ಈ ಲೇಖನದಲ್ಲಿ ಮಳೆಗಾಲದಲ್ಲಿನ ರೋಗಗಳ ಮೇಲೆ ಆಯುರ್ವೇದದ ಔಷಧಿಗಳ ಉಪಯುಕ್ತತೆಯ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಸೂಚನೆ : ಔಷಧಿಗಳ ಮೇಲೆ ಕ್ಲಿಕ್ ಮಾಡಿ ಆಯಾ ಔಷಧಿಯ ಬಗ್ಗೆ ಮಾಹಿತಿಯನ್ನು ಓದಿ.
ಔಷಧಿಗಳ ಹೆಸರುಗಳು | ಮುಖ್ಯ ಉಪಯೋಗ (ಟಿಪ್ಪಣ) | |
---|---|---|
1. | ಶುಂಠಿ ಚೂರ್ಣ | ಕೆಮ್ಮು, ಕಫವಾಗುವುದು, ಜೀರ್ಣಾಂಗವ್ಯೂಹದ ರೋಗಗಳು ಮತ್ತು ಸಂಧಿವಾತ |
2. | ಪಿಪ್ಪಲಿ (ಹಿಪ್ಪಲಿ) ಚೂರ್ಣ | ಉಸಿರಾಟ ಮತ್ತು ಪಚನ ವ್ಯೂಹಗಳ ಸಮಸ್ಯೆಗಳು |
3. | ವಾಸಾ (ಆಡುಸೋಗೆ) ಚೂರ್ಣ | ಜ್ವರದ ಸೊಂಕು, ಉಷ್ಣತೆಯ ರೋಗ ಮತ್ತು ಕಫ ಆಗುವುದು |
4. | ತುಂಗಮುಸ್ತೆ (ಭದ್ರಮುಷ್ಠಿ) ಚೂರ್ಣ | ಜ್ವರ, ವಾಂತಿ ಮತ್ತು ಭೇದಿ |
5. | ಯೋಗರಾಜ ಗುಗ್ಗುಳ (ಮಾತ್ರೆಗಳು) | ನೋವು ಮತ್ತು ವಾತದ ರೋಗಗಳು |
6. | ತ್ರಿಫಲಾ ಗುಗ್ಗುಲು (ಮಾತ್ರೆಗಳು) | ಮೂಲವ್ಯಾಧಿ ಮತ್ತು ಮಾಸಿಕ ಧರ್ಮದ ಸಮಸ್ಯೆಗಳು |
7. | ಗಂಧರ್ವ ಹರಿತಕಿ ವಟಿ (ಮಾತ್ರೆಗಳು) | ಮಲಬದ್ಧತೆ |
8. | ಕುಟಜ ಘನವಟಿ (ಮಾತ್ರೆಗಳು) | ಆಮಶಂಕೆ, ಭೇದಿ (ಅತಿಸಾರ) ಇತ್ಯಾದಿ |
9. | ಲಘುಮಾಲಿನಿ ವಸಂತ (ಮಾತ್ರೆಗಳು) | ತಂಪುಗಾಳಿಯ ಸ್ಪರ್ಶದಿಂದ ಮೈಮೇಲೆ ಪಿತ್ತ ಏಳುವುದು |
10. | ಲಶುನಾದಿ ವಟಿ (ಮಾತ್ರೆಗಳು) | ಉತ್ತಮ ಅಗ್ನಿವರ್ಧಕ (ಪಚನಶಕ್ತಿಯನ್ನು ಹೆಚ್ಚುಸುವುದು) |
11. | ಸಂಶಮನಿ ವಟಿ (ಮಾತ್ರೆಗಳು) | ರೋಗ ಪ್ರತಿರೋಧಕ ಕ್ಷಮತೆಯನ್ನು ಹೆಚ್ಚಿಸುವುದು |
12. | ತ್ರಿಭುವನಕೀರ್ತಿರಸ (ಮಾತ್ರೆಗಳು) | ಎಲ್ಲ ರೀತಿಯ ಜ್ವರಗಳು |
13. | ಚಂದ್ರಾಮೃತರಸ (ಮಾತ್ರೆಗಳು) | ಎಲ್ಲ ರೀತಿಯ ಕೆಮ್ಮು |
ಟಿಪ್ಪಣ – ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಪರಾಡಕರ, ಆಶ್ರಮ, ರಾಮನಾಥಿ, ಗೋವಾ. (೫.೭.೨೦೨೨)
want to learn more about ayurveda medicine and home remedy
ನಮಸ್ಕಾರ ರಾಜೇಶ ರವರೇ
ಆಯುರ್ವೇದ ಮತ್ತು ಮನೆ ಮದ್ದಿನ ಬಗ್ಗೆ ಸನಾತನ ಪ್ರಕಾಶಿಸಿರುವ ಎಲ್ಲ ಲೇಖನಗಳನ್ನು ತಾವು ಮುಂದಿನ ಲಿಂಕ್ಅಲ್ಲಿ ವೀಕ್ಷಿಸಬಹುದು – https://www.sanatan.org/kannada/category/sanjeevani-for-times-of-calamity/healing/ayurveda
ಇಂತಿ,
ಸನಾತನ ಸಂಸ್ಥೆ