ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ, ಅಂದರೆ ಆಂಗ್ಲ ‘U’ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ – ಶ್ರೀವಿಷ್ಣುವಿನ ಅವತಾರಗಳ ದೈವೀ ದೇಹದ ಮೇಲೆ ವಿವಿಧ ರೀತಿಯ ಶುಭಚಿಹ್ನೆಗಳು ಮೂಡುತ್ತವೆ. ಉದಾ. ಧರ್ಮಧ್ವಜ, ಸುದರ್ಶನಚಕ್ರ, ಶಂಖ, ಧನುಷ್ಯ, ಕಮಲ, ಗದೆ, ಇತ್ಯಾದಿಗಳು. ಶ್ರೀವಿಷ್ಣುವಿನ ಹಣೆಯ ಮೇಲಿನ ಆಂಗ್ಲ ಭಾಷೆಯ ‘U’ ಈ ಅಕ್ಷರದಂತೆ ಕಾಣಿಸುವ ಗಂಧದ ತಿಲಕದ ಆಕಾರವೂ ಶ್ರೀವಿಷ್ಣುವಿನದ್ದೇ ಒಂದು ‘ಶುಭಚಿಹ್ನೆ’ಯಾಗಿದೆ.
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯ ತ್ವಚೆಯ ಮೆಲೆ ಒಂದು ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತಾಗುವ ಹಿಂದಿನ ಅಧ್ಯಾತ್ಮಶಾಸ್ತ್ರ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ. ಆದುದರಿಂದ ಅವರಲ್ಲಿ ಶೇ. ೫ ರಷ್ಟು ವಿಷ್ಣುತತ್ತ್ವವು ಕಾರ್ಯನಿರತವಾಗಿದೆ. ಆದುದರಿಂದ ಅವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ತಿಲಕದಂತೆ, ಅಂದರೆ ಆಂಗ್ಲ ಭಾಷೆಯ ‘U’ ಈ ಅಕ್ಷರದಂತಹ ಚಿಹ್ನೆ ಮೂಡಿದೆ.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯ ಮೇಲಿನ ‘U’ ಆಕಾರದ ತಿಲಕದ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯ ಮೇಲಿನ ‘U’ ಆಕಾರವಾಗಿರುವ ತಿಲಕದ ಒಳಗಿನ ಟೊಳ್ಳಿನಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಆಕಾಶತತ್ತ್ವದ ಸ್ತರದಲ್ಲಿ ಕಾರ್ಯನಿರತವಾಗಿದೆ. ‘U’ ಆಕಾರವಾಗಿರುವ ತಿಲಕದ ಅಂಚಿನಿಂದ ಶ್ರೀವಿಷ್ಣುವಿನ ನಿರ್ಗುಣ-ಸಗುಣ ಸ್ತರದ ಚೈತನ್ಯವು ತೇಜತತ್ತ್ವದ ಸ್ತರದಲ್ಲಿ ಕಾರ್ಯನಿರತವಾಗಿದೆ.
೩. ಚಿಹ್ನೆಯಿಂದ ಆವಶ್ಯಕತೆಗನುಸಾರ ತಾರಕ, ತಾರಕ-ಮಾರಕ ಮತ್ತು ಮಾರಕ-ತಾರಕ ಶಕ್ತಿಗಳು ಪ್ರಕ್ಷೇಪಿಸುವುದು
ಈ ತಿಲಕದಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಆಕರ್ಷಿತವಾಗುತ್ತದೆ. ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸುಷುಮ್ನಾನಾಡಿಯು ಪ್ರಾರಂಭವಾದಾಗ ಅವರ ತಿಲಕದಲ್ಲಿನ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಮಧ್ಯಭಾಗದಲ್ಲಿ ಕಾರ್ಯನಿರತವಾಗಿರುತ್ತದೆ.
ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಶ್ರೀವಿಷ್ಣುವಿನ ನಿರ್ಗುಣ ತತ್ತ್ವವು ಅಪ್ರಕಟ ಆವಸ್ಥೆಯಲ್ಲಿರುತ್ತದೆಯೋ, ಆಗ ಅವರ ಹಣೆಯ ತಿಲಕವು ಮಧ್ಯ ಭಾಗದಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಸಂಗ್ರಹವಾಗುತ್ತದೆ. ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚಂದ್ರನಾಡಿ ಪ್ರಾರಂಭವಾಗುತ್ತದೆಯೋ, ಆಗ ಈ ತಿಲಕದ ಎಡಭಾಗದಲ್ಲಿನ ತುದಿಯಿಂದ ಶ್ರೀವಿಷ್ಣುವಿನ ತಾರಕ ಶಕ್ತಿ ಮತ್ತು ನಿರ್ಗುಣ-ಸಗುಣ ಸ್ತರದ ಚೈತನ್ಯವು ಪ್ರಕ್ಷೇಪಿಸುತ್ತದೆ. ಅದೇ ರೀತಿ ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂರ್ಯನಾಡಿ ಪ್ರಾರಂಭವಾಗುತ್ತದೆಯೋ, ಆಗ ಈ ತಿಲಕದ ಬಲಭಾಗದ ತುದಿಯಿಂದ ಶ್ರೀವಿಷ್ಣುವಿನ ಮಾರಕ ಶಕ್ತಿ ಮತ್ತು ಸಗುಣ-ನಿರ್ಗುಣದ ಸ್ತರದ ಚೈತನ್ಯವು ಪ್ರಕ್ಷೇಪಿತವಾಗುತ್ತದೆ.
೪. ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಂದ ಆವಶ್ಯಕತೆಯಂತೆ ಉತ್ಪತ್ತಿ, ಸ್ಥಿತಿ, ಲಯಕ್ಕೆ ಸಂಬಂಧಪಟ್ಟ ಕಾರ್ಯಗಳು ನಡೆಯುತ್ತಿರುವುದು
ಈ ರೀತಿ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಚೈತನ್ಯವು ಯಾವಾಗ ತಿಲಕದ ಎಡಗಡೆಗೆ ಕಾರ್ಯನಿರತವಾಗಿರುತ್ತದೆಯೋ, ಆಗ ಉತ್ಪತ್ತಿಗೆ ಸಂಬಂಧಪಟ್ಟ ಅವರ ದೈವೀ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಮಧ್ಯಭಾಗದಲ್ಲಿರುತ್ತದೆಯೋ, ಆಗ ಅದರ ಸ್ಥಿತಿಗೆ ಸಂಬಂಧಪಟ್ಟ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಬಲಗಡೆಗೆ ಇರುತ್ತದೆಯೋ, ಆಗ ಅದರ ಲಯದೊಂದಿಗೆ ಸಂಬಂಧಪಟ್ಟ ದೈವೀ ಕಾರ್ಯವು ನಡೆಯುತ್ತಿರುತ್ತದೆ.
೫. ಚಿಹ್ನೆಯ ಸೂಕ್ಷ್ಮದಲ್ಲಿ ಅರಿವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಸಂಬಂಧಪಟ್ಟ ಅಂಶಗಳು |
ತಿಲಕದ ಎಡಗಡೆಗೆ | ತಿಲಕದ ಮಧ್ಯಭಾಗದಲ್ಲಿ | ತಿಲಕದ ಬಲಗಡೆಗೆ |
---|---|---|---|
೧. ಕಾರ್ಯನಿರತವಾಗಿರುವ ಕುಂಡಲಿನಿನಾಡಿ | ಚಂದ್ರನಾಡಿ | ಸುಷುಮ್ನಾನಾಡಿ | ಸೂರ್ಯನಾಡಿ |
೨. ಕಾರ್ಯನಿರತ ಶಕ್ತಿಯ ವಿಧಗಳು, ಸ್ವರೂಪ ಮತ್ತು ಮಟ್ಟ | |||
೨ ಅ. ಕಾರ್ಯನಿರತ ಶಕ್ತಿಯ ವಿಧಗಳು | ಇಚ್ಛಾಶಕ್ತಿ | ಜ್ಞಾನಶಕ್ತಿ | ಕ್ರಿಯಾಶಕ್ತಿ |
೨ ಆ. ಕಾರ್ಯನಿರತ ಶಕ್ತಿಯ ಸ್ವರೂಪಗಳು | ತಾರಕ | ತಾರಕ-ಮಾರಕ | ಮಾರಕ-ತಾರಕ |
೨ ಇ. ಕಾರ್ಯನಿರತ ಶಕ್ತಿಯ ಮಟ್ಟ | ಸಗುಣ-ನಿರ್ಗುಣ | ನಿರ್ಗುಣ | ಸಗುಣ-ನಿರ್ಗುಣ |
೩. ಪೂರ್ಣಗೊಳ್ಳುವ ಅವತಾರಿ ಕಾರ್ಯದ ಸ್ವರೂಪ ಮತ್ತು ಉದಾಹರಣೆಗಳು | |||
೩ ಅ. ಅವತಾರಿ ಕಾರ್ಯಗಳ ಸ್ವರೂಪ | ಉತ್ಪತ್ತಿ | ಸ್ಥಿತಿ | ಲಯ |
೩ ಆ. ಅವತಾರಿ ಕಾರ್ಯದ ಉದಾಹರಣೆಗಳು | ಹಿಂದೂ ರಾಷ್ಟ್ರದ ನವನಿರ್ಮಿತಿ ಮಾಡುವುದು | ಧರ್ಮ, ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಿವಿಧ ರೀತಿಯ ಗ್ರಂಥಗಳ ಸಂಕಲನ ಮಾಡುವುದು | ಕೆಟ್ಟಶಕ್ತಿಗಳೊಂದಿಗೆ ಸೂಕ್ಷ್ಮದಿಂದ ಹೋರಾಡಿ ಅವುಗಳನ್ನು ನಾಶ ಮಾಡುವುದು |
೪. ಪ್ರಕ್ಷೇಪಿಸುವ ಸೂಕ್ಷ್ಮ ಲಹರಿಗಳು | |||
೪ ಅ. ಲಹರಿಗಳ ವಿಧಗಳು | ನೀರಿನ ಅಲೆಗಳಂತೆ | ಸಮುದ್ರದ ಅಲೆಗಳಂತೆ | ಜ್ವಾಲೆಯಂತೆ |
೪ ಆ. ಲಹರಿಗಳ ಸೂಕ್ಷ್ಮ ಬಣ್ಣ | ಹಳದಿ ಕೇಸರಿ | ನೀಲಿ | ಅರೆಕೆಂಪು ಕೇಸರಿ |
೪ ಇ. ಲಹರಿಗಳ ಸೂಕ್ಷ್ಮ ಸರ್ಶ | ಸ್ವಲ್ಪ ಉಷ್ಣ | ಹೆಚ್ಚು ತಂಪು | ಸ್ವಲ್ಪ ತಂಪು |
೫. ಸಾಧಕರಿಗೆ ತಿಲಕದ ಆಕಾರವನ್ನು ನೋಡಿ ಬರುವ ಅನುಭೂತಿಗಳು | ತಾರಕ ಶಕ್ತಿ ಮತ್ತು ಶರಣಾಗತಭಾವ | ನಿರ್ಗುಣ ಶಕ್ತಿ, ನಿರ್ಗುಣ ಚೈತನ್ಯ, ಆನಂದ ಮತ್ತು ಶಾಂತಿ | ಮಾರಕ ಶಕ್ತಿ ಮತ್ತು ಕ್ಷಾತ್ರಭಾವ |
೬. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ ಚಿಹ್ನೆ ಇರುವುದರಿಂದ ಸೂಕ್ಷ್ಮ ಸ್ತರದಲ್ಲಾಗುವ ಅವತಾರಿ ಕಾರ್ಯ
೬ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಂದ ಪ್ರಕ್ಷೇಪಿತವಾದ ಶ್ರೀವಿಷ್ಣುವಿನ ಇಚ್ಛಾಶಕ್ತಿಯಿಂದ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠರ ಮತ್ತು ಸಾಧಕರಲ್ಲಿನ ಕ್ಷಾತ್ರತೇಜ ಹಾಗೂ ಕ್ಷಾತ್ರಭಾವವು ಜಾಗೃತವಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವ ಡಾ. ಆಠವಲೆ ಇವರಿಂದ ಪ್ರಕ್ಷೇಪಿತವಾದ ಇಚ್ಛಾಶಕ್ತಿಯಿಂದ ಪೃಥ್ವಿಯ ಮೇಲಿನ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠ ಮತ್ತು ಸಾಧಕರಲ್ಲಿ ಕ್ಷಾತ್ರತೇಜ ಜಾಗೃತವಾಗುತ್ತಿದೆ. ಆದುದರಿಂದ ಅವರು ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ಅದರ ನಿರ್ಮೂಲನೆ ಪ್ರಕ್ರಿಯೆಯು ಮನಃ ಪೂರ್ವಕವಾಗಿ ಮತ್ತು ಕ್ಷಾತ್ರಭಾವದಿಂದ ನಡೆಸಿ ಅವುಗಳೊಂದಿಗೆ ಸೂಕ್ಷ್ಮದಿಂದ ಹೋರಾಡುತ್ತಿದ್ದಾರೆ. ಅದೇ ರೀತಿ ಯಾವಾಗ ಅವರಿಗೆ ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತದೆಯೋ, ಆಗ ಅವರು ವಿವಿಧ ರೀತಿಯ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಕ್ಷಾತ್ರಭಾವದಿಂದ ಹೋರಾಡಿ ಈ ತೊಂದರೆಗಳನ್ನು ಪರಿಹರಿಸಿ ಧರ್ಮಾಚರಣೆ ಮತ್ತು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಪೃಥ್ವಿಯ ಮೇಲೆ ವಿವಿಧ ದೇಶಗಳಲ್ಲಿರುವ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠ ಮತ್ತು ಸಾಧಕರಿಗೆ ಅವರ ಕುಟುಂಬದವರು ಅಥವಾ ಸಂಬಂಧಿಕರು ಅಥವಾ ಸಮಾಜದಲ್ಲಿನ ದುಷ್ಟ ಪ್ರವೃತ್ತಿಯ ಜನರಿಂದ ಧರ್ಮಾಚರಣೆ ಹಾಗೂ ಸಮಷ್ಟಿ ಸಾಧನೆಯನ್ನು ಮಾಡಲು ಸ್ಥೂಲದಿಂದ ತೀವ್ರ ವಿರೋಧವಾಗುತ್ತಿದೆ.
ಅವರ ಮೇಲಿರುವ ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೃಪೆಯಿಂದ ಅವರು ಧರ್ಮಾಚರಣೆ ಮತ್ತು ವ್ಯಷ್ಟಿ ಹಾಗೂ ಸಮಷ್ಟಿ ಸ್ತರಗಳ ಸಾಧನೆಯ ಪ್ರಯತ್ನಗಳನ್ನು ಮನಃಪೂರ್ವಕವಾಗಿ, ಜಿಗುಟುತನದಿಂದ ಮತ್ತು ತಳಮಳದಿಂದ ಮಾಡುತ್ತಿದ್ದಾರೆ.
೬ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಪ್ರಕ್ಷೇಪಿತವಾದ ಶ್ರೀವಿಷ್ಣುವಿನ ಕ್ರಿಯಾಶಕ್ತಿಯಿಂದ ಪೃಥ್ವಿಯ ಮೇಲೆ ಸೂಕ್ಷ್ಮ ಮತ್ತು ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ದೈವೀಬಲ, ಯೋಗಬಲ, ತಪೋಬಲ ಮತ್ತು ಜ್ಞಾನಬಲ ರೂಪಿ ಆಧ್ಯಾತ್ಮಿಕ ಬಲ ಸಿಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಕ್ರಿಯಾಶಕ್ತಿ ಪ್ರಕ್ಷೇಪಿತವಾಗಿರುವುದರಿಂದ ವಿವಿಧ ವಿಷಯಗಳಲ್ಲಿ ಪಾರಂಗತ ಅಥವಾ ತಜ್ಞರಾಗಿರುವ ವ್ಯಕ್ತಿಗಳು ಹಾಗೂ ಕಲಾವಿದರು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬರುತ್ತಿದ್ದಾರೆ. ಆದುದರಿಂದ ಹಿಂದೂ ರಾಷ್ಟ್ರಕ್ಕಾಗಿ ಉಪಯುಕ್ತವಾಗಿರುವ ವಿವಿಧ ವಿಷಯ, ಕಲೆ, ವಿದ್ಯೆ ಇತ್ಯಾದಿಗಳ ಜ್ಞಾನ ಸಿಗುತ್ತಿದೆ. ಹಾಗೆಯೇ ವಿವಿಧ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡಿರುವ ಮತ್ತು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿರುವ ವಿವಿಧ ಸಂತರು ಹಾಗೂ ಸಿದ್ಧಪುರುಷರು ಸಹ ಸನಾತನ ಸಂಸ್ಥೆ ಮತ್ತು ಅದರೊಂದಿಗೆ ಸಂಬಂಧಿಸಿದ ಸಂಸ್ಥೆಗಳ ಸಂಪರ್ಕಕ್ಕೆ ಬರುತ್ತಿದ್ದಾರೆ. ಅವರಿಂದ ಪೃಥ್ವಿಯ ಮೇಲೆ ಸೂಕ್ಷ್ಮ ಮತ್ತು ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಆವಶ್ಯಕವಾಗಿರುವ ದೈವೀಬಲ, ಯೋಗ ಬಲ, ತಪೋಬಲ, ಜ್ಞಾನಬಲ ರೂಪಿ ಆಧ್ಯಾತ್ಮಿಕ ಬಲ ಸಿಗುತ್ತಿದೆ.
೬ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಜ್ಞಾಚಕ್ರದಿಂದ ಶ್ರೀವಿಷ್ಣುವಿನ ಜ್ಞಾನಶಕ್ತಿ ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತದೆ. ಪೃಥ್ವಿಯ ಮೇಲಿನ ‘ಹಿಂದೂ ರಾಷ್ಟ್ರದ ಸ್ಥಾಪನೆ’ಯು ಜ್ಞಾನಶಕ್ತಿಯ ಬಲದಿಂದ ಆಗಲಿರುವುದರಿಂದ ಕಾಲಕ್ಕನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಹೆಚ್ಚು ಪ್ರಮಾಣದಲ್ಲಿ ಜ್ಞಾನಶಕ್ತಿಯುಕ್ತ ಧರ್ಮಶಕ್ತಿಯು ಪ್ರಕ್ಷೇಪಿತವಾಗುತ್ತಿದೆ. ಆದುದರಿಂದ ಇಡೀ ಪೃಥ್ವಿಯ ಮೇಲೆ ಕಾಲಾನುಸಾರ ಹಿಂದೂ ಧರ್ಮ ಮತ್ತು ಅಧ್ಯಾತ್ಮ ಇವುಗಳ ಪ್ರಸಾರವು ವಿಹಂಗಮ ಗತಿಯಿಂದ ನಡೆಯುತ್ತಿದೆ. ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಪ್ರಕ್ಷೇಪಿತವಾದ ಜ್ಞಾನಶಕ್ತಿಯಿಂದ ಪ್ರಸ್ತುತ ನಡೆಯುತ್ತಿರುವ ತೊಂದರೆದಾಯಕ ಕಾಲಚಕ್ರವು ಕೊನೆಗೊಂಡು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗಿರುವ ಕಾಲಚಕ್ರವು ಪ್ರಾರಂಭವಾಗಲಿದೆ. ಈ ರೀತಿ ಹಿಂದೂ ರಾಷ್ಟ್ರಕ್ಕಾಗಿ ಯಾವಾಗ ಕಾಲವು ಸೂಕ್ಷ್ಮ ಸ್ತರದಲ್ಲಿ ಅನುಕೂಲಕರವಾಗುವುದೋ, ಆಗ ಸ್ಥಳದ ಮಟ್ಟದಲ್ಲಿ ಎಂದರೆ ಸ್ಥೂಲದಿಂದ ಇಡೀ ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ.
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೨.೨೦೨೨)