ಒಮ್ಮೆ ಬೆಳಗ್ಗೆ ನಾನು ಸೂಕ್ಷ್ಮದಿಂದ (ಮನಸ್ಸಿನಲ್ಲೇ) ಪರಾತ್ಪರ ಗುರು ಡಾ. ಆಠವಲೆ ಇವರಿಗೆ, ‘ಜವಾಬ್ದಾರಿ ವಹಿಸಿಕೊಳ್ಳುವುದು’ ಎಂದರೆ ಏನು ?’ ಎಂದು ಕೇಳಿದೆ. ಆಗ ಪರಾತ್ಪರ ಗುರುದೇವರು ನನಗೆ ಸೂಕ್ಷ್ಮದಿಂದ ಮುಂದಿನ ಅರ್ಥವನ್ನು ಹೇಳಿದರು.
‘ಜವಾಬ್ದಾರಿ ವಹಿಸಿಕೊಳ್ಳುವುದೆಂದರೆ’ ‘ನಾನು ಗುರುಸೇವಕರ (ಸಾಧಕರ) ಸೇವಕನಾಗಿದ್ದೇನೆ’ ಎಂಬ ಭಾವದಿಂದ ಸೇವೆಯನ್ನು ಮಾಡುವುದು.
‘ಜವಾಬ್ದಾರಿ ವಹಿಸಿಕೊಳ್ಳುವುದೆಂದರೆ’ ‘ನಾನು ಸೇವೆ ಮತ್ತು ಆಯೋಜನೆ ಮಾಡುತ್ತೇನೆ’, ಎಂಬ ವಿಚಾರವನ್ನು ಮಾಡದೇ ಈಶ್ವರನ ಆಯೋಜನೆಯಂತೆ ಸೇವೆ ಮಾಡುವ ಪ್ರತಿಯೊಬ್ಬ ಸಾಧಕನ ಬಗ್ಗೆ ಕೃತಜ್ಞತೆ ಎನಿಸುವುದು.
‘ಜವಾಬ್ದಾರಿ ವಹಿಸಿಕೊಳ್ಳುವುದೆಂದರೆ’ ಸೇವೆಯನ್ನು ಮಾಡುವಾಗ ಈಶ್ವರನ ಚರಣಗಳಲ್ಲಿ ಶರಣಾಗತರಾಗುವುದು, ಆ ಸೇವೆಯಲ್ಲಿರುವ ಎಲ್ಲ ಸಾಧಕರ ಸೇವೆಯಿಂದ ಸಾಧನೆಯಾಗಲು ಪ್ರಾರ್ಥನೆ ಮಾಡುವುದು ಮತ್ತು ಎಲ್ಲ ಸಾಧಕರ ಮನಸ್ಸನ್ನು ಅರಿತು ಸಾಧನೆಯಾಗಲು ತಳಮಳದಿಂದ ಪ್ರಾರ್ಥಿಸುವುದು.
‘ಜವಾಬ್ದಾರಿ ವಹಿಸಿಕೊಳ್ಳುವುದೆಂದರೆ’ ನಮ್ಮ ಸಹಸಾಧಕರಿಂದಾಗುವ ತಪ್ಪುಗಳು ತನ್ನ ತಪ್ಪುಗಳೆಂದು ಎನಿಸುವುದು ಮತ್ತು ‘ಒಳ್ಳೆಯ ಸೇವೆಗಳ ಸಂಪೂರ್ಣ ಶ್ರೇಯಸ್ಸು ಈಶ್ವರನದ್ದು ಮತ್ತು ಸಹಸಾಧಕರದ್ದಾಗಿದೆ’, ಎಂದು ಎನಿಸುವುದು.
‘ಜವಾಬ್ದಾರಿ ವಹಿಸಿಕೊಳ್ಳುವುದೆಂದರೆ’ ‘ನಾನು ಸೇವೆಯಲ್ಲಿ ಸಾಧಕರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇನೆ’, ಎಂದು ತಿಳಿಯದೇ ಸೇವೆಯಲ್ಲಿನ ಸಹಸಾಧಕರಿಂದಾಗಿ ನನ್ನಿಂದ ಸೇವೆಯಾಗುತ್ತದೆ, ಅದಕ್ಕಾಗಿ ಕೃತಜ್ಞತೆಯಿಂದಿರುವುದು’.
ಶ್ರೀಮನ್ನಾರಾಯಣನ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳು
– ಅಶ್ವಿನಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ.