ಸದ್ಯ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ ಈ ತೊಂದರೆ ಹೆಚ್ಚಾಗುವುದರಿಂದ ಆ ಕಾಲಾವಧಿಯಲ್ಲಿ ಪ್ರತಿದಿನ ಮಾಡಬೇಕಾದ ಸುಧಾರಿತ ನಾಮಜಪ ‘ಓಂ ಓಂ ಶ್ರೀ ಗುರುದೇವ ದತ್ತ ಓಂ |‘ ಹೀಗಿದೆ.
ಈ ಸುಧಾರಿತ ನಾಮಜಪಕ್ಕಾಗಿ ಮುಂದಿನ ಲೇಖನ ಓದಿ – sanatan.org/kannada/265.html
ಈ ನಾಮಜಪವನ್ನು ಕೇಳಲು ಸನಾತನ ಚೈತನ್ಯವಾಣಿ ಆ್ಯಪ ಡೌನ್‌ಲೋಡ್ ಮಾಡಿ – Sanatan.org/Chaitanyavani
ಈ ನಾಮಜಪವನ್ನು ಕನಿಷ್ಠ ೧ ಗಂಟೆ ಮಾಡಬೇಕು. ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯನ್ನು ದೂರ ಮಾಡಲು ಆಧ್ಯಾತ್ಮಿಕ ಉಪಾಯವನ್ನು ಮಾಡುತ್ತಾರೆಯೋ, ಅವರು ತಮ್ಮ ಉಪಾಯಗಳ ನಾಮಜಪದ ಹೊರತಾಗಿ ದತ್ತನ ನಾಮಜಪವನ್ನು ಕನಿಷ್ಠ ೧ ಗಂಟೆ ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಗಳ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪುರಚಕ್ರದ ಸ್ಥಳದಲ್ಲಿ ನ್ಯಾಸ ಮಾಡಬೇಕು.
ಯಾವ ಸಾಧಕರು ಆಧ್ಯಾತ್ಮಿಕ ಉಪಾಯ ಮಾಡುವುದಿಲ್ಲವೋ, ಅವರು ವೈಯಕ್ತಿಕ ತಯಾರಿ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ಸಮಯದಲ್ಲಿ ದತ್ತನ ನಾಮಜಪವನ್ನು ಕನಿಷ್ಠ ೧ ಗಂಟೆಯಾಗುವಂತೆ ನೋಡಬೇಕು; ಆದರೆ ಪೂರ್ವಜರ ತೊಂದರೆಯ ಅರಿವಾದರೆ ಅವರು ಸಹ ಕುಳಿತು ಮತ್ತು ಮುದ್ರೆ ಮಾಡಿ ದತ್ತನ ನಾಮಜಪವನ್ನು ಮಾಡಬೇಕು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೯.೨೦೨೨)