೧. ಶ್ರೀಕೃಷ್ಣನ ಭಕ್ತರಾದ ಅನೇಕ ಸಾವಿರ ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠ !
ಭಗವಾನ ಶ್ರೀಕೃಷ್ಣನ ಭಕ್ತರಾದ ಅನೇಕ ಸಾವಿರ ಗೋಪಿಯರಲ್ಲಿ ೧೬ ಸಾವಿರ ಗೋಪಿಯರು ಪ್ರಮುಖರು. ಈ ೧೬ ಸಾವಿರದಲ್ಲಿ ೧೦೮ ಜನ ವಿಶೇಷವಾಗಿ ಪ್ರಖ್ಯಾತರಾಗಿದ್ದಾರೆ. ಈ ೧೦೮ ರಲ್ಲಿ ೮ ಜನ ಪ್ರಧಾನರಾಗಿದ್ದಾರೆ ಹಾಗೂ ಈ ೮ ಪ್ರಧಾನ ಗೋಪಿಯರಲ್ಲಿ ರಾಧಾರಾಣಿ ಮತ್ತು ಚಂದ್ರಾವಲಿ ಪ್ರಮುಖರಾಗಿದ್ದಾರೆ ಹಾಗೂ ಈ ಇಬ್ಬರು ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠಳಾಗಿದ್ದಾಳೆ. (ಆಧಾರ: ಸ್ಕಂದಪುರಾಣ)
೨. ಗೋಪಿಯರ ಜನ್ಮರಹಸ್ಯ !
ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು ಎಂದು ಆಶೀರ್ವಾದ ನೀಡಿದ್ದರು. ಆ ಆಶೀರ್ವಾದಕ್ಕನುಸಾರ ಆ ಎಲ್ಲ ವೈದಿಕ ವಿದ್ವಾಂಸರು ಶ್ರೀಕೃಷ್ಣನ ಅವತಾರದಲ್ಲಿ ವೃಂದಾವನದಲ್ಲಿನ ಗೋಪಿಯರ ರೂಪದಲ್ಲಿ ಜನ್ಮ ಪಡೆದು ಶ್ರೀಕೃಷ್ಣನ ಸಾನಿಧ್ಯವನ್ನು ಗಳಿಸಿದ್ದರು. ಅವರ ಶುದ್ಧ ಇಚ್ಛೆ ಸಾಧನೆಯಿಂದ ಸಫಲವಾಗಿತ್ತು. ಇದು ಗೋಪಿಯರ ಜನ್ಮರಹಸ್ಯವಾಗಿದೆ.
೩. ಗೋಪಿಯರ ಶ್ರೀಕೃಷ್ಣಭಕ್ತಿ !
ಶ್ರೀಕೃಷ್ಣನ ಪ್ರಾಪ್ತಿಯಾದ ತಕ್ಷಣ ಅವರಿಗೆ ಇನ್ನೇನೂ ಗಳಿಸುವ ಇಚ್ಛೆಯೇ ಉಳಿಯದಿರುವುದರಿಂದ ಅವರಲ್ಲಿ ಶುದ್ಧ ಭಾವ (ಪರಮೇಶ್ವರೀ ತತ್ತ್ವ) ನಿರ್ಮಾಣವಾಗಿ ಅವರು ಕೃಷ್ಣನೊಂದಿಗೆ ಅಖಂಡ ಅನುಸಂಧಾನ (ತನು, ಮನ, ಧನ, ಮತ್ತು ಪ್ರಾಣಸಹಿತ)ವನ್ನು ಉಳಿಸಿಕೊಂಡಿದ್ದರು; ಆದ್ದರಿಂದ ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೆ ಆತ್ಮಾರಾಮಿ ಮಧುರಾಭಕ್ತಿ ಎನ್ನಲಾಗಿದೆ. ಇವೆಲ್ಲ ಸಾಧನೆಗಳನ್ನು ಪೂರ್ಣಗೊಳಿಸಲು ಗೋಪಿಯರು ಪ್ರೇಮಭಕ್ತಿಯ ಗಂಗೆಯನ್ನು ಅಖಂಡವಾಗಿ ಹರಿಸಿದ್ದರು.
– ಶ್ರೀ. ಶ್ರೀಕಾಂತ ಭಟ್