ಒತ್ತಡ, ನಿರಾಶೆ, ಅಪೇಕ್ಷೆ ಮುಂತಾದ ದೋಷಗಳನ್ನು ದೂರಗೊಳಿಸಿ ಸಕಾರಾತ್ಮಕತೆ ಬರಲು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿರಿ !
ಮನೋರೋಗಿಗಳು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ನಾಮಜಪಿಸುವುದು ಒಂದು ಪ್ರಭಾವಶಾಲಿ ಉಪಾಯವಾಗಿದೆ. ಜೀವನದಲ್ಲಿ ಬರುವ ಹೆಚ್ಚಿನ ಸಮಸ್ಯೆಗಳ ಮೂಲ ಆಧ್ಯಾತ್ಮಿಕವಾಗಿರುತ್ತದೆ. ಇದನ್ನು ಅರಿತು ಸಾಧನೆಯನ್ನು ಮಾಡಿದರೆ ಗುಣಸಂವರ್ಧನೆಯಾಗಿ ಜೀವನದಲ್ಲಿ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ನಾಮಜಪಾದಿ ಸಾಧನೆಯಿಂದ ವ್ಯಕ್ತಿಯಲ್ಲಿರುವ ನಕಾರಾತ್ಮಕ ಸ್ಪಂದನಗಳು ಕಡಿಮೆಯಾಗಿ ಅವನಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಗುತ್ತದೆ. ಅವನ ಮೇಲಿನ ತೊಂದರೆದಾಯಕ ಆವರಣ ದೂರವಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಬರುವ ಅನಾವಶ್ಯಕ, ನಕಾರಾತ್ಮಕ ವಿಚಾರಗಳು ಕಡಿಮೆಯಾಗುತ್ತವೆ. ಅದರೊಂದಿಗೆ ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನವನ್ನು ನೀಡುವ ಸಕಾರಾತ್ಮಕ ಸೂಚನೆಗಳನ್ನು ಮನಸ್ಸಿಗೆ ನೀಡಿದರೆ ಮನಸ್ಸು ಕೇಳುತ್ತದೆ. ಆ ವ್ಯಕ್ತಿಯ ಮನಸ್ಸಿನಲ್ಲಿ ಸಕಾರಾತ್ಮಕ ವಿಚಾರಗಳ ಹಾಗೆಯೇ ಯೋಗ್ಯ ದೃಷ್ಟಿಕೋನಗಳ ಕೇಂದ್ರ ನಿರ್ಮಾಣವಾಗಲು ಸಹಾಯವಾಗಿ ನಿರಾಶೆ, ಒತ್ತಡ, ಅಪೇಕ್ಷೆ ಮುಂತಾದ ದೋಷಗಳು ಕಡಿಮೆಯಾಗಿ ಜೀವನವನ್ನು ಕೊನೆಗೊಳಿಸಬೇಕೆಂಬಂತಹ ಅಂತಿಮ ನಿರ್ಣಯ ತೆಗೆದುಕೊಳ್ಳುವುದನ್ನು ದೂರಗೊಳಿಸಲು ಸಾಧ್ಯವಾಗುವುದು. ಮನಸ್ಸು ಆನಂದ ಮತ್ತು ಉತ್ಸಾಹದಲ್ಲಿರತ್ತದೆ. ಸ್ವಯಂಸೂಚನೆಗಳನ್ನು ವಿಶಿಷ್ಟ ಪ್ರಸಂಗಗಳಿಗನುಸಾರ ನೀಡಲಾಗುತ್ತದೆ, ಹೀಗಿದ್ದರೂ ದೋಷಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಯಾರು ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುತ್ತಾರೋ ಅವರಿಗೆ ಆ ಸೂಚನೆಯು ಮನಸ್ಸಿಗೆ ಒಪ್ಪಿಗೆ ಆಗಿರಬೇಕು, ಹೀಗಾದರೆ ಮಾತ್ರ ಅವನ ಮನಸ್ಸು ಅದನ್ನು ಸ್ವೀಕರಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು ಸಂಶೋಧನೆ ಮಾಡಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಕಂಡು ಹಿಡಿದಿದ್ದಾರೆ. ಇದಕ್ಕೂ ಮೊದಲು ಅನೇಕ ಮನೋರೋಗಿಗಳಿಗೆ ಇದರ ಲಾಭವಾಗಿದೆ. ಹಾಗೆಯೇ ಸನಾತನದ ಸಾವಿರಾರು ಸಾಧಕರು ಈ ಪ್ರಕ್ರಿಯೆಯ ಅಸಾಧಾರಣ ಲಾಭವನ್ನು ಅನುಭವಿಸುತ್ತಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ದೋಷಗಳಿಗನುಸಾರ ಸೂಚನೆಗಳ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಬೆಳೆಗಳ ಹಾನಿಯಿಂದ ರೈತರಿಗೆ ನಿರಾಶೆ ಬರುವುದು
ಸ್ವಯಂಸೂಚನೆ : ಬೆಳೆಗಳಿಗೆ ಹಾನಿಯಾಗಿದೆ, ಆದರೆ ಜೀವನದಲ್ಲಿ ಇಂತಹ ಏರಿಳಿತಗಳು ಇದ್ದೇ ಇರುತ್ತವೆ, ಹಾಗಾಗಿ ಈ ಸ್ಥಿತಿಯೂ ಬದಲಾಗಲಿದೆ ಎಂದು ನನ್ನ ಗಮನಕ್ಕೆ ಬರುವುದು ಮತ್ತು ನಾನು ಈಗಿನ ಸ್ಥಿತಿಯಿಂದ ಪಾರಾಗಲು ಇತರ ಉಪಾಯಯೋಜನೆಯನ್ನು ಹುಡುಕುವೆನು.
೨. ಅಪೇಕ್ಷಿತ ಅಂಕಗಳು ಸಿಗದ ಕಾರಣ, ನನಗೆ ಬೇಕಾದ ಮಹಾವಿದ್ಯಾಲಯದಲ್ಲಿ ಪ್ರವೇಶ ಸಿಗಲಿಲ್ಲ ಎಂದು ನಿರಾಶೆ ಬರುವುದು
ಸ್ವಯಂಸೂಚನೆ : ಶೇ. … ರಷ್ಟು ಅಪೇಕ್ಷಿತ ಅಂಕಗಳು ದೊರಕಲಿಲ್ಲ, ಆದರೆ ಮುಂದಿನ ಕಾಲದಲ್ಲಿ ಅಪೇಕ್ಷಿತ ಅಂಕಗಳು ಸಿಗಬಹುದು, ಎಂಬುದನ್ನು ಗಮನಲ್ಲಿಟ್ಟುಕೊಂಡು ಇತರ ವಿಷಯಗಳು ಮತ್ತು ಮಹಾವಿದ್ಯಾಲಯಗಳ ಕುರಿತು ಅಧ್ಯಯನ ಮಾಡಿ ಎಲ್ಲಿ ಪ್ರವೇಶ ಪಡೆಯಬೇಕೆಂಬುದರ ನಿರ್ಣಯವನ್ನು ತೆಗೆದುಕೊಳ್ಳುವೆನು.
೩. ಪತಿಯ ಜೊತೆಗೆ ಜಗಳ ಆಗುತ್ತಿರುವುದರಿಂದ ನಿರಾಶೆ ಬರುವುದು
ಸ್ವಯಂಸೂಚನೆ : ಯಾವಾಗ ನನ್ನ ಪತಿಯೊಂದಿಗೆ ಜಗಳವಾಗಿ, ನನಗೆ ನಿರಾಶೆ ಬರುವುದೋ, ಆಗ ನಾನು ಅವರನ್ನು ಅರ್ಥ ಮಾಡಿಕೊಳ್ಳಬೇಕು, ಎಂಬುದು ನನ್ನ ಗಮನಕ್ಕೆ ಬರುವುದು ಮತ್ತು ಇದ್ದ ಪರಿಸ್ಥಿತಿಯಲ್ಲಿಯೇ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುವೆನು.
I have impressed by this article, expecting more with healing examples
Namaskar
We are glad you found this article useful. May we suggest attending our free guided sessions? You can join a session in a language you are comfortable with – events.sanatan.org
These sessions will help you become self reliant in healing and overcoming stressful situations.