ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?

‘ನಮ್ಮ ಪ್ರತಿಯೊಂದು ಚಟುವಟಿಕೆ ಅಷ್ಟೇ ಅಲ್ಲದೆ, ನಾವು ತೆಗೆದುಕೊಳ್ಳುವ ಪ್ರತಿಯೊಂದು ಶ್ವಾಸವೂ ಕೇವಲ ಗುರುಗಳ ಕೃಪೆಯಿಂದಲೇ ನಡೆಯುತ್ತಿದೆ’, ಎಂಬ ಅರಿವನ್ನು ಕೃತಜ್ಞತಾಪೂರ್ವಕವಾಗಿ ಇಟ್ಟರೆ ನಾವು ನಿರಂತರವಾಗಿ ಭಾವಾವಸ್ಥೆಯಲ್ಲಿ ಇರಬಹುದು. ಇದಕ್ಕಾಗಿ ನಾವು ನಮ್ಮ ಪ್ರತಿಯೊಂದು ಕೃತಿಯನ್ನು ಭಗವಂತನೊಂದಿಗೆ ಹೇಗೆ ಜೋಡಿಸಬಹುದು ಎಂಬುವುದರ ಬಗ್ಗೆ ದೇವರು ಸೂಚಿಸಿದ ಭಾವಪೂರ್ಣ ಪ್ರಾರ್ಥನೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಬೆಳಗ್ಗೆ ಎದ್ದ ನಂತರ ಇಟ್ಟುಕೊಳ್ಳುವ ಭಾವ

ಬೆಳಗ್ಗೆ ಎದ್ದ ನಂತರ, ‘ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನು ನೋಡಲು ಸಾಧ್ಯವಾಯಿತು’, ಹೀಗೆಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

‘ಹೇ ಭಗವಂತಾ, ದಿನವಿಡೀ ಪ್ರತಿಯೊಂದು ಕ್ಷಣಕ್ಕೂ ನನಗೆ ನಿನ್ನ ಸ್ಮರಣೆಯಾಗಲಿ. ಪ್ರತಿಯೊಬ್ಬರಲ್ಲೂ ನಿನ್ನನ್ನು ನೋಡುವಂತಾಗಲಿ. ಚರಾಚರದಲ್ಲಿ ನಿನ್ನ ಅಸ್ತಿತ್ವವನ್ನು ಅನುಭವಿಸುವಂತಾಗಲಿ. ಪ್ರತಿಯೊಂದು ಪ್ರಸಂಗದ ಮಾಧ್ಯಮದಿಂದ ನೀನೇ ಭೇಟಿಯಾಗುವೆ ಎಂಬ ಭಾವವನ್ನಿಟ್ಟು ಸತತವಾಗಿ ಕಲಿಯುವ ಸ್ಥಿತಿಯಲ್ಲಿರಲು ಆಗಲಿ. ನನ್ನ ತಪ್ಪುಗಳನ್ನು ಪೂರ್ತಿಯಾಗಿ ಸ್ವೀಕರಿಸಲು ಸಾಧ್ಯವಾಗಲಿ ಮತ್ತು ಅದರ ಬಗ್ಗೆ ನನ್ನ ಸಂವೇದನಾಶೀಲತೆಯು ಹೆಚ್ಚಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.

೨. ಹಾಸಿಗೆಯನ್ನು ಮಡಚುವಾಗ

ದೇವರೆ, ಈ ಸೇವೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ.

೩. ಹಲ್ಲು ತಿಕ್ಕುವಾಗ

ನನ್ನ ಬಾಯಲ್ಲಿ ಚೈತನ್ಯ ಬರುವುದಕ್ಕಾಗಿ ಮತ್ತು ನನ್ನ ವಾಣಿಯು ಶುದ್ಧವಾಗುವುದಕ್ಕಾಗಿ ನೀವೇ ಇವುಗಳೆಲ್ಲವನ್ನು ಒದಗಿಸಿ ಕೊಟ್ಟಿರುವಿರಿ. ಗುರುದೇವಾ, ನನ್ನ ಬಾಯಿಂದ ನಿಮಗೆ ಅಪೇಕ್ಷಿತವಾಗಿರುವುದೇ ಮಾತನಾಡಲ್ಪಡಲಿ. ನನ್ನ ಬಾಯಿ ಶುದ್ಧವಾಗಲಿ.

೪. ಸ್ನಾನ ಮಾಡುವಾಗ

ಗುರುದೇವಾ, ಈ ನೀರೆಂದರೆ ನಿಮ್ಮ ಚರಣತೀರ್ಥವಾಗಿದೆ. ಅದರ ಚೈತನ್ಯದಿಂದ ನನ್ನ ಸ್ಥೂಲ ಮತ್ತು ಸೂಕ್ಷ್ಮದೇಹಗಳ ಶುದ್ಧಿಯಾಗಲಿ. ದೇಹದ ಬಗೆಗಿನ ನನ್ನ ಆಸಕ್ತಿಯು ನಷ್ಟವಾಗಿ ದೇಹವು ಪವಿತ್ರವಾಗಿ ನಿಮ್ಮ ಚರಣ ಸೇವೆಗಾಗಿ ಸಮರ್ಪಿತವಾಗಲಿ.

೫. ಬಟ್ಟೆಗಳನ್ನು ಧರಿಸುವಾಗ

ಭಗವಂತಾ, ನಿನ್ನ ಚೈತನ್ಯದಿಂದ ತುಂಬಿರುವ ಈ ಬಟ್ಟೆಗಳನ್ನು ನೀನೇ ನನಗೆ ಕೊಟ್ಟಿರುವೆ. ಅದಕ್ಕಾಗಿ ನನ್ನ ಮನಸ್ಸಿನಲ್ಲಿ ನಿನ್ನ ಬಗ್ಗೆ ನಿರಂತರವಾದ ಕೃತಜ್ಞತೆಯ ಭಾವವು ಸ್ಥಿರವಾಗಿ ಉಳಿಯಲಿ.

– ಸೌ. ಸ್ವಾತಿ ಶಿಂದೆ (ಶೇ. ೬೬ ಆಧ್ಯಾತ್ಮಿಕ ಮಟ್ಟ), ಸನಾತನ ಆ‌ಶ್ರಮ. (೬.೧.೨೦೧೬)

ದಿನನಿತ್ಯ ವಿವಿಧ ಕೃತಿಗಳನ್ನು ಮಾಡುವಾಗ ಇಟ್ಟುಕೊಂಡ ಭಾವ !

೧. ಮುಖಕ್ಕೆ ಪೌಡರ್ ಹಚ್ಚಿಕೊಳ್ಳುವಾಗ ಇಟ್ಟುಕೊಂಡ ಭಾವ

ಮುಖಕ್ಕೆ ಪೌಡರ್ ಹಚ್ಚಿಕೊಳ್ಳುವಾಗ ಅದು ಪೌಡರ್ ಆಗಿರದೇ ವ್ರಜಭೂಮಿಯ (ವೃಂದಾವನದ) ಶ್ರೀಕೃಷ್ಣ, ರಾಧಾ, ಮತ್ತು ಗೋಪಿಯರ ಚರಣಸ್ಪರ್ಶದಿಂದ ಪಾವನಗೊಂಡ ಮಣ್ಣಾಗಿದೆ ಎಂಬ ಭಾವದಿಂದ ಪೌಡರ್ ಹಚ್ಚಿಕೊಳ್ಳಲಾಗುತ್ತದೆ ಮತ್ತು ಮನಸ್ಸಿನಲ್ಲಿ ಶ್ರೀಕೃಷ್ಣನ ಬಗೆಗಿನ ಭಾವವು ಜಾಗೃತವಾಗುತ್ತದೆ.

೨. ಊಟದ ಪಾತ್ರೆಗಳನ್ನು ತೊಳೆಯುವಾಗ ಇಟ್ಟುಕೊಂಡ ಭಾವ

ಊಟದ ನಂತರ ನಾನು ನನ್ನ ತಟ್ಟೆ, ಬಟ್ಟಲು ಮತ್ತು ಲೋಟವನ್ನು ತೊಳೆಯುವಾಗ ‘ಪರಾತ್ಪರ ಗುರು ಡಾ. ಆಠವಲೆಯವರು ಊಟ ಮಾಡಿದ ಪಾತ್ರೆಗಳು ಅಥವಾ ತಿರುಪತಿ ಬಾಲಾಜಿಗೆ ತೋರಿಸಿದ ನೈವೇದ್ಯದ ಪಾತ್ರೆಗಳನ್ನು ತೊಳೆಯುತ್ತಿದ್ದೇನೆ’ ಎಂದು ನನಗೆ ಅರಿವಾಗುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ.

೩. ಪಾತ್ರೆಗಳನ್ನು ತೊಳೆಯಲು ಇಟ್ಟ ಬೋಗುಣಿಯ ಬಗ್ಗೆ ಇಟ್ಟುಕೊಂಡ ಭಾವ

ಪಾತ್ರೆಗಳನ್ನು ತೊಳೆಯಲು ನೀರಿನಿಂದ ತುಂಬಿಟ್ಟ ೩ ಬೋಗುಣಿಗಳು ಅಂದರೆ ಕ್ರಮವಾಗಿ ‘ಗೋಪಿಕುಂಡ’, ‘ರಾಧಾಕುಂಡ’ ಮತ್ತು ‘ಶ್ಯಾಮಕುಂಡ’ವಾಗಿದ್ದು; ಪಾತ್ರೆ ಎಂದರೆ ನನ್ನ ಮನಸ್ಸಾಗಿದೆ. ಆದುದರಿಂದ ಮೂರು ಕುಂಡಗಳಲ್ಲಿ ಸ್ನಾನ ಮಾಡಿ ನನ್ನ ಮನಸ್ಸು ಶುದ್ಧ ಮತ್ತು ಪವಿತ್ರವಾಗುತ್ತಿದೆ, ಎಂದು ನನಗೆ ಅರಿವಾಗುತ್ತದೆ ಮತ್ತು ಆನಂದ ಸಿಗುತ್ತದೆ.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) ಸನಾತನ ಆಶ್ರಮ, ರಾಮನಾಥಿ, ಗೋವಾ.

Leave a Comment