ಆದರ್ಶ ಅಡುಗೆ
ಶ್ರಾದ್ಧದ ದಿನ ಮಾಡುವ ಅಡುಗೆಯು ಆದರ್ಶವಾಗಿರುತ್ತದೆ. ಇಂತಹ ಅಡುಗೆಯನ್ನು ವರ್ಷವಿಡೀ ಮಾಡುವುದು ಆವಶ್ಯಕವಾಗಿರುತ್ತದೆ. ಆದರೆ ವರ್ಷವಿಡೀ ಈ ರೀತಿಯ ಅಡುಗೆಯನ್ನು ಮಾಡಲು ಆಗದಿದ್ದರೆ ಶ್ರಾದ್ಧದ ದಿನವಾದರೂ ಮಾಡಬೇಕು.
ಊಟವನ್ನು ಬಡಿಸುವ ಪದ್ಧತಿ
ಅ. ಪಿತೃಗಳ ತಟ್ಟೆಗೆ (ಪಿತೃಗಳಿಗೆ ಇಟ್ಟಿರುವ ಎಲೆಗೆ) ವಿರುದ್ಧ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ) ಭಸ್ಮದ ರೇಖೆಯನ್ನು ತೆಗೆಯಬೇಕು.
ಆ. ಊಟವನ್ನು ಮುತ್ತುಗದ ಪತ್ರಾವಳಿ ಅಥವಾ ಬಾಳೆ ಎಲೆಯ ಮೇಲೆ ಬಡಿಸಬೇಕು.
ಇ. ಶ್ರಾದ್ಧದ ಬ್ರಾಹ್ಮಣರ ಎಲೆಯಲ್ಲಿ ಉಪ್ಪನ್ನು ಬಡಿಸಬಾರದು.
ಈ. ಪಕ್ವಾನ್ನ (ಲಾಡು ಇತ್ಯಾದಿ)ಗಳನ್ನು ಕೈಯಿಂದಲೇ ಬಡಿಸಬೇಕು; ಆದರೆ ಪಲ್ಯ, ಕೋಸಂಬರಿ, ಚಟ್ನಿ, ಇತ್ಯಾದಿ ಪದಾರ್ಥಗಳನ್ನು ಎಂದಿಗೂ ಕೈಯಿಂದ ಬಡಿಸಬಾರದು. ಅದಕ್ಕಾಗಿ ಸೌಟು, ಚಮಚಗಳನ್ನು ಉಪಯೋಗಿಸಬೇಕು.
ಉ. ಎಲೆಯ ಮೇಲೆ ಪದಾರ್ಥಗಳನ್ನು ಬಡಿಸುವ ಕ್ರಮ ಮತ್ತು ಸ್ಥಳ : ಶ್ರಾದ್ಧದ ದಿನ ಎಲೆಯ ಎಡಗಡೆಗೆ, ಬಲಗಡೆಗೆ, ಎದುರು ಮತ್ತು ಮಧ್ಯ ಹೀಗೆ ನಾಲ್ಕು ಭಾಗಗಳಲ್ಲಿ (ಚೌರಸ) ಏನೇನು ಬಡಿಸಬೇಕೆಂದು ಹೇಳಲಾಗಿದೆ.
೧. ಮೊದಲು ಎಲೆಗೆ ತುಪ್ಪವನ್ನು ಹಚ್ಚಬೇಕು.
೨. ಮಧ್ಯಭಾಗದಲ್ಲಿ ಅನ್ನವನ್ನು ಬಡಿಸಬೇಕು.
೩. ಬಲಗಡೆ ಖೀರು, ಕೆಸು ಮತ್ತು ಪಲ್ಯಗಳನ್ನು ಬಡಿಸಬೇಕು.
೪. ಎಡಗಡೆಗೆ ನಿಂಬೆಹಣ್ಣು, ಚಟ್ನಿ ಮತ್ತು ಕೋಸಂಬರಿಯನ್ನು ಬಡಿಸಬೇಕು.
೫. ಎದುರುಗಡೆಗೆ ಸಾಂಬಾರು, ಪಳದೆ (ಪಳಿದ್ಯ), ಹಪ್ಪಳ, ಸಂಡಿಗೆ, ಬಜ್ಜಿ, ಉದ್ದಿನವಡೆ, ಲಾಡು ಈ ಪದಾರ್ಥಗಳನ್ನು ಬಡಿಸಬೇಕು.
೬. ಕೊನೆಯಲ್ಲಿ ಅನ್ನಕ್ಕೆ ತುಪ್ಪ ಮತ್ತು ಬೇಳೆಯ ತೊವ್ವೆಯನ್ನು ಬಡಿಸಬೇಕು.
ಶಾಸ್ತ್ರ : ಪಿತೃಗಳ ತಟ್ಟೆಯಲ್ಲಿ ಯಾವಾಗಲೂ ಬಡಿಸುವ ಪದ್ಧತಿಯ ವಿರುದ್ಧ ಪದ್ಧತಿಯಲ್ಲಿ ಅನ್ನವನ್ನು ಬಡಿಸುವುದರಿಂದ ರಜ-ತಮಾತ್ಮಕ ಲಹರಿಗಳು ಉತ್ಪನ್ನವಾಗಿ ಲಿಂಗದೇಹಗಳಿಗೆ ಅನ್ನವನ್ನು ಸೇವಿಸಲು ಸುಲಭವಾಗುತ್ತದೆ. (ಶ್ರೀ. ನೀಲೇಶ ಚಿತಳೆಯವರಿಗೆ ದೊರೆತ ಈಶ್ವರೀ ಜ್ಞಾನ, ೫.೭.೨೦೦೬, ಸಂಜೆ ೭.೨೭) |
ಊ. ಊಟವನ್ನು ಬಡಿಸುವಾಗ ಒಬ್ಬರಿಗೆ ಕಡಿಮೆ ಇನ್ನೊಬ್ಬರಿಗೆ ಜಾಸ್ತಿ, ಒಬ್ಬರಿಗೆ ಒಳ್ಳೆಯ ಮತ್ತು ಇನ್ನೊಬ್ಬರಿಗೆ ನಿಕೃಷ್ಟ ಅನ್ನವನ್ನು ಎಂದಿಗೂ ಬಡಿಸಬಾರದು. ಅಂದರೆ ಎಂದಿಗೂ ಭೇದಭಾವ ಮಾಡಬಾರದು. ವಿಶೇಷವಾಗಿ ಶ್ರಾದ್ಧದ ದಿನವಂತೂ ಹೀಗೆ ಭೇದಭಾವ ಮಾಡಲೇಬಾರದು.
ಎ. ಶ್ರಾದ್ಧವಿಧಿಯು ಪೂರ್ಣವಾಗುವವರೆಗೆ ಚಿಕ್ಕಮಕ್ಕಳು, ಅತಿಥಿಗಳು ಹಾಗೂ ಇತರ ಯಾರಿಗೂ ಊಟವನ್ನು ಬಡಿಸಬಾರದು.
very good information 🙏