ದೇವರ ಮುಂದೆ ನಮ್ರತೆಯಿಂದ ಮನೋಕಾಮನೆಯನ್ನು ತಳಮಳದಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎಂದು ಹೇಳುತ್ತಾರೆ. ಪ್ರಾರ್ಥನೆಯಲ್ಲಿ ಗೌರವ, ಪ್ರೇಮ, ವಿನಂತಿ, ಶ್ರದ್ಧೆ ಹಾಗೂ ಭಕ್ತಿಭಾವ ಇತ್ಯಾದಿಗಳ ಸಮಾವೇಶವಿದೆ. ಪ್ರಾರ್ಥನೆ ಮಾಡುವಾಗ ಭಕ್ತನ ಅಸಾಮರ್ಥ್ಯ ಹಾಗೂ ಶರಣಾಗತಿಯು ವ್ಯಕ್ತವಾಗುತ್ತಿರುತ್ತದೆ ಹಾಗೂ ಅವನು ಕರ್ತೃತ್ವವನ್ನು ಈಶ್ವರನಿಗೆ ಕೊಡುತ್ತಾ ಇರುತ್ತಾನೆ. ದೇವರನ್ನು ಗುರುತಿಸಲು ಹಾಗೂ ಅವರ ಅಸ್ತಿತ್ವವು ದೇಹ, ಮನಸ್ಸು ಮತ್ತು ಬುದ್ಧಿಗೆ ಅರಿವಾಗಲು ಪ್ರಾರ್ಥನೆಯ ಅವಶ್ಯಕತೆಯಿರುತ್ತದೆ. ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಿಕ್ಕಿದ್ದರೆ ನಿರಂತರ ಪ್ರಾರ್ಥನೆಯನ್ನು ಮಾಡುತ್ತಿರಬೇಕು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ. (೪.೫.೨೦೧೧)