ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಎಲ್ಲ ಸಾಧಕರಿಗೆ ಆನಂದದ ಪರ್ವವೇ ಆಗಿದೆ. ಜನ್ಮೋತ್ಸವ ಶಬ್ದವು ಜನ್ಮ ಮತ್ತು ಉತ್ಸವ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ನಮ್ಮ ಋಷಿಗಳು ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮೋತ್ಸವದ ಕ್ಷಣ ಹೇಗಿತ್ತು ಎಂಬುದನ್ನು ಬರೆದಿಟ್ಟಿದ್ದಾರೆ. ಭಗವಂತನ ಜನ್ಮದ ಮೊದಲು ಏನೇನು ಆಗುತ್ತದೆ ? ಅವನ ಜನ್ಮದ ಸಮಯದಲ್ಲಿ ವಾತಾವರಣ ಹೇಗಿರುತ್ತದೆ ?, ಇದೆಲ್ಲವನ್ನು ಇಂದು ನಾವು ನೋಡುವವರಿದ್ದೇವೆ. ‘ಭಾವವಿದ್ದಲ್ಲಿ ದೇವರು’, ಎಂಬ ಉಕ್ತಿಯಂತೆ ‘ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಸಮಯದಲ್ಲಿ ನಾವೆಲ್ಲರೂ ಹೇಗೆ ಭಾವವನ್ನು ಇಡಬೇಕು ?’, ಎಂಬುದರ ಬಗ್ಗೆ ಸ್ವಲ್ಪ ಅರಿತುಕೊಳ್ಳೋಣ.
ಶ್ರೀರಾಮನ ಜನ್ಮೋತ್ಸವದ ಆನಂದದ ಕ್ಷಣಗಳು
೧ ಅ. ದಶರಥನ ಅರಮನೆಯ ಸದಸ್ಯರು, ದಾಸ-ದಾಸಿಯರು, ಋಷಿಮುನಿಗಳು, ದೇವಲೋಕದಲ್ಲಿನ ದೇವತೆಗಳು ಮತ್ತು ಸ್ವರ್ಗಲೋಕದ ಪುಣ್ಯಾತ್ಮರು ಆತುರತೆಯಿಂದ ಶ್ರೀರಾಮನ ಆಗಮನದ ದಾರಿ ಕಾಯುವುದು
ಶ್ರೀರಾಮನ ಜನ್ಮದ ಸಮಯ ಸಮೀಪ ಬಂದಿತ್ತು. ದಶರಥನ ಅರಮನೆಯಲ್ಲಿ ಮಹಾರಾಣಿ ಕೌಸಲ್ಯಾ, ಕೈಕೆಯೀ ಮತ್ತು ಸುಮಿತ್ರಾ ಇವರು ಗರ್ಭವತಿಯಾಗಿದ್ದಾರೆ ಮತ್ತು ಯಾವುದೇ ಕ್ಷಣ ಅವರ ಪ್ರಸೂತಿ ಆಗಬಹುದು ಎಂದು ಅಯೋಧ್ಯೆಯಲ್ಲಿ ಎಲ್ಲರಿಗೂ ಗೊತ್ತಿತ್ತು. ಚೈತ್ರ ಶುಕ್ಲ ನವಮಿಯು ಹತ್ತಿರ ಬರುತ್ತಿತ್ತು. ಒಂದು ಕಡೆ ಅಯೋಧ್ಯೆಯ ಪ್ರಜೆಗಳು, ದಶರಥನ ಅರಮನೆಯಲ್ಲಿನ ಸದಸ್ಯರು, ದಾಸ-ದಾಸಿಯರು, ಮಂತ್ರಿಗಳು, ಸೈನಿಕರು ಹಾಗೂ ಇನ್ನೊಂದು ಕಡೆ ಋಷಿಮುನಿಗಳು ಮತ್ತು ಅವರ ಶಿಷ್ಯರು, ದೇವಲೋಕದಲ್ಲಿನ ದೇವತೆಗಳು ಮತ್ತು ಸ್ವರ್ಗಲೋಕದಲ್ಲಿನ ಪುಣ್ಯಾತ್ಮರು ಶ್ರೀರಾಮನ ಆಗಮನದ ದಾರಿಯನ್ನು ಕಾಯುತ್ತಿದ್ದರು.
೧ ಆ. ನಿಸರ್ಗದ ಉತ್ಪತ್ತಿಗೆ ಕಾರಣನಾದ ಭಗವಂತನು ಪೃಥ್ವಿಯ ಮೇಲೆ ಬರುವವನಿದ್ದುದರಿಂದ ನಿಸರ್ಗಕ್ಕೂ ತುಂಬಾ ಆನಂದವಾಗುವುದು ಮತ್ತು ನಿಸರ್ಗವೂ ಸ್ವಾಗತಕ್ಕಾಗಿ ಅಲಂಕರಿಸಿಕೊಂಡು ದಾರಿ ಕಾಯುವುದು
ನಿಸರ್ಗಕ್ಕೂ ತುಂಬಾ ಆನಂದವಾಗಿತ್ತು; ಏಕೆಂದರೆ ಅದರ ಉತ್ಪತ್ತಿಗೆ ಕಾರಣನಾದ ಭಗವಂತನು ಪೃಥ್ವಿಯ ಮೇಲೆ ಬರುವವನಿದ್ದನು. ಆಕಾಶವು ಸ್ವಚ್ಛ ಮತ್ತು ನೀಲಿ ಬಣ್ಣದ್ದಾಗಿತ್ತು. ನದಿ-ಸರೋವರಗಳಲ್ಲಿ ಇತರ ದಿನಗಳಿಗಿಂತ ಹೆಚ್ಚು ಮತ್ತು ಸ್ವಚ್ಛ ನೀರು ಇತ್ತು. ಗಾಳಿಯ ಸ್ಪರ್ಶವು ಮಂದವಾಗಿತ್ತು. ಮಳೆಯು ಪುಷ್ಪವೃಷ್ಟಿ ಮಾಡಿದಂತೆ ಬೀಳುತ್ತಿತ್ತು ಮತ್ತು ಸೂರ್ಯನ ತೇಜವೂ ದೇಹಕ್ಕೆ ಉಲ್ಲಾಸದಾಯಕವಾಗಿತ್ತು. ‘ನಿಸರ್ಗವು ಸ್ವಾಗತಕ್ಕಾಗಿ ಅಲಂಕರಿಸಿಕೊಂಡು ದಾರಿ ಕಾಯುತ್ತಿದೆ’, ಎಂದು ಅನಿಸುತ್ತಿತ್ತು. ವಾತಾವರಣದಲ್ಲಿ ಎಲ್ಲ ಕಡೆಗೆ ಆನಂದ ತುಂಬಿಕೊಂಡಿತ್ತು.
೧ ಇ. ಮಹಾರಾಣಿ ಕೌಸಲ್ಯೆಯ ಎದುರಿಗೆ ಋಷಿ ಮುನಿಗಳು ಮತ್ತು ಆರಾಧ್ಯದೇವತೆಯಾದ ಸಾಕ್ಷಾತ್ ಶ್ರೀಮನ್ನಾರಾಯಣನು ಅವನ ಚತುರ್ಭುಜ ರೂಪದಲ್ಲಿ ನಿಂತಿರುವುದು ಮತ್ತು ಕ್ಷಣದಲ್ಲಿ ಒಂದು ದಿವ್ಯ ಬಾಲಕನ ಜನ್ಮವಾಗುವುದು
ಚೈತ್ರ ಮಾಸದಲ್ಲಿನ ಶುಕ್ಲ ನವಮಿ ಬಂದಿತು. ಆಗ ಪುನರ್ವಸು ನಕ್ಷತ್ರ ಇತ್ತು. ಮಹಾರಾಣಿ ಕೌಸಲ್ಯೆಗೆ ಯಾವುದೇ ಹೆರಿಗೆಯ ನೋವುಗಳು ಆಗಲಿಲ್ಲ ಮತ್ತು ಅವಳು ಮೂರ್ಛೆಯೂ ಹೋಗಲಿಲ್ಲ. ಅವಳು ಸತತವಾಗಿ ತನ್ನ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದಳು. ‘ಎದುರಿಗೆ ಕಾಣಿಸುತ್ತಿರುವುದು, ನಿಜವೇ ?’, ಅದನ್ನು ನಂಬಲು ಆಗುತ್ತಿರಲಿಲ್ಲ; ಏಕೆಂದರೆ ಅವಳ ಎದುರಿಗೆ ವೇದವನ್ನು ಅರಿತಿರುವ ಋಷಿಮುನಿಗಳು ಮತ್ತು ಆರಾಧ್ಯ ದೇವತೆಯಾದ ಸಾಕ್ಷಾತ್ ಶ್ರಿಮನ್ನಾರಾಯಣನು ಚತುರ್ಭುಜ ರೂಪದಲ್ಲಿ ನಿಂತಿ ದ್ದನು. ಕೋಣೆಯಲ್ಲಿ ಎಲ್ಲೆಡೆ ಬೆಳಕು ತುಂಬಿತ್ತು. ಸ್ವಲ್ಪ ಸಮಯದಲ್ಲಿ ಜ್ಯೋತಿಯ ಸ್ವರೂಪದಲ್ಲಿ ಕಾಣಿಸುವ ಚತುರ್ಭುಜ ಶ್ರೀವಿಷ್ಣುವಿನ ಆಕೃತಿಯು ಕೌಸಲ್ಯೆಯ ಶರೀರದಲ್ಲಿ ವಿಲೀನವಾಯಿತು ಮತ್ತು ಕೆಲವೇ ಕ್ಷಣದಲ್ಲಿ ಒಂದು ದಿವ್ಯ ಬಾಲಕನ ಜನ್ಮವಾಯಿತು. ಶ್ರೀರಾಮನ ಜನ್ಮವಾಗುವವರೆಗೆ ಕೌಸಲ್ಯೆಯ ಬಳಿಯಲ್ಲಿದ್ದ ಎಲ್ಲ ದಾಸಿಯರು ಸಮಾಧಿ ಅವಸ್ಥೆಗೆ ಹೋಗಿದ್ದರು. ಶ್ರೀರಾಮನ ಜನ್ಮವಾದ ಕೂಡಲೇ ಈಶ್ವರನು ಅವರನ್ನು ಜಾಗೃತಾವಸ್ಥೆಗೆ ತಂದನು.
೧ ಈ. ಶ್ರೀರಾಮನ ಜನ್ಮವಾದ ನಂತರ ಮನೆ ಮನೆಗಳಲ್ಲಿ ಮಂಗಲವಾದ್ಯಗಳನ್ನು ನುಡಿಸುವುದು ಮತ್ತು ಸ್ವರ್ಗಲೋಕದಲ್ಲಿನ ದೇವತೆಗಳು ಆನಂದದಿಂದ ಪುಷ್ಪ ವೃಷ್ಟಿ ಮಾಡುವುದು
ಮಹಾರಾಣಿ ಕೌಸಲ್ಯೆಯ ಪ್ರಸೂತಿಗೃಹದಲ್ಲಿನ ದಾಸಿಯರು ಕಂಚಿನ ವಾದ್ಯ ಗಳನ್ನು ಬಾರಿಸಲು ಆರಂಭಿಸಿದರು. ಅದನ್ನು ಕೇಳಿದ ಕೂಡಲೇ ಅರಮನೆಯಲ್ಲಿನ ವಾದ್ಯಗಾರರು ಮಂಗಲ ವಾದ್ಯಗಳನ್ನು ನುಡಿಸಲು ಆರಂಭಿಸಿದರು. ಮಂಗಲವಾದ್ಯ ಕೇಳುತ್ತಲೇ ಅಯೋಧೆಯಲ್ಲಿ ಮನೆ ಮನೆಗಳಲ್ಲಿನ ವಾದ್ಯಗಳನ್ನು ಬಾರಿಸಲು ಪ್ರಾರಂಭಿಸಿದರು ಮತ್ತು ಕೆಲವರು ಸಂಗೀತ ಮತ್ತು ನೃತ್ಯವನ್ನು ಮಾಡತೊಡಗಿದರು. ಎಲ್ಲ ಋಷಿಮುನಿಗಳ ಆಶ್ರಮಗಳಲ್ಲಿಯೂ ಮಂಗಲವಾದ್ಯಗಳನ್ನು ಬಾರಿಸ ಲಾಯಿತು ಮತ್ತು ಸ್ವರ್ಗಲೋಕದಲ್ಲಿನ ದೇವತೆಗಳು ಆನಂದದಿಂದ ಪುಷ್ಪವೃಷ್ಟಿಗೈದರು.
ಶ್ರೀಕೃಷ್ಣನ ಜನ್ಮೋತ್ಸವದ ಮಂಗಲಮಯ ಕ್ಷಣ
೨ ಅ. ಶ್ರೀಮನ್ನಾರಾಯಣನು ಎಲ್ಲರನ್ನೂ ಭಾವ ಸಮಾಧಿಯಲ್ಲಿ ಇಟ್ಟಿರುವುದಿಂದ ಪ್ರಸೂತಿಗೃಹದಲ್ಲಿ ಯಶೋಧೆಯ ಸಮೀಪ ಮಗುವಿನ ಆಗಮನವಾಗಿರುವುದು ಯಾರಿಗೂ ತಿಳಿಯದಿರುವುದು ಮತ್ತು ಗೋಕುಲದಲ್ಲಿ ಶ್ರೀಕೃಷ್ಣನ ನಿಜವಾದ ಜನ್ಮೋತ್ಸವವನ್ನು ಆಚರಿಸುವುದು
ದೇವಕಿ ಮತ್ತು ವಸುದೇವನಿರುವ ಸೆರೆಮನೆಯಲ್ಲಿ ಶ್ರೀಮನ್ನಾರಾಯಣನು ಶ್ರೀಕೃಷ್ಣನ ರೂಪವನ್ನು ಧರಿಸಿದನು; ಆದರೆ ಶ್ರೀಕೃಷ್ಣನ ನಿಜವಾದ ಜನ್ಮೋತ್ಸವವನ್ನು ಯಶೋದೆ ಮತ್ತು ನಂದರಾಜನ ಗೋಕುಲದಲ್ಲಿ ಆಚರಿಸಲಾಯಿತು ! ಶ್ರೀಮನ್ ನಾರಾಯಣನ ಆಜ್ಞೆಗನುಸಾರ ವಸುದೇವನು ಗೋಕುಲದಲ್ಲಿ ಯಶೋದೆಯ ಪ್ರಸೂತಿಗೃಹವನ್ನು ಪ್ರವೇಶಿಸಿ ಯಶೋದೆಯ ಹತ್ತಿರ ಬಾಲ ಶ್ರೀಕೃಷ್ಣನನ್ನು ಇಟ್ಟನು. ಶ್ರೀಮನ್ನಾರಾಯಣನು ಎಲ್ಲರನ್ನೂ ಭಾವ ಸಮಾಧಿಯಲ್ಲಿ ಇಟ್ಟಿರುವುದರಿಂದ ಯಶೋದೆ ಹತ್ತಿರ ಮಗುವಿನ ಆಗಮನವಾದುದು ಪ್ರಸೂತಿಗೃಹದಲ್ಲಿ ಯಾರಿಗೂ ತಿಳಿಯಲಿಲ್ಲ. ಬಾಲ ಶ್ರೀಕೃಷ್ಣನು ಯಶೋದೆಯ ಪಕ್ಕ ಮಲಗಿ ನಗುತ್ತಿದ್ದನು; ದಾಸ-ದಾಸಿ ಯರು, ರೋಹಿಣಿ ಮುಂತಾದವರೆಲ್ಲ ಸ್ತಬ್ಧರಾಗಿದ್ದರು.
೨ ಆ. ರೋಹಿಣಿಯು ಎಲ್ಲರನ್ನು ಭಾವಸಮಾಧಿಯಿಂದ ಹೊರತೆಗೆದು ಮಗುವಿನ ಆಗಮನದ ಸುದ್ದಿಯನ್ನು ಹೇಳುವುದು
ಬಾಲ ಶ್ರೀಕೃಷ್ಣನು ತನ್ನ ಮಾಯೆಯಿಂದ ಎಲ್ಲರ ಎಚ್ಚರಿಕೆ ತಪ್ಪಿರುವುದನ್ನು ನೋಡಿದನು. ಅವನು, ‘ನನ್ನ ಆಗಮನದ ಬಗ್ಗೆ ಇವರಿಗೆ ಏನೂ ತಿಳಿಯಲೇ ಇಲ್ಲ’ ಎಂದು ವಿಚಾರ ಮಾಡಿ, ಸ್ವಯಂ ಶ್ರೀಕೃಷ್ಣನು ರೋಹಿಣಿಯಲ್ಲಿ (ವಸುದೇವನ ಮೊದಲನೇ ಪತ್ನಿ) ಪ್ರವೇಶಿಸಿ ಅವಳ ಬಾಯಿಯಿಂದ, “ಹೇ ಸಖಿಯರೇ, ನೀವೆಲ್ಲರೂ ಮಲಗಿದ್ದೀರಾ ? ಏಳಿ ‘ಬಾಲಕನ ಜನ್ಮವಾಗಿದೆ” ಎಂದು ನಂದರಾಜನಿಗೆ ಸಂದೇಶವನ್ನು ಕೊಡಿ, ಎಂದನು. ರೋಹಿಣಿಯ ಶಬ್ದಗಳು ಕೇಳಿದಾಕ್ಷಣ ಎಲ್ಲ ದಾಸಿಯರು ಭಾವಸಮಾಧಿಯಿಂದ ಎಚ್ಚೆತ್ತರು.
೨ ಇ. ಯಶೋದೆ ಮಾತೆಯು ಭಗವಂತನು ನೀಡಿದ ಭಾವ-ಸಮಾಧಿಯಿಂದ ಹೊರಗೆ ಬರುವುದು ಮತ್ತು ಅವಳು ಅನಿಷ್ಟ ಶಕ್ತಿಗಳ ನಿವಾರಣೆಗಾಗಿ ನರಸಿಂಹನ ಧ್ಯಾನವನ್ನು ಮಾಡುವುದು
ಆಗ ಮಾತಾಯಶೋದೆಯು ಭಗವಂತನು ನೀಡಿದ ಭಾವ-ಸಮಾಧಿಯಿಂದ ಹೊರ ಬರುತ್ತಾಳೆ ಮತ್ತು ಗರ್ಭದಲ್ಲಿನ ಶಿಶು ಭೂಮಿಯ ಮೇಲಿರುವುದನ್ನು ನೋಡುತ್ತಾಳೆ. ಅವಳಿಗೆ ಆಶ್ಚರ್ಯವಾಗುತ್ತದೆ. ಅವಳು ಆ ಮಗುವನ್ನು ನೋಡಿ, ಮಗುವಿನ ಬಣ್ಣ ಸ್ವಲ್ಪ ಕಪ್ಪು ಇದೆ. ‘ಯಾವುದಾದರೂ ಯೋಗಿನಿ ಅಥವಾ ಮಾಯಾವಿ ಶಕ್ತಿಯ ಪ್ರಭಾವದಿಂದ ಹೀಗಾಗಿರಬಹುದು; ಎಂದು ಅವಳು ತಕ್ಷಣ ಅನಿಷ್ಟದ ನಿವಾರಣೆಗಾಗಿ ನರಸಿಂಹನ ಧ್ಯಾನವನ್ನು ಮಾಡುತ್ತಾಳೆ.
೨ ಈ. ಶ್ರೀಕೃಷ್ಣನ ಜನ್ಮದ ಸಂದೇಶ ಸಿಗುವವರೆಗೆ ನಂದರಾಜನು ಚತುರ್ಭುಜ ಶ್ರೀವಿಷ್ಣುವಿನ ಭಾವಸಮಾಧಿಯಲ್ಲಿ ಮಗ್ನನಾಗಿರುವುದು ಮತ್ತು ಭಗವಂತನು ನೀಡಿದ ಸಮಾಧಿ ಸ್ಥಿತಿಯನ್ನು ಅನುಭವಿಸುವ ಗೋಕುಲದಲ್ಲಿನ ಜೀವಗಳು ಧನ್ಯರಾಗಿರುವುದು
ಎಲ್ಲಿಯವರೆಗೆ ನಂದರಾಜನಿಗೆ ಶ್ರೀಕೃಷ್ಣನ ಜನ್ಮದ ಸಂದೇಶ ಸಿಗುವುದಿಲ್ಲವೋ, ಅಲ್ಲಿಯವರೆಗೆ ನಂದರಾಜನು ಚತುರ್ಭುಜ ಶ್ರೀವಿಷ್ಣುವಿನ ಭಾವಸಮಾಧಿಯಲ್ಲಿ ಮಗ್ನನಾಗಿ ಇರುತ್ತಾನೆ. ಅವನಿಗೆ ದೇಹದ ಅರಿವೂ ಇರುವುದಿಲ್ಲ. ಸಂದೇಶ ಬಂದ ನಂತರ ಅವನ ಸಮಾಧಿ ಸ್ಥಿತಿಯು ಮುಗಿಯುತ್ತದೆ ಮತ್ತು ಅವನು ನಿಧಾನವಾಗಿ ಎಚ್ಚರಗೊಳ್ಳುತ್ತಾನೆ. ಭಗವಂತನು ಪೃಥ್ವಿಯ ಮೇಲೆ ಬಂದ ನಂತರ ಅವನು ನೀಡಿದ ಸಮಾಧಿ ಸ್ಥಿತಿಯನ್ನು ಅನುಭವಿಸುವ ಆ ಜೀವಗಳು ಧನ್ಯವಾಗಿವೆ. ಶ್ರೀಕೃಷ್ಣನ ಜನ್ಮೋತ್ಸವದ ಸಮಯದಲ್ಲಿ ಎಲ್ಲರೂ ಭಾವಸಮಾಧಿಯನ್ನು ಅನುಭವಿಸಿದರು.
– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ಚೆನ್ನೈ, ತಮಿಳುನಾಡು. (೧೧.೫.೨೦೨೨)