ಶಿಷ್ಯಭಾವ

ಶಿಷ್ಯನ ಭಾವ ಹೇಗಿರಬೇಕು ?

ಸದ್ಗುರುಗಳೇ ಶಿಷ್ಯನ ಸರ್ವಸ್ವವಾಗಿರುತ್ತಾರೆ. ಶಿಷ್ಯನು ತನ್ನ ಸೇವೆಯನ್ನು ಮಾಡುವಾಗ ಇತರರಿಗೆ ತೊಂದರೆ ಆಗುವುದಿಲ್ಲ ಅಲ್ಲವೇ ಅಥವಾ ಅವರ ಸೇವೆಯಲ್ಲಿ ಅಡತಡೆಗಳು ಬರುವುದಿಲ್ಲ ಅಲ್ಲವೇ, ಎಂಬ ಕಾಳಜಿಯನ್ನು ವಹಿಸುತ್ತಾನೆ. ಶಿಷ್ಯನ ಯಾವುದೇ ಕೃತಿಯಿಂದ ಇತರರ ಮನಸ್ಸಿನಲ್ಲಿ ಅವನ ಬಗ್ಗೆ, ಗುರುಗಳ ಬಗ್ಗೆ ಅಥವಾ ಇತರ ಯಾವುದೇ ವಿಕಲ್ಪಗಳಿರುವುದಿಲ್ಲ. ಇತರರಿಗೆ ಅವನ ಸಾಧಕತ್ವದ ಬಗ್ಗೆ ಖಾತರಿಯಿರುತ್ತದೆ. ಗುರುಕಾರ್ಯವನ್ನು ಉತ್ತಮವಾಗಿ ಮಾಡಲು ಅಗತ್ಯವಿರುವ ನೇತೃತ್ವಕ್ಕಾಗಿ ಬೇಕಾಗುವ ವಿವಿಧ ಗುಣಗಳು ಶಿಷ್ಯನಲ್ಲಿರುತ್ತವೆ. ಅವನ ಗಮನವು ಗುರುಬಂಧುಗಳ ಆಧ್ಯಾತ್ಮಿಕ ಉನ್ನತಿಯ ಕಡೆಗೆ ಇರುತ್ತದೆ. ಸಾಧಕರು ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸಿ ಗುರುಗಳ ‘ಶಿಷ್ಯ’ನಾಗಲು ತನ್ನಲ್ಲಿ ಯೋಗ್ಯತೆಯನ್ನು ನಿರ್ಮಾಣ ಮಾಡುವುದು ಅಪೇಕ್ಷಿತವಾಗಿರುತ್ತದೆ !

(ಆಧಾರ – ಸನಾತನ ನಿರ್ಮಿತಿ ಗ್ರಂಥ ‘ಶಿಷ್ಯ’)

ಭಾವವೆಂದರೆ ದೇವರ ಅಸ್ತಿತ್ವದ ಅರಿವು !

ದೇವರ ಅಸ್ತಿತ್ವದ ಅರಿವು ಎಂದರೆ ಭಾವ. ಸತತವಾಗಿ ದೇವರ ಅಸ್ತಿತ್ವದ ಅರಿವಾಗಲು ಸಾಧಕರು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆತ್ಮನಿವೇದನೆ, ಕೆಲವು ಕ್ಷಣಗಳವರೆಗೆ ಭಾವಪ್ರಯೋಗ, ಕೆಲವು ನಿಮಿಷಗಳ ಭಾವಾರ್ಚನೆ, ಕೃತಿಗಳಿಗೆ ಭಾವವನ್ನು ಜೋಡಿಸುವುದು, ಶ್ರೀಕೃಷ್ಣ ಅಥವಾ ಗುರುಗಳೊಂದಿಗೆ ಸತತವಾಗಿ ಮಾತನಾಡುವುದು, ಪ್ರತಿಯೊಂದು ವಿಷಯವನ್ನು ಅವರಿಗೆ ಕೇಳಿ-ಕೇಳಿ ಮಾಡುವುದು, `’ಈಗ ದೇವರಿಗೆ ಏನು ಅಪೇಕ್ಷಿತವಿದೆ’, ಎಂಬ ವಿಚಾರ ಮಾಡಿ ಕೃತಿಯನ್ನು ಮಾಡುವುದು, ದೇವರ ಅಥವಾ ಗುರುಗಳ ಅಸ್ತಿತ್ವವನ್ನು ಸತತವಾಗಿ ಅನುಭವಿಸಲು ಪ್ರಯತ್ನಿಸುವುದು, ತನ್ನಲ್ಲಿಯೇ ಗುರುಗಳ ಅಥವಾ ದೇವರ ಅಸ್ತಿತ್ವವನ್ನು ಅನುಭವಿಸುವುದು, ಮಾನಸಪೂಜೆ ಅಥವಾ ಆರತಿಯನ್ನು ಮಾಡುವುದು ಈ ರೀತಿ ವಿವಿಧ ಪ್ರಯತ್ನಗಳಿಂದ ಈಶ್ವರನೊಂದಿಗೆ ಅನುಸಂಧಾನವನ್ನು ಹೆಚ್ಚಿಸಲು ಅಥವಾ ಅವರ ಅಸ್ತಿತ್ವವನ್ನು ಅನುಭವಿಸುವ ಅರಿವು ಮನಸ್ಸಿಗೆ ಮಾಡಿಕೊಡಲಾಗುತ್ತದೆ !

ಭಾವದ ಮಹತ್ತ್ವ

ನ ಕಾಷ್ಠೇ ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ |
ಭಾವೇ ತು ವಿದ್ಯತೇ ದೇವೋ, ತಸ್ಮಾದ್ಭಾವೋ ಹಿ ಕಾರಣಮ್ ||

ಅರ್ಥ : ದೇವರು ಮರದಲ್ಲಿ, ಕಲ್ಲಿನ ಅಥವಾ ಮಣ್ಣಿನ ಮೂರ್ತಿಯಲ್ಲಿರುವುದಿಲ್ಲ. ದೇವರು ಭಾವದಲ್ಲಿರುತ್ತಾನೆ; ಆದುದರಿಂದ ಭಾವವು ಮಹತ್ತ್ವದ್ದಾಗಿರುತ್ತದೆ.

‘ಅಮೃತಪ್ರಾಶನದಿಂದ ಅಮರತ್ವ ಬರುತ್ತದೆ’, ಎಂದು ಹೇಳುತ್ತಾರೆ; ಒಂದು ವೇಳೆ ಅಮರತ್ವ ಬಂದರೂ, ಇಚ್ಛೆ-ಆಕಾಂಕ್ಷೆಗಳು ಇದ್ದೇ ಇರುತ್ತವೆ. ಆದುದರಿಂದ ಮಾಯಜಾಲದಲ್ಲಿಯೇ ಸಿಲುಕಿರುತ್ತಾರೆ; ಆದರೆ ಯಾವ ಜೀವವು ಯಾವುದಾದರೊಂದು ‘ಭಾವ’ದ ಅಮೃತಪ್ರಾಶನ ಮಾಡುತ್ತದೆಯೋ, ಆ ಜೀವ ಎಲ್ಲ ರೀತಿಯ ಮೋಹ-ಮಾಯೆ, ಜನ್ಮ-ಮರಣ ಇವುಗಳ ಘೋರ ಚಕ್ರದಿಂದ ಮುಕ್ತವಾಗುತ್ತದೆ. ಇದು ಭಾವದ ಮಹತ್ತ್ವ !

– ಕು. ವೈಷ್ಣವೀ ವೆಸಣೇಕರ, ಸನಾತನ ಆಶ್ರಮ, ರಾಮನಾಥಿ. ಗೋವಾ.

ಭಾವದ ಘಟಕಗಳು (ಅಂಶಗಳು)

ಅಂಶ : ಶೇಖಡಾವಾರು
ಪ್ರಾರ್ಥನೆ : ೨೦
ಕೃತಜ್ಞತೆ : ೧೦
ಸೇವೆ : ೧೦
ಪ್ರೀತಿ : ೧೦
ಆನಂದ : ೩೦
ಶಾಂತಿ : ೧೦
ಇತರ : ೧೦
ಒಟ್ಟು : ಶೇ. ೧೦೦

ಭಾವಜಾಗೃತಿಯಾಗುವ ೮ ಲಕ್ಷಣಗಳು

ಸ್ತಂಭ (ಸ್ತಂಭಿತರಾಗುವುದು)
ಸ್ವೇದ (ಬೆವರುವುದು)
ರೋಮಾಂಚನ
ವೈಸ್ವರ್ಯ (ಸ್ವರಭಂಗ, ಧ್ವನಿ ಬದಲಾಗುವುದು)
ಕಂಪನ
ವೈವರ್ಣ್ಯ (ವರ್ಣ ಬದಲಾಗುವುದು)
ಅಶ್ರುಪಾತ (ಕಣ್ಣೀರು ಸುರಿಯುವುದು)
ಮೂರ್ಛೆ ಬರುವುದು

‘ಯಾವಾಗ ಎಂಟು ಲಕ್ಷಣಗಳು ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆಯೋ, ಆಗ ‘ಅಷ್ಟಸಾತ್ತ್ವಿಕಭಾವ’ವು ಜಾಗೃತವಾಯಿತು’, ಎಂದು ಹೇಳುತ್ತಾರೆ.

ಭಾವ ಯಾರಲ್ಲಿ ನಿರ್ಮಾಣವಾಗುತ್ತದೆ ?

ಭಾವ ನಿರ್ಮಾಣವಾಗಲು ಯಾವುದಾದರೊಬ್ಬ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಕನಿಷ್ಟ ಶೇ. ೫೦ ರಷ್ಟಿರಬೇಕಾಗುತ್ತದೆ. ಶೇ. ೫೦ ರಷ್ಟು ಮಟ್ಟವಾಗಲು ನಾಮಜಪ, ಸತ್ಸಂಗ, ಸತ್ಸೇವೆ ಮುಂತಾದ ಸಾಧನೆಯಲ್ಲಿನ ಘಟಕಗಳನ್ನು ಸತತವಾಗಿ ಆಚರಣೆಯಲ್ಲಿ ತರಬೇಕಾಗುತ್ತದೆ. ಭಾವ ಜಾಗೃತವಾದ ನಂತರವೂ ಸತತವಾಗಿ ಭಾವಾವಸ್ಥೆಯಲ್ಲಿರಲು ಸತತವಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ.

ಭಾವ ನಿರ್ಮಾಣವಾಗಲು ಬರುವ ಅಡತಡೆಗಳು !

ಅಜ್ಞಾನ, ಕರ್ತೃತ್ವ, ಅಹಂ, ದೋಷ ಮತ್ತು ಬುದ್ಧಿಯ ಅನಾವಶ್ಯಕ ಉಪಯೋಗ

(ಆಧಾರ – ಸನಾತನದ ಗ್ರಂಥ ‘ಭಾವಜಾಗೃತಿಗಾಗಿ ಸಾಧನೆ’)

ಭಾವ ನಿರ್ಮಾಣವಾಗುವ ಸಂದರ್ಭದಲ್ಲಿ ಗುರುದೇವರ ಆಶ್ವಾಸನೆ !

ಶೇ. ೮೦ ರಷ್ಟು ತಳಮಳವಿದ್ದರೆ ಮಾತ್ರ ಭಾವ ನಿರ್ಮಾಣವಾಗುತ್ತದೆ ! – ಪರಾತ್ಪರ ಗುರು ಡಾ. ಆಠವಲೆ

೨೦೦೩ ರಲ್ಲಿ ಪರಾತ್ಪರ ಗುರು ಡಾಕ್ಟರರು ಒಮ್ಮೆ, ‘ಇನ್ನು ಮುಂದೆ ನಾನು ಭಾವವಿರುವ ಸಾಧಕರನ್ನೇ ಭೇಟಿಯಾಗುವೆ’ ಎಂದು ಹೇಳಿದ್ದರು. ಆ ಸಮಯದಲ್ಲಿ ನನಗೆ ತುಂಬಾ ಕೆಟ್ಟದೆನಿಸಿತ್ತು. ಅದನ್ನು ಪರಾತ್ಪರ ಗುರು ಡಾಕ್ಟರರಿಗೆ ಹೇಳುವ ಅವಕಾಶವನ್ನು ಅವರ ಕೃಪೆಯಿಂದಲೇ ಸಿಕ್ಕಿತು. ಆಗ ಪರಾತ್ಪರ ಗುರು ಡಾಕ್ಟರರು, ‘ಶೇ. ೮೦ ರಷ್ಟು ತಳಮಳವಿದ್ದರೆ, ಮಾತ್ರ ಭಾವ ಜಾಗೃತವಾಗುವುದು’ ಎಂದು ಹೇಳಿದರು. ಆಗ ನನಗೆ ‘ಪರಾತ್ಪರ ಗುರು ಡಾಕ್ಟರರು ಹೀಗೆ ಹೇಳಿ ನನಗೆ ಆಶೀರ್ವದಿಸಿದರು’, ಎಂದೆನಿಸಿತು ಮತ್ತು ಸಾಧನೆಯ ಮುಂದಿನ ಪ್ರವಾಸ ಆರಂಭವಾಯಿತು. ೨೦೦೮ ರಲ್ಲಿ ಸದ್ಗುರು ನಂದಕುಮಾರ ಜಾಧವ ಇವರು ಸೇವೆಯ ಕೊನೆಯ ದಿನದಂದು ಉಪಾಯಗಳ ಮಹತ್ತ್ವವನ್ನು ಹೇಳುವಾಗ ‘ಗುರುಕೃಪೆಯಿಂದ ನಿಮ್ಮಲ್ಲಿ ಭಾವಜಾಗೃತವಾಗಿದೆ. ಮುಂದೆ ಅವ್ಯಕ್ತ ಭಾವದ ಕಡೆಗೆ ಹೋಗಬೇಕಾಗಿದೆ’, ಎಂದು ಹೇಳುತ್ತಿರುವಾಗಲೇ ಮೇಲಿನ ೫ ವರ್ಷಗಳ ಹಿಂದಿನ ಪ್ರಸಂಗದ ನೆನಪಾಯಿತು ಮತ್ತು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು. ನಿಜವಾಗಿಯೂ, ಪರಾತ್ಪರ ಗುರು ಡಾಕ್ಟರರು ಪ್ರತಿಯೊಂದು ಸಾಧಕನ ಕಡೆಗೆ ಹೇಗೆ ಗಮನ ಕೊಡುತ್ತಾರೆ, ಎಂಬುದರ ಅನುಭೂತಿ ಇದಾಗಿದೆ. ಪರಾತ್ಪರ ಗುರು ಡಾಕ್ಟರರು ನನಗಾಗಿ ಕೊಟ್ಟಿರುವ ಪ್ರಸಾದವೇ ಆಗಿದೆ. ಪರಾತ್ಪರ ಗುರು ಡಾಕ್ಟರರು ‘ನನಗೆ ಪ್ರಸಾದ ಏಕೆ ಕಳಿಸುವುದಿಲ್ಲ ?’, ಎಂದು ಈ ಹಿಂದೆ ಎನಿಸುತ್ತಿತ್ತು; ಆದರೆ ಈ ಪ್ರಸಾದ ನನ್ನ ಸಾಧನೆಯ ಪ್ರವಾಸದಲ್ಲಿನ ಮುಂದಿನ ಹಂತವೇ ಆಗಿತ್ತು, ಎಂದೆನಿಸಿತು.

– ಶ್ರೀ. ವೈಭವ ಆಫಳೆ (ಆಧ್ಯಾತ್ಮಿಕ ಮಟ್ಟ ಶೇ. ೬೪), ನಾಂದೇಡ

ಭಾವ ಹೇಗಿರಬೇಕು ?

೧. ‘ನಾನು ಭಗವಂತನು ಹೇಳುವುದನ್ನು ಕೇಳುತ್ತಿದ್ದೇನೆ’, ಎಂಬ ಭಾವವನ್ನಿಡಬೇಕು.

೨. ಪ್ರಾರ್ಥನೆಯನ್ನು ಮಾಡುವಾಗ ‘ನಾವು ದೇವರ ಚರಣಗಳ ಹತ್ತಿರ ಕುಳಿತು ಅಥವಾ ಚರಣಗಳ ಮೇಲೆ ತಲೆ ಇಟ್ಟು ಪ್ರಾರ್ಥನೆ ಮಾಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು.

೩. ಪ್ರಾರ್ಥನೆಯನ್ನು ಮಾಡುವಾಗ ನಮ್ಮಲ್ಲಿ ದೇವರ ತತ್ತ್ವವು ಜಾಗೃತವಾಗುತ್ತದೆ ಮತ್ತು ನಾಲ್ಕೂ ಮುಕ್ತಿಗಳು ಪ್ರಾಪ್ತಿಯಾಗುತ್ತವೆ. ಆದುದರಿಂದ ‘ಈ ಪ್ರಾರ್ಥನೆಯು ನನಗೆ ಮೋಕ್ಷಕ್ಕೆ ಕರೆದುಕೊಂಡು ಹೋಗಲಿದೆ’, ಎಂಬ ಭಾವವಿರಬೇಕು.

೪. ಪ್ರಾರ್ಥನೆಯನ್ನು ಮಧುರವಾಗಿ, ನಿಧಾನವಾಗಿ ಮತ್ತು ಲಯಬದ್ಧವಾಗಿ ಮಾಡಬೇಕು. ಇದರಿಂದಾಗಿ ಭಾವಜಾಗೃತವಾಗಿ ಭಾವವು ಉಳಿಯುತ್ತದೆ.

– ಗುರುಚರಣಗಳಲ್ಲಿ ಶರಣಾಗತಿ, ಸೌ. ಶಾಲಿನಿ ಮರಾಠೆ (ಆಧ್ಯಾತ್ಮಿಕ ಮಟ್ಟ ಶೇ. ೬೬) ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೫.೨೦೨೨)

೧. ನಾನು ಶ್ರೀಕೃಷ್ಣನೊಂದಿಗೆ ಮಾತನಾಡುವಾಗ ‘ಅವನು ನನ್ನ ಜೊತೆಯಲ್ಲಿಯೇ ಇದ್ದಾನೆ’, ಎಂದೆನಿಸುತ್ತದೆ.

೨. ನಾನು ಒಂದು ದಿನ ಮಾತನಾಡಲು ಮರೆತರೆ, ‘ಅವನು ನನ್ನ ಮೇಲೆ ಸಿಟ್ಟಾಗಿ ದೂರ ಹೊರಟು ಹೋಗಿದ್ದಾನೆ’, ಎಂದೆನಿಸುತ್ತದೆ. ಅನಂತರ ಅವನ ಸಿಟ್ಟು ಕಡಿಮೆ ಮಾಡಲು ಅವನನ್ನು ತುಂಬಾ ಸಮಾಧಾನಪಡಿಸಬೇಕಾಗುತ್ತದೆ.

೩. ಕೆಲವೊಂದು ತಪ್ಪು ಮಾಡಿ ನಾನು ಶ್ರೀಕೃಷ್ಣನ ಚಿತ್ರದ ಕಡೆಗೆ ನೋಡಿದಾಗ ‘ಅವನು ನನ್ನ ಕಡೆಗೆ ಕೋಪಗೊಂಡು ನೋಡುತ್ತಿದ್ದಾನೆ’, ಎಂಬ ಅರಿವಾಗುತ್ತದೆ. ಯಾವಾಗ ನಾನು ಬೆಳಗ್ಗೆ ತಡವಾಗಿ ಏಳುತ್ತೇನೆಯೋ, ಆಗ ಅವನು ನನ್ನ ಕಡೆಗೆ ಸಿಟ್ಟಿನಿಂದ ನೋಡುತ್ತಾನೆ.

೪. ನಾನು ನಾಮಜಪವನ್ನು ಮಾಡಿ ಶ್ರೀಕೃಷ್ಣನ ಚಿತ್ರದ ಮುಂದೆ ಹೋಗುತ್ತೇನೆ. ಆಗ ‘ಅವನು ನನ್ನ ಕಡೆಗೆ ನೋಡಿ ಮಧುರವಾಗಿ ನಗುತ್ತಿದ್ದಾನೆ ಮತ್ತು ಅವನು ನನ್ನ ಮೇಲೆ ತುಂಬಾ ಪ್ರಸನ್ನನಾಗಿದ್ದಾನೆ’, ಎಂದು ಅರಿವಾಗುತ್ತದೆ.’

– ಕು. ಪೂಜಾ ಆಚಾರ್ಯ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ. (೧೭.೧೧.೨೦೧೮)

ಭಾವಜಾಗೃತಿ ಎಂದರೇನು ?

ಭಾವಜಾಗೃತಿ ಎಂದರೆ ಚಿಕ್ಕ ಮಕ್ಕಳ ಅಡುಗೆ ಆಟದಂತೆ ಎನಿಸುವುದು

ಪ್ರತಿದಿನ ಹೊಸ ಅನುಭೂತಿ ಬರಲು ಹಿಂದಿನ ಕಾರಣವೇನು, ಎಂಬುದರ ಶಾಸ್ತ್ರವನ್ನೇ ತಿಳಿದುಕೊಳ್ಳೋಣ ಎಂದು ನಾನು ಆ ದಿಕ್ಕಿನಲ್ಲಿ ಚಿಂತನೆಯನ್ನು ಮಾಡಲು ಪ್ರಾರಂಭಿಸಿದ ನಂತರ ‘ಭಾವಜಾಗೃತಿ ಎಂದರೆ ಚಿಕ್ಕ ಮಕ್ಕಳ ಅಡುಗೆ ಆಟದಂತೆ ಇದೆ’, ಎಂದೆನಿಸಿತು. ಚಿಕ್ಕ ಮಕ್ಕಳು ಮಣ್ಣಿನ ಅಡುಗೆ ಸಾಮಾನುಗಳಿಗೆ ‘ಇದು ಇಷ್ಟವಾಗುತ್ತದೆಯೋ, ಅಥವಾ ಅದು ?’, ಎಂದು ಪ್ರಶ್ನೆಯನ್ನು ಕೇಳಿ ಮನಸ್ಸಿನಲ್ಲಿ ಬಂದ ವಿಚಾರಕ್ಕನುಸಾರ ಆಟವನ್ನು ಆಡುತ್ತಿರುತ್ತಾರೆ. ಅದೇ ರೀತಿ ನಾನು ಸಹ ಪ.ಪೂ. ಭಕ್ತರಾಜ ಮಹಾರಾಜ ಮತ್ತು ಪರಾತ್ಪರ ಗುರು ಡಾಕ್ಟರರಿಗೆ ಪ್ರಾರ್ಥನಾಸ್ವರೂಪ ಪ್ರಶ್ನೆಯನ್ನು ಕೇಳತೊಡಗಿದೆನು ಹಾಗೂ ನನಗೆ ಹೊಸ ಹೊಸ ಅನುಭೂತಿಗಳು ಬರತೊಡಗಿದವು.

– ಶ್ರೀ. ಅಶೋಕ ನಾಯಿಕ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಶ್ರದ್ಧೆಯು ಭಕ್ತಿಯಲ್ಲಿ ರೂಪಾಂತರಗೊಳ್ಳುತ್ತದೆ ಅದುವೇ ಭಾವ !

‘ಭಾವವಿದ್ದಲ್ಲಿ ದೇವರು’ ಎಂಬ ಗಾದೆಮಾತಿದೆ. ‘ಶ್ರದ್ಧೆ ಇದ್ದಲ್ಲಿ ದೇವರು’ ಎಂದಿಲ್ಲ. ಭಾವವು ಶ್ರದ್ಧೆ ಮತ್ತು ಭಕ್ತಿಯ ಮಧ್ಯದಲ್ಲಿರುತ್ತದೆ. ಶ್ರದ್ಧೆಯು ಮೊದಲಿನ ಹಂತದಲ್ಲಿರುತ್ತದೆ ಎಂದು ಹೇಳಬಹುದು. ‘ಯಾರು ವಿಭಕ್ತನಲ್ಲವೋ ಅವನು ಭಕ್ತ’, ಇದು ಅದ್ವೈತದ ಸ್ಥಿತಿಯಾಗಿದೆ. ಶ್ರದ್ಧೆಯನ್ನು ಭಕ್ತಿಯ ರೂಪಾಂತರಗೊಳಿಸುವುದೇ ಭಾವವಾಗಿದೆ ! ಬುದ್ಧಿಯಲ್ಲಿ ಭಾವದ ಅಂಶವೇ ಇಲ್ಲ. ಆದುದರಿಂದ ಭಾವವು ಯಾವಾಗಲೂ ‘ನಿಷ್ಕಪಟ’ವಾಗಿರುತ್ತದೆ.

(ಆಧಾರ : ಸನಾತನನಿರ್ಮಿತಿ ಗ್ರಂಥ – ‘ಶಿಷ್ಯ’)

ಭಾವದಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ !

ಭಾವದಿಂದ ಸ್ಥೂಲದೇಹದ ಶುದ್ಧಿಯಾಗಲು ಆರಂಭವಾಗುತ್ತದೆ. ದೇಹದ ಶುದ್ಧಿಯಾಗುವುದು ಎಂದರೆ ಸತ್ತ್ವಗುಣ ಹೆಚ್ಚುವುದು. ಈ ಪ್ರವಾಸದಲ್ಲಿ ಜೀವವು ಸಾಧನೆಯಲ್ಲಿನ ಅನೇಕ ಹಂತಗಳನ್ನು ಕಲಿಯುತ್ತಿರುತ್ತದೆ. ವ್ಯಕ್ತ ಭಾವದಿಂದ ಪ್ರಾಣದೇಹ ಮತ್ತು ಪ್ರಾಣಮಯಕೋಷಗಳ ಶುದ್ಧಿಯಾಗುತ್ತದೆ ಹಾಗೂ ಅವ್ಯಕ್ತ ಭಾವದಿಂದ ಪ್ರಾಣಮಯಕೋಷ ಮತ್ತು ಮನೋಮಯ ಕೋಷಗಳ ಶುದ್ಧಿಯಾಗುತ್ತದೆ.

(ಆಧಾರ : ಸನಾತನ ನಿರ್ಮಿತಿ ಗ್ರಂಥ – ‘ಭಾವದ ಪ್ರಕಾರ ಮತ್ತು ಜಾಗೃತಿ’)

Leave a Comment