೧. ಸಪ್ತರ್ಷಿಗಳು ನುಡಿದ ಪರಾತ್ಪರ ಗುರು ಡಾಕ್ಟರರ ಕಾರ್ಯದ ಮಹತ್ವ
ಸಪ್ತರ್ಷಿ ಜೀವನಾಡಿ ಪಟ್ಟಿಯೆಂದರೆ ಮಹರ್ಷಿಗಳು ಪ್ರತ್ಯಕ್ಷ ಬಿಡಿಸಿ ಹೇಳಿರುವ ಪರಾತ್ಪರ ಗುರು ಡಾಕ್ಟರರ ಒಂದು ಪ್ರಕಾರದ ಅವತಾರಚರಿತ್ರೆಯೆ ಆಗಿದೆ. ಪರಾತ್ಪರ ಗುರು ಡಾಕ್ಟರರು ‘ನನ್ನ ಚರಿತ್ರೆಯನ್ನು ಯಾರು ಬರೆಯುವರು ?’ ಎನ್ನುತ್ತಿದ್ದರು. ಅವರ ಅವತಾರಚರಿತ್ರೆಯನ್ನು ಮಹರ್ಷಿಗಳೇ ಬರೆಯಲು ಸಾಧ್ಯ, ನಾವು ಕೇವಲ ಅದನ್ನು ‘ಪರಾತ್ಪರ ಗುರು ಡಾಕ್ಟರರ ಅವತಾರಲೀಲೆ’ಯೆಂದು ಅನುಭವಿಸಬಲ್ಲೆವು.
೧ ಅ. ಸಪ್ತರ್ಷಿಗಳು ಪರಾತ್ಪರ ಗುರು ಡಾಕ್ಟರರನ್ನು ‘ಪರಮ ಗುರೂಜಿ’ ಎನ್ನುವುದು : ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ವಸಿಷ್ಠ ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರನ್ನು ‘ಪರಮ ಗುರೂಜಿ’ ಎಂದು ಉಲ್ಲೇಖಿಸುತ್ತಾರೆ. ‘ಪರಮಗುರೂಜಿ ಇವರು ಸ್ವತಃ ಶ್ರೀಮನ್ನಾರಾಯಣನ ಅವತಾರವಾಗಿದ್ದಾರೆ’, ಎಂದು ಅವರು ವಿಶ್ವಾಮಿತ್ರರಿಗೆ ಹೇಳುತ್ತಾರೆ.
೧ ಆ. ಯೋಗನಿದ್ರೆಯಲ್ಲಿನ ಪರಾತ್ಪರ ಗುರು ಡಾಕ್ಟರರ ಕಾರ್ಯ : ‘ಹೇಗೆ ನಾರಾಯಣನು ಶೇಷನ ಮೇಲೆ ಯೋಗನಿದ್ರೆಯಲ್ಲಿರುತ್ತಾನೋ, ಹಾಗೆಯೇ ಪರಮಗುರೂಜಿಯವರ ಬ್ರಹ್ಮಾಂಡದಲ್ಲಿನ ಕಾರ್ಯವು ಯೋಗನಿದ್ರೆಯಲ್ಲಿಯೇ ನಡೆಯುತ್ತಿದೆ’, ಎಂದು ಅವರು ಹೇಳುತ್ತಾರೆ. (ಪರಾತ್ಪರ ಗುರು ಡಾಕ್ಟರರಿಗೆ ನಡುನಡುವೆ ವಿಪರೀತ ಗ್ಲಾನಿ ಬಂದಂತಾಗುತ್ತದೆ. ಈ ಸಮಯದಲ್ಲಾಗುವ ನಿರ್ಗುಣ ಸ್ತರದ ಕಾರ್ಯಕ್ಕೆ ‘ಯೋಗ ನಿದ್ರೆಯಲ್ಲಿನ ಕಾರ್ಯ’, ಎನ್ನಲಾಗುತ್ತದೆ. – ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ)
೧ ಇ. ‘ಪರಮಗುರೂಜಿಯವರ ಆಜ್ಞೆಗನುಸಾರ ನಾವು ಕಾರ್ಯ ಮಾಡುತ್ತೇವೆ’, ಎಂದು ಸಪ್ತರ್ಷಿಗಳು ಹೇಳುವುದು : ಮಹರ್ಷಿಗಳು ಹೇಳುತ್ತಾರೆ, ‘ಪರಮಗುರೂಜಿಯವರ ಆದೇಶದಂತೆಯೇ ನಮ್ಮ ಕಾರ್ಯ ನಡೆಯುತ್ತಿದೆ’; ಅದರೆ ಪರಾತ್ಪರ ಗುರು ಡಾಕ್ಟರರು ಮಾತ್ರ ‘ಸಪ್ತರ್ಷಿಗಳು ಹೇಳಿದಂತೆಯೇ ನಾವು ಮಾಡಬೇಕು’ ಎನ್ನುತ್ತಾರೆ. ಇದೇ ಪರಾತ್ಪರ ಗುರು ಡಾಕ್ಟರರ ‘ಅವತಾರಮಾಯೆ’ ಎಂದು ಹೇಳಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ.
೧ ಈ. ಪರಾತ್ಪರ ಗುರು ಡಾಕ್ಟರರ ಕಾರ್ಯವೆಂದರೆ ಶ್ರೀವಿಷ್ಣುವಿನ ‘ಕಲ್ಕಿ’ ಅವತಾರ ಕಾರ್ಯದ ಒಂದು ಅಂಶವಾಗಿದೆ ! : ‘ಯುಗಯುಗಾಂತರಗಳಿಂದ ಭಗವಂತನು ಅವತಾರಿ ಕಾರ್ಯ ಮಾಡಲು ಪೃಥ್ವಿಯ ಮೇಲೆ ಬರುತ್ತಾ ಇರುತ್ತಾನೆ. ಈಗ ಕಲಿಯುಗ ನಡೆಯುತ್ತಿರುವುದರಿಂದ ಪರಾತ್ಪರ ಗುರು ಡಾಕ್ಟರರು ಶ್ರೀಷ್ಣುವಿನ ‘ಕಲ್ಕಿ’ ಅವತಾರ ಕಾರ್ಯದ ಒಂದು ಅಂಶದೊಂದಿಗೆ ಭೂಮಿಯಲ್ಲಿ ಅವತರಿಸಿದ್ದಾರೆ’, ಎಂದು ಸಪ್ತರ್ಷಿಗಳು ಹೇಳುತ್ತಾರೆ.
೧ ಉ. ‘ಅವತಾರ ಪುರುಷರಿಗೆ ಮೋಕ್ಷವಿಲ್ಲ, ಆದರೆ ಕಾರ್ಯಕ್ಕಾಗಿ ಪದೇ ಪದೇ ಅವತರಿಸಬೇಕಾಗುತ್ತದೆ, ಆದ್ದರಿಂದ ಪರಾತ್ಪರ ಗುರು ಡಾಕ್ಟರರು ಕೂಡ ಇದಕ್ಕೆ ಅಪವಾದವಲ್ಲ’, ಎಂದು ಸಪ್ತರ್ಷಿಗಳು ಹೇಳುತ್ತಾರೆ : ಪ್ರತಿ ೫೦೦ ವರ್ಷಗಳಿಗೊಮ್ಮೆ ಅವತಾರಗಳಿಗೆ ಪೃಥ್ವಿಯ ಮೇಲೆ ದೈವೀ ಅಂಶದ ರೂಪದಲ್ಲಿ ಬರಬೇಕಾಗುತ್ತದೆ; ಆದ್ದರಿಂದ ಅವತಾರಗಳಿಗೆ ಮೋಕ್ಷವಿಲ್ಲ, ಆದರೆ ಕಾರ್ಯಕ್ಕಾಗಿ ಪುನಃ ಅವತರಿಸುವುದು ಹಾಗೂ ಮನುಕುಲದ ಕಲ್ಯಾಣ ಮಾಡುವುದು, ಈ ರೀತಿ ಅವರ ಜೀವನವಿರುತ್ತದೆ. ಇದೇ ರೀತಿ ದೇಹಧಾರಿ ಅವತಾರಿ ಜೀವನವನ್ನು ಪರಾತ್ಪರ ಗುರು ಡಾಕ್ಟರರು ಜೀವಿಸುತ್ತಿದ್ದಾರೆಂದು ಸಪ್ತರ್ಷಿಗಳು ಹೇಳುತ್ತಾರೆ.
೨. ಅವತಾರಿ ಕಾರ್ಯದ ಪ್ರಚಂಡ ದೈವೀ ಶಕ್ತಿಯ ಸಂಚಾರ ಸಹಿಸಲು ದೇಹ ಪ್ರಕೃತಿಗೆ ಸಾಧ್ಯವಿಲ್ಲದ ಕಾರಣ ಪರಾತ್ಪರ ಗುರು ಡಾಕ್ಟರರ ದೇಹ ಕ್ಷೀಣವಾದಂತೆ ತೋರುತ್ತದೆ
ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿಯು ಹೆಚ್ಚಿನ ಸಮಯ ಅತ್ಯಲ್ಪವಿರುತ್ತದೆ. ಅವರಿಗೆ ಅತ್ಯಂತ ಆಯಾಸವಿರುತ್ತದೆ. ಈ ವಿಷಯದಲ್ಲಿ ಸಪ್ತರ್ಷಿಗಳು, ‘ಸ್ಥೂಲ ದೇಹಧಾರಣೆಗೆ ಶಕ್ತಿಯ ಬಂಧನವಿರುತ್ತದೆ. ಕಾಲಕ್ಕನುಸಾರ ಆವಶ್ಯಕವಿರುವ ಶಕ್ತಿಯು ದೇಹದಲ್ಲಿ ಸಂಚರಿಸುವಾಗ, ಆ ಮನುಷ್ಯ ದೇಹವು ಪ್ರಚಂಡ ಊರ್ಜಾಸ್ರೋತವನ್ನು ಸಹಿಸಲಾಗದ ಕಾರಣ ದೇಹವು ಕ್ಷೀಣವಾಗಿ ನಿಷ್ಕ್ರಿಯವಾಗಿರುತ್ತದೆ’ ಎಂದು ಹೇಳುತ್ತಾರೆ.
೩. ಸಪ್ತರ್ಷಿಗಳು ಅಶರೀರವಾಣಿಯಲ್ಲಿ ಬಂದು ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗುವುದು
ಪರಾತ್ಪರ ಗುರು ಡಾಕ್ಟರರ ಕೋಣೆಯ ಬಾಗಿಲು ಮುಚ್ಚಿದ್ದರೂ ‘ಅದನ್ನು ತೆರೆದು ಯಾರೊ ಕೋಣೆಯೊಳಗೆ ಬರುತ್ತಿದ್ದಾರೆ’ ಎಂದು ಅನಿಸುತ್ತದೆ. ಈ ವಿಷಯದಲ್ಲಿ ಹೇಳುವಾಗ ಸಪ್ತರ್ಷಿಗಳು ಹೀಗೆಂದರು, ‘ಅಲ್ಲಿ ನಾವೇ ಇರುತ್ತೇವೆ. ನಾವು ಅಶರೀರ ವಾಣಿಯಿಂದ (ಸೂಕ್ಷ್ಮದಿಂದ) ಕೋಣೆಯೊಳಗೆ ಪ್ರವೇಶಿಸಿ ಪರಮ ಗುರೂಜಿಯವರನ್ನು ಭೇಟಿಯಾಗಿ ಹೋಗುತ್ತೇವೆ. ಕಳೆದ ೨೫ ವರ್ಷಗಳಿಂದ ನಾವು ಅವರನ್ನು ಹೀಗೆಯೆ ಭೇಟಿಯಾಗುತ್ತಿದ್ದೇವೆ’.
೪. ಪರಾತ್ಪರ ಗುರು ಡಾಕ್ಟರರು ಎಂದರೆ ಭೂತಲದಲ್ಲಿನ ಮಾರ್ಗದರ್ಶಕ ಮಹರ್ಷಿಗಳೇ ಆಗಿದ್ದಾರೆ !
ಸಪ್ತರ್ಷಿಗಳು ಯಾವಾಗಲೂ ಹೇಳುತ್ತಾರೆ, ‘ಮುಂದಿನ ದೈವೀ ಪ್ರವಾಸ ಹೇಗೆ ಮತ್ತು ಎಲ್ಲಿ ಮಾಡಲಿಕ್ಕಿದೆ ಎಂಬುದನ್ನು ಪರಮಗುರೂಜಿಯವರಲ್ಲಿಯೇ ವಿಚಾರಿಸಿ. ಹಾಗೆಯೆ ನಾವು ಮಾಡುವೆವು.’ ಇದರಿಂದ ಏನರಿವಾಗುತ್ತದೆ ಅಂದರೆ, ಪರಾತ್ಪರ ಗುರು ಡಾಕ್ಟರರು ಅಂದರೆ ಭೂತಲದಲ್ಲಿನ ಮಾರ್ಗದರ್ಶಕ ಮಹರ್ಷಿಯೇ ಆಗಿದ್ದಾರೆ.
೫. ಪ್ರತಿಯೊಂದು ಯುಗದಲ್ಲಿ ಘಟಿಸಿರುವ ಅವತಾರಲೀಲೆಯ ವರ್ಣನೆಯನ್ನು ಸಪ್ತರ್ಷಿಗಳು ಆಯಾಯ ಯುಗದಲ್ಲಿ ರಾಮಾಯಣ, ಮಹಾಭಾರತದ ರೂಪದಲ್ಲಿ ಬರೆದಿಡುವುದು ಹಾಗೂ ಕಲಿಯುಗದಲ್ಲಿಯೂ ಜೀವನಾಡಿಪಟ್ಟಿಯ ಮೂಲಕ ಹೀಗೆಯೆ ಘಟಿಸಿರುವುದು ಅರಿವಾಗುತ್ತದೆ
ಈ ಮೇಲಿನ ವಿಷಯಗಳಿಂದ ಅರಿವಾಗುವುದೇನೆಂದರೆ, ಪ್ರತಿಯೊಂದು ಯುಗದಲ್ಲಿ ಅವತಾರ ಲೀಲೆ ಘಟಿಸಿತು ಹಾಗೂ ಅದರ ವರ್ಣನೆಯನ್ನೂ ಬೇರೆ ಬೇರೆ ಋಷಿಗಳೇ ಮಾಡಿಟ್ಟರು. ತ್ರೇತಾಯುಗದಲ್ಲಿ ರಾಮಾಯಣ ಘಟಿಸಿತು ಹಾಗೂ ಮಹರ್ಷಿ ವಾಲ್ಮಿಕಿಯವರು ಅದನ್ನು ಮೊದಲೇ ಬರೆದರು. ಅನಂತರ ದ್ವಾಪರಯುಗದಲ್ಲಿ ಶ್ರೀಕೃಷ್ಣಲೀಲೆಯ ವರ್ಣನೆಯನ್ನು ಮಹರ್ಷಿ ವೇದವ್ಯಾಸರು ಶ್ರೀ ಗಣಪತಿಯಿಂದ ಮಹಾಭಾರತದ ರೂಪದಲ್ಲಿ ಬರೆಯಿಸಿಕೊಂಡರು ಹಾಗೂ ಈಗಲೂ ಇತಿಹಾಸದ ಪುನರಾವರ್ತನೆಯಾಗುತ್ತಿದೆ. ಈಗಿನ ಕಲಿಯುಗದಲ್ಲಿ ಪ್ರತ್ಯಕ್ಷ ಶ್ರೀವಿಷ್ಣುವಿನ ಅಂಶಾವತಾರಿ, ಅಂದರೆ ಪರಾತ್ಪರ ಗುರು ಡಾಕ್ಟರರ ಚರಿತ್ರ ಲೀಲೆಯ ವರ್ಣನೆಯನ್ನು ಸಪ್ತರ್ಷಿಜೀವನಾಡಿಪಟ್ಟಿಯ ರೂಪದಲ್ಲಿ ಸಪ್ತರ್ಷಿಗಳೇ ಸಂವಾದದ ಮೂಲಕ ಮಾಡಿಟ್ಟಿದ್ದಾರೆ. ಇದರಲ್ಲಿ ಬುದ್ಧಿಪ್ರಾಮಾಣ್ಯವಾದಿಗಳು ಸಂಶಯಪಡುವ ಆವಶ್ಯಕತೆಯಿಲ್ಲ. ಹೀಗೆ ಪ್ರತಿಯೊಂದು ಯುಗದಲ್ಲಿಯೂ ಘಟಿಸುತ್ತಾ ಬಂದಿದೆ ಹಾಗೂ ಮುಂದೆಯೂ ಘಟಿಸಲಿಕ್ಕಿದೆ.’
– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ (೨೨.೧೧.೨೦೧೫)
ಪರಾತ್ಪರ ಗುರು ಡಾಕ್ಟರರ ಅವತಾರಕಾರ್ಯವನ್ನು ವಿವರಿಸುವಾಗ ಸಪ್ತರ್ಷಿಗಳು ಹೇಳುತ್ತಾರೆ, ‘ನಾವು ಪರಮಗುರೂಜಿಯವರ ಹೇಳಿಕೆಗನುಸಾರ ಈಗ ಪಂಚಮಹಾಭೂತಗಳಿಗೆ ಆಜ್ಞೆ ನೀಡಿದ್ದೇವೆ ಏನೆಂದರೆ, ಈಗ ನಿಮ್ಮ ಆಟವನ್ನು ಪೃಥ್ವಿಯ ಮೇಲೆ ಆರಂಭಿಸಿರಿ; ಆದರೆ ಪರಮಗುರೂಜಿಯವರ ಭಕ್ತರಿಗೆ ಮಾತ್ರ ಅಪಾಯವಾಗದಂತೆ ನೋಡಿಕೊಳ್ಳಿ. (ಎಲ್ಲೆಡೆ ನಡೆಯುವ ನೈಸರ್ಗಿಕ ಆಪತ್ತುಗಳ ಮಾಲಿಕೆಯನ್ನು ನೋಡುವಾಗ ಈಗ ನಿಜವಾಗಿಯೂ ಪಂಚಮಹಾಭೂತಗಳ ಪ್ರಕೋಪವಾಗಿದೆ, ಎಂಬುದು ಅರಿವಾಗುತ್ತದೆ ! – ಸಂಕಲನಕಾರರು)