ಮಾನಸ ದೃಷ್ಟಿಯನ್ನು ನಿವಾಳಿಸುವುದು
ಕಳೆದ ಲೇಖನದಲ್ಲಿ ನಾವು ದೃಷ್ಟಿ ಏಕೆ ತಗಲುತ್ತದೆ, ದೃಷ್ಟಿ ತಗಲುವುದರ ಲಕ್ಷಣಗಳ್ಯಾವವು ? ಹಾಗೆಯೇ ಉಪ್ಪು-ಸಾಸಿವೆ-ಮೆಣಸಿನಕಾಯಿ, ನಿಂಬೆಹಣ್ಣು, ಕರ್ಪುರ, ಹಾಗೆಯೇ ತೆಂಗಿನಕಾಯಿ ಈ ಘಟಕಗಳಿಂದ ಪ್ರತ್ಯಕ್ಷ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಂಡಿದ್ದೇವೆ. ನಮಗಾಗುವ ಆಧ್ಯಾತ್ಮಿಕ ತೊಂದರೆಯು ದೃಷ್ಟಿ ತೆಗೆದ ನಂತರ ಕಡಿಮೆಯಾಗುತ್ತದೆ; ಆದರೆ ತೊಂದರೆಯ ಪ್ರಮಾಣ ಹೆಚ್ಚಾಗಿದ್ದರೆ, ಅದು ಪುನಃ ಉದ್ಭವಿಸಬಹುದು. ಎಲ್ಲಕ್ಕಿಂತ ಮಹತ್ವದ್ದೆಂದರೆ ಕಾಲದ ಪ್ರಭಾವದಿಂದ ಸದ್ಯದ ಕಲಿಯುಗದಲ್ಲಿನ ಸಂಪೂರ್ಣ ವಾಯುಮಂಡಲವೇ ತಮೋಗುಣದಿಂದ ಪೀಡಿತವಾಗಿದೆ. ಆದುದರಿಂದ ಪ್ರತಿಯೊಂದು ಜೀವಕ್ಕೆ ಯಾವುದಾದರೊಂದು ದೃಷ್ಟಿ ತಗಲುತ್ತಲೇ ಇರುತ್ತದೆ. ನಮಗೆ ದೃಷ್ಟಿ ತಗಲಿದ್ದರೆ, ಅದರಿಂದ ನಮ್ಮ ಮೇಲೆ ನಕಾರಾತ್ಮಕ ಆವರಣವು ಬರುತ್ತದೆ ಮತ್ತು ಅದನ್ನು ತೆಗೆದುಹಾಕಲು ನಾವು ಮಾಡುತ್ತಿರುವ ನಾಮಜಪಾದಿ ಸಾಧನೆಯು ಖರ್ಚಾಗುತ್ತದೆ. ಹಾಗಾಗಬಾರದೆಂದು ದೃಷ್ಟಿಯನ್ನು ತೆಗೆಯುವುದು ಆವಶ್ಯಕವಾಗಿದೆ; ಆದರೆ ದೃಷ್ಟಿಯನ್ನು ಪುನಃಪುನಃ ತೆಗೆಯಲು ಸಹ ಮಿತಿಯಿದೆ. ದೃಷ್ಟಿಯನ್ನು ತೆಗೆಯಲು ಬೇಕಾಗುವ ಘಟಕಗಳು, ದೃಷ್ಟಿಯನ್ನು ತೆಗೆಯುವ ವ್ಯಕ್ತಿ, ಅದಕ್ಕಾಗಿ ಇರುವ ಅನುಕೂಲ ಪರಿಸ್ಥಿತಿ, ಇವೆಲ್ಲವೂ ಪ್ರತಿಬಾರಿ ನಮಗೆ ಲಭ್ಯವಾಗುತ್ತವೆ ಎಂದೇನಿಲ್ಲ. ಇಂತಹ ಸಮಯದಲ್ಲಿ ನಾವು ಮಾನಸದೃಷ್ಟಿಯನ್ನು ತೆಗೆಯಬಹುದು. ಮಾನಸ ದೃಷ್ಟಿ ಎಂದರೆ ಮಾನಸ ರೀತಿಯಲ್ಲಿ ಸ್ವಂತ ದೃಷ್ಟಿಯನ್ನು ನಿವಾಳಿಸುವುದು. ಇಂದಿನ ಸತ್ಸಂಗದಲ್ಲಿ ನಾವು ಮಾನಸ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಳ್ಳುವವರಿದ್ದೇವೆ.
ಅ. ಸ್ಥೂಲಕ್ಕಿಂತ ಸೂಕ್ಷ್ಮವು ಶ್ರೇಷ್ಠ
ನಾವು ಗುರುಕೃಪಾಯೋಗಾಂತರ್ಗತ ಸಾಧನೆಯ ಮೂಲಭೂತ ತತ್ತ್ವಗಳನ್ನು ತಿಳಿದುಕೊಳ್ಳುವಾಗ ‘ಸ್ಥೂಲಕ್ಕಿಂತ ಸೂಕ್ಷ್ಮವು ಶ್ರೇಷ್ಠ’ ಎಂಬ ತತ್ತ್ವವನ್ನು ತಿಳಿದುಕೊಂಡಿದ್ದೆವು. ಸ್ಥೂಲದ ವಿಷಯಗಳಿಗಿಂತ ಸೂಕ್ಷ್ಮದಲ್ಲಿನ ವಿಷಯಗಳು ಹೆಚ್ಚು ಸಾಮರ್ಥ್ಯಶಾಲಿಯಾಗಿರುತ್ತವೆ. ಮಾನಸ ರೀತಿಯಲ್ಲಿ ಯಾವುದೇ ಉಪಾಯವನ್ನು ಮಾಡುವಾಗ ಕರ್ಮಕಾಂಡದ ಯಾವುದೇ ಬಂಧನ ಅಥವಾ ಮಿತಿ ಇರುವುದಿಲ್ಲ, ಹಾಗೆಯೇ ಈ ಉಪಾಯಯೋಜನೆಯು ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾಗಿಯೂ ಇರುತ್ತದೆ.
ಆ. ‘ಮಾನಸ ದೃಷ್ಟಿಯನ್ನು ತೆಗೆಯುವಾಗ ಪ್ರತ್ಯಕ್ಷ ಹನುಮಂತನು ದೃಷ್ಟಿಯನ್ನು ತೆಗೆಯುತ್ತಿದ್ದಾರೆ’, ಎಂಬ ಭಾವವನ್ನಿಡುವ ಮಹತ್ವ
ಮಾನಸ ದೃಷ್ಟಿಯನ್ನು ತೆಗೆಯುತ್ತಿರುವಾಗ ಪ್ರತ್ಯಕ್ಷ ಹನುಮಂತನೇ ನಮ್ಮ ದೃಷ್ಟಿಯನ್ನು ತೆಗೆಯುತ್ತಿದ್ದಾನೆ, ಎಂದು ಭಾವವಿಟ್ಟುಕೊಳ್ಳಬಹುದು. ಇತರ ದೇವತೆಗಳಿಗಿಂತ ಹನುಮಂತನಿಗೆಯೇ ಏಕೆ ಪ್ರಾರ್ಥನೆಯನ್ನು ಮಾಡಬೇಕು ಎಂಬುದರ ಹಿಂದೆಯೂ ಶಾಸ್ತ್ರವಿದೆ. ಎಲ್ಲ ದೇವತೆಗಳಲ್ಲಿ ಕೇವಲ ಹನುಮಂತನಿಗೆ ಕೆಟ್ಟ ಶಕ್ತಿಗಳು ತೊಂದರೆ ಕೊಡುವುದಿಲ್ಲ. ಹನುಮಂತನಿಗೆ ‘ಭೂತಗಳ ಸ್ವಾಮಿ’ ಎಂದು ಹೇಳಲಾಗಿದೆ. ಇತರ ದೇವತೆಗಳ ಹನುಮಂತನಲ್ಲಿ ತುಲನೆಯಲ್ಲಿ ಶೇ. ೭೦ ರಷ್ಟು ಪ್ರಕಟ ಶಕ್ತಿ ಇದೆ. ಆದುದರಿಂದ ಯಾರಿಗಾದರೂ ಕೆಟ್ಟ ಶಕ್ತಿಗಳ ತೊಂದರೆ ಇದ್ದರೆ ಆ ವ್ಯಕ್ತಿಯನ್ನು ತೆಂಗಿನಕಾಯಿಯಿಂದ ನಿವಾಳಿಸಿ ಅದನ್ನು ಹನುಮಂತನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಒಡೆಯುತ್ತಾರೆ. ಹನುಮಂತನ ಸಾಮರ್ಥ್ಯದಿಂದ ಆ ವ್ಯಕ್ತಿಯ ತೊಂದರೆಯು ದೂರವಾಗುತ್ತದೆ. ಇದೇ ಪ್ರಕ್ರಿಯೆಯನ್ನು ಮಾನಸ ದೃಷ್ಟಿ ನಿವಾಳಿಸುವಾಗ ನಮಗೆ ಭಾವವಿಟ್ಟು ಮಾಡಬೇಕಾಗಿದೆ. ಮಾನಸ ದೃಷ್ಟಿಯನ್ನು ಹೇಗೆ ನಿವಾಳಿಸುವುದು ಎಂಬ ಕೃತಿಯನ್ನು ಓದುವುದಕ್ಕಿಂತ ನಾವು ಪ್ರತ್ಯಕ್ಷದಲ್ಲಿ ನಮ್ಮ ಮಾನಸ ದೃಷ್ಟಿಯನ್ನು ತೆಗೆಯೋಣ. ಮಾನಸ ರೀತಿಯಲ್ಲಿ ದೃಷ್ಟಿಯನ್ನು ನಿವಾಳಿಸುವಾಗ ನಮಗೇನು ಅನಿಸುತ್ತದೆ, ಎಂಬ ಕಡೆಗೂ ಗಮನವಿಡೋಣ.
ಇ. ಮಾನಸ ದೃಷ್ಟಿಯನ್ನು ನಿವಾಳಿಸುವ ಪ್ರತ್ಯಕ್ಷ ಕೃತಿ
ಪ್ರಾರಂಭದಲ್ಲಿ ನಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳೋಣ. ಪ್ರತ್ಯಕ್ಷ ಹನುಮಂತ ದೇವರೇ ಈಗ ನಮ್ಮ ದೃಷ್ಟಿಯನ್ನು ನಿವಾಳಿಸುವವರಿದ್ದಾರೆ, ಎಂಬ ಭಾವವಿಡೋಣ. ನಾವು ಅನನ್ಯ ಶರಣಾಗತಭಾವದಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ, ‘ಹೇ ಹನುಮಂತ, ಹೇ ಭಗವಂತಾ ನೀನೇ ನನ್ನ ದೃಷ್ಟಿಯನ್ನು ನಿವಾಳಿಸಿ. ಹೇ ಆಂಜನೇಯ ನಕಾರಾತ್ಮಕ ತೊಂದರೆಯನ್ನು ದೂರ ಮಾಡಲು ನಾನು ಅಸಮರ್ಥನಾಗಿದ್ದೇನೆ; ಆದರೆ ನಿನ್ನ ಕೃಪೆ ಇದ್ದರೆ, ಈ ತೊಂದರೆಯು ಕ್ಷಣಾರ್ಧದಲ್ಲಿ ದೂರವಾಗಬಹುದು. ಹೇ ಮಾರುತಿ, ನೀನೇ ಈ ಅಜ್ಞಾನಿ ಜೀವದ ಮೇಲೆ ಕೃಪೆದೋರಬೇಕು. ನನ್ನ ದೃಷ್ಟಿಯನ್ನು ತೆಗೆದು ನನ್ನ ಎಲ್ಲ ತೊಂದರೆಗಳನ್ನು ನಾಶ ಮಾಡು’. ನಾವು ಪ್ರಾರ್ಥನೆ ಮಾಡಿದ ತಕ್ಷಣವೇ ಶ್ರೀ ಮಾರುತಿಯು ನಮ್ಮೆದುರು ಪ್ರತ್ಯಕ್ಷನಾದ.
ಮಾರುತಿಯು ನಮ್ಮ ದೃಷ್ಟಿಯನ್ನು ನಿವಾಳಿಸಲು ತೆಂಗಿನಕಾಯಿಯನ್ನು ಕೈಯಲ್ಲಿ ತೆಗೆದುಕೊಂಡಿದ್ದಾನೆ. ತೆಂಗಿನಕಾಯಿಯ ಜುಟ್ಟು ನನ್ನ ಕಡೆಗಿದೆ. ಈಗ ಪ್ರತ್ಯಕ್ಷ ಶ್ರೀ ಹನುಮಂತನೇ ನನ್ನ ದೃಷ್ಟಿಯನ್ನು ತೆಗೆಯಲಿದ್ದಾನೆ. ನಾನು ಸಂಪೂರ್ಣ ಶರಣಾಗತಭಾವದಿಂದ ಮಾರುತಿಯ ಚರಣಗಳ ಮೇಲೆ ತಲೆಯಿಟ್ಟು ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ, ‘ಹೇ ಹನುಮಂತಾ, ಮಾರುತಿರಾಯಾ, ನನ್ನ ಸ್ಥೂಲ ಮತ್ತು ಸೂಕ್ಷ್ಮ ದೇಹಗಳಲ್ಲಿನ ತೊಂದರೆದಾಯಕ ಶಕ್ತಿ, ಶರೀರದಲ್ಲಿ ನಿರ್ಮಾಣವಾದ ಕೆಟ್ಟ ಶಕ್ತಿಗಳ ಸ್ಥಾನಗಳು, ಯಂತ್ರಗಳು ಇವೆಲ್ಲವೂ ಈ ತೆಂಗಿನಕಾಯಿಯಲ್ಲಿ ಸಂಪೂರ್ಣವಾಗಿ ಸೆಳೆಯಲ್ಪಟ್ಟು ಅವು ಸ್ಥಾನಸಹಿತ ನಾಶವಾಗಲಿ.’ ಮಾರುತಿರಾಯನ ಕೃಪಾಕಟಾಕ್ಷವು ನನ್ನ ಮೇಲೆ ಬಿದ್ದ ಕ್ಷಣ ನಮಗಾಗುವ ತೊಂದರೆಯು ನಾಶವಾಗತೊಡಗಿದೆ. ದೃಷ್ಟಿಯನ್ನು ತೆಗೆಯಲು ಮಾರುತಿರಾಯನು ನನ್ನ ಕಾಲುಗಳಿಂದ ತಲೆಯವರೆಗೆ ಮತ್ತು ತಲೆಯಿಂದ ಕಾಲುಗಳವರೆಗೆ ಹೀಗೆ ದೀರ್ಘವೃತ್ತ ಆಕಾರದಲ್ಲಿ ೩ ಬಾರಿ ತೆಂಗಿನಕಾಯಿಯನ್ನು ತಿರುಗಿಸಲಿದ್ದಾನೆ. ಮಾರುತಿಯು ‘ಜಯ ಶ್ರೀರಾಮ’, ಎಂದು ಹೇಳುತ್ತಾ ಕೈಯಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಳ್ಳುತ್ತಿದ್ದಾನೆ. ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ನನ್ನ ಕಾಲುಗಳಿಂದ ಹಿಡಿದು ತಲೆಯವರೆಗೆ ಮತ್ತು ತಲೆಯಿಂದ ಹಿಡಿದು ಕಾಲುಗಳವರೆಗೆ ನಿಧಾನವಾಗಿ ತೆಂಗಿನಕಾಯಿಯನ್ನು ತಿರುಗಿಸುತ್ತಿದ್ದಾನೆ. ಆ ಸಮಯದಲ್ಲಿ ನನ್ನ ಸ್ಥೂಲ ಮತ್ತು ಸೂಕ್ಷ್ಮ ದೇಹದಲ್ಲಿನ ತೊಂದರೆದಾಯಕ ಶಕ್ತಿಯು ತೆಂಗಿನಕಾಯಿಯಲ್ಲಿ ಅತ್ಯಂತ ವೇಗದಿಂದ ಸೆಳೆಯಲ್ಪಡುತ್ತಿದೆ. ಶ್ರೀ ಮಾರುತಿಯು ಮೊದಲನೇ ಬಾರಿ ತೆಂಗಿನಕಾಯಿಯನ್ನು ತಿರುಗಿಸಿದಾಗ ನನ್ನ ಅಕ್ಕಪಕ್ಕದಲ್ಲಿರುವ ಕಪ್ಪು ಆವರಣವು ವೇಗದಿಂದ ತೆಂಗಿನಕಾಯಿಯಲ್ಲಿ ಸೆಳೆಯಲ್ಪಡುತ್ತಿದೆ. ಶ್ರೀ ಮಾರುತಿಯು ಎರಡನೇ ಬಾರಿಗೆ ತೆಂಗಿನಕಾಯಿಯನ್ನು ತಿರುಗಿಸುತ್ತಿರುವಾಗ ನನ್ನ ಶರೀರದಲ್ಲಿ, ಅವಯವಗಳಲ್ಲಿ, ಕೋಶಕೋಶಗಳಲ್ಲಿ ಉಳಿದಿರುವ ಕೆಲವು ಕೆಟ್ಟ ಶಕ್ತಿಗಳಿವೆಯೋ, ಅವು ಅತ್ಯಂತ ವೇಗದಿಂದ ತೆಂಗಿನಕಾಯಿಯಲ್ಲಿ ಸೆಳೆಯಲ್ಪಡುತ್ತಿವೆ. ಶ್ರೀ ಮಾರುತಿಯು ಈಗ ಮೂರನೇ ಬಾರಿ ದೀರ್ಘವೃತ್ತದಲ್ಲಿ ತೆಂಗಿನಕಾಯಿಯನ್ನು ತಿರುಗಿಸುತ್ತಿದ್ದಾನೆ. ಆಗ ನನ್ನ ಮನಸ್ಸಿನಲ್ಲಿ, ಬುದ್ಧಿಯಲ್ಲಿರುವ ತೊಂದರೆದಾಯಕ ಶಕ್ತಿಯು ತೆಂಗಿನಕಾಯಿಯ ಜುಟ್ಟಿನಿಂದ ತೆಂಗಿನಕಾಯಿಯಲ್ಲಿ ಹೋಗುತ್ತಿದೆ. ನನ್ನ ತೊಂದರೆಯು ಕಡಿಮೆಯಾಗಿ ನನ್ನ ಶರೀರವು ಹಗುರವಾಗುತ್ತಿದೆ.
ಈಗ ಮಾರುತಿಯು ನನ್ನ ಸುತ್ತಲೂ ೩ ಬಾರಿ ಗೋಲಾಕಾರವಾಗಿ ತಿರುಗಲಿದ್ದು ಅವನ ಕೈಯಲ್ಲಿನ ತೆಂಗಿನಕಾಯಿಯ ಜುಟ್ಟು ನನ್ನ ಕಡೆಗಿದೆ. ನಾನು ಮನಸ್ಸಿನಲ್ಲಿ ‘ಶ್ರೀ ವಿಷ್ಣವೇ ನಮಃ’ ಎಂದು ನಾಮಜಪ ಮಾಡುತ್ತಿದ್ದೇನೆ. ‘ಹೇ ಹನುಮಂತಾ ನನ್ನ ಸ್ಥೂಲ ಮತ್ತು ಸೂಕ್ಷ್ಮ ದೇಹದಲ್ಲಿ ಉಳಿದ ತೊಂದರೆದಾಯಕ ಶಕ್ತಿಯು ನಾಶವಾಗಲಿ ಮತ್ತು ನನ್ನ ತೊಂದರೆ ದೂರವಾಗಿ ನನಗೆ ಗುರುಸೇವೆಯನ್ನು ಮಾಡಲು ಶಕ್ತಿ ಸಿಗಲಿ’, ಎಂದು ನಾನು ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ. ಈಗ ಮಾರುತಿಯು ನನ್ನ ಸುತ್ತಲೂ ಬಲಬದಿಯಿಂದ ಎಡಬದಿಗೆ, ಅಂದರೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಗೋಲಾಕಾರವಾಗಿ ಸುತ್ತುವುದನ್ನು ಆರಂಭಿಸಿದ್ದಾನೆ. ನಿಧಾನವಾಗಿ ನಡೆಯುತ್ತಾ ನನ್ನ ಹಿಂಭಾಗಕ್ಕೆ ಹೋಗಿ ಮುಂದಿನ ಬದಿಗೆ ಬಂದಿದ್ದಾನೆ. ಈ ರೀತಿ ಒಂದು ಸುತ್ತು ಪೂರ್ಣಗೊಂಡಿದೆ. ಮಾರುತಿಯು ಸುತ್ತು ಹಾಕುವಾಗ, ನನ್ನ ಸಂಪೂರ್ಣ ಶರೀರದಲ್ಲಿ ಮುಂದೆ ಮತ್ತು ಹಿಂಬದಿಯಲ್ಲಿರುವ ತೊಂದರೆದಾಯಕ ಶಕ್ತಿಯು ತೆಂಗಿನಕಾಯಿಯ ಜುಟ್ಟಿನಲ್ಲಿ ಸೆಳೆಯಲ್ಪಡುತ್ತಿದೆ. ನನ್ನ ತೊಂದರೆಯು ನಾಶವಾಗುತ್ತಿದೆ. ಮಾರುತಿಯು ನಿಧಾನವಾಗಿ ನನ್ನ ಸುತ್ತಲೂ ಎರಡನೇ ಸುತ್ತು ಹಾಕುತ್ತಿದ್ದಾನೆ. ಅವನು ನನ್ನ ಹಿಂಭಾಗಕ್ಕೆ ಹೋಗಿದ್ದಾನೆ. ಹಿಂಭಾಗದಿಂದ ಪುನಃ ಮುಂದಿನ ಬದಿಗೆ ಬಂದ್ದಿದ್ದಾನೆ. ಈ ರೀತಿ ಎರಡನೇ ಸುತ್ತು ಪೂರ್ಣಗೊಂಡಿದೆ. ಈಗ ಮೂರನೇ ಬಾರಿ ನನ್ನ ಸುತ್ತಲೂ ತಿರುಗುತ್ತಿದ್ದಾನೆ. ಪ್ರಚಂಡ ವೇಗದಿಂದ ನನ್ನ ಶರೀರದಲ್ಲಿದ್ದ ತೊಂದರೆದಾಯಕ ಶಕ್ತಿಯು ನಾಶವಾಗುತ್ತಿದೆ. ಮಾರುತಿರಾಯನು ನನ್ನ ಹಿಂಭಾಗಕ್ಕೆ ಹೋಗಿದ್ದಾನೆ. ಅವನು ಹಿಂಭಾಗದಿಂದ ನಿಧಾನವಾಗಿ ಮುಂದೆ ಬಂದು ನನ್ನೆದುರು ನಿಂತಿದ್ದಾನೆ. ಕೈಯಲ್ಲಿ ತೆಗೆದುಕೊಂಡ ತೆಂಗಿನಕಾಯಿಯ ಜುಟ್ಟು ನನ್ನ ಕಡೆಗಿದೆ. ಅವನು ಸ್ವಲ್ಪ ಸಮಯ ತೆಂಗಿನಕಾಯಿಯನ್ನು ನನ್ನೆದುರು ಹಿಡಿದಿದ್ದಾನೆ. ನನ್ನ ಶರೀರದಲ್ಲಿದ್ದ ಅಳಿದುಳಿದ ಎಲ್ಲ ತೊಂದರೆದಾಯಕ ಶಕ್ತಿಯು ತೆಂಗಿನಕಾಯಿಯಲ್ಲಿ ಸೆಳೆಯಲ್ಪಡುತ್ತಿದೆ. ನಿಧಾನವಾಗಿ ತೊಂದರೆದಾಯಕ ಶಕ್ತಿ ತೆಂಗಿನಕಾಯಿಯತ್ತ ಸೆಳೆಯಲ್ಪಡುವ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತಿದೆ; ಏಕೆಂದರೆ ಶರೀರದಲ್ಲಿದ್ದ ತೊಂದರೆದಾಯಕ ಶಕ್ತಿಯು ಸಂಪೂರ್ಣವಾಗಿ ನಾಶವಾಗಿದೆ. ಸಾಕ್ಷಾತ್ ಮಾರುತಿರಾಯ ದೃಷ್ಟಿಯನ್ನು ತೆಗೆದುದರಿಂದ ನನಗೆ ಹಗುರವೆನಿಸಿ ಉತ್ಸಾಹವೂ ಅನಿಸುತ್ತಿದೆ. ಮಾರುತಿರಾಯ ಈಗ ಮೂರು ರಸ್ತೆಗಳು ಸೇರುವಲ್ಲಿ ತೆಂಗಿನಕಾಯಿಯನ್ನು ಒಡೆಯಲು ಹೋಗುತ್ತಿದ್ದಾರೆ. ಅಲ್ಲಿಗೆ ಹೋಗಿ ಮಾರುತಿರಾಯ ‘ಜಯ ಶ್ರೀರಾಮ’, ಎಂದು ಹೇಳುತ್ತಾ ತೆಂಗಿನಕಾಯಿಯನ್ನು ಜೋರಾಗಿ ಒಡೆಯುತ್ತಿದ್ದಾನೆ. ತೆಂಗಿನಕಾಯಿ ಒಡೆದ ಕ್ಷಣ ಅದರಲ್ಲಿ ಸೇರಿಕೊಂಡಿದ್ದ ಎಲ್ಲ ತೊಂದರೆದಾಯಕ ಶಕ್ತಿಯು ನಾಶವಾಗಿದೆ.
ಮಾರುತಿರಾಯ ಈಗ ನನ್ನೆದುರು ನಿಂತಿದ್ದಾನೆ. ನಾನು ಸಂಪೂರ್ಣ ಶರಣಾಗತಭಾವದಿಂದ ಅವನ ಚರಣಗಳ ಮೇಲೆ ತಲೆಯಿಟ್ಟು ಕೃತಜ್ಞತೆಯನ್ನು ವ್ಯಕ್ತ ಮಾಡುತ್ತಿದ್ದೇನೆ. ‘ಹೇ ಹನುಮಂತ, ನಿನ್ನ ಕೃಪೆಯಿಂದ ನನ್ನ ಸ್ಥೂಲ ಮತ್ತು ಸೂಕ್ಷ್ಮ ದೇಹಗಳಲ್ಲಿದ್ದ ತೊಂದರೆದಾಯಕ ಶಕ್ತಿಗಳ ಕೇಂದ್ರಗಳು ನಾಶವಾಗಿವೆ. ನಿನ್ನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! ಹೇ ಮಾರುತಿರಾಯಾ, ನಿನ್ನ ಕೃಪಾದೃಷ್ಟಿಯು ನನ್ನ ಮೇಲೆ ಅಖಂಡವಾಗಿರಲಿ’, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ. ಶ್ರೀ ಮಾರುತಿಯು ನನಗೆ ಆಶೀರ್ವಾದವನ್ನು ಮಾಡುತ್ತಿದ್ದಾನೆ. ಮಾರುತಿಯ ಆಶೀರ್ವಾದದಿಂದ ನಮ್ಮ ಸುತ್ತಲೂ ಸಂರಕ್ಷಕ ಕವಚವು ನಿರ್ಮಾಣವಾಗುತ್ತಿದೆ. ಈಗ ಮಾರುತಿರಾಯ ತಮ್ಮ ಮೂಲ ಸ್ಥಾನಕ್ಕೆ ಹಿಂದಿರುಗಿದ್ದಾನೆ. ದೇವರೇ ಪ್ರತ್ಯಕ್ಷ ನಮ್ಮ ದೃಷ್ಟಿಯನ್ನು ನಿವಾಳಿಸಿರುವುದರಿಂದ ನಮಗೆ ದೈವೀ ಊರ್ಜೆಯು ದೊರಕಿದೆ.
ಈಗ ನಿಧಾನವಾಗಿ ನಮ್ಮ ಕಣ್ಣುಗಳನ್ನು ತೆರೆಯುತ್ತಿದ್ದೇವೆ.
ಈ. ಮಾನಸದೃಷ್ಟಿಯನ್ನು ಎಷ್ಟು ಬಾರಿ ತೆಗೆಯಬೇಕು ?
ಮಾನಸದೃಷ್ಟಿಯನ್ನು ತೆಗೆಯುವ ಕೃತಿಗೆ ಸುಮಾರು ೫ ನಿಮಿಷಗಳು ಬೇಕಾಗುತ್ತವೆ. ಈ ರೀತಿ ದಿನದಲ್ಲಿ ಒಂದು ಅಥವಾ ೩-೪ ಬಾರಿ ಮಾನಸ ದೃಷ್ಟಿಯನ್ನು ತೆಗೆಯಬಹುದು, ಹಾಗೆಯೇ ತೊಂದರೆಯ ತೀವ್ರತೆಗನುಸಾರ ಸತತವಾಗಿ ೨-೩ ಸಲವೂ ತೆಗೆಯಬಹುದು.
ಉ. ನಾಮಜಪಾದಿ ಉಪಾಯವನ್ನು ಮಾಡುವ ಮೊದಲು ಮಾನಸ ದೃಷ್ಟಿಯನ್ನು ತೆಗೆಯವುದು
ನಾಮಜಪಾದಿ ಉಪಾಯವನ್ನು ಮಾಡುವ ಮೊದಲು ಮಾನಸ ದೃಷ್ಟಿಯನ್ನು ತೆಗೆದರೆ ತೊಂದರೆದಾಯಕ ಆವರಣವು ಕಡಿಮೆ ಸಮಯದಲ್ಲಿ ಕಡಿಮೆಯಾಗುತ್ತದೆ. ನಾಮಜಪವನ್ನು ಮಾಡುವಾಗ ಏಕಾಗ್ರತೆಯು ಹೆಚ್ಚಾಗಲು ಸಹಾಯವಾಗುತ್ತದೆ.
ನಾವೆಲ್ಲರೂ ನಮಗೆ ತೊಂದರೆಯೆನಿಸಿದಾಗ, ಅಥವಾ ದಿನದಲ್ಲಿ ಒಂದು ಬಾರಿಯಾದರೂ ಈ ರೀತಿ ಮಾನಸ ದೃಷ್ಟಿಯನ್ನು ತೆಗೆಯೋಣ. ಹುಣ್ಣಿಮೆ, ಅಮಾವಾಸ್ಯೆ ಈ ತಿಥಿಗಳಂದು ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವಿರುವುದರಿಂದ ಈ ಕಾಲದಲ್ಲಿ ಅವಶ್ಯವಾಗಿ ಪ್ರತ್ಯಕ್ಷ ಅಥವಾ ಮಾನಸ ದೃಷ್ಟಿಯನ್ನು ತೆಗೆಯಬೇಕು.