ಗುರುಪೂರ್ಣಿಮೆಯ ನಿಮಿತ್ತ ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಬೇಕಾಗುವ ಸದ್ಗುಣಗಳನ್ನು ಶೇಖರಿಸಿ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಅಖಿಲ ಮಾನವಜಾತಿಯ ಕಲ್ಯಾಣವನ್ನು ಮಾಡುವ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾಲವು ಸಮೀಪ ಬಂದಿದೆ; ಆದರೆ ನಮಗೆ ಅದು ಸಹಜವಾಗಿ ಅನುಭವಿಸಲು ಸಿಗಲಿದೆ ಎಂದೇನಿಲ್ಲ. ಅದಕ್ಕಾಗಿ ಈಶ್ವರನ ಮೇಲೆ ದೃಢ ಭಕ್ತಿ, ಸತ್‌ಗಾಗಿ ತ್ಯಾಗದ ಸಿದ್ಧತೆ, ಮನಸ್ಸಿನ ಸರ್ವಾಂಗೀಣ ಸಿದ್ಧತೆ ಮುಂತಾದ ಸದ್ಗುಣಗಳ ಗಂಟು ನಮ್ಮೊಂದಿಗೆ ಇರಬೇಕಾಗುತ್ತದೆ. ಅದನ್ನು ಸಂಗ್ರಹಿಸಲು ಗುರುಪೂರ್ಣಿಮೆಯಂತಹ ಅದ್ವಿತೀಯ ಅವಕಾಶ ಇನ್ನೊಂದಿಲ್ಲ! ಗುರುಪೂರ್ಣಿಮೆಯ ನಿಮಿತ್ತ ಒಂದು ಸಾವಿರ ಪಟ್ಟು ಕಾರ್ಯನಿರತವಾಗಿರುವ ಗುರುತತ್ತ್ವದ ಲಾಭ ಪಡೆಯಲು ತನು, ಮನ ಮತ್ತು ಧನ ಇವುಗಳ ಪೈಕಿ ಯಾವುದು ಸಾಧ್ಯವಾಗುವುದೋ, ಆ ಮಾರ್ಗದಿಂದ ಈ ಉತ್ಸವದಲ್ಲಿ, ಹಾಗೆಯೇ ಅದರ ಸೇವೆಗಳಲ್ಲಿ ಭಾಗವಹಿಸಿ! ಗುರುಗಳ ಬಳಿ ‘ನಮಗೆ ನಿಮ್ಮ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿ!’ ಎಂದು ತವಕದಿಂದ ಪ್ರಾರ್ಥಿಸಿ! ಹಿಂದು ರಾಷ್ಟ್ರ-ಸ್ಥಾಪನೆಯ ಗುರುಕಾರ್ಯದಲ್ಲಿ ನಿತ್ಯ ಭಾಗವಹಿಸಿ ಮತ್ತು ಜೀವನವನ್ನು ಸಾರ್ಥಕ ಮಾಡಿಕೊಳ್ಳಿ!
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ, ಸನಾತನ ಸಂಸ್ಥೆ (೨೦೨೪)
ಶ್ರೀ ಗುರುಗಳ ಮೇಲಿನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸಿ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವಾಗ ಆಧ್ಯಾತ್ಮಿಕ ಉನ್ನತಿಯೇ ಸಾಧಕರ ಮತ್ತು ಶಿಷ್ಯರ ಧ್ಯೇಯವಾಗಿರುತ್ತದೆ. ಗುರುಗಳ ಮೇಲಿನ ನಿಷ್ಠೆ ಎಂದರೆ ಶಿಷ್ಯನ ವಿಕಲ್ಪರಹಿತ ಅವಸ್ಥೆ, ಗುರುಗಳ ಮೇಲಿನ ಶ್ರದ್ಧೆ ಎಂದರೆ ‘ಗುರುಗಳಿಂದಾಗಿ ನನ್ನ ಪರಮಕಲ್ಯಾಣವೇ ಆಗಲಿದೆ’, ಎಂಬ ದೃಢವಾದ ನಂಬಿಕೆ ಮತ್ತು ಗುರುಗಳ ಮೇಲಿನ ಭಕ್ತಿ ಎಂದರೆ ಗುರುಗಳಿಗೆ ಇಷ್ಟವಾದದ್ದನ್ನು ಭಕ್ತಿಭಾವದಿಂದ ಮಾಡುವುದು. ಗುರುಗಳಿಗೆ ವ್ಯಾಪಕ ಧರ್ಮಕಾರ್ಯ ಇಷ್ಟವಾಗುತ್ತದೆ. ಅದನ್ನು ತಳಮಳದಿಂದ ಮಾಡುವುದು, ಇದೇ ನಿಜವಾದ ಗುರುಭಕ್ತಿಯಾಗಿದೆ. ಈ ಕಾರ್ಯವನ್ನು ಮಾಡುವಾಗ ಯಾವುದೇ ವಿಕಲ್ಪವನ್ನು ಇಟ್ಟುಕೊಳ್ಳದಿರುವುದು, ಇದೇ ನಿಜವಾದ ಗುರುನಿಷ್ಠೆಯಾಗಿದೆ ಮತ್ತು ‘ಈ ವ್ಯಾಪಕ ಧರ್ಮಕಾರ್ಯವನ್ನು ಪರಿಪೂರ್ಣವಾಗಿ ಮತ್ತು ನೇತೃತ್ವ ವಹಿಸಿ ಮಾಡುವುದರಿಂದ ನನ್ನ ಆಧ್ಯಾತ್ಮಿಕ ಉನ್ನತಿ ಆಗಲಿಕ್ಕೇ ಇದೆ’ ಎಂಬ ಭಾವವಿರುವುದು, ಇದೇ ಗುರುಗಳ ಮೇಲಿರುವ ನಿಜವಾದ ಶ್ರದ್ಧೆಯಾಗಿದೆ. ಆದುದರಿಂದಲೇ ಆಧ್ಯಾತ್ಮಿಕ ಉನ್ನತಿಯಾಗಲು ಈ ಗುರುಪೂರ್ಣಿಮೆಯಿಂದ ಶ್ರೀ ಗುರುಗಳ ಮೇಲಿನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸಿ!
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ, ಸನಾತನ ಸಂಸ್ಥೆ (೨೦೨೪)