ಸಾಧನಾವೃದ್ಧಿ ಸತ್ಸಂಗ (7)

ಹಿಂದಿನ ಕೆಲವು ಲೇಖನಗಳಲ್ಲಿ ನಾವು ಸತ್ಸೇವೆಯ ಮಹತ್ವವೇನು ಹಾಗೂ ಸತ್ಸೇವೆಯ ಮೂಲಕ ಅಷ್ಟಾಂಗ ಸಾಧನೆಯು ಹೇಗೆ ಆಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೆವು. ಇಂದಿನ ಕಾಲದಲ್ಲಿ ಸತ್ಸೇವೆಯ ಮಾಧ್ಯಮಗಳು ಯಾವುವು? ಹಾಗೂ ನಮ್ಮ ದಿನನಿತ್ಯದ ವ್ಯವಹಾರದ ನಡುವೆಯೂ ಸತ್ಸೇವೆಯನ್ನು ಹೇಗೆ ಮಾಡಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವವರಿದ್ದೇವೆ. ನಿಮ್ಮಲ್ಲಿ ಕೆಲವರು ಪ್ರತ್ಯಕ್ಷದಲ್ಲಿಯೂ ಹೆಚ್ಚು ಕಡಿಮೆ ಸೇವೆಯನ್ನು ಸಹ ಪ್ರಾರಂಭಿಸಿರಬಹುದು. ಕೆಲವರು ಸತ್ಸೇವೆಯನ್ನು ಮಾಡುವಾಗ ಆನಂದ ಸಿಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆ ಎಂಬ ಅನುಭವವನ್ನು ಸಹ ಪಡೆದುಕೊಂಡಿದ್ದರು. ಹೀಗೇಕಾಗುತ್ತದೆ? ಇದಕ್ಕೆ ಕಾರಣವೇನೆಂದರೆ ಗುರುತತ್ತ್ವ! ಸತ್ಸೇವೆಯನ್ನು ಮಾಡುವಾಗ ಗುರುತತ್ತ್ವವು ಕಾರ್ಯನಿರತವಾಗುತ್ತದೆ.

ಸತ್ಸೇವೆಯ ಮಹತ್ವ

ಕೆಲವು ಜನರಿಗೆ ನಾಮಜಪಿಸುವಾಗ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಸತ್ಸೇವೆಯಿಂದ ನಾವು ಸತ್ ನ ವಿಚಾರಗಳಲ್ಲಿರುತ್ತೇವೆ. ಇದರ ಫಲಸ್ವರೂಪವಾಗಿ ನಮ್ಮ ನಾಮಜಪವು ಸಹ ಒಳ್ಳೆಯದಾಗುತ್ತದೆ. ಸತ್ಸೇವೆಯಿಂದ ಮನಸ್ಸಿನಲ್ಲಿ ಮಾಯೆಯ ಅಥವಾ ಗೃಹಸ್ಥ ಜೀವನದ ವಿಚಾರಗಳು ಕಡಿಮೆಯಾಗುತ್ತವೆ. ಹೇಗೆ ನಮ್ಮ ಸತ್ಸೇವೆಯ ತಳಮಳ ಹೆಚ್ಚಾಗುತ್ತದೆಯೋ ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಗುರುತತ್ತ್ವವು ನಮಗಾಗಿ ಕಾರ್ಯನಿರತವಾಗುತ್ತದೆ. ಸತ್ಸೇವೆಯಿಂದ ನಮಗೆ ಈಶ್ವರನ ಅಸ್ತಿತ್ವದ ಅನೂಭೂತಿಯು ಬಂದು ನಮ್ಮ ಶ್ರದ್ಧೆಯು ಹೆಚ್ಚಾಗುತ್ತದೆ ಜೊತೆಗೆ ಸಾಧನೆಯಲ್ಲಿ ತೀವ್ರ ವೇಗದಿಂದ ಪ್ರಗತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ನಾಮಜಪ ಸಾಧನೆಗೆ ಶೇ. ೩೦ರಷ್ಟು ಮಹತ್ವವಿದೆ. ಆಧ್ಯಾತ್ಮಿಕ ಪ್ರಗತಿಯ ದೃಷ್ಟಿಯಿಂದ ನಾವು ನಾಮಜಪ ಮತ್ತು ಸತ್ಸೇವೆ ಎರಡನ್ನೂ ಮಾಡುವುದು ಆವಶ್ಯಕವಾಗಿದೆ.

೧. ಪ್ರವಚನಗಳ ಮೂಲಕ ಅಧ್ಯಾತ್ಮ ಪ್ರಸಾರ

ನಾವು ಇದಕ್ಕಿಂತ ಮೊದಲು ಕೂಡ ಅಧ್ಯಾತ್ಮ ಪ್ರಸಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂದು ತಿಳಿದುಕೊಂಡಿದ್ದೆವು. ಪ್ರತಿಯೊಬ್ಬ ಜಿಜ್ಞಾಸುವಿಗೆ ಗುರುಗಳ ಸಗುಣ ರೂಪದ ಸೇವೆಯನ್ನು ಮಾಡಲು ಸಿಗುತ್ತದೆ ಎಂದೇನಿಲ್ಲ. ಆದರೆ ನಾವು ಗುರುಗಳ ನಿರ್ಗುಣ ರೂಪದ ಸೇವೆಯನ್ನು ಖಂಡಿತವಾಗಿಯೂ ಮಾಡಬಹುದು. ಅಧ್ಯಾತ್ಮ ಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿದೆ. ಅಧ್ಯಾತ್ಮ ಪ್ರಸಾರದ ಒಂದು ಅಂಶದ ರೂಪದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರು ತಮ್ಮ ತಮ್ಮ ಕಚೇರಿಗಳ ಸಹೋದ್ಯೋಗಿಗಳು ಮೊದಲಾದವರಿಗಾಗಿ ಸಾಧನೆಯ ವಿಷಯದ ಮೇಲಾಧಾರಿತ ಪ್ರವಚನಗಳನ್ನು ಆಯೋಜಿಸಬಹುದು. ಇಂದು ಕೊರೊನಾ ಮಹಾಮಾರಿಯಿಂದ ಪ್ರತ್ಯಕ್ಷರೂಪದಲ್ಲಿ ಜನರನ್ನು ಒಟ್ಟುಗೂಡಿಸಲು ಮಿತಿಯುಂಟಾಗುತ್ತದೆ. ಆದರೆ ನಾವು ಯಾವ ರೀತಿಯಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುತ್ತಿದ್ದೇವೆಯೋ ಅಂತಹ FCC ಆಪ್ ನ ಮೂಲಕ ಅಥವಾ ಇತರ ಯಾವುದಾದರೂ ಮಾಧ್ಯಮದಿಂದ ನಾವು ಆನ್ ಲೈನ್ ಪ್ರವಚನಗಳನ್ನು ಆಯೋಜಿಸಬಹುದು. ಜನರಿಗೆ ವರ್ತಮಾನ ಕಾಲಕ್ಕಾಗಿ ಉಪಯುಕ್ತ ಸಾಧನೆಯನ್ನು ಹೇಳುವುದು ನಿಜವಾಗಿಯೂ ಒಂದು ಬಹುದೊಡ್ಡ ಸೇವೆಯಾಗಿದೆ.  ಇದು ಎಷ್ಟೊಂದು ಮಹತ್ತರವಾದ ಅವಕಾಶವಾಗಿದೆ ಎಂದರೆ ನಾವು ಅವರ ಜೀವನದಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ತರಬಹುದು. ಇಂದು ಎಲ್ಲ ಜನರು ಮನಃಶಾಂತಿಯನ್ನು ಹುಡುಕುತ್ತಿದ್ದಾರೆ. ವಾಸ್ತವದಲ್ಲಿ ಸಂತುಷ್ಟಿ ಮತ್ತು ಶಾಂತಿಯು ಕೇವಲ ಸಾಧನೆಯಿಂದಲೇ ಸಿಗಬಲ್ಲದು. ಅದಕ್ಕಾಗಿ ನಾವು ಸಾಧನೆಯ ಪ್ರವಚನವನ್ನು ಆಯೋಜಿಸಬಹುದು.

ನಾವು ಎಲ್ಲಿ ಪ್ರವಚನದ ಆಯೋಜನೆಯನ್ನು ಮಾಡಬಹುದು ಇದರ ವಿಷಯದಲ್ಲಿ ಈಶ್ವರನು ಏನು ಸೂಚಿಸುತ್ತಿದ್ದಾನೆಯೋ ಅದನ್ನು ಪುಸ್ತಕದಲ್ಲಿ ಬರೆದಿಡಬಹುದು. ನಂತರ ನಮ್ಮೊಂದಿಗೆ ಅದನ್ನು ಹಂಚಿಕೊಳ್ಳಿ.

೨. ಆಧ್ಯಾತ್ಮಿಕ ಗ್ರಂಥ ಮತ್ತು ಸಾತ್ತ್ವಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು

ಅಧ್ಯಾತ್ಮಪ್ರಸಾರದ ಒಂದು ಸರಳವಾದ ಮಾರ್ಗವೆಂದರೆ ಆಧ್ಯಾತ್ಮಿಕ ಗ್ರಂಥಗಳ ಮತ್ತು ಸಾತ್ತ್ವಿಕ ವಸ್ತುಗಳ ಪ್ರಸಾರ ಮಾಡುವುದು. ಉದಾಹರಣೆಗಾಗಿ ಹುಟ್ಟುಹಬ್ಬ, ವಿವಾಹ-ಉಪನಯನ, ಅರಶಿನ-ಕುಂಕುಮ ಕಾರ್ಯಕ್ರಮ, ಪರೀಕ್ಷೆಯಲ್ಲಿ ಯಶಸ್ಸು ದೊರಕಿದ ಬಗ್ಗೆ ಇತ್ಯಾದಿ ಅನೇಕ ಸಮಾರಂಭಗಳನ್ನು ಗಮನದಲ್ಲಿರಿಸಿ ನಾವು ಇತರರಿಗೆ ಏನಾದರೊಂದು ಉಡುಗೊರೆಯನ್ನು ನೀಡುತ್ತೇವೆ. ಇಂತಹ ಪ್ರಸಂಗಗಳಲ್ಲಿ ನಾವು ಅವರಿಗೆ ಸಾತ್ತ್ವಿಕ ಉತ್ಪಾದನೆಗಳನ್ನು ಅಥವಾ ಆಧ್ಯಾತ್ಮಿಕ ಗ್ರಂಥಗಳನ್ನು ಉಡುಗೊರೆ ಎಂದು ನೀಡಬಹುದು. ಇಂತಹ ಆಧ್ಯಾತ್ಮಿಕ ಉಡುಗೊರೆಗಳು ಶಾಶ್ವತವಾಗಿರುತ್ತವೆ.

ಅನೇಕ ಜನರಿಗೆ ಓದುವ ಆಸಕ್ತಿಯಿರುತ್ತದೆ. ನಾವು ಅವರಿಗೆ ಆಧ್ಯಾತ್ಮಿಕ ಗ್ರಂಥಗಳನ್ನು ಉಡುಗೊರೆ ಎಂದು ನೀಡಿದರೆ ಅದರ ಮೂಲಕ ನಮ್ಮಿಂದಲೂ ಸತ್ಸೇವೆಯಾಗುತ್ತದೆ. ಸನಾತನದ ವತಿಯಿಂದ ಧರ್ಮ, ಅಧ್ಯಾತ್ಮ, ಆಯುರ್ವೇದ, ಮಕ್ಕಳಿಗಾಗಿ ಸುಸಂಸ್ಕಾರಗಳು, ಆಚಾರಧರ್ಮ, ವ್ಯಕ್ತಿತ್ವ ವಿಕಸನದಂತಹ ಬೇರೆ ಬೇರೆ ವಿಷಯಗಳ ಮೇಲಾಧಾರಿತ ಹೆಚ್ಚುಕಮ್ಮಿ ೧೭ ದೇಶಿ ಮತ್ತು ವಿದೇಶಿ ಭಾಷೆಗಳಲ್ಲಿ ೩೦೦ ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಾಶಿಸಲಾಗಿದೆ. ಈ ಗ್ರಂಥಗಳ ಮಾಹಿತಿಯು SanatanShop.com ಜಾಲತಾಣದಲ್ಲಿ ಲಭ್ಯವಿದೆ. ಅಥವಾ ತಾವು ತಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರಿಂದ ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಈ ಗ್ರಂಥಗಳ ಮೂಲಕ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರ ಜ್ಞಾನಶಕ್ತಿಯು ಕಾರ್ಯನಿರತವಾಗಿದೆ. ಈ ಗ್ರಂಥಗಳು ವೇದಸ್ವರೂಪಿಯಾಗಿವೆ. ಈ ಗ್ರಂಥಗಳನ್ನು ಸರಳ ಭಾಷೆಯಲ್ಲಿ ಬರೆಯಲಾಗಿದೆ. ಹಾಗಾಗಿ ನಾವು ಜನರಿಗೆ ಈ ಗ್ರಂಥಗಳನ್ನು ಉಡುಗೊರೆಯಾಗಿ ನೀಡಿ ಅಧ್ಯಾತ್ಮ ಪ್ರಸಾರದ ಕಾರ್ಯದಲ್ಲಿ ಸೇರಿಸಿಕೊಳ್ಳಬಹುದು.

ನಾವು ಹುಟ್ಟುಹಬ್ಬದಂದು ಕೆಲವೊಮ್ಮೆ ಶಾಲೆಯ ವಿದ್ಯಾರ್ಥಿಗಳಿಗೆ ಅಥವಾ ಮಿತ್ರರಿಗೆ ಚಾಕಲೇಟು ಅಥವಾ ಇತರ ಏನಾದರೂ ಉಡುಗೊರೆಯನ್ನು ನೀಡುತ್ತೇವೆ. ಇಂತಹ ಸಮಯದಲ್ಲಿ ವಿಶೇಷರೂಪದಲ್ಲಿ ಚಿಕ್ಕ ಮಕ್ಕಳಿಗಾಗಿ ರಾಮರಕ್ಷಾ ಸ್ತೋತ್ರ, ಮಾರುತಿ ಸ್ತೋತ್ರ, ಗಣಪತಿ ಅಥರ್ವಶೀರ್ಷದಂತಹ ಕಿರುಗ್ರಂಥಗಳನ್ನು ಉಡುಗೊರೆ ಎಂದು ನೀಡಬಹುದು. ಸ್ತೋತ್ರದ ಗ್ರಂಥಗಳು ಚಿಕ್ಕ ಮಕ್ಕಳ ಜೊತೆಗೆ ಪೋಷಕರಿಗೂ ಉಪಯುಕ್ತವಾಗಬಲ್ಲವು. ಕಿರುಗ್ರಂಥಗಳ ಮೌಲ್ಯ ೧೦ ರಿಂದ ೨೦ ರೂ.ಗಳ ನಡುವಿನದ್ದಾಗಿದೆ.

ಸಂಸ್ಥೆಯ ವತಿಯಿಂದ ಕರ್ಪೂರ, ಅತ್ತರು, ಜಪಮಾಲೆ, ಅಷ್ಟಗಂಧ, ಕುಂಕುಮ, ಊದುಬತ್ತಿಯಂತಹ ಸಾತ್ತ್ವಿಕ ಉತ್ಪಾದನೆಗಳನ್ನು ತಯಾರಿಸಲಾಗುತ್ತದೆ. ನಾವು ಉಡುಗೊರೆಯ ರೂಪದಲ್ಲಿ ಇವುಗಳನ್ನೂ ಇತರರಿಗೆ ನೀಡಬಹುದು.

೩. ಪ್ರಸಾರದ ಇನ್ನೊಂದು ಮಾಧ್ಯಮವೆಂದರೆ ‘ಸನಾತನ ಪ್ರಭಾತ’ ಪತ್ರಿಕೆ

ತಮ್ಮಲ್ಲಿ ಅನೇಕ ಮಂದಿ ‘ಸನಾತನ ಪ್ರಭಾತ’ದ ಚಂದಾದಾರರಾಗಿದ್ದೀರಿ. ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ ಭಾಷೆಗಳಲ್ಲಿ ‘ಸನಾತನ ಪ್ರಭಾತ’ವನ್ನು ಪ್ರಕಾಶಿಸಲಾಗುತ್ತದೆ. ಸನಾತನ ಪ್ರಭಾತವು ಕೇವಲ ಸಮಾಚಾರ ಮುದ್ರಿಸುವಂತಹ ವರ್ತಮಾನ ಪತ್ರಿಕೆಯಲ್ಲ. ಅದು ಸಮಾಚಾರಗಳ ಜೊತೆಗೆ ವಾಚಕರಿಗೆ ದೃಷ್ಟಿಕೋನವನ್ನು ಸಹ ನೀಡುತ್ತದೆ. ವಿದ್ಯಮಾನಗಳನ್ನು ಹಿಂದುತ್ವ ಮತ್ತು ಸಾಧನೆಯ ದೃಷ್ಟಿಕೋನದಿಂದ ವಿಶ್ಲೇಷಿಸಿ ಸಂಪಾದಕೀಯ ಟಿಪ್ಪಣಿಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ತರಲಾಗುತ್ತದೆ. ನಿಯಮಿತ ಸಾಧನೆ ಸಂಬಂಧಿಸಿದ ಲೇಖನಗಳನ್ನು ಪ್ರಕಾಶಿಸಿ ವಾಚಕರನ್ನು ಸಾಧನೆಗೆ ಪ್ರೇರೇಪಿಸಲಾಗುತ್ತದೆ. ಸಾಕ್ಷಾತ್ ಪರಾತ್ಪರ ಗುರು ಡಾ. ಆಠವಲೆಯವರು ಈ ನಿಯತಕಾಲಿಕೆ ಸಮೂಹದ ಸಂಸ್ಥಾಪಕ ಸಂಪಾದಕರಾಗಿದ್ದಾರೆ. ಸನಾತನ ಪ್ರಭಾತದ ಪ್ರಕಾಶನದಲ್ಲಿ ಸಂತರ ಸಂಕಲ್ಪವಾಗಿರುವುದರಿಂದ ಸಾಧನಾ ಪಥದಲ್ಲಿ ಸಾಗುತ್ತಿರುವ ಅನೇಕ ಜಿಜ್ಞಾಸುಗಳಿಗೆ ಹಾಗೂ ಧರ್ಮಪ್ರೇಮಿಗಳಿಗೆ ಅದು ಮಾರ್ಗದರ್ಶಕವೆಂದು ಸಾಬೀತಾಗಲಿದೆ.

ನೀವು ನಿಮ್ಮ ಪರಿಚಿತರು, ಸಂಬಂಧಿಕರು ಮತ್ತು ಮಿತ್ರರಿಗೂ ‘ಸನಾತನ ಪ್ರಭಾತ’ದ ಬಗ್ಗೆ ತಿಳಿಸಿ ಅವರನ್ನೂ ಚಂದಾದಾರರನ್ನಾಗಿಸಬಹುದು. ಇದು ಸಹ ನಮ್ಮ ಸಾಧನೆಯೇ ಆಗಿದೆ. ಯಾರಾದರೊಬ್ಬರು ಚಂದಾದಾರರಾದರೆ ಮಾತ್ರ ನಮ್ಮ ಸಾಧನೆಯಾಗುತ್ತದೆ, ಮಾಡದಿದ್ದರೆ ಸಾಧನೆಯಾಗುವುದಿಲ್ಲ ಎಂದೇನಿಲ್ಲ. ಭಗವಂತನು ಕೇವಲ ನಮ್ಮ ಪ್ರಯತ್ನಗಳನ್ನು ಮಾತ್ರ ನೋಡುತ್ತಾರೆ. ನಿಮಗೆ ನಿಮ್ಮ ಸಂಬಂಧಿಕರ, ಸಹೋದ್ಯೋಗಿಗಳ ಅಥವಾ ಪರಿಚಿತರಿಗೆ ಸನಾತನ ಪ್ರಭಾತದ ಬಗ್ಗೆ ಹೇಳಬಹುದು ಎಂದು ಗಮನಕ್ಕೆ ಬಂದಲ್ಲಿ ನೀವು ಅವರೊಂದಿಗೆ ಮಾತನಾಡಬಹುದು.

೪. ಅಧ್ಯಾತ್ಮಪ್ರಸಾರದ ಅತ್ಯಂತ ಸರಳವಾದ ಸಾಮಾಜಿಕ ಪ್ರಸಾರ ಮಾಧ್ಯಮ ಎಂದರೆ ‘ಸೋಶಲ್ ಮೀಡಿಯಾ’

ಇಂದು ಹೆಚ್ಚುಕಮ್ಮಿ ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳಿವೆ. ಕೆಲವು ಜನರು ‘ಫೇಸ್ ಬುಕ್’, ‘ವಾಟ್ಸ್ ಆಪ್’, ‘ಟ್ವಿಟರ್’ ನಂತಹ ಪ್ಲಾಟ್ ಫಾರ್ಮಗಳನ್ನು ಸಹ ಉಪಯೋಗಿಸುತ್ತಾರೆ. ಈ ಮಾಧ್ಯಮಗಳಿಂದ ನಾವು ಅಧ್ಯಾತ್ಮ ಪ್ರಸಾರವನ್ನು ಮಾಡಬಹುದು. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿದಿನ ನಾಮಸತ್ಸಂಗ, ಧರ್ಮಸಂವಾದ, ಬಾಲಸಂಸ್ಕಾರವರ್ಗದಂತಹ ಆನ್ ಲೈನ್ ಸತ್ಸಂಗಗಳನ್ನು ನಡೆಸಲಾಗುತ್ತದೆ. ನೀವು ಈ ಸತ್ಸಂಗಗಳ ಲಿಂಕ್ಸ್ ಅಥವಾ ಅದಕ್ಕೆ ಸಂಬಂಧಿತ ಪೋಸ್ಟ್ ಗಳನ್ನು ತಮ್ಮ ಪರಿಚಿತರಿಗೆ ಕಳುಹಿಸಬಹುದು. ಸಮಿತಿಯ ವತಿಯಿಂದ ಪ್ರತಿವಾರ ಆನ್ ಲೈನ್ ಸಂವಾದದ ‘ಚರ್ಚಾ ಹಿಂದೂ ರಾಷ್ಟ್ರಕಿ’ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಸಂವಾದದಲ್ಲಿ ಹಿಂದುತ್ವ ಹಾಗೂ ರಾಷ್ಟ್ರಹಿತದ ದೃಷ್ಟಿಯಿಂದ ಜ್ವಲಂತ ವಿಷಯಗಳ ಚರ್ಚೆಯನ್ನು ಮಾಡಿ ಒಂದು ದೃಷ್ಟಿಕೋನವನ್ನು ನೀಡಲಾಗುತ್ತದೆ. ಸಂಬಂಧಿತ ವಿಷಯಗಳ ತಜ್ಞರು ಅದರಲ್ಲಿ ತಮ್ಮ ಅಧ್ಯಯನಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ನಾವೆಲ್ಲರೂ ಸಮಯದ ಲಭ್ಯತೆಗನುಸಾರ ಸಂವಾದವನ್ನು ವೀಕ್ಷಿಸಬಹುದು ಮತ್ತು ಅದರ ಪ್ರಸಾರವನ್ನು ಮಾಡಬಹುದು. ಈ ಸಂವಾದದಿಂದ ನಮ್ಮ ಜ್ಞಾನದಲ್ಲಿ ವೃದ್ಧಿಯಾಗುತ್ತಿದೆ. ಇಂದು ಹಿಂದೂ ಧರ್ಮದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರವಾಗುತ್ತಿದೆ. ಅದರ ವಾಸ್ತವಿಕತೆಯೇನು ಹಾಗೂ ಹಿಂದೂ ವಿರೋಧಿ ವಿಚಾರಗಳ ಖಂಡಣೆಯನ್ನು ನಾವು ಯಾವ ರೀತಿ ಮಾಡಬಹುದು ಮುಂತಾದ ಅನೇಕ ಅಂಶಗಳನ್ನು ನಾವು ಸಂವಾದದಿಂದ ಕಲಿಯಬಹುದು. ಈ ಸತ್ಸಂಗ ಮತ್ತು ಸಂವಾದವು ಒಂದು ರೀತಿಯಲ್ಲಿ ಜ್ಞಾನಯಜ್ಞವೇ ಆಗಿದೆ. ಇದರಲ್ಲಿ ಪಾಲ್ಗೊಳ್ಳುವುದು ಸಹ ಸತ್ಸೇವೆಯೇ ಆಗಿದೆ.

ಅನೇಕ ಸಲ ಟ್ವಿಟರ್ ನಲ್ಲಿ ಸಹ ಹಿಂದುತ್ವದ ದೃಷ್ಟಿಯಿಂದ ಟ್ರೆಂಡ್ ನಡೆಸಲಾಗುತ್ತದೆ. ನಾವು ಸಹ ಅದರಲ್ಲಿ ಟ್ವೀಟ್ ಮಾಡಿ ಅದರಲ್ಲಿ ಭಾಗವಹಿಸಬಹುದು. ಈ ಸೇವೆಗಳನ್ನು ಮಾಡಲು ನಾವು ಬಹಳ ಸಮಯವನ್ನು ನೀಡಬೇಕಾಗುತ್ತದೆ ಎಂದೇನಿಲ್ಲ. ನಾವು ದಿನದಲ್ಲಿ ಅನೇಕ ಸಲ ಕೈಯಲ್ಲಿ ಮೋಬೈಲ್ ಹಿಡಿಯುತ್ತೇವೆ ಅಥವಾ ಮೆಸೆಜ್ ಫಾರ್ವರ್ಡ ಮಾಡುತ್ತಿರುತ್ತೇವೆ. ಸಂಸ್ಥೆಯ ವತಿಯಿಂದ ತಯಾರಿಸಲಾಗಿರುವ ಪೋಸ್ಟ್ ಗಳನ್ನು ಆಗ ಇತರರಿಗೆ ಕಳುಹಿಸಿ, ಇದರ ಮೂಲಕ ದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಗುತ್ತದೆ.

ಆನ್ ಲೈನ್ ಪ್ರಸಾರದ ಮಹತ್ವವನ್ನು ನಮಗೆ ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ. ಅವು ರಾಷ್ಟ್ರೀಯ ಸ್ತರದಲ್ಲಿ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಮಹತ್ವಪೂರ್ಣ ಕೊಡುಗೆಯನ್ನು ನೀಡುತ್ತವೆ. ಸ್ವಲ್ಪ ಸಮಯದ ತನಕ ಪ್ರಸಾರ ಮಾಧ್ಯಮ ಕ್ಷೇತ್ರವು ಎಡಪಂಥಿಯರ ಅಥವಾ ಹಿಂದೂ ವಿರೋಧಿಗಳ ಮುದ್ದಿನದ್ದಾಗಿತ್ತು. ಅವರು ಹಿಂದೂ ಧರ್ಮದ ಬಗ್ಗೆ ಹೀನ ಭಾವನೆಯನ್ನು ಹೇಗೆ ಮೂಡಿಸಬಹುದು ಮತ್ತು ಅವರನ್ನು ಯಾವ ರೀತಿ ಸನಾತನ ಧರ್ಮದಿಂದ ದೂರಗೊಳಿಸಬಹುದು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಸನಾತನ ಧರ್ಮೀಯರು ಹಿಂದೂ ಪ್ರಸಾರ ಮಾಧ್ಯಮಗಳ ವಿವಿಧ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಧರ್ಮರಕ್ಷಣೆಯನ್ನು ಮಾಡುತ್ತಿದ್ದಾರೆ. ಫೇಸ್ ಬುಕ್ ನ ಮೂಲಕ ಪ್ರಸಾರವನ್ನು ಹೇಗೆ ಮಾಡಬೇಕು, ಇದನ್ನು ಕಲಿಯಬೇಕಾದರೆ ಅದನ್ನು ನಿಮಗೆ ಸಾಧಕರು ಕಲಿಸುವರು. ಇದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು, ಕೊರೊನಾ ಮಹಾಮಾರಿಯ ಸಮಯದಲ್ಲಿ ಸಂಚಾರನಿರ್ಬಂಧವನ್ನು ಹೇರಲಾಗಿತ್ತು ಆಗ ಸನಾತನದ ಗ್ರಾಮೀಣ ಕ್ಷೇತ್ರ (ಹಳ್ಳಿ ಪ್ರದೇಶದಲ್ಲಿರುವ) ಮತ್ತು ವಯಸ್ಸಾದ ಸಾಧಕರು ಸಹ ‘ಸೋಶಲ್ ಮೀಡಿಯಾ’ದ ಮೂಲಕ ಪ್ರಸಾರವನ್ನು ಹೇಗೆ ಮಾಡಬೇಕು ಎಂದು ಕಲಿತುಕೊಂಡರು ಮತ್ತು ಇಂದು ಅವರು ಉತ್ತಮ ರೀತಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ.

೫. ಫಲಕಪ್ರಸಿದ್ಧಿ

ಸೇವೆಯ ಇನ್ನೊಂದು ಸರಳ ಮಾಧ್ಯಮವೆಂದರೆ ಫಲಕಪ್ರಸಿದ್ಧಿ! ಅನೇಕ ಸ್ಥಳಗಳಲ್ಲಿ ಅಂದರೆ ನಿಮ್ಮ ಸೊಸೈಟಿ ಅಥವಾ ಮುಖ್ಯ ಚೌಕಗಳಲ್ಲಿ ಸೂಚನಾ ಫಲಕಗಳು ಅಂದರೆ ಫಲಕಗಳಿರುತ್ತವೆ. ಹೆಚ್ಚಿನ ಸಮಯದಲ್ಲಿ ಫಲಕಗಳು ಖಾಲಿಯೇ ಇರುತ್ತವೆ ಅಥವಾ ಅದರ ಮೇಲೆ ಹಳೆಯದ್ದು ಏನಾದರೂ ಬರೆದಿರುತ್ತದೆ. ಈ ಫಲಕಗಳ ಮೇಲೆ ನಾವು ಸೀಮೆಸುಣ್ಣ ಅಂದರೆ ಚಾಕ್ ನಿಂದ ಅಧ್ಯಾತ್ಮಶಾಸ್ತ್ರದ ಬಗ್ಗೆ ಚಿಕ್ಕ ಪುಟ್ಟ ಚೌಕಟ್ಟುಗಳನ್ನು ಬರೆಯಬಹುದು. ತಮಗೆ ಇಂತಹ ಫಲಕಲೇಖನಗಳನ್ನು ಮಾಡಲು ಸಾಧ್ಯವಿದ್ದಲ್ಲಿ ನಾವು ವಾರದಲ್ಲಿ ಒಂದು ಸಲ ಅಥವಾ ಎರಡು ಸಲ ಫಲಕ ಲೇಖನಗಳನ್ನು ಮಾಡಬಹುದು. ನಾವು ನಿಮಗೆ ಲೇಖನಗಳನ್ನು ಲಭ್ಯ ಮಾಡಿಕೊಡುವೆವು. ಫಲಕಲೇಖನಕ್ಕಾಗಿ ಎಲ್ಲಿ ಅವಶ್ಯಕತೆಯಿದೆ ಅಲ್ಲಿ ನಿಯಮಕ್ಕನುಸಾರ ಅನುಮತಿಯನ್ನು ಸಹ ಪಡೆದುಕೊಳ್ಳಬೇಕು. ಉದಾ. ಸೊಸೈಟಿಯ ಫಲಕವಾಗಿದ್ದಲ್ಲಿ ಸೊಸೈಟಿಯ ಅಧ್ಯಕ್ಷರನ್ನು ಭೇಟಿಯಾಗಿ ಅನುಮತಿಯನ್ನು ಪಡೆದುಕೊಳ್ಳಬಹುದು. ಸಂಪೂರ್ಣ ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಸಾಧಕರು ತಮ್ಮ ಸೇವೆಯಂದು ಈ ರೀತಿ ಫಲಕಪ್ರಸಿದ್ಧಿಯನ್ನು ಮಾಡುತ್ತಾರೆ. ಸೊಸೈಟಿಗಳಲ್ಲಿರುವ ಜನರು ಅಥವಾ ರಸ್ತೆಯಲ್ಲಿ ಓಡಾಡುವ ಜನರು ನಿಶ್ಚಿತವಾಗಿಯೂ ಈ ಫಲಕವನ್ನು ಓದುತ್ತಾರೆ ಮತ್ತು ಆ ಮೂಲಕ ಅವರಿಗೆ ಅಧ್ಯಾತ್ಮಶಾಸ್ತ್ರವು ಅರ್ಥವಾಗುತ್ತದೆ. ಕೆಲವು ಸ್ಥಳಗಳಲ್ಲಿ ಜನರು ನೂತನ ಫಲಕಲೇಖನವನ್ನು ಯಾವಾಗ ಬರೆಯುತ್ತಾರೆ ಎಂದು ದಾರಿ ಕಾಯುತ್ತಿರುತ್ತಾರೆ. ಇಂತಹ ಅನುಭವಗಳೂ ಸಹ ನಮಗೆ ಬಂದಿವೆ.

೬. ಕರಪತ್ರಗಳ ವಿತರಣೆ

ಫಲಕಪ್ರಸಿದ್ಧಿಯ ಜೊತೆಗೆ ನಾವು ಕರಪತ್ರಗಳನ್ನು ಅಂದರೆ ಪಾಂಫ್ಲೆಟ್ಸ್ ಗಳನ್ನು ಸಹ ವಿತರಿಸಬಹುದು. ಸನಾತನ ಸಂಸ್ಥೆಯ ವತಿಯಿಂದ ನಾವು ಹಬ್ಬ ಉತ್ಸವಗಳ ನಿಮಿತ್ತ ಅಧ್ಯಾತ್ಮಶಾಸ್ತ್ರವನ್ನು ವಿವರಿಸುವಂತಹ ಕರಪತ್ರಗಳನ್ನು ತಯಾರಿಸುತ್ತೇವೆ. ನಾವು ನಮ್ಮ ಸೊಸೈಟಿ ಅಥವಾ ದೇವಸ್ಥಾನಗಳಿಗೆ ಬರುವ ಶ್ರದ್ಧಾವಂತ ಜನರಿಗೆ ಈ ಕರಪತ್ರಗಳನ್ನು ನೀಡಬಹುದು. ನಮ್ಮ ಪ್ರದೇಶದಲ್ಲಿ ಹೇರಿರುವ ಸಂಚಾರ ನಿರ್ಬಂಧದ ವಿಚಾರವನ್ನು ಮಾಡಿ ಸ್ಥಳೀಯ ಸಾಧಕರೊಂದಿಗೆ ಮಾತನಾಡಿ ಫಲಕಪ್ರಸಿದ್ಧಿಯನ್ನು ಮಾಡುವುದು ಅಥವಾ ಕರಪತ್ರಗಳ ವಿತರಣೆಯನ್ನು ಮಾಡುವ ಸೇವೆಯಲ್ಲಿ ಪಾಲ್ಗೊಳ್ಳಬಹುದು. ಇದರಿಂದ ಸಾಧನೆಯ ಸ್ತರದಲ್ಲಿ ಹೇಗೆ ಲಾಭವಾಗುತ್ತದೆ ಎಂಬುದನ್ನು ನಾವೀಗ ನೋಡೋಣ. ಫಲಕಲೇಖನ ಮತ್ತು ಕರಪತ್ರಗಳ ವಿತರಣೆಯ ಮೂಲಕ ಸಮಾಜದಲ್ಲಿ ನಮ್ಮದೇನು ಪ್ರತಿಷ್ಠೆ ಅಥವಾ ಅಹಂ ಇದೆಯೋ ಅದು ದೂರವಾಗುತ್ತದೆ. ಈ ಸೇವೆಯನ್ನು ಮಾಡುವಾಗ ಯಾರಾದರೂ ನನ್ನನ್ನು ನೋಡಬಹುದು, ಅಥವಾ ಏನಾದರೂ ಹೇಳಬಹುದು ಎಂಬಂತಹ ಕೆಲವು ವಿಚಾರಗಳು ಮನಸ್ಸಿನಲ್ಲಿ ಬಂದರೆ ಅದು ನಮ್ಮ ಅಹಂನ ಭಾಗವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ಯಾವುದೇ ರೀತಿಯ ಗುರುಕಾರ್ಯವನ್ನು ಮಾಡುವ ಅವಕಾಶ ಸಿಗುವುದು ಎಂದರೆ ನಮ್ಮ ಮೇಲಾಗುವ ಗುರುಕೃಪೆಯೇ ಆಗಿದೆ. ಇದರಲ್ಲಿ ಯಾವುದೇ ರೀತಿಯಲ್ಲಿ ನ್ಯೂನತೆಯ ಭಾವನೆ ಇಲ್ಲ, ಬದಲಾಗಿ ನಮ್ಮ ಗೌರವವೇ ಆಗಿದೆ. ಇಂತಹ ಸತ್ಸೇವೆಯ ಅವಕಾಶ ಸಿಗುವುದೂ ಸೌಭಾಗ್ಯವೇ ಆಗಿದೆ. ಈ ರೀತಿ ಅಹಂನಿರ್ಮೂಲನದ ದೃಷ್ಟಿಯಿಂದ ಸಹ ಈ ಸೇವೆಗಳ ಮೂಲಕ ನಮ್ಮ ಸಾಧನೆಯಾಗುತ್ತದೆ. ಇಲ್ಲಿಯ ತನಕ ನಾವು ಪ್ರವಚನಗಳನ್ನು ಆಯೋಜಿಸುವುದು, ಸಾತ್ತ್ವಿಕ ಉಡುಗೊರೆ ನೀಡುವುದು, ಸೋಶಲ್ ಮೀಡಿಯಾದ ಮೂಲಕ ಪ್ರಸಾರ ಮಾಡುವುದು, ಫಲಕಪ್ರಸಿದ್ಧಿಯ ಹಾಗೂ ಕರಪತ್ರಗಳ ವಿತರಣೆ ಇಂತಹ ೫ ಮಾಧ್ಯಮಗಳನ್ನು ನೋಡಿದೆವು. ಇದು ಸುಲಭವಾಗಿದೆ ಅಲ್ಲವೇ? ನಾವೆಲ್ಲರೂ ಇದನ್ನು ಮಾಡಬಹುದು ಅಲ್ಲವೇ?

೭. ಜಾಲತಾಣಗಳಿಗೆ ಸಂಬಂಧಿತ ಸೇವೆ

ಈಗ ನಾವು ನೋಡಿದಂತಹ ಸೇವೆಗಳ ಜೊತೆಗೆ ಇನ್ನೂ ಅನೇಕ ಸತ್ಸೇವೆಗಳು ನಮ್ಮಲ್ಲಿ ಲಭ್ಯವಿವೆ. ಸನಾತನ ಸಂಸ್ಥೆಯ ಈ ಜಾಲತಾಣ sanatan.org ಹಿಂದುತ್ವದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಒಂದು ಜಾಲತಾಣಗ. ದೇಶ-ವಿದೇಶಗಳಲ್ಲಿ ಲಕ್ಷಗಟ್ಟಲೆ ಜಿಜ್ಞಾಸುಗಳು ಈ ಜಾಲತಾಣವನ್ನು ವೀಕ್ಷಿಸುತ್ತಾರೆ. ತಮಗೆ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿತ ಉದಾಹರಣೆಗೆ, ವೆಬ್ ಡಿಸೈನಿಂಗ್, ಫಾರ್ಮೆಟಿಂಗ್ ಅಥವಾ ಜಾಲತಾಣಗಳಿಗೆ ಸಂಬಂಧಿತ ಅನುಭವಗಳಿದ್ದಲ್ಲಿ ನೀವು ಜಾಲತಾಣಕ್ಕೆ ಸಂಬಂಧಿತ ಸತ್ಸೇವೆಗಳಲ್ಲಿ ಯೋಗದಾನ ನೀಡಬಹುದು.

೮. ಬೆರಳಚ್ಚು, ಸಂಕಲನ ಮತ್ತು ಅನುವಾದ

ತಮ್ಮಲ್ಲಿ ಯಾವುದಾದರೊಂದು ಭಾಷೆಯ ಪ್ರಭುತ್ವವಿದ್ದಲ್ಲಿ ಅಥವಾ ತಮಗೆ ಬೆರಳಚ್ಚು ಅಂದರೆ ಟೈಪಿಂಗ್, ಸಂಕಲನ ಅಂದರೆ ಎಡಿಟಿಂಗ ಅಥವಾ ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದ ಮಾಡುವ ಅನುಭವವಿದ್ದಲ್ಲಿ ಅಥವಾ ಅದನ್ನು ಕಲಿಯುವ ಇಚ್ಛೆಯಿದ್ದಲ್ಲಿ ಅದನ್ನು ನೀವು ಜಾಲತಾಣದ ಲೇಖನಗಳ ಅನುವಾದದ ಸೇವೆಯಲ್ಲಿ ಆ ಕೌಷಲ್ಯವನ್ನು ಉಪಯೋಗಿಸಬಹುದು. ನೀವು ಗ್ರಂಥಗಳ ಅನುವಾದದ ಸೇವೆಯಲ್ಲಿ ಸಹ ಭಾಗವಹಿಸಬಹುದು.

೯. ಕೌಶಲ್ಯಕ್ಕನುಸಾರ ಸೇವೆಗಳು

ಕೆಲವು ಮೀಡಿಯಾಗಳು ಅಂದರೆ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ನೀವು ಅಧ್ಯಾತ್ಮಕ್ಕೆ ಸಂಬಂಧಿತ ಲೇಖನಗಳನ್ನು ಮುದ್ರಿಸಿ ಅದರಲ್ಲಿ ಭಾಗವಹಿಸಬಹುದು, ಧರ್ಮ-ಅಧ್ಯಾತ್ಮದ ವಿಷಯದ ಮೇಲಾಧಾರಿತ ಬೇರೆ ಬೇರೆ ಅಡಕ ಮುದ್ರಿಕೆಗಳು ಅಂದರೆ ಸಿ.ಡಿ.ಗಳು ಲಭ್ಯವಿವೆ. ನೀವು ಸ್ಥಳೀಯ ಕೇಬಲ್ ಚಾನೆಲ್ ಗಳಲ್ಲಿ ಅವುಗಳ ಪ್ರಸರಣಕ್ಕಾಗಿ ಪ್ರಯತ್ನಿಸಬಹುದು. ಕೆಲವರು ಡಾಕ್ಟರ್, ವಕೀಲರು, ಸಿ.ಎ., ಆರ್ಕಿಟೆಕ್ಟ್, ಛಾಯಾಚಿತ್ರಕಾರರು ಅಂದರೆ ಫೋಟೋಗ್ರಾಫರ್, ಕೃಷಿತಜ್ಞರುರಾಗಿದ್ದಲ್ಲಿ ನೀವು ಅದಕ್ಕೆ ಸಂಬಂಧಿತ ಕ್ಷೇತ್ರದ ಜ್ಞಾನವನ್ನು ಉಪಯೋಗಿಸಿ ಸತ್ಸೇವೆಯನ್ನು ಮಾಡಬಹುದು. ಕಲೆಯ ಸಂದರ್ಭದಲ್ಲಿ ಉದಾಹರಣೆಗಾಗಿ ಚಿತ್ರಕಲೆ, ಸಂಗೀತ, ನೃತ್ಯ, ವಾದನ, ಮೂರ್ತಿಕಲೆ ಮುಂತಾದ ಕಲಾಕ್ಷೇತ್ರಗಳಿಗೆ ಸಂಬಂಧಿತ ಸೇವೆಗಳಲ್ಲಿಯೂ ನೀವು ತಮ್ಮ ನೆರವನ್ನು ನೀಡಬಹುದು.

ಸೇವೆಗಳ ವ್ಯಾಪಕತೆಯನ್ನು ಹೇಳುವುದರ ಕಾರಣವೇನೆಂದರೆ ಗುರುದೇವರು ಪ್ರತಿಯೊಬ್ಬ ವ್ಯಕ್ತಿಗಾಗಿ ಸೇವೆಯ ಮಾಧ್ಯಮವನ್ನು ಲಭ್ಯ ಮಾಡಿಕೊಟ್ಟಿದ್ದಾರೆ. ಇಲ್ಲಿ ಪ್ರತಿಯೊಬ್ಬ ಜಿಜ್ಞಾಸುವಿಗೆ ಸಹ ಸೇವೆ ಲಭ್ಯವಿದೆ. ಯಾವುದೇ ಸೇವೆಯು ಹೆಚ್ಚು ಶ್ರೇಷ್ಠ ಅಥವಾ ಕಮ್ಮಿ ಮಹತ್ವದ್ದು ಎಂದಿರುವುದಿಲ್ಲ. ಬದಲಾಗಿ ಪ್ರತಿಯೊಂದು ಸೇವೆಯು ಗುರುಸೇವೆಯೇ ಆಗಿದೆ. ಈ ಸೇವೆಗಳ ಮೂಲಕ ಭಗವಂತನು ಸಾಧಕರನ್ನು ತಯಾರಿಸುತ್ತಿದ್ದಾರೆ ಮತ್ತು ಸೇವೆಯನ್ನು ಮಾಡುವ ಜೀವಗಳ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ನಾವು ಪ್ರಾರಂಭದ ಕೆಲವು ಸತ್ಸಂಗದಲ್ಲಿ ‘ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಅಧ್ಯಾತ್ಮದ ಸಿದ್ಧಾಂತವನ್ನು ತಿಳಿದುಕೊಂಡಿದ್ದೆವು. ನಮ್ಮ ಕ್ಷಮತೆ ಮತ್ತು ಕೌಶಲ್ಯಕ್ಕನುಸಾರ ಸೇವೆಯನ್ನು ಮಾಡುವುದು ಮತ್ತು ಅದರ ಮೂಲಕ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಇದು ಅದೇ ಸಿದ್ಧಾಂತಕ್ಕನುಗುಣವಾಗಿದೆ.

ಗುರುಸೇವೆಯ ಸಂದರ್ಭದಲ್ಲಿನ ಅನುಭೂತಿಗಳು

ಗುರುದೇವರು ಗುರುಸೇವೆಯನ್ನು ಮಾಡುವ ಸಾಧಕರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆಂಬುದರ ಬಗ್ಗೆ ಒಂದು ಉದಾರಹಣೆಯನ್ನು ನೋಡೋಣ. ಇದು ನಮ್ಮ ಬುದ್ಧಿಯ ಮಿತಿಗೆ ಮೀರಿದ ವಿಷಯವಾಗಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಗುರು ಇಂದೋರ ನಿವಾಸಿ ಮಹಾನ್ ಸಂತ ಪ.ಪೂ. ಭಕ್ತರಾಜ ಮಹಾರಾಜರ ಒಬ್ಬ ಶಿಷ್ಯರಿದ್ದರು. ಅವರೆಂದರೆ ಪ.ಪೂ. ರಾಮಜಿದಾದಾ! ಪ.ಪೂ. ಭಕ್ತರಾಜ ಮಹಾರಾಜರು ಸಂತರ್ಪಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದರು. ಗುರುದೇವರು ಕರೆದಾಗಲೆಲ್ಲ ಪ.ಪೂ.ರಾಮಜಿದಾದಾರವರು ಸಹ ಅವರ ಜೊತೆಗೆ ಹೋಗುತ್ತಿದ್ದರು. ಗುರುಗಳ ಕರೆ ಬಂದಾಗ ಯಾವುದೇ ವಿಷಯದ ಬಗ್ಗೆ ಚಿಂತೆಯನ್ನು ಮಾಡುತ್ತಿರಲಿಲ್ಲ. ಒಂದು ಸಲ ಪ.ಪೂ. ರಾಮಜಿ ದಾದಾರವರು ಪ.ಪೂ. ಭಕ್ತರಾಜ ಮಹಾರಾಜರ ಜೊತೆಗೆ ೨೦-೨೨ ದಿನ ಸೇವೆಗಾಗಿ ಹೋದರು. ಪ.ಪೂ. ರಾಮಜಿ ದಾದಾರವರು ನೌಕರಿಯನ್ನು ಸಹ ಮಾಡುತ್ತಿದ್ದರು. ಗುರುಸೇವೆಯಲ್ಲಿದ್ದುದರಿಂದ ವಾಪಾಸು ಬಂದ ನಂತರ ಈ ತಿಂಗಳು ನಮಗೆ ಸಂಬಳ ಸಿಗಲಾರದು ಎಂದು ಅವರಿಗೆ ಅನಿಸುತ್ತಿತ್ತು. ಆದರೆ ಆಶ್ಚರ್ಯದ ಸಂಗತಿ ಏನೆಂದರೆ ಅವರಿಗೆ ಆ ತಿಂಗಳು ಪೂರ್ಣ ಸಂಬಳ ಸಿಕ್ಕಿತ್ತು. ಇದರ ಅರ್ಥ ಯಾವಾಗ ರಾಮಜಿದಾದಾರವರು ಗುರುಸೇವೆಗಾಗಿ ಹೋದರೋ ಆಗ ಅವರ ಗುರುತತ್ತ್ವವು ಆ ಕಚೇರಿಯಲ್ಲಿ ಇನ್ನೊಬ್ಬ ರಾಮಜಿದಾದಾರನ್ನು ತಯಾರು ಮಾಡಿಟ್ಟಿದ್ದರು. ಅಂದರೆ ರಾಮಜಿದಾದಾರರಲ್ಲಿ ದೃಢವಾದ ಗುರು ನಿಷ್ಠೆಯಿತ್ತು. ಇದರಿಂದ ನಾವು ಸಮರ್ಪಿತರಾಗಿ ಗುರುಸೇವೆಯನ್ನು ಮಾಡುವಾಗ ಶ್ರೀಗುರುಗಳು ನಮ್ಮ ಎಲ್ಲ ಚಿಂತೆಗಳನ್ನು ನಿವಾರಣೆ ಮಾಡುತ್ತಾರೆ ಎಂಬುದೇ ಇಲ್ಲಿ ಕಲಿಯಲು ಸಿಗುತ್ತದೆ.

ಸಂಧಿಕಾಲದಲ್ಲಿ ಸಾಧನೆಯ ಮಹತ್ವ

ಈಗ ನಾವು ಸಮರ್ಪಿತರಾಗಿ ಗುರುಸೇವೆಯನ್ನು ಮಾಡೋಣ. ಇಂದಿನ ಕಾಲದಲ್ಲಿ ಸಾಧನೆಗಾಗಿ ಬಹಳ ಕಡಿಮೆ ಕಾಲಾವಧಿ ಉಳಿದಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ನಾವು ಈ ಸತ್ಸೇವೆಯ ಅವಕಾಶದ ಲಾಭವನ್ನು ಪಡೆದುಕೊಳ್ಳೋಣ. ಇಂದಿನ ಸಮಯವು ಆಪತ್ಕಾಲದ್ದೇ ಆಗಿದ್ದರೂ ಸಾಧನೆಯ ದೃಷ್ಟಿಯಿಂದ ಇದು ಸಂಧಿಕಾಲವಾಗಿದೆ. ಸಂಧಿಕಾಲದ ಅರ್ಥವೇನೆಂದರೆ ಕಲಿಯುಗಾಂತರ್ಗತ ಕಲಿಯುಗ ಸಮಾಪ್ತಿಯಾಗಿ ಕಲಿಯುಗಾಂತರ್ಗತ ಸತ್ಯಯುಗವು ಆರಂಭವಾಗುವಂತಹ ಕಾಲ! ಸಂಧಿಕಾಲದಲ್ಲಿ ಮಾಡಲಾಗುವ ಸಾಧನೆಯ ಫಲವು ಸಹಸ್ರಪಟ್ಟು ಜಾಸ್ತಿ ಸಿಗುತ್ತದೆ. ಕಾಲ ಮಹಿಮೆಯನ್ನು ಗಮನದಲ್ಲಿರಿಸಿಕೊಂಡು ನಾವು ಲಭ್ಯವಿರುವ ಸೇವೆಗಳನ್ನು ಸ್ವಯಂನ ಆಧ್ಯಾತ್ಮಿಕ ಉನ್ನತಿಗಾಗಿ ಲಾಭವನ್ನು ಪಡೆದುಕೊಳ್ಳೋಣ. ಯಾರು ಗುರುಗಳ ಧರ್ಮಪ್ರಸಾರದ ಕಾರ್ಯದಲ್ಲಿ ಸಮ್ಮಿಲಿತವಾಗುತ್ತಾರೆಯೋ ಅವರನ್ನು ಗುರುಗಳು ತಮ್ಮವರನ್ನಾಗಿಸಿಕೊಳ್ಳುತ್ತಾರೆ. ಗುರುದೇವರಿಗೆ, ‘ಇವರು ನನ್ನವರು’ ಎಂದು ಅನಿಸಿದರೆ ಕೇವಲ ಗುರುಗಳ ಸಂಕಲ್ಪದಿಂದಲೇ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಪ್ರತ್ಯಕ್ಷ ರೂಪದಲ್ಲಿ ಸೇವೆಗಳ ಆಯೋಜನೆ

ನೀವು ಸಹ ಸೇವೆಯನ್ನು ಮಾಡಲು ತಯಾರಿದ್ದೀರಲ್ಲ? ಈಗ ಹೇಳಿದಂತಹ ವಿವಿಧ ಸೇವೆಗಳನ್ನು ಯಾರ‍್ಯಾರು ಯಾವ್ಯಾವ ಸೇವೆಗಳಲ್ಲಿ ಭಾಗಿಯಾಗಬಹುದು? ಅಧ್ಯಾತ್ಮಪ್ರಸಾರಕ್ಕಾಗಿ ಆನ್ ಲೈನ್ ಸಾಧನಾ ಪ್ರವಚನಗಳನ್ನು ಆಯೋಜಿಸುವುದು, ಉಡುಗೊರೆಯ ರೂಪದಲ್ಲಿ ಆಧ್ಯಾತ್ಮಿಕ ಗ್ರಂಥ ಹಾಗೂ ಸಾತ್ತ್ವಿಕ ಉತ್ಪಾದನೆಗಳನ್ನು ನೀಡುವುದು, ಸನಾತನ ಪ್ರಭಾತದ ಚಂದಾದಾರರನ್ನಾಗಿಸುವುದು, ಫಲಕಪ್ರಸಿದ್ಧಿ, ಕರಪತ್ರಗಳ ವಿತರಣೆ, ಸೋಶಲ್ ಮಿಡಿಯಾದ ಮೂಲಕ ಅಧ್ಯಾತ್ಮ ಪ್ರಸಾರ, ಕೌಶಲ್ಯಕ್ಕನುಸಾರ ಸೇವೆಯನ್ನು ಯೋಗದಾನ ಮಾಡುವುದು ಮುಂತಾದ ಸಾಮಾನ್ಯ ಅಂಶಗಳನ್ನು ನೋಡಿದೆವು. ತಾವು ಇದರಲ್ಲಿ ಯಾವ ಸೇವೆಯನ್ನು ಮಾಡಬಹುದು ಎಂದು ನೀವು ಹೇಳಬಹುದು. ಇದಕ್ಕಾಗಿ ನಿಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರನ್ನು ಭೇಟಿಯಾಗಿ.

Leave a Comment