ಯಾವುದಾದರೂ ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?, ಎಂಬುದನ್ನು ಧ್ಯಾನದಲ್ಲಿ ಶೋಧಿಸಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಕೊರೋನಾ ವಿಷಾಣುಗಳ ವಿರುದ್ಧ ಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಲು ನಾನು ಮೊದಲ ಬಾರಿಗೆ ಇಂತಹ ಜಪವನ್ನು ಶೋಧಿಸಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಶೋಧಿಸಲು ಸ್ಫೂರ್ತಿ ದೊರಕಿತು. ಕಳೆದ ಒಂದು ವರ್ಷದಿಂದ ಸಾಧಕರಿಗೆ ನಾನು ಶೋಧಿಸಿದ ಜಪಗಳನ್ನು ಅವರ ರೋಗಗಳಿಗಾಗಿ ನೀಡುತ್ತಿದ್ದೇನೆ. ‘ಆ ಜಪಗಳಿಂದ ಉತ್ತಮ ಲಾಭವಾಗುತ್ತಿದೆ’ ಎಂದು ಅವರು ಹೇಳಿದಾಗ ಇದು ನನ್ನ ಗಮನಕ್ಕೆ ಬಂದಿತು. ಆ ರೋಗಗಳು ಮತ್ತು ಅವುಗಳ ಶಮನಕ್ಕಾಗಿ ಜಪಗಳನ್ನು ಇಲ್ಲಿ ಕೊಡಲಾಗಿದೆ. ಈ ಜಪಗಳೆಂದರೆ ಅಗತ್ಯವಿರುವ ವಿವಿಧ ದೇವತೆಗಳ ಒಟ್ಟು ಜಪಗಳಾಗಿವೆ.
ಸೂಚನೆ : ಇಲ್ಲಿ ಪ್ರತಿಯೊಂದು ಸಮಸ್ಯೆಯ ಕೆಳಗೆ ನೀಡಿರುವ ಎಲ್ಲ ದೇವತೆಗಳ ಹೆಸರು ಸೇರಿ ‘ಒಂದು’ ಜಪ ಆಗುತ್ತದೆ.
ರೋಗ | ಅನ್ವಯಿಸುವ ೫ ನಾಮಜಪಗಳು ಸೇರಿಸಿ ಆಗುವ ನಾಮಜಪ |
---|---|
೧. ಸರ್ಪಸುತ್ತು | ಶ್ರೀ ದುರ್ಗಾದೇವ್ಯೈ ನಮಃ । ಓಂ ನಮಃ ಶಿವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೨. ಸಂಧಿನೋವು | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೩. ಗರ್ಭಾಶಯದಲ್ಲಿ ರಕ್ತದ ಗಂಟಾಗಿ ಗರ್ಭಾಶಯಕ್ಕೆ ಬಾವು ಬರುವುದು | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ । |
೪. ಪ್ರಾಣಶಕ್ತಿ ಕಡಿಮೆ ಇರುವುದು | ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಶ್ರೀ ಹನುಮತೆ ನಮಃ । ಓಂ ನಮಃ ಶಿವಾಯ | |
೫. ಮಾಸಿಕ ಸರದಿಯ ಸಮಯದಲ್ಲಾಗುವ ಅತೀ ರಕ್ತಸ್ರಾವ | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಗುರುದೇವ ದತ್ತ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | |
೬. ಕ್ಷಯರೋಗ (ಟಿ.ಬಿ.) | ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ । ಓಂ ನಮಃ ಶಿವಾಯ | |
೭. ಶರೀರದಲ್ಲಿ ಕೊಬ್ಬಿನ ಗಂಟುಗಳಾಗುವುದು | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೆ ನಮಃ । ಓಂ ನಮಃ ಗಳಾಗುವುದು ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೮. ಗಾಯಗಳಲ್ಲಿ ಕ್ರಿಮಿಗಳಿಂದ ಕೀವಾಗುವುದು | ಶ್ರೀ ಗುರುದೇವ ದತ್ತ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | |
೯. ಕಣ್ಣುಗಳಲ್ಲಿ ರೆಪ್ಪೆಕುರ ಆಗುವುದು (ಬಾವು ಬರುವುದು) | ಶ್ರೀ ಗಣೇಶಾಯ ನಮಃ । ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ । |
೧೦. ‘ಪೈಲ್ಸ್’ (ಮೂಲವ್ಯಾಧಿ) | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ । ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | |
೧೧. ಆಟೊ ಇಮ್ಯೂನ್ ಡಿಸ್ಆರ್ಡರ್ (ತನ್ನ ಪ್ರತಿಕಾರ ಶಕ್ತಿಯೇ ತನ್ನ ಶರೀರದ ಮೇಲೆ ಆಕ್ರಮಣ ಮಾಡುವುದು) | ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೧೨. ಸ್ನಾಯುಗಳು ದುರ್ಬಲವಾಗುವುದು | ಶ್ರೀ ಗಣೇಶಾಯ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ । ಶ್ರೀ ಹನುಮತೆ ನಮಃ | ಶ್ರೀ ಹನುಮತೆ ನಮಃ । |
೧೩. ಮೂತ್ರಾಶಯದಲ್ಲಿ ಗಂಟು (ಗಂಟು ಅರ್ಬುದ ರೋಗದ್ದಾಗಿತ್ತು ಎಂದು ನಂತರ ತಿಳಿಯಿತು) | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೆ ನಮಃ । ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ । |
೧೪. ವ್ಯಾರಿಕೋಸ್ ವೇನ್ಸ್ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೧೫. ಅರ್ಬುದರೋಗ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಗಣೇಶಾಯ ನಮಃ । |
೧೬. ರಕ್ತದ ಅರ್ಬುದ ರೋಗ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಗುರುದೇವ ದತ್ತ | |
೧೭ ಮಲ್ಟಿಪಲ್ ಸ್ಕ್ಲೆರೋಸಿಸ್ (ನರಮಂಡಲವು ದುರ್ಬಲವಾಗುವುದು) | ಶ್ರೀ ದುರ್ಗಾದೇವ್ಯೈ ನಮಃ | ಓಂ ನಮೋ ಭಗವತೆ ವಾಸುದೇವಾಯ | ಶ್ರೀ ಗುರುದೇವ ದತ್ತ । ಓಂ ನಮಃ ಶಿವಾಯ | ಓಂ ನಮಃ ಶಿವಾಯ | |
೧೮. ಶೌಚವು ಸ್ವಚ್ಛವಾಗದಿರುವುದು | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ । ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | |
೧೯. ಮೆದುಳಿನ ಕೆಲವು ಭಾಗಗಳಲ್ಲಿ ನ್ಯೂರಾನ್ಸ್ ನಿಷ್ಕ್ರಿಯವಾಗುವುದು (ಮೆದುಳಿನ ಕೆಲ ಭಾಗ ನಿಷ್ಕ್ರಿಯವಾಗಿ ಅದರಿಂದ ಆ ಭಾಗಕ್ಕೆ ಸಂಬಂಧಿತ ಕೃತಿ ಮಾಡಲಾಗದಿರುವುದು. ಉದಾ. ಮಾತನಾಡಲು ಅಸಾಧ್ಯ ಆದರೆ ಹಾಡಬಹುದು) (ತಿಪ್ಪಣಿ) | ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ |ಓಂ ನಮಃ ಶಿವಾಯ | |
೨೦. ಕೆಟ್ಟ ಶಕ್ತಿಗಳ ತೊಂದರೆಯಿಂದ ಮಾಸಿಕ ಸರದಿ ಬರದಿರುವುದು | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ದುರ್ಗಾದೇವ್ಯೈ ನಮಃ । ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೆ ನಮಃ | ಶ್ರೀ ಗಣೇಶಾಯ ನಮಃ । |
ಟಿಪ್ಪಣಿ – ಮೆದುಳಿನ ವಿಶಿಷ್ಟ ಭಾಗದಲ್ಲಿ ನರಮಂಡಲ ಅಂದರೆ ‘ನ್ಯೂರಾನ್ಸ್’ ನಿಷ್ಕ್ರಿಯವಾದರೆ, ಆ ಭಾಗದಿಂದ ಮಾಡಲಾಗುವ ಸಂಬಂಧಿತ ಕೃತಿಯಾಗುವುದಿಲ್ಲ. ಇಲ್ಲಿ ‘ಮಾತನಾಡಲು ಬರುವುದಿಲ್ಲ; ಆದರೆ ಹಾಡಬಹುದು’, ಎಂಬ ಉದಾಹರಣೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿನ ವಿವೇಚನೆ ಮುಂದಿನಂತಿದೆ.
೧. ಮಾತನಾಡಲು ಬಾರದಿರುವವರಿಗೆ ಹಾಡಲು ಸಾಧ್ಯವಾಗುವುದು ಸಾಧ್ಯವಿದೆ.
೨. ಎಡಬದಿಯ ಮೆದುಳಿನ ಮುಂದಿನ ಭಾಗದಲ್ಲಿ ಮಾತಿಗೆ ಸಂಬಂಧಿತ ಜಾಗದಲ್ಲಿರುವ (ಬ್ರೊಕಾಸ್ ಏರಿಯಾ) ನರ ಮಂಡಲವು ನಿಷ್ಕ್ರಿಯವಾದರೆ ವ್ಯಕ್ತಿಯ ಮಾತಿನ ಮೇಲೆ ಪರಿಣಾಮವಾಗುತ್ತದೆ. ಅವರಿಗೆ ಇತರರು ಮಾತನಾಡುವುದು ತಿಳಿಯುತ್ತಿರುತ್ತದೆ. ಅವರು ವ್ಯಾಕರಣದ ದೃಷ್ಟಿಯಿಂದ ಯೋಗ್ಯ, ಅಂದರೆ ಕ್ರಿಯಾಪದಗಳು, ಕ್ರಿಯಾವಿಶೇಷಣಗಳು, ವಿಶೇಷಣಗಳು ಇತ್ಯಾದಿಗಳನ್ನು ಬಳಸಿ ಮಾತನಾಡಲು ಸಾಧ್ಯವಾಗುವುದಿಲ್ಲ; ಆದರೆ ಅವರು ಕೆಲವು ಅರ್ಥಪೂರ್ಣ ಶಬ್ದಗಳನ್ನು ಉಚ್ಚರಿಸಬಲ್ಲರು. ಆದುದರಿಂದ ಅವರ ಮಾತನಾಡುವಿಕೆ ‘ಟೆಲಿಗ್ರಾಫಿಕ್ ಸ್ಪೀಚ್’ ನಂತಾಗುತ್ತದೆ. ಗಾಯನ ಇದು ಬಲಬದಿಯ ಮೆದುಳಿನೊಂದಿಗೆ ಸಂಬಂಧಿಸಿದ ವಿಷಯವಾಗಿದೆ. ಆದುದರಿಂದ ‘ಬ್ರೊಕಾಸ್ ಏರಿಯಾ’ದ ನರಮಂಡಲವು ನಿಷ್ಕ್ರಿಯವಾದರೂ ವ್ಯಕ್ತಿಯ ಗಾಯನ ಕ್ಷಮತೆ ಸುರಕ್ಷಿತವಾಗಿರುತ್ತದೆ. ಇಲ್ಲಿ ‘ಗಾಯನಕ್ಷ ಮತೆ’ ಅಂದರೆ ವಿಶೇಷವಾಗಿ ‘ಮೆಲೊಡಿ’ (ಚಾಲ, ಸಂಗೀತ-ರಚನೆಯಲ್ಲಿನ ಮುಖ್ಯ ರಾಗ, ಆಲಾಪ) ಹಾಡುವ ಕ್ಷಮತೆ ಸುರಕ್ಷಿತವಾಗಿರುತ್ತದೆ.
– ಡಾ. ದುರ್ಗೇಶ ಸಾಮಂತ (೨.೭.೨೦೨೨)
೧. ಮೇಲಿನ ರೋಗಗಳ ಪೈಕಿ ಕೆಲವು ರೋಗಗಳ ಸಂದರ್ಭದಲ್ಲಿ ಹೇಳಿದ ಜಪಗಳ ಬಗ್ಗೆ ಸಾಧಕರಿಗೆ ಬಂದ ವೈಶಿಷ್ಟ್ಯಪೂರ್ಣ ಅನುಭವಗಳು
೧ ಅ. ಸರ್ಪಸುತ್ತು
ಆಗಸ್ಟ್ ೨೦೨೧ ರಲ್ಲಿ ಓರ್ವ ಸಾಧಕಿಗೆ ಕುತ್ತಿಗೆಯಿಂದ ಬೆನ್ನಿನ ವರೆಗೆ ಸರ್ಪಸುತ್ತು ಆಯಿತು. ನಾನು ಅವಳಿಗೆ ಈ ರೋಗಕ್ಕಾಗಿ ಜಪ ನೀಡಿದೆನು. ಸರ್ಪಸುತ್ತು ಆದಾಗ ಬಹಳ ನೋವು ಮತ್ತು ಉರಿಯಾಗುತ್ತದೆ. ಈ ರೋಗವು ಗುಣವಾಗಲು ಸಾಮಾನ್ಯವಾಗಿ ೧ ತಿಂಗಳು ಬೇಕಾಗುತ್ತದೆ ಎಂಬುದು ವೈದ್ಯರ ಅನುಭವವಿದೆ. ನಾನು ನೀಡಿದ ಜಪವನ್ನು ಸಾಧಕಿಯು ಪ್ರತಿದಿನ ೧ ಗಂಟೆ ಮಾಡತೊಡಗಿದ ನಂತರ ಅವಳಿಗೆ ಬಹಳ ನೋವು ಮತ್ತು ಉರಿ ಉಂಟಾಗಲಿಲ್ಲ. ಹಾಗೆಯೇ ೫ ನೇ ದಿನದಿಂದ ಅವಳ ಈ ರೋಗವು ಗುಣವಾಗಲು ಆರಂಭವಾಯಿತು. ಇದೇ ರೀತಿಯ ಅನುಭವ ಇನ್ನೂ ೪ ಸಾಧಕರಿಗೂ ಬಂದಿತು. ಅವರ ಈ ರೋಗವು ೫ ನೇ ದಿನದಿಂದ ಗುಣವಾಗತೊಡಗಿತು.
೧ ಆ. ಕ್ಷಯರೋಗ (ಟಿ.ಬಿ) ಆಗುವುದು
ಆಗಸ್ಟ್ ೨೦೧೧ ರಲ್ಲಿ ಓರ್ವ ಸಾಧಕಿಗೆ (೬೭ ವರ್ಷ) ಕ್ಷಯರೋಗವಾಗಿರುವುದು ಪತ್ತೆಯಾಯಿತು. ಇತ್ತೀಚೆಗಷ್ಟೇ ಅವರಿಗೆ ‘ಕೊರೊನಾ’ದ ಸೋಂಕು ತಗುಲಿತ್ತು ಮತ್ತು ಈಗ ಕ್ಷಯರೋಗವಾದುದರಿಂದ ಅವರು ತುಂಬಾ ಗಾಬರಿಗೊಂಡಿದ್ದರು. ಅವರಿಗೆ ವಯಸ್ಸೂ ಹೆಚ್ಚಾಗಿತ್ತು. ನಾನು ಅವರಿಗೆ ಕ್ಷಯರೋಗದ ಮೇಲೆ ನಾಮಜಪವನ್ನು ನೀಡಿದೆನು. ಅವರೂ ಔಷಧಿಗಳನ್ನು ತೆಗೆದುಕೊಳ್ಳುವುದರೊಂದಿಗೆ ಪ್ರತಿದಿನ ೨ ಗಂಟೆ ನಾಮಜಪವನ್ನು ಮಾಡುತ್ತಿದ್ದರು. ಅವರು ನಾಮಜಪವನ್ನು ೨ ತಿಂಗಳು ಮಾಡಿದುದರಿಂದ ಅವರ ಕ್ಷಯರೋಗವು ಬಹಳ ಪ್ರಮಾಣದಲ್ಲಿ ಕಡಿಮೆಯಾಯಿತು, ಹಾಗೆಯೇ ಅವರ ಮನಸ್ಸಿನ ಸ್ಥಿತಿ ಬಹಳ ಸುಧಾರಿಸಿತು. ಅವರಿಗೆ ಧೈರ್ಯ ಬಂತು. ‘ನಾನು ಗುಣವಾಗಬಲ್ಲೆನು’, ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿತು. ಮುಂದೆ ಇನ್ನೂ ೪ ತಿಂಗಳು ಅವರು ಔಷಧೋಪಚಾರದ ಜೊತೆಗೆ ನಾಮಜಪವನ್ನೂ ಮಾಡಿದಾಗ ಒಟ್ಟು ೬ ತಿಂಗಳಲ್ಲಿ ಅವರ ಕ್ಷಯರೋಗವು ಸಂಪೂರ್ಣವಾಗಿ ಗುಣಮುಖವಾಯಿತು. ಕ್ಷಯರೋಗವು ಕಡಿಮೆಯಾಗಲು ಸದ್ಯ ೬ ರಿಂದ ೯ ತಿಂಗಳುಗಳು ಬೇಕಾಗುತ್ತವೆ. ‘ಸಾಧಕಿಯ ಕ್ಷಯರೋಗ ನಾಮಜಪದಿಂದ ಬೇಗನೆ ಪೂರ್ಣ ಗುಣವಾಯಿತು’, ಎಂದು ಕಂಡು ಬಂದಿತು.
೧ ಇ. ಗಾಯದಲ್ಲಿ ಕೀವು ಆಗುವುದು
ಸೆಪ್ಟೆಂಬರ್ ೨೦೨೧ ರಲ್ಲಿ ಓರ್ವ ಸಾಧಕರು ಬಿದ್ದುದರಿಂದ ಅವರ ಕಣ್ಣುಗಳ ಹತ್ತಿರ ಗಾಯವಾಗಿತ್ತು. ಆ ಗಾಯದಲ್ಲಿ ಕೀವು ಆಗ ತೊಡಗಿತ್ತು. ‘ಗಾಯದಲ್ಲಿ ಸೋಂಕಾಗಬಾರದೆಂದು ನಾನು ಅವರಿಗೆ ಜಪವನ್ನು ನೀಡಿದೆನು. ಅವರು ಅದನ್ನು ಪ್ರತಿದಿನ ೨ ಗಂಟೆ ಮಾಡಿದಾಗ ಮರುದಿನದಿಂದ ಅವರ ಗಾಯದಲ್ಲಿನ ಸೋಂಕು ಕಡಿಮೆಯಾಗತೊಡಗಿತು ಮತ್ತು ೪ ದಿನಗಳಲ್ಲಿ ಆ ಗಾಯವು ಗುಣವಾಯಿತು. ಅದರಿಂದ ಕಣ್ಣಿಗೆ ಅಪಾಯ ತಪ್ಪಿತು.
೧ ಈ. ಆಟೋ ಇಮ್ಯೂನ್ ಡಿಸ್ಆರ್ಡರ್ (ತನ್ನ ಪ್ರತಿಕಾರಶಕ್ತಿಯು ತನ್ನ ಶರೀರದ ಮೇಲೆಯೇ ಆಕ್ರಮಣ ಮಾಡುವುದು)
೧. ಸೆಪ್ಟೆಂಬರ್ ೨೦೨೧ ರಲ್ಲಿ ಓರ್ವ ಸಾಧಕನು ಈ ರೋಗದಿಂದ ಪೀಡಿತನಾಗಿದ್ದನು. ಈ ರೋಗದಿಂದ ಅವನ ಕರುಳಿಗೆ ಅಲ್ಸರ್ ಆಗಿತ್ತು. ಆದುದರಿಂದ ಅವನ ಶೌಚಮಾರ್ಗದಿಂದ ರಕ್ತ ಬೀಳುತ್ತಿತ್ತು. ಅವನಿಗೆ ಸಿಹಿ ಅಥವಾ ಖಾರದ ಪದಾರ್ಥಗಳನ್ನು ತಿನ್ನಲು ಆಗುತ್ತಿರಲಿಲ್ಲ. ಅವನು ಕೇವಲ ಅನ್ನದ ಗಂಜಿಯನ್ನು ಸೇವಿಸುತ್ತಿದ್ದನು. ಆದುದರಿಂದ ಅವನು ಅಶಕ್ತನಾಗತೊಡಗಿದ್ದನು. ಅವನು ಆಯುರ್ವೇದಿಕ ಔಷಧಿಯನ್ನೂ ತೆಗೆದುಕೊಳ್ಳುತ್ತಿದ್ದನು. ಆದರೆ ಗುಣಮುಖವಾಗುತ್ತಿರಲಿಲ್ಲ. ನಾನು ಅವನಿಗೆ ಈ ರೋಗಕ್ಕೆ ನಾಮಜಪವನ್ನು ನೀಡಿದೆನು. ಸಾಧಕನು ಆ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡುತ್ತಿದ್ದನು. ಅದರಿಂದ ಅವನಿಗೆ ಒಂದು ತಿಂಗಳಲ್ಲಿ ಬದಲಾವಣೆಯ ಅರಿವಾಗತೊಡಗಿತು. ಶೌಚದ ಮಾರ್ಗದಿಂದ ರಕ್ತ ಬರುವುದು ನಿಂತಿತು. ಅವನಿಗೆ ಸ್ವಲ್ಪ ಪ್ರಮಾಣದಲ್ಲಿ ಇತರ ಆಹಾರ ಪದಾರ್ಥಗಳನ್ನೂ ತಿನ್ನಲು ಸಾಧ್ಯವಾಗತೊಡಗಿತು. ಒಟ್ಟು ೩ ತಿಂಗಳಲ್ಲಿ ಅವನ ಆ ರೋಗವು ಸಂಪೂರ್ಣವಾಗಿ ಗುಣವಾಯಿತು.
೨. ಓರ್ವ ಸಾಧಕಿಗೆ ಈ ರೋಗದಿಂದ ದೇಹದ ತುಂಬ ಗಾಯಗಳಾಗಿದ್ದವು. ಇದರಿಂದಾಗಿ ಅವಳಿಗೆ ಬಟ್ಟೆಗಳನ್ನು ಧರಿಸುವುದೂ ಕಠಿಣವಾಗಿತ್ತು. ಈ ರೋಗಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಹೊಂದದ ಕಾರಣ ಅವಳು ತುಂಬಾ ನಿರಾಶೆಗೆ ಹೋಗಿದ್ದಳು. ಅವಳಿಗೆ ನಾನು ಈ ರೋಗಕ್ಕಾಗಿ ನಾಮಜಪವನ್ನು ನೀಡಿದಾಗ ಒಂದು ತಿಂಗಳಲ್ಲಿ ಅವಳ ಶರೀರದ ಮೇಲಿನ ಎಲ್ಲ ಗಾಯಗಳು ಒಣಗಿದವು. ಅನಂತರ ಅವಳಿಗೆ ಪುನಃ ಗಾಯಗಳಾಗಲಿಲ್ಲ.
೧ ಉ. ಅರ್ಬುದರೋಗ
ಓರ್ವ ಹಿತಚಿಂತಕರ ಹದಿಹರೆಯದ ಮಗನಿಗೆ ‘ಬೋನ್ ಮ್ಯಾರೋ ಕ್ಯಾನ್ಸರ್’ (ಮೂಳೆಗಳ ಅರ್ಬುದರೋಗ) ಆಗಿತ್ತು. ಈ ಅರ್ಬುದರೋಗವು ಅವನ ಶರೀರದಲ್ಲಿ ಶೇ. ೫೫ ರಷ್ಟು ಹರಡಿತ್ತು. ನಾನು ಆ ಹಿತಚಿಂತಕನಿಗೆ ಅರ್ಬುದರೋಗಕ್ಕಾಗಿ ನಾಮಜಪವನ್ನು ನೀಡಿದೆನು. ಅವರು ತಮ್ಮ ಮಗನಿಗಾಗಿ ಆ ನಾಮಜಪವನ್ನು ೧ ತಿಂಗಳು ಪ್ರತಿದಿನ ೨ ಗಂಟೆ ಮಾಡಿದರು. ಅನಂತರ ಅವರು ತಮ್ಮ ಮಗನ ತಪಾಸಣೆಯನ್ನು ಪುನಃ ಮಾಡಿಸಿದಾಗ ಅವನ ಶರೀರದಲ್ಲಿನ ಅರ್ಬುದರೋಗದ ಪ್ರಮಾಣ ಶೇ. ೫೫ ರಿಂದ ಶೇ. ೦.೫ ವರೆಗೆ ಬಂದಿತ್ತು. ಆಗ ಡಾಕ್ಟರರೂ ಆಶ್ಚರ್ಯಚಕಿತರಾದರು ಮತ್ತು ಆ ಹಿತಚಿಂತಕರಿಗೆ, “ಒಂದು ವೇಳೆ ಅರ್ಬುದರೋಗದ ಪ್ರಮಾಣ ಶೇ. ೦.೫ ರಷ್ಟು ಬಂದಿದೆಯೆಂದರೆ ನಿಮಗೆ ‘ಬೋನ್ ಮ್ಯಾರೋ ರಿಪ್ಲೆಸಮೆಂಟ್’ ಮಾಡಬೇಕಾಗುವುದಿಲ್ಲ ಮತ್ತು ನಿಮ್ಮ ೧೨ -೧೩ ಲಕ್ಷ ರೂಪಾಯಿಗಳ ಖರ್ಚು ಉಳಿಯುವುದು” ಎಂದರು. ಇದು ತಿಳಿದಾಗ ನಾನು ಆ ಹಿತಚಿಂತಕರಿಗೆ ಅರ್ಬುದರೋಗದ ಜಪವನ್ನು ಪ್ರತಿದಿನ ೨ ಗಂಟೆಗಳ ಬದಲು ೩ ಗಂಟೆ ಮಾಡಲು ಹೇಳಿದೆನು.
೧ ಊ. ಮಲ್ಟಿಪಲ್ ಸ್ಕ್ಲೆರೋಸಿಸ್ (ನರಮಂಡಲವು ದುರ್ಬಲವಾಗುವುದು)
ಓರ್ವ ಸಾಧಕನಿಗೆ ಈ ರೋಗವು ೨೮ ನೇ ವಯಸ್ಸಿನಿಂದ ಅಂದರೆ ಕಳೆದ ೧೪ ವರ್ಷಗಳಿಂದಿದೆ. ಈ ರೋಗದಲ್ಲಿ ಅವನಿಗೆ ಕಾಲುಗಳು ಜೋಮು ಹಿಡಿಯುವುದು, ಚುಚ್ಚಿದಂತಾಗುವುದು, ಉರಿ ಉರಿ ಎನಿಸುವುದು ಅಥವಾ ಮರಗಟ್ಟುವುದು ಹೀಗೆ ಆಗುತ್ತಿತ್ತು ಮತ್ತು ನಂತರ ಈ ಲಕ್ಷಣಗಳು ಇತರ ಅವಯವಗಳಲ್ಲಿ ಹರಡತೊಡಗಿತು. ಇದು ಒಂದು ತೀವ್ರ ಸ್ವರೂಪದ ರೋಗವಾಗಿದೆ. ಈ ಸಾಧಕನಿಗೆ ಈ ರೋಗದ ಲಕ್ಷಣಗಳು ಹಗಲಲ್ಲಿ ಕಾಣಿಸುತ್ತಿತ್ತು ಮತ್ತು ರಾತ್ರಿ ಅದು ತೀವ್ರವಾಗುತ್ತಿತ್ತು. ಅಕ್ಟೋಬರ್ ೨೦೨೧ ರಲ್ಲಿ ನಾನು ಅವನಿಗೆ ಈ ರೋಗಕ್ಕೆ ನಾಮಜಪವನ್ನು ನೀಡಿದೆನು. ಅವನು ‘ನಾಮಜಪವನ್ನು ಯಾವಾಗ ಮಾಡಬೇಕು ?’ ಎಂಬುದರ ಆಯೋಜನೆ ಮಾಡಿದನು. ಅವನು ೩೦ ನಿಮಿಷಗಳಲ್ಲಿ ವಿಂಗಡಿಸಿ ನಾಮಜಪವನ್ನು ಮಾಡಲು ನಿಶ್ಚಯಿಸಿದನು. ರೋಗದ ಲಕ್ಷಣಗಳು ಕಾಣಿಸತೊಡಗಿದ ತಕ್ಷಣ, ಅವನು ೩೦ ನಿಮಿಷ ನಾಮಜಪವನ್ನು ಮಾಡುತ್ತಿದ್ದನು. ಇದರಿಂದ ಆ ರೋಗದ ಲಕ್ಷಣಗಳು ಕಡಿಮೆಯಾಗಿ ಅವನಿಗೆ ೧ ರಿಂದ ೨ ಗಂಟೆ ಆರಾಮವೆನಿಸುತ್ತಿತ್ತು. ಲಕ್ಷಣಗಳು ಪುನಃ ಆರಂಭವಾದಾಗ, ಅವನು ೩೦ ನಿಮಿಷ ನಾಮಜಪವನ್ನು ಮಾಡುತ್ತಿದ್ದನು. ಹೆಚ್ಚಿನ ಬಾರಿ ಅವನಿಗೆ ಸಾಯಂಕಾಲ ಅಥವಾ ರಾತ್ರಿ ಈ ನಾಮಜಪವನ್ನು ಮಾಡಬೇಕಾಗುತ್ತಿತ್ತು. ಈ ರೀತಿ ಅವನು ಈ ರೋಗವನ್ನು ಗುಣಪಡಿಸಲು ಜಿಗುಟುತನದಿಂದ ಪ್ರಯತ್ನಿಸಿದನು. ಇದರಿಂದ ಅವನಿಗೆ, ದಿನದಿಂದ ದಿನಕ್ಕೆ ಆ ರೋಗದ ಲಕ್ಷಣಗಳು ಮೇಲಿಂದ ಮೇಲೆ ಉದ್ಭವವಾಗುವ ಕಾಲಾವಧಿ ಕಡಿಮೆಯಾಗತೊಡಗಿದೆ ಮತ್ತು ೨ ತಿಂಗಳುಗಳಲ್ಲಿ ಲಕ್ಷಣಗಳ ತೀವ್ರತೆಯೂ ತುಂಬಾ ಕಡಿಮೆಯಾಗಿದೆ ಎಂದು ಕಂಡು ಬಂದಿತು.
೨. ಜಪಗಳ ಮಹತ್ವ
ಆಪತ್ಕಾಲದಲ್ಲಿ ಔಷಧಿಗಳು, ಡಾಕ್ಟರರ ಅಭಾವದ ಅರಿವಾಗುವುದು, ಆಗ ಈ ಜಪಗಳು ಉತ್ತಮವಾಗಿ ಉಪಯೋಗವಾಗುವುವು.
೩. ಕೃತಜ್ಞತೆಗಳು
ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನಾನು ಈ ಜಪಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತು ಮತ್ತು ಆ ಜಪಗಳ ಉತ್ತಮ ಪರಿಣಾಮವೂ ಗಮನಕ್ಕೆ ಬಂದಿತು. ಇದಕ್ಕಾಗಿ ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೬.೨೦೨೨)