ಹಾಗೆ ಅನಿಸಿತು. ‘ಬಟ್ಟೆಯ ಹೊಲಿಗೆ ಬಿಚ್ಚಿದ್ದು ಅರಿವಿಗೆ ಬಂದಾಗ ತಕ್ಷಣ ಆ ಬಟ್ಟೆಯನ್ನು ಹೊಲಿದರೆ, ಆಗ ಬಟ್ಟೆ ಹರಿಯುವುದಿಲ್ಲ. ಅದೇ ರೀತಿ ನಮ್ಮಲ್ಲಿರುವ ಸ್ವಭಾವದೋಷಗಳನ್ನು ದೂರಮಾಡಲು ಜಾಗರೂಕರಾಗಿದ್ದರೆ ಆಗ ಅವು ದೃಢವಾಗುವುದಿಲ್ಲ ಮತ್ತು ಅದರ ಮೇಲೆ ತುರ್ತಾಗಿ ಉಪಾಯಯೋಜನೆ ಮಾಡುವ ಸಂಸ್ಕಾರ ಮನಸ್ಸಿನ ಮೇಲೆ ಆಗುತ್ತದೆ. ಯಾವಾಗ ಆ ಸಂಸ್ಕಾರ ಪೂರ್ಣವಾಗಿ ಮನಸ್ಸಿನ ಮೇಲೆ ಉಳಿಯುತ್ತದೆ, ಆಗ ಪ್ರತಿಯೊಂದು ಕ್ಷಣಕ್ಕೆ ನಾನು ನಿನ್ನ ಹತ್ತಿರ ಇರುವುದು ನಿನಗೆ ಅರಿವಾಗುತ್ತದೆ’, ಎಂದು ಯಾರೋ ಹೇಳುತ್ತಿದ್ದಾರೆಂದು ಅವರಿಗೆ ಅನಿಸಿತು. ಅದರ ನಂತರ ಅವರು ತಲೆಬಾಗಿ ನಮಸ್ಕಾರ ಮಾಡುವಾಗ, ಅವರಿಗೆ ತಮ್ಮ ತಲೆ ನೆಲದಮೇಲೆ ಇರದೆ ಗುರುಚರಣಗಳ ಮೇಲೆ ಇದೆ ಎಂದು ಅನಿಸಿತು. ಸ್ವಭಾವದೋಷ-ನಿರ್ಮೂಲನೆಗಾಗಿ ಆರ್ತತೆಯಿಂದ ಪ್ರಾರ್ಥನೆ ಮಾಡುವುದರಿಂದ ಅವರಿಗೆ ಗುರುಚರಣಗಳ ಆಸ್ತಿತ್ವದ ಅರಿವಾಯಿತು. ಇದರಿಂದ ಆನಂದ ಇದು ಯಾವುದೇ ವ್ಯಕ್ತಿ, ವಸ್ತು ಅಥವಾ ಭಾಹ್ಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿಲ್ಲ, ಅದು ಪ್ರತಿಯೊಬ್ಬರ ಅಂತರಂಗದಲ್ಲಿ ಇದೆ ಎಂದು ಗಮನಕ್ಕೆ ಬರುತ್ತದೆ. ಕೇವಲ ಸ್ವಭಾವದೋಷ ಮತ್ತು ಅಹಂ ಇದರ ಆವರಣ ಬಂದಿರುವುದರಿಂದ ನಮಗೆ ಅದರ ಅನುಭವ ಆಗುವುದಿಲ್ಲ. ಹೇಗೆ ಪಾಚಿ ಕಟ್ಟಿರುವುದರಿಂದ ನೀರಿನ ಕೆಳಭಾಗ ಕಾಣುವುದಿಲ್ಲವೋ ಆದರೆ ದೋಷ-ಅಹಂ ಪಾಚಿ ದೂರವಾದರೆ ಆಗ ನಮಗೆ ನಮ್ಮ ಅಂತರಂಗದಲ್ಲಿರುವ ಆನಂದಸ್ವರೂಪ ಈಶ್ವರನು ಕಾಣುತ್ತಾನೆ.

ಎಲ್ಲಾ ನೀಡುವ ಬದಲು ಸ್ವ ನೀಡುವುದು ಮಹತ್ವದ್ದಾಗಿದೆ : ಗೋಂದವಲೇಕರ ಮಹಾರಾಜರು ಹೇಳಿದ್ದಾರೆ, ಒಂದು ವೇಳೆ ಸರ್ವಸ್ವ ನೀಡದಿದ್ದರೂ ನಡೆಯುತ್ತದೆ, ಆದರೆ ಸ್ವ ನೀಡಬೇಕು. ಕರ್ಣನು ಎಲ್ಲಾ ನೀಡಿದನು, ಆದರೆ ಸ್ವ ನೀಡಲಿಲ್ಲ. ಅದರ ವಿರುದ್ಧ ಗೀತೆ ಕೇಳಿದ ನಂತರ ಅರ್ಜುನನು ಸ್ವ ನೀಡಿದ, ಆದ್ದರಿಂದ ಅವನು ಶ್ರೀಕೃಷ್ಣನಿಗೆ ಪ್ರಿಯನಾದ. ಸಂಕ್ಷಿಪ್ತವಾಗಿ ಸ್ವ ನೀಡುವುದು ಎಂದರೆ ದೇವರಿಗೆ ಕರ್ತೃತ್ವವನ್ನು ಅರ್ಪಣೆ ಮಾಡುವುದು. ಭಗವಂತನಿಗೆ ಸ್ವ ನೀಡುವುದು ಎಂದರೆ ನಾನು ಭಗವಂತನಿಗೆ ಸೇರಿದವನಾಗಿದ್ದೇನೆ ಎಂಬ ಅರಿವು ಸತತವಾಗಿ ಮನಸ್ಸಿನಲ್ಲಿಟ್ಟುಕೊಳ್ಳುವುದು. ನಮ್ಮಲ್ಲಿ ಬಹಳಷ್ಟು ಜನ ಪ್ರಾಪಂಚಿಕರಾಗಿದ್ದಾರೆ. ತ್ಯಾಗ ಮಾಡುವುದು ಅಂದರೆ ಎಲ್ಲ ಬಿಟ್ಟು ಹಿಮಾಲಯಕ್ಕೆ ಹೋಗುವುದು ಎಂದರ್ಥ ಅಲ್ಲ, ಆಸಕ್ತಿ ಬಿಡುವುದು. ನಾನು ಎಂಬ ಅರಿವು ಬಿಟ್ಟು ದೇವರ ಅಸ್ತಿತ್ವದ ಅರಿವು ಇಟ್ಟುಕೊಳ್ಳುವುದು. ಈ ದಿಕ್ಕಿನಲ್ಲಿ ನಾವು ಪ್ರಯತ್ನ ಮಾಡೋಣ.

Leave a Comment