ನಾಮಜಪ ಮತ್ತು ಪ್ರಾರ್ಥನೆ ಭಾವಪೂರ್ಣವಾದರೆ ದೇವರನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದುದರಿಂದ ಪ್ರಾರ್ಥನೆ ಮಾಡುವಾಗ ಇಷ್ಟದೇವತೆಯ ರೂಪವನ್ನು ಕಣ್ಣುಗಳೆದುರು ತಂದು ಕಣ್ಣುಮುಚ್ಚಿ ಆ ರೂಪವನ್ನು ಸ್ಮರಿಸುತ್ತ ಚರಣಗಳ ಮೇಲೆ ದೃಷ್ಟಿಯನ್ನು ಸ್ಥಿರವಾಗಿಟ್ಟರೆ ಆಂತರಿಕ ಭಾವ ಜಾಗೃತವಾಗಲು ಸಹಾಯವಾಗುತ್ತದೆ. ಇದಕ್ಕಾಗಿ ಮಾಡುವ ಕೆಲವು ಭಾವಪ್ರಯೋಗಗಳನ್ನು ಮುಂದೆ ಕೊಡಲಾಗಿದೆ.
೧. ನಾವೆಲ್ಲರು ದೇವರ ಚರಣಗಳ ಹತ್ತಿರ ಕುಳಿತು ನಾಮಜಪವನ್ನು ಮಾಡುತ್ತಿದ್ದೇವೆ. ನಾವು ಅಂಗೈಯಲ್ಲಿ (ಬೊಗಸೆಯಲ್ಲಿ) ತಾಜಾ ನಳನಳಿಸುವ ಪರಿಮಳವಿರುವ ಹೂವುಗಳನ್ನು ಮತ್ತು ತುಳಸಿ ಎಲೆಗಳನ್ನು ತೆಗೆದುಕೊಂಡು ಭಗವಂತನ ಚರಣಗಳ ಮೇಲೆ ಅವುಗಳನ್ನು ಅರ್ಪಣೆ ಮಾಡುತ್ತಿದ್ದೇವೆ. ‘ಒಂದು ಹೂವು ಅರ್ಪಿಸುವುದು ಎಂದರೆ ಒಂದು ಸಲ ನಾಮವನ್ನು ಜಪಿಸುವುದು’, ಈ ರೀತಿ ಶರಣಾಗತಭಾವದಿಂದ ಲೀನವಾಗಿ ನಾಮಜಪವನ್ನು ಮಾಡೋಣ. ಹೂವುಗಳು ದೇವರ ಚರಣಗಳಲ್ಲಿ ಅರ್ಪಣೆಯಾಗಿರುವುದರಿಂದ ಆ ಹೂವುಗಳಿಗೂ ಆನಂದವಾಗುತ್ತಿದೆ. ‘ಆ ಸ್ಪಂದನಗಳನ್ನು ನಮಗೆ ಅನುಭವಿಸಲು ಸಾಧ್ಯವಾಗಲಿ’, ಎಂದು ಪ್ರಾರ್ಥನೆ ಮಾಡೋಣ. ಒಂದು ದಿನದ ಆಯುಷ್ಯವಿರುವ ಹೂವುಗಳು ದೇವರ ಚರಣಗಳಲ್ಲಿ ಅರ್ಪಣೆಯಾದವು ಮತ್ತು ಅವರ ಜೀವನವು ಸಾರ್ಥಕಗೊಂಡು ಅವರು ತಮ್ಮ ಉದ್ಧಾರವನ್ನು ಮಾಡಿಕೊಂಡರು; ಏಕೆಂದರೆ ಅವರಲ್ಲಿ ಕೋಮಲತೆ, ಮನಮೋಹಕತೆ ಮತ್ತು ಸೌಂದರ್ಯ ಇವುಗಳ ಸಮರ್ಪಣೆಯ ಭಾವವಾಗಿದೆ. ಅವರ ಈ ಗುಣಗಳಿಂದ ಅವರು ಆನಂದಪ್ರಾಪ್ತಿ, ಅಂದರೆ ಈಶ್ವರಪ್ರಾಪ್ತಿಯನ್ನು ಮಾಡಿಕೊಂಡರು.
೨. ‘ಹೇ ಭಗವಂತಾ, ನನಗೂ ಹೂವಿನಂತೆ ನಿನ್ನ ಚರಣಗಳಲ್ಲಿ ಸ್ಥಾನ ನೀಡು. ಹೂವುಗಳಲ್ಲಿ ಅಹಂ ಕಡಿಮೆ ಇದೆ ಮತ್ತು ಅವರಲ್ಲಿ ನಿನ್ನನ್ನು ನೋಡುವ ತಳಮಳ ಬಹಳವಿದೆ. ದೇವಾ, ನನ್ನಲ್ಲಿ ಅಂತಹ ತಳಮಳವಿಲ್ಲ ಅಥವಾ ಅವರಂತಹ ಗುಣಗಳೂ ಇಲ್ಲ. ದೇವಾ, ನಿನಗೆ ನಾನು ಹೇಗೆ ನೋಡಲಿ ? ನನಗೆ ನನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವು ನಿನ್ನಿಂದ ದೂರ ಒಯ್ಯುತ್ತಿವೆ. ನನಗೆ ನಿನ್ನ ಚರಣಗಳಲ್ಲಿ ಸ್ಥಾನ ನೀಡು!’ ಈ ರೀತಿ ದೇವರೊಂದಿಗೆ ಮಾತನಾಡುವಾಗ ಹೂವುಗಳು ಹಿಗ್ಗಿದವು ಮತ್ತು ನನಗೂ ಆನಂದವಾಯಿತು. ಆಗ ನನ್ನ ಮೇಲೆ ಉಪಾಯವಾಯಿತು ಮತ್ತು ನನ್ನಿಂದ ಅಂತರ್ಮನದಿಂದ ನಾಮಜಪ ಮಾಡುವ ಪ್ರಯತ್ನವು ಆಗತೊಡಗಿತು. ನನ್ನಿಂದ ವೈಖರಿಯಿಂದ ಆಗುವ ನಾಮಜಪವು ಈಗ ಭಾವಪೂರ್ಣವಾಗತೊಡಗಿತು. ನನ್ನ ಮನಸ್ಸಿನಲ್ಲಿದ್ದ ವಿಚಾರಗಳ ಪ್ರಮಾಣವು ಕಡಿಮೆಯಾಯಿತು. ನನ್ನ ಕಣ್ಣುಗಳ ಮುಂದೆ ನನಗೆ ದೇವರ ರೂಪ ಮತ್ತು ಚರಣಗಳನ್ನು ಕಾಣಿಸುವುದರಿಂದ ‘ಪ್ರತ್ಯಕ್ಷ ದೇವರು (ಗುರುಗಳು) ಬಂದಿದ್ದಾರೆ’, ಎಂಬ ಭಾವವನ್ನು ಇಡಲು ಪ್ರಯತ್ನಿಸಿರುವುದರಿಂದ ನಾಮಜಪವು ಹೆಚ್ಚೆಚ್ಚು ಗುಣಾತ್ಮಕ ಮತ್ತು ಭಾವಪೂರ್ಣವಾಗತೊಡಗಿತು.
೩. ನಾನು ವಾತಾವರಣದಲ್ಲಿ (ಗಾಳಿಯಲ್ಲಿ) ನಾಮಜಪವನ್ನು ಬರೆಯುತ್ತಿದ್ದೇನೆ. ನನ್ನ ಗಮನವು ನಾಮಜಪದ ಕಡೆಗೆ ಇರುವುದರಿಂದ ಅದರಲ್ಲಿ ಬರುವಂತಹ ಎಲ್ಲ ಅಡೆತಡೆಗಳು ದೂರವಾಗುತ್ತಿವೆ. ಈಗ ನಾನು ನಾಜಜಪವನ್ನು ಪ್ರತಿಯೊಂದು ಅವಯವ ಮತ್ತು ಜೀವಕೋಶಗಳ ಮೇಲೆ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಆದುದರಿಂದ ಮನಸ್ಸು ನಾಮಜಪದಲ್ಲಿ ಮಗ್ನವಾಗಿದೆ. ಪ್ರಾರಂಭದಲ್ಲಿ ಸರಿಯಾಗಿ ಆಗುತ್ತಿರಲಿಲ್ಲ. ಈಗ ಅಂತರ್ಮುಖತೆಯಿಂದ ಆಗುತ್ತಿದೆ. ನಾಮಜಪದಲ್ಲಿ ಅಂತರ್ಮುಖತೆ ಹೆಚ್ಚಾಗಿರುವುದರಿಂದ ಅಕ್ಕಪಕ್ಕದ ಸದ್ದು ಅಥವಾ ಚಟುವಟಿಕೆಗಳ ಕಡೆಗೆ ಗಮನ ಹೋಗುವುದಿಲ್ಲ. ಆದುದರಿಂದ ಒಳ್ಳೆಯದೆನಿಸುತ್ತಿದೆ. ನಾಮಜಪದಿಂದ ದೊರಕಿದ ಊರ್ಜೆ ಮತ್ತು ಶಕ್ತಿಯು ನನ್ನ ಮೇಲಿನ ಆವರಣ ತೆಗೆಯಲು ಸಹಾಯ ಮಾಡುತ್ತಿವೆ.
‘ಹೇ ಭಗವಂತಾ, ನನ್ನಿಂದ ಈ ರೀತಿ ಪ್ರಯತ್ನಗಳಾಗುವುದಿಲ್ಲ. ನೀನು ನನಗೆ ಈ ಅಂಶಗಳನ್ನು ಸೂಚಿಸಿರುವೆ. ದೇವಾ, ನನ್ನ ಮಾಧ್ಯಮದಿಂದ ನೀನೇ ಬರೆದುಕೊಂಡಿರುವೆ. ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
– ಓರ್ವ ಸಾಧಕಿ, ಸನಾತನ ಆಶ್ರಮ, ದೇವದ, ಪನವೇಲ. (೧೭.೧.೨೦೧೮)