ಧನದ ತ್ಯಾಗ
ಕಳೆದ ೨ ಲೇಖನಗಳಲ್ಲಿ ನಾವು ತನು ಮತ್ತು ಮನಸ್ಸಿನ ತ್ಯಾಗದ ವಿಷಯವನ್ನು ತಿಳಿದುಕೊಂಡಿದ್ದೆವು. ಈಗ ನಾವು ಧನದ ತ್ಯಾಗ ಎಂದರೇನು ಮತ್ತು ಅದಕ್ಕಿರುವ ಮಹತ್ವಕ್ಕೆ ಸಂಬಂಧೀಸಿರುವ ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ಅಧ್ಯಾತ್ಮದಲ್ಲಿ ತ್ಯಾಗವು ಒಂದು ಮಹತ್ವಪೂರ್ಣ ಸ್ತರವಾಗಿದೆ. ಶಾರೀರಿಕ ಸೇವೆಯಿಂದ ತನುವಿನ ಮತ್ತು ನಾಮಜಪದಿಂದ ಮನಸ್ಸಿನ ತ್ಯಾಗವಾಗುತ್ತದೆ. ಧನ ಅರ್ಪಿಸುವುದರಿಂದ ಧನದ ತ್ಯಾಗವಾಗುತ್ತದೆ.
ಅ. ಧನದ ತ್ಯಾಗ ಎಂದರೇನು?
ಧನದ ತ್ಯಾಗದ ಅರ್ಥವೇನು? ಅಂದರೆ ಸತ್ಕಾರ್ಯಕ್ಕಾಗಿ, ಗುರುಕಾರ್ಯಕ್ಕಾಗಿ ಅಥವಾ ಅಧ್ಯಾತ್ಮಪ್ರಸಾರ ಮತ್ತು ಧರ್ಮಪ್ರಸಾರಕ್ಕಾಗಿ ತಮ್ಮ ಧನವನ್ನು ಅರ್ಪಿಸುವುದು. ಶಾಸ್ತ್ರೋಕ್ತವಾಗಿ ಧನವನ್ನು ಗಳಿಸಿ ಅದರ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕಾಗಿ ಅರ್ಪಿಸಬೇಕು ಎಂದು ಶಾಸ್ತ್ರಗಳು ಧನದ ತ್ಯಾಗದ ಬಗ್ಗೆ ಹೇಳುತ್ತವೆ. ಇದಕ್ಕೆ ಕಾರಣವೇನೆಂದರೆ ಈಶ್ವರನ ಕೃಪೆಯಿಂದ ನಮಗೆ ಧನವು ಸಿಗುತ್ತದೆ. ಭಗವಂತನು ನೀಡಿದುದನ್ನು ಭಗವಂತನ ಚರಣಗಳಲ್ಲಿ ಅರ್ಪಿಸಿದರೆ ಅದರ ಬಗ್ಗೆ ಮನಸ್ಸಿನಲ್ಲಿ ಆಸಕ್ತಿಯಿರುವುದಿಲ್ಲ. ಆಸಕ್ತಿಯು ಎಲ್ಲ ದುಃಖಗಳಿಗೆ ಮೂಲವಾಗಿದೆ ಮತ್ತು ತ್ಯಾಗದಲ್ಲಿಯೇ ನಿಜವಾದ ಆನಂದವಿದೆ. ಹಾಗಾಗಿ ಎಷ್ಟು ಹೆಚ್ಚು ತ್ಯಾಗವಾಗುತ್ತದೆಯೋ ಅಷ್ಟೇ ಹೆಚ್ಚು ಆನಂದವು ದೊರಕಿ ಅಧ್ಯಾತ್ಮದಲ್ಲಿ ಶೀಘ್ರವಾಗಿ ಪ್ರಗತಿಯಾಗುತ್ತದೆ. ಹಿಂದೂ ಧರ್ಮವು ತ್ಯಾಗವು ಮನುಷ್ಯ ಜೀವನದ ಮುಖ್ಯ ಅಂಶ ಎಂದು ಹೇಳಿದೆ. ಸ್ವಂತದ ಆದಾಯದ ೨೦% ದಷ್ಟು ಅಂಶವನ್ನು ಧರ್ಮಕ್ಕಾಗಿ ಅರ್ಪಿಸಬೇಕು. ಈ ರೂಢಿಯು ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ.
ಆ. ನಿರ್ದಿಷ್ಟ ಮೊತ್ತವಲ್ಲ, ಬದಲಾಗಿ ಅನುಪಾತ ಮತ್ತು ಭಾವವು ಹೆಚ್ಚು ಮಹತ್ವದ್ದಾಗಿದೆ !
ಧನದ ತ್ಯಾಗದಲ್ಲಿ ನಾವು ಎಷ್ಟು ಮೊತ್ತವನ್ನು ಅರ್ಪಣೆ ಮಡುತ್ತೇವೆ ಇದಕ್ಕಿಂತ ಅರ್ಪಣೆಯ ಅನುಪಾತ ಮತ್ತು ಅದರ ಹಿಂದಿರುವ ಭಾವಕ್ಕೆ ಹೆಚ್ಚು ಮಹತ್ವವಿದೆ. ಒಬ್ಬನ ಬಳಿ ೧ ಲಕ್ಷ ರೂಪಾಯಿಗಳಿವೆ ಎಂದಿಟ್ಟುಕೊಳ್ಳಿ ಮತ್ತು ಅವನು ಅದರಿಂದ ೨ ಸಾವಿರ ರೂ.ಗಳನ್ನು ಅರ್ಪಣೆ ಮಾಡಿದನು ಮತ್ತು ಇನ್ನೊಬ್ಬ ವ್ಯಕ್ತಿಯ ಬಳಿ ೧೦ ಸಾವಿರ ರೂ.ಗಳಿವೆ ಮತ್ತು ಅದರಲ್ಲಿ ಅವನು ೧ ಸಾವಿರ ರೂ.ಗಳನ್ನು ಅರ್ಪಣೆ ಮಾಡಿದರೆ ಆಗ ಆ ಎರಡನೆಯ ವ್ಯಕ್ತಿಯ ತ್ಯಾಗಕ್ಕೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ೨ ಸಾವಿರ ರೂ.ಗಳ ಮೊತ್ತವು ೧ ಸಾವಿರಕ್ಕಿಂತ ಹೆಚ್ಚು ಇದ್ದರೂ ಆ ವ್ಯಕ್ತಿಯು ತನ್ನ ಬಳಿ ಲಭ್ಯವಿರುವ ಎಷ್ಟು ಮೊತ್ತವನ್ನು ಅರ್ಪಣೆ ಮಾಡಿದ್ದಾನೆ ಎಂಬುದು ಸಹ ಮಹತ್ವಪೂರ್ಣವಾಗುತ್ತದೆ.
ಇ. ಧನ ಮತ್ತು ಧರ್ಮ ಇವು ಪರಸ್ಪರ ಪೂರಕವಾಗಿರುವುದು
ಧನ ಮತ್ತು ಧರ್ಮ ಇವು ಪರಸ್ಪರ ಪೂರಕ ಹಾಗೂ ಒಬ್ಬರಿಗೊಬ್ಬರೂ ಸಹಯೋಗಿಯಾಗಿವೆ. ಹೇಗೆ ಮೋಡಗಳಿಂದಾಗಿ ಸಾಗರವು ಧನವಂತವಾಗುತ್ತದೆಯೋ ಮತ್ತು ಸಾಗರದಿಂದಾಗಿ ಮೋಡಗಳ ಬಲವು ವೃದ್ಧಿಸುತ್ತದೆಯೋ ಅದೇ ರೀತಿ ಧರ್ಮದಿಂದಾಗಿ ಧನವು ಹೆಚ್ಚಾಗುತ್ತದೆ ಮತ್ತು ಧನದಿಂದಾಗಿ ಧರ್ಮವು ಬೆಳೆಯುತ್ತದೆ. ಒಂದು ವೇಳೆ ಸಮುದ್ರ ಇಲ್ಲದೇ ಹೋದಲ್ಲಿ ಮೋಡಗಳು ಸಹ ಇರುವುದಿಲ್ಲ ಹಾಗೂ ಮಳೆಯೂ ಬರುವುದಿಲ್ಲ. ನದಿಗಳೂ ಒಣಗಿ ಹೋಗುವವು. ಇದರ ಅರ್ಥ ಹೇಗೆ ಮೋಡ ಮತ್ತು ಸಮುದ್ರಗಳು ಪರಸ್ಪರ ಪೂರಕವಾಗಿವೆಯೋ ಅದೇ ರೀತಿ ಧನ ಮತ್ತು ಧರ್ಮ ಇವುಗಳು ಸಹ ಪರಸ್ಪರ ಪೂರಕವಾಗಿವೆ. ಧರ್ಮದಿಂದಾಗಿ ಅಂದರೆ ಧರ್ಮಪಾಲನೆಯಿಂದ ಧನದ ಅಭಾವವಾಗುವುದಿಲ್ಲ ಸತ್ಪಾತ್ರರಿಗೆ ಮತ್ತು ಶಾಸ್ತ್ರಕ್ಕನುಸಾರ ದಾನ ಮಾಡುವುದರಿಂದ ಐಶ್ವರ್ಯವೂ ಪ್ರಾಪ್ತವಾಗುತ್ತದೆ.
ಈ. ಸತ್ಪಾತ್ರೇ ದಾನದ ಮಹತ್ವ
ಧನದ ತ್ಯಾಗ ಅಥವಾ ಹಣವನ್ನು ಯಾರಿಗೆ ಅರ್ಪಿಸಬೇಕು ಎಂಬುವುದಕ್ಕೂ ಮಹತ್ವವಿದೆ. ಅರ್ಪಣೆ ಅಥವಾ ದಾನವು ಯಾವಾಗಲೂ ಸತ್ಪಾತ್ರವಾಗಿರಬೇಕು. ಕೊಟ್ಟಂತಹ ದಾನದ ಯೋಗ್ಯ ವಿನಿಯೋಗವಾದರೆ ಮಾತ್ರ ದಾನ ನೀಡಿದವರಿಗೆ ಆ ದಾನದಿಂದ ಹೆಚ್ಚುವರಿ ಫಲ ಸಿಗುತ್ತದೆ. ನಮ್ಮ ಮೂಲಕ ದಾನ ಮಾಡಲಾದ ಹಣವು ಅನುಚಿತ ಕಾರ್ಯಗಳಿಗಾಗಿ ಉಪಯೋಗಿಸಲ್ಪಟ್ಟರೆ ದಾನಿಗೂ ಸಹ ದೋಷ ತಗಲುತ್ತದೆ. ಉದಾಹರಣೆಗೆ ನಾವು ಯಾರಾದರೊಬ್ಬ ವ್ಯಕ್ತಿಗೆ ೧೦೦ ರೂ. ಕೊಟ್ಟೆವು ಮತ್ತು ಆ ವ್ಯಕ್ತಿಯು ಅದರಿಂದ ಮದ್ಯಪಾನ ಮಾಡಿದರೆ ೧೦೦ ರೂ. ದಾನ ಮಾಡಿದ ವ್ಯಕ್ತಿಗೆ ಏನಾದರೂ ಲಾಭವಾಗುತ್ತದೆಯೇನು? ಇಲ್ಲವಲ್ಲ! ಹಾಗಾಗಿ ದಾನವು ಸತ್ಪಾತ್ರೇ ದಾನವಾಗಿರಬೇಕು ಎಂದು ಹೇಳಲಾಗಿದೆ. ಸಂತರಿಗಿಂತ ಹೆಚ್ಚು ಸತ್ಪಾತ್ರರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಹಾಗಾಗಿ ಏನಾದರೂ ದಾನ ಮಾಡುವುದಿದ್ದಲ್ಲಿ ಅವರಿಗೇ ಅರ್ಪಣೆ ಮಾಡಬೇಕು. ನಿಜವಾದ ಸಂತರನ್ನು ಗುರುತಿಸುವುದು ಮತ್ತು ಅವರಿಗೆ ಪ್ರತ್ಯಕ್ಷ ರೂಪದಲ್ಲಿ ಅರ್ಪಣೆ ಮಾಡಲು ಮಿತಿಯುಂಟಾಗುತ್ತದೆ. ಇಂತಹ ಸಮಯದಲ್ಲಿ ಸಂತರ ಮಾರ್ಗದರ್ಶನದಲ್ಲಿ ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಮಾಡುವ ಸಂಸ್ಥೆ-ಸಂಘಟನೆಗಳಿಗೆ ಅರ್ಪಣೆಯನ್ನು ನೀಡಿದರೆ ಅದು ಸತ್ಪಾತ್ರೇ ದಾನವಾಗುತ್ತದೆ.
ಉ. ಭಾವಪರವಶರಾಗಿ ಅರ್ಪಣೆ ಮಾಡುವುದರ ಮಿತಿಗಳು
ಅನೇಕ ಸಲ ಸಮಾಜದಲ್ಲಿ ಬಹಳಷ್ಟು ಜನರು ಭಾವಪರವಶರಾಗಿ ಆರ್ಥಿಕ ಸಹಾಯವನ್ನು ಮಾಡುತ್ತಾರೆ. ಉದಾಹರಣೆಗೆ ನಿರ್ಧನ ವ್ಯಕ್ತಿಗಳಿಗೆ ಅನ್ನದಾನ ಮಾಡುವುದು, ವಿದ್ಯಾಲಯಗಳು ಮತ್ತು ಚಿಕಿತ್ಸಾಲಯಗಳಿಗೆ ದೇಣಿಗೆ ನೀಡುವುದು ಇತ್ಯಾದಿ. ಆದರೆ ಇವುಗಳಿಂದ ಕೇವಲ ಪುಣ್ಯವು ಸಿಗುತ್ತದೆ. ಪುಣ್ಯದಿಂದ ಸ್ವರ್ಗವು ಸಿಗುತ್ತದೆ ಆದರೆ ಮೋಕ್ಷವು ಸಿಗುವುದಿಲ್ಲ ಎಂದು ನಾವು ಗಮನದಲ್ಲಿರಿಸಿಕೊಳ್ಳಬೇಕು. ಮುಮುಕ್ಷುವಿಗೆ ಪಾಪ-ಪುಣ್ಯ ಇವೆರಡರ ಆವಶ್ಯಕತೆಯಿಲ್ಲ. ಭಾವಪರವಶತೆಯಿಂದ ಮಾಡಲಾಗುವ ಆರ್ಥಿಕ ಸಹಾಯದಿಂದ ಕೇವಲ ವಿಶಿಷ್ಟ ಸ್ತರದ ತನಕ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದರೆ ಮೋಕ್ಷಪ್ರಾಪ್ತಿ ಆಗುವುದಿಲ್ಲ. ಆದರೂ ಏನನ್ನೂ ಮಾಡದಿರುವುದಕ್ಕಿಂತ ಇಷ್ಟನ್ನಾದರೂ ಮಾಡುವುದು ಒಳ್ಳೆಯದು.
ಊ. ಸಂತರಿಗೆ ಅರ್ಪಣೆ ಮಾಡುವುದರ ಮಹತ್ವ
ಸಂತರು ಅಥವಾ ಗುರುಗಳು ನಿರ್ಗುಣ ಈಶ್ವರನ ಸಗುಣ ದೇಹಧಾರಿ ರೂಪವಾಗಿರುತ್ತಾರೆ. ಹಾಗಾಗಿ ಸಂತರಿಗೆ ಅರ್ಪಣೆ ಮಾಡಿದರೆ ಅದು ಈಶ್ವರನಿಗೆ ಅರ್ಪಣೆ ಮಾಡಿದಂತೆ ಆಗಿದೆ. ಈಶ್ವರನು ನೀಡಿದುದನ್ನು ಈಶ್ವರನಿಗೆ ಹಿಂತಿರುಗಿಸುವುದರಿಂದ ಕೊಡಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ ಮತ್ತು ಅದು ಪೂರ್ಣಗೊಳ್ಳುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಂತರಿಗೆ ಅರ್ಪಣೆ ಮಾಡುವುದರಿಂದ ಸಂಚಿತವು ಕಡಿಮೆಯಾಗುತ್ತದೆ. ಪ್ರಾರಬ್ಧಭೋಗವನ್ನು ಭೋಗಿಸುವ ಕ್ಷಮತೆಯು ಹೆಚ್ಚಾಗುತ್ತದೆ ಮತ್ತು ಕೊಡಕೊಳ್ಳುವಿಕೆಯು ಉಂಟಾಗುವುದಿಲ್ಲ. ಹಾಗಾಗಿ ಏನಾದರೂ ಕೊಡಲಿಕ್ಕಿದ್ದರೆ ಅದನ್ನು ಸಂತರಿಗೆ ಅಥವಾ ಸತ್ಕಾರ್ಯಕ್ಕಾಗಿಯೇ ನೀಡಬೇಕು.
ಎ. ಧನದ ತ್ಯಾಗದಿಂದ ವ್ಯಕ್ತಿಯ ಕೊಡಕೊಳ್ಳುವಿಕೆಯ ಲೆಕ್ಕಾಚಾರ ಚುಕ್ತಾ (ಮರುಪಾವತಿ) ಆಗುತ್ತದೆ
ಇಂದಿನ ಕಾಲದಲ್ಲಿ ಹಣಕ್ಕೆ ಬಹಳ ಮಹತ್ವವಿದೆ. ಎಲ್ಲ ಜೀವಗಳ ವ್ಯಾವಹಾರಿಕ ಪ್ರಯತ್ನಗಳು ಹೆಚ್ಚು ಹೆಚ್ಚು ಹಣ ಗಳಿಸುವುದರಲ್ಲಿಯೇ ಇರುತ್ತದೆ. ಹಾಗಾಗಿ ಧನದ ತ್ಯಾಗ ಮಾಡಲು ಮನಸ್ಸು ಹಿಂಜರಿಯುತ್ತದೆ. ಆದರೆ ಧನವನ್ನು ಯಥಾಶಕ್ತಿ ತ್ಯಾಗ ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಬಹಳ ಲಾಭವಾಗುತ್ತದೆ ಇದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಧನದ ತ್ಯಾಗ ಮಾಡುವುದರಿಂದ ಸಿಗುವ ಅತ್ಯಂತ ಮಹತ್ವಪೂರ್ಣ ಲಾಭವೆಂದರೆ ಅದರಿಂದ ಕೊಡಕೊಳ್ಳುವಿಕೆಯ ಲೆಕ್ಕಾಚಾರ ಪೂರ್ಣಗೊಳಿಸಬಹುದು.
ಏ. ಕೊಡಕೊಳ್ಳುವಿಕೆಯು ಹೇಗೆ ಉಂಟಾಗುತ್ತದೆ?
ಹಿಂದೂ ಧರ್ಮವು ಕರ್ಮಫಲ ಸಿದ್ಧಾಂತಗಳ ಮೇಲಾಧಾರಿತವಾಗಿದೆ. ಕರ್ಮಫಲಸಿದ್ಧಾಂತದಲ್ಲಿ ವ್ಯಕ್ತಿಯು ‘ಅವನಿಂದಾದ ಪ್ರತಿಯೊಂದು ಕರ್ಮದ ಫಲವನ್ನು ಭೋಗಿಸಲೇ ಬೇಕಾಗುತ್ತದೆ’ ಎಂದು ಹೇಳಿದೆ. ಈ ಕರ್ಮವನ್ನು ಮಾಡುವಾಗ ನಮಗೆ ಅನೇಕ ಜನರೊಂದಿಗೆ ಕೊಡಕೊಳ್ಳುವಿಕೆಯ ಲೆಕ್ಕಾಚಾರವು ಉಂಟಾಗುತ್ತದೆ. ಉದಾಹರಣೆಗೆ ಅ ಎಂಬ ವ್ಯಕ್ತಿಯು ಬ ಎಂಬ ವ್ಯಕ್ತಿಗೆ ಸಾಲದ ರೂಪದಲ್ಲಿ ೫೦೦ ರೂ. ನೀಡುತ್ತಾನೆ. ಬ ನಿಗೆ ಅದು ಮರೆತುಹೋಯಿತು ಮತ್ತು ಬ ನು ಅದನ್ನು ಹಿಂತಿರುಗಿಸುವುದರೊಳಗೆ ಅ ನು ನಿಧನ ಹೊಂದಿದರೆ ಏನಾಗುತ್ತದೆ? ಅವನು ನಿಧನವಾಗಿದ್ದರೂ ಆತನಿಗೆ ತಾನು ೫೦೦ ರೂ. ಕೊಟ್ಟಿರುವುದರ ನೆನಪಿರುತ್ತದೆ. ಹಾಗಾಗಿ ಮೃತ್ಯುವಿನ ನಂತರ ಅ ನ ಅತೃಪ್ತ ಲಿಂಗದೇಹವು ಬೇರೆ ಬೇರೆ ರೀತಿಯಿಂದ ಬ ನಿಗೆ ತೊಂದರೆ ಕೊಡುತ್ತದೆ. ಅವನ ಆಕಸ್ಮಿಕ ನಿಧನದಿಂದ ಅ ಮತ್ತು ಬ ರ ನಡುವೆ ಕೊಡಕೊಳ್ಳುವಿಕೆಯು ಅಪೂರ್ಣವಾಗಿ ಬಿಡುತ್ತದೆ. ಈ ಕೊಡಕೊಳ್ಳುವಿಕೆಯನ್ನು ಈಗ ಹೇಗೆ ಪೂರ್ಣಗೊಳಿಸುವುದು? ಅ ಮತ್ತು ಬ ಇಬ್ಬರದ್ದೂ ಪುನರ್ಜನ್ಮವಾಗಿ ಅವರು ಪುನಃ ಸಿಕ್ಕಿದಾಗ ಆ ಲೆಕ್ಕವು ಪೂರ್ಣವಾಗಬಲ್ಲದು. ಆದರೆ ಪ್ರತಿಯೊಬ್ಬ ವ್ಯಕ್ತಿಗೆ ಅವನ ಕರ್ಮಗಳಿಗನುಸಾರ ಗತಿಯು ಪ್ರಾಪ್ತವಾಗುತ್ತದೆ. ಹಾಗಾಗಿ ಅವರಿಬ್ಬರೂ ಪುನರ್ಜನ್ಮ ತಾಳಿ ಯಾವಾಗ ಸಿಗುವರು? ಅವರ ನಡುವಿನ ಕೊಡಕೊಳ್ಳುವಿಕೆಯು ಯಾವಾಗ ಪೂರ್ಣವಾಗುವುದು? ಈ ರೀತಿ ನಮ್ಮೊಂದಿಗೆ ಎಷ್ಟೊಂದು ಜನ್ಮಗಳ ಕೊಡಕೊಳ್ಳುವಿಕೆಯ ಗಂಟು ಇರುತ್ತದೆ. ನಾವು ಈ ಕೊಡಕೊಳ್ಳುವಿಕೆಯ ಸಂಬಂಧಗಳನ್ನು ಪೂರ್ಣಗೊಳಿಸಲೇ ಬೇಕಾಗುತ್ತದೆ. ಅದರ ಹೊರತು ನಮಗೆ ಮುಕ್ತಿಯು ಸಿಗುವುದಿಲ್ಲ. ಆದರೆ ಯಾವಾಗ ನಾವು ಸಂತರಿಗೆ ಅಥವಾ ಗುರುಗಳಿಗೆ ಅರ್ಪಣೆ ನೀಡುತ್ತೇವೆಯೋ ಆಗ ತ್ರಿಕಾಲಜ್ಞಾನಿ ಗುರುಗಳು ನಮ್ಮ ಕೊಡಕೊಳ್ಳುವಿಕೆಯ ಲೆಕ್ಕಚಾರದ ಅಂಶವನ್ನು ಸಂಬಂಧಿತ ಜನರಿಗೆ ನೀಡಿ ನಮ್ಮ ಲೆಕ್ಕಾಚಾರವನ್ನು ಚುಕ್ತಾಗೊಳಿಸುತ್ತಾರೆ. ಅದರಿಂದ ನಮ್ಮ ಕಷ್ಟಗಳು ದೂರವಾಗಿ ನಾವು ಮುಕ್ತರಾಗುತ್ತೇವೆ. ಕೊಡಕೊಳ್ಳುವಿಕೆಯ ಲೆಕ್ಕಾಚಾರವು ಕೇವಲ ಹಣದಿಂದಲೇ ಆಗುತ್ತದೆ ಎಂದೇನಿಲ್ಲ, ಯಾರಿಗಾದರೂ ಶಾರೀರಿಕ ಅಥವಾ ಮಾನಸಿಕ ಪೀಡಿಸಿದ್ದರೆ ಸಹ ಕೊಡಕೊಳ್ಳುವಿಕೆಯು ಉಂಟಾಗುತ್ತದೆ
ಕೊಡಕೊಳ್ಳುವಿಕೆಯು ಚುಕ್ತಾವಾಗಲು ಬಾಕಿಯಿದ್ದಲ್ಲಿ ಬುದ್ಧಿಗೆ ಅಗಮ್ಯವಾದಂತಹ ಅರ್ಥಾತ್ ಆಧ್ಯಾತ್ಮಿಕ ಕಷ್ಟಗಳನ್ನು ನಾವು ಭೋಗಿಸಬೇಕಾಗುತ್ತದೆ. ಉದಾ. ಅಸಾಧ್ಯ ರೋಗಗಳಾಗುವುದು, ವ್ಯಸನಾಧೀನತೆ, ಕೌಟುಂಬಿಕ ಕಲಹಗಳು, ಅಕಾಲಮೃತ್ಯು, ವಿಕಲಾಂಗ ಮಕ್ಕಳು ಹುಟ್ಟುವುದು, ವಿವಾಹವಾಗದಿರುವುದು, ಆರ್ಥಿಕ ಹಾನಿಯಾಗುವುದು, ವೈಫಲ್ಯಗಳು ಇತ್ಯಾದಿ. ಇದರಿಂದ ನಮ್ಮ ಜೀವನದ ಆನಂದವು ನಷ್ಟವಾಗುತ್ತದೆ. ಯೋಗ್ಯ ಸಾಧನೆಯನ್ನು ಮಾಡುವುದೇ ಈ ಕಷ್ಟಗಳ ಪರಿಹಾರೋಪಾಯವಾಗಿದೆ. ಸತ್ ಕಾರ್ಯಕ್ಕಾಗಿ ಅಥವಾ ಈಶ್ವರೀಯ ಕಾರ್ಯಕ್ಕಾಗಿ ದಾನ ಧರ್ಮ ಮಾಡುವುದರಿಂದ ಕೊಡಕೊಳ್ಳುವಿಕೆಯನ್ನು ಚುಕ್ತಾಗೊಳಿಸಲು ಸಹಾಯ ಸಿಗುತ್ತದೆ ಮತ್ತು ಅದರಿಂದ ನಮ್ಮ ಕಷ್ಟಗಳು ಕಡಿಮೆಯಾಗ ತೊಡಗುತ್ತದೆ. ಈ ರೀತಿ ಧನದ ತ್ಯಾಗದ ಅಥವಾ ಸತ್ಪಾತ್ರೇ ದಾನಕ್ಕೆ ಇಷ್ಟು ಮಹತ್ವವಿದೆ.
ಐ. ನಿಯಮಿತ ಅರ್ಪಣೆ ಮಾಡುವುದರ ಮಹತ್ವ
ಗುರುಪೂರ್ಣಿಮೆಯ ನಿಮಿತ್ತ ನಿಮ್ಮಲ್ಲಿ ಅನೇಕ ಜನರು ಅರ್ಪಣೆ ಮಾಡಿರಬಹುದು. ಭಗವಂತನಿಗಾಗಿ ಎಷ್ಟು ಮಾಡಿದರೂ ಅದು ಕಡಿಮೆಯೇ ಆಗಿದೆ. ಅರ್ಪಣೆ ಮಾಡುವುದು ನಮ್ಮ ವೃತ್ತಿಯಾಗಬೇಕು. ನಾವು ಸಾಧನೆಯ ವಿಷಯದಲ್ಲಿ ನಾವು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆಯೋ ಅದರಲ್ಲಿ ಸಾತತ್ಯ ಬರುವುದು ಮಹತ್ವಪೂರ್ಣವಾಗಿದೆ. ಹಾಗಾಗಿ ನಾವು ವರ್ಷದಲ್ಲಿ ಒಂದು ಸಲ ಗುರುಪೂರ್ಣಿಮೆಗೆ ಮಾತ್ರ ಅರ್ಪಣೆ ಮಾಡದೇ ಪ್ರತಿ ತಿಂಗಳು ಅಥವಾ ಪ್ರತಿ ವಾರ ಏನಾದರೂ ಅರ್ಪಣೆ ಮಾಡಬಹುದು. ಈ ಅರ್ಪಣೆಯನ್ನು ನಾವು ಯಥಾಶಕ್ತಿ ಧನ ರೂಪದಲ್ಲಿ ಅಥವಾ ವಸ್ತುವಿನ ರೂಪದಲ್ಲಿ ಮಾಡಬಹುದು. ನಾವು ಎಷ್ಟು ಅರ್ಪಣೆ ಮಾಡುತ್ತೇವೆ ಇದು ಮಹತ್ವಪೂರ್ಣವಲ್ಲ, ಬದಲಾಗಿ ಅರ್ಪಣೆ ಮಾಡಿದೆವೊ ಇಲ್ಲವೋ ತ್ಯಾಗವಾಗುವ ದೃಷ್ಟಿಯಿಂದ ಪ್ರಯತ್ನವಾಗುತ್ತಿದೆಯೋ ಇಲ್ಲವೋ ಎಂಬುದು ಮಹತ್ವಪೂರ್ಣವಾಗಿದೆ.
ಒ. ಅನುಭೂತಿ
ತ್ಯಾಗ ಮಾಡುವುದರಿಂದ ಭಗವಂತನು ಯಾವುದಕ್ಕೂ ಕಡಿಮೆ ಮಾಡುವುದಿಲ್ಲ. ದೇವರು – ನನಗಾಗಿ ಧನವನ್ನು ಖರ್ಚು ಮಾಡಿ ನೋಡು, ನಿನಗಾಗಿ ಕುಬೇರನ ದ್ವಾರವನ್ನು ತೆರೆಯದಿದ್ದರೆ ಹೇಳು – ಎಂದು ಹೇಳುತ್ತಾರೆ. ಈ ವಿಷಯದಲ್ಲಿ ಒಂದು ಅನುಭೂತಿಯು ಸಹ ಇದೆ. ಒಂದು ಸತ್ಸಂಗಕ್ಕೆ ಬರುವ ಸಾಧಕಿಗೆ ಅರ್ಪಣೆಯ ಮಹತ್ವವು ಗಮನಕ್ಕೆ ಬಂತು. ಅವಳಿಗೂ ಅರ್ಪಣೆ ಮಾಡಬೇಕೆಂಬ ಇಚ್ಛೆಯಿತ್ತು. ಆದರೆ ಆ ಸಮಯದಲ್ಲಿ ಹಣ ಇರಲಿಲ್ಲ. ಆದರೂ ಅವಳು ೫೧ ರೂ. ಅರ್ಪಣೆ ನೀಡಿದಳು. ಅದಾದ ೨ ಗಂಟೆಯೊಳಗೆ ಅವಳ ಬಳಿ ಮನೆಪಾಠಕ್ಕಾಗಿ (ಟ್ಯೂಶನ್) ೧೧ ಹೊಸ ಹುಡುಗಿಯರು ಬಂದರು. ಅವರಲ್ಲಿ ಕೆಲವು ಹುಡುಗಿಯರು ಅವರಿಗೆ ಮುಂಗಡವಾಗಿ ಹಣವನ್ನು ಸಹ ನೀಡಿದರು. ಈ ಘಟನೆಯಾದ ಸ್ವಲ್ಪ ಸಮಯದೊಳಗೆ ಅವರಿಗೆ ಅನುದಾನರಹಿತ ಶಾಲೆಯೊಂದರಲ್ಲಿ ನೌಕರಿ ದೊರಕಿದ ದೂರವಾಣಿ ಕರೆ ಬಂತು. ಇಂದಿನ ಈ ಭ್ರಷ್ಟಾಚಾರದ ಯುಗದಲ್ಲಿ ಒಂದು ರೂಪಾಯಿ ಲಂಚ ನೀಡದೇ ಅವರಿಗೆ ನೌಕರಿ ಸಹ ಸಿಕ್ಕಿತು. ಆದರೆ ಅದರ ಜೊತೆಗೆ ೨೦ ದಿನದೊಳಗೆ ಶಾಲೆಗೆ ಸರಕಾರಿ ಅನುದಾನ ಸಹ ಸಿಗುವುದಾಗಿ ನಿಶ್ಚಿತವಾಯಿತು.
ಈಶ್ವರನಿಗಾಗಿ ಮಾಡಿದ ಯಾವುದೇ ಕಾರ್ಯಕ್ಕೆ ಹತ್ತು ಪಟ್ಟು ಫಲ ಸಿಗುತ್ತದೆ. ಈ ನಿಯಮಕ್ಕನುಸಾರ ಈಶ್ವರನಿಗಾಗಿ ಅರ್ಪಣೆ ಮಾಡಿದರೆ ಈಶ್ವರನು ಹತ್ತು ಪಟ್ಟು ನೀಡುತ್ತಾನೆ. ಅನೇಕ ಜನರು ಇದರ ಅನುಭೂತಿಯನ್ನು ಪಡೆದಿದ್ದಾರೆ. ಆದರೆ ನೆನಪಿರಲಿ, ನಾವು ಪ್ರತಿಫಲದ ಅಪೇಕ್ಷೆಯಿಂದಲ್ಲ, ಬದಲಾಗಿ ಕೃತಜ್ಞತಾಭಾವದಿಂದ ಅರ್ಪಣೆ ಮಾಡಬೇಕು!
ಓ. ಧನ ತ್ಯಾಗ ಮಾಡುವುದರ ಮಾಧ್ಯಮಗಳು
ಇಲ್ಲಿಯ ನತಕ ಧನದ ತ್ಯಾಗದ ಮಹತ್ವವನ್ನು ತಿಳಿದುಕೊಂಡೆವು. ನೀವು ಸಹ ನಿಯಮಿತವಾಗಿ ಯಥಾಶಕ್ತಿ ಅರ್ಪಣೆ ಮಾಡಲು ಪ್ರಯತ್ನಿಸಬಹುದು. ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಸನಾತನ ಸಂಸ್ಥೆಯು ಅಧ್ಯಾತ್ಮ ಪ್ರಸಾರಕ್ಕಾಗಿ ಕ್ರಿಯಾಶೀಲವಾಗಿದೆ. ಸನಾತನದ ಆಶ್ರಮಗಳಲ್ಲಿ ನಿರಂತರವಾಗಿ ಧರ್ಮಕಾರ್ಯ ನಡೆಯುತ್ತಿದೆ (ಸನಾತನ ಆಶ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ನೀವು ಈ ಕಾರ್ಯಕ್ಕಾಗಿ ಧನ ಅಥವಾ ವಸ್ತುಗಳ ರೂಪದಲ್ಲಿ ಅರ್ಪಣೆಯ ಯೋಗದಾನ ನೀಡಬಹುದು. ಇತರರಿಗೂ ಈ ವಿಷಯದಲ್ಲಿ ಹೇಳಬಹುದು. ಸನಾತನದ ಸಾಧಕರ ಬಳಿ ಅಥವಾ ಆನ್ ಲೈನ್ ಅರ್ಪಣೆ ನೀಡುವ ಸೌಲಭ್ಯವು ಲಭ್ಯವಿದೆ. ಇದರಲ್ಲಿ ಯಾವುದೇ ರೀತಿಯ ವ್ಯಾವಹಾರಿಕ ಉದ್ದೇಶವಿಲ್ಲ. ಬದಲಾಗಿ ಕೇವಲ ಮತ್ತು ಕೇವಲ ಆಧ್ಯಾತ್ಮಿಕ ಕಲ್ಯಾಣದ್ದೇ ವಿಚಾರವಿದೆ.
ಆನ್ ಲೈನ್ ಅರ್ಪಣೆ ನೀಡಲು ಇಲ್ಲಿ ಕ್ಲಿಕ್ ಮಾಡಿhttps://www.sanatan.org/en/donate !