ಪ.ಪೂ. ಭಕ್ತರಾಜ ಮಹಾರಾಜರಿಗೆ (ಬಾಬಾ) ಶಿಷ್ಯಂದಿರು ಪ್ರಶ್ನೆಗಳನ್ನು ಕೇಳಿದಾಗ ಅವರು ನೀಡಿದ ಅಮೂಲ್ಯ ಉತ್ತರಗಳು ಅನೇಕ ಸಂಗತಿಗಳನ್ನು ಕಲಿಸುವಂತಿವೆ. ಅದರ ಎರಡು ಉದಾಹರಣೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಶಿಷ್ಯನ ಬಗ್ಗೆ ಗುರುಗಳ ಭಾವ
ಪ್ರಶ್ನೆ : ತಮಗೆ ನಮ್ಮ ಬಗ್ಗೆ ಕಾಳಜಿಯೆನಿಸುತ್ತದೆಯೇ ?
ಬಾಬಾ : ನನಗೆ ತಮ್ಮ ಬಗ್ಗೆ ಯಾವುದೇ ಕಾಳಜಿಯೆನಿಸುವುದಿಲ್ಲ, ಎಂದು ತಮಗೆ ಅನಿಸುತ್ತಿದ್ದರೆ, ಅದು ಹಾಗಿಲ್ಲ. ನೀವು ಜ್ಞಾನಿಗಳಾಗಿದ್ದೀರಿ ಮತ್ತು ಭಕ್ತರಾಗಿದ್ದೀರಿ. ಯಾರು ನನ್ನ ಇಷ್ಟನ (ಪರಮಾತ್ಮನ) ಸತತ ಚಿಂತನೆ ಮತ್ತು ಸೇವೆಯನ್ನು ಮಾಡುತ್ತಾರೆಯೋ, ನಾನು ಅವರ ನಿತ್ಯ ಸೇವಕನಾಗಿದ್ದೇನೆ ಎಂಬುವುದು ತ್ರಿಕಾಲ ಸತ್ಯವಾಗಿದೆ. ಸುಖ-ದುಃಖ ಮಾತ್ರ ನಮ್ಮ ಎರಡು ಕೈಗಳಾಗಿವೆ. ಕೆಲವೊಮ್ಮೆ ನಿಮಗೆ ಸುಖದ ಕೈಯ ಭಾಸವಾದರೆ, ಕೆಲವೊಮ್ಮೆ ದುಃಖದ ಕೈಯ ಭಾಸವಾಗಬಹುದು; ಆದರೆ ಮೂಲ ಇಚ್ಛೆ ಮಾತ್ರ ಸೇವಾಭಾವ. (ಬಾಬಾರವರು ಶ್ರೀ. ದಾದಾ ದಳವೀ ಇವರಿಗೆ ಬರೆದ ಪತ್ರದಿಂದ)
೨. ಗುರುಗಳಿಗೆ ನೀಡುವಾಗ ಅದರಲ್ಲಿ ‘ನಾನು’, ‘ನನ್ನದು’ ಎಂಬುದು ಬೇಡ
ಶಿಷ್ಯ : ನನ್ನ ಗದ್ದೆ, ಮನೆ ಇತ್ಯಾದಿ ಎಲ್ಲವನ್ನು ನಿಮಗೆ ಕೊಡುತ್ತೇನೆ.
ಬಾಬಾ : ನಿನ್ನ ಉಪಯೋಗಕ್ಕೆ ಇರಲಿ.
ಶಿಷ್ಯ : ನಾನು ಸತ್ತ ನಂತರ ಕೊಡುತ್ತೇನೆ.
ಬಾಬಾ : ಸತ್ತವರದ್ದು ನಮಗೆ ಬೇಡ.
ಶಿಷ್ಯ : ಹಾಗಾದರೆ ಏನು ಮಾಡಲಿ ?
ಬಾಬಾ : ಮುಂದೆ ನೋಡೋಣ.
ಪ್ರಶ್ನೆ : ತಮ್ಮ ಈ ಮಾತಿನ ಉದ್ದೇಶವೇನಿತ್ತು ಎಂದು ತಿಳಿಸಬಹುದೇ ?
ಬಾಬಾ : ನನ್ನ ಗದ್ದೆ, ನನ್ನ ಮನೆ, ನಾನು ಸತ್ತ ನಂತರ ಇವುಗಳಲ್ಲಿನ ‘ನಾನು’ ಬೇಡವಾಗಿತ್ತು.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಸಂತ ಭಕ್ತರಾಜ ಮಹಾರಾಜರ ಬೋಧನೆ (ಖಂಡ ೧)’)