ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವದ ನಿಮಿತ್ತ ನೃತ್ಯ ಪಥಕ, ಧ್ವಜ ಪಥಕಗಳ, ಜಯಘೋಷಗಳ ಮೂಲಕ ಶ್ರೀವಿಷ್ಣುತತ್ತ್ವದ ಆವಾಹನೆ !
ಸಪ್ತರ್ಷಿಗಳ ಆಜ್ಞೆಯಿಂದ ರಥದಲ್ಲಿ ವಿರಾಜಮಾನರಾದ ಶ್ರೀವಿಷ್ಣುರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆ, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (ಎಡಬದಿ) ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (ಬಲಬದಿ)
ರಾಮನಾಥಿ (ಗೋವಾ), ಮೇ ೨೨, ೨೦೨೨ : ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವವು ಸಾಧಕರಿಗಾಗಿ ಆನಂದದ ಹಾಗೂ ಭಕ್ತಿಭಾವದ ಹಬ್ಬವೇ ಆಗಿರುತ್ತದೆ ! ವೈಶಾಖ ಕೃಷ್ಣ ಸಪ್ತಮಿ, ಅಂದರೆ ಮೇ ೨೨, ೨೦೨೨ ರ ಮಂಗಳಕರ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವವನ್ನು ಆಚರಿಸಲಾಯಿತು. ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ಅವರ ರಥೋತ್ಸವ ಆಚರಿಸಬೇಕು’, ಎಂದು ಸನಾತನದ ಸಾಧಕರಿಗೆ ಆಜ್ಞೆ ನೀಡಿದ್ದರು. ಮಹರ್ಷಿಗಳ ಆಜ್ಞೆಯಂತೆ ಆಚರಿಸಲ್ಪಟ್ಟ ಜನ್ಮೋತ್ಸವದಲ್ಲಿ ಸಾಧಕರಿಗೆ ಗುರುದೇವರ ಅವತಾರಿ ತತ್ತ್ವವು ಯಥೇಚ್ಛವಾಗಿ ಅನುಭವಿಸಲು ಸಿಕ್ಕಿತು.
ಯಾವಾಗ ರಥದಲ್ಲಿ ಶ್ರೀವಿಷ್ಣುರೂಪದಲ್ಲಿ ವಿರಾಜಮಾನರಾಗಿದ್ದ ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರ ಎದುರಿನಲ್ಲಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಇವರು ಮಾರ್ಗಕ್ರಮಣ ಮಾಡಿದರೋ ಆಗ ‘ರಾಮರಾಜ್ಯಸಮ ಆಗಿರುವ ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿರುವ ಎಲ್ಲ ಆಧ್ಯಾತ್ಮಿಕ ಅಡಚಣೆಗಳು ದೂರ ಆಗುತ್ತಿದೆ’ ಎಂಬ ಆರಿವಿನಿಂದ ಸಾಧಕರಲ್ಲಿ ಭಾವವು ಉಕ್ಕಿ ಬಂತು. ಭಕ್ತಿಮಯ ವಾತಾವರಣದಲ್ಲಿ ಸಾಕಾರಗೊಂಡ ಗುರುದೇವರ ೮೦ ನೇ ಜನ್ಮೋತ್ಸವವು ಸಾಕ್ಷಾತ ವೈಕುಂಠವೇ ಭೂಲೋಕದಲ್ಲಿ ಅವತರಿಸಿದ ಅನುಭೂತಿ! ಗುರುವರ್ಯರ ಪ್ರತ್ಯಕ್ಷ ಉಪಸ್ಥಿತಿ, ಅತ್ಯಂತ ಭಕ್ತಿಮಯ ವಾತಾವರಣ ಮತ್ತು ಅವರ ಚರಣಗಳಲ್ಲಿ ಸೇವೆಯನ್ನು ಅರ್ಪಿಸಲು ಸಿಕ್ಕಿದ ಅವಕಾಶದಿಂದಾಗಿ ಸಾಧಕರ ಮನಮಂದಿರದ ಭಾವವು ಅವರ ಮುಖದಿಂದ ಪ್ರವಹಿಸುತ್ತಿತ್ತು.
ಈ ರೀತಿಯಲ್ಲಿ ನೆರವೇರಿತು ಆನಂದಮಯ ರಥೋತ್ಸವ !
ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವದ ನಿಮಿತ್ತ ರಾಮನಾಥಿ ಗ್ರಾಮದಲ್ಲಿ ನಡೆಸಿದ ಚೈತನ್ಯಮಯ ರಥೋತ್ಸವದಲ್ಲಿ ಸಾಧಕರ ಸಹಭಾಗವನ್ನು ತೋರಿಸುವ ಒಂದು ಕ್ಷಣ !
ಮಧ್ಯಾಹ್ನ ರಥೋತ್ಸವದ ಆರಂಭ ಸ್ಥಳದಲ್ಲಿ ಶ್ರೀವಿಷ್ಣುರೂಪ ಧರಿಸಿದ್ದ ಪರಾತ್ಪರ ಗುರು ಡಾ. ಆಠವಲೆ, ಅವರೊಂದಿಗೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗಿಳ ಅವರ ಮಂಗಳಕರ ಆಗಮನವಾಯಿತು. ಆರಂಭದಲ್ಲಿ ಮೂರೂ ಗುರುಗಳು ಪಲ್ಲಕಿಯಲ್ಲಿ ವಿರಾಜಮಾನವಾಗಿದ್ದ ‘ಶ್ರೀರಾಮ ಸಾಲಿಗ್ರಾಮ’ದ ದರ್ಶನವನ್ನು ಪಡೆದರು. ನಂತರ ವೇದ ಮಂತ್ರಗಳ ಘೋಷದೊಂದಿಗೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರು ಭಾವಪೂರ್ಣವಾಗಿ ಅಲಂಕರಿಸಿದ ರಥದ ಮೇಲೆ ವಿರಾಜಮಾನರಾದರು. ನಂತರ ಶ್ರೀಮನ್ನಾರಾಯಣಸ್ವರೂಪ ಗುರುದೇವರ ಆಸನದ ಮುಂದೆ ಅವರ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಎಡಗಡೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರು ವಿರಾಜಮಾನರಾದರು.
ಶಂಖನಾದದಿಂದ ರಥೋತ್ಸವವು ಆರಂಭವಾಯಿತು. ರಥೋತ್ಸವದಲ್ಲಿ ಆರಂಭದಲ್ಲಿ ಧರ್ಮಧ್ವಜ ನಂತರ ಪೂರ್ಣಕುಂಭಗಳನ್ನು ಹಿದಿಡ ಮುತ್ತೈದೆಯರ ತಂಡ ಮತ್ತು ಸನಾತನದ ಸಂತರ ಉಪಸ್ಥಿತಿಯಿತ್ತು. ಅವರ ಹಿಂದೆ ತಾಳದ ತಂಡ ಮತ್ತು ಕೇಸರೀ ಧ್ವಜವನ್ನು ಕೈಯಲ್ಲಿ ಹಿಡಿದಿರುವ ಸಾಧಕರ ತಂಡ ಇತ್ತು. ಅನಂತರ ನ್ಯತ್ಯವನ್ನು ಮಾಡುವ ಸಾಧಕಿಯರ ಗುಂಪು, ‘ಶ್ರೀರಾಮ ಶಾಲೀಗ್ರಾಮ’ ಇದ್ದ ಪಲ್ಲಕಿ, ನೃತ್ಯಸೇವೆಯನ್ನು ಅರ್ಪಿಸುವ ಸಾಧಕಿಯರ ಎರಡನೇಯ ಗುಂಪು, ಶ್ರೀವಿಷ್ಣುವಿನ ರೂಪದಲ್ಲಿನ ಗುರುದೇವರ ಮಂಗಳಮಯ ರಥ, ಕೇಸರಿ ಧ್ವಜವನ್ನು ಕೈಯಲ್ಲಿ ಹಿಡಿದ ಸಾಧಕ-ಸಾಧಕಿಯರು, ನೃತ್ಯಸೇವೆಯನ್ನು ಪ್ರಸ್ತುತ ಪಡಿಸುವ ಸಾಧಕಿಯರ ಮೂರನೇಯ ಗುಂಪು ಮತ್ತು ಕೇಸರಿ ಧ್ವಜವನ್ನು ಕೈಯಲ್ಲಿ ಹಿಡಿದ ಸಾಧಕ-ಸಾಧಕಿಯರು ಹೀಗೆ ಈ ಭಾವಮಯ ರಥೋತ್ಸವದ ಕ್ರಮವಾಗಿತ್ತು. ಈ ಪ್ರಸಂಗದಲ್ಲಿ ಶ್ರೀಮನ್ನಾರಾಯಣನ ನಾಮಸಂಕೀರ್ತನೆ ಮಾಡಿ ಶ್ರೀವಿಷ್ಣುವಿನ ಸ್ತುತಿಯನ್ನು ಮಾಡಲಾಯಿತು. ಗುರುದೇವರ ಗುಣಸಂಕೀರ್ತನವನ್ನು ಮಾಡುವ ವಿವಿಧ ಜಯಘೋಷಗಳೊಂದಿಗೆ ಶ್ರೀವಿಷ್ಣುವಿನ ಬಗ್ಗೆ ಭಾವಜಾಗೃತಿ ಮಾಡುವ ವಿವಿಧ ಭಕ್ತಿಗೀತೆಗಳನ್ನೂ ಈ ಸಮಯದಲ್ಲಿ ಹಾಕಲಾಗಿತ್ತು.
ರಥೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಕು. ಅಪಾಲಾ ಔಂಧಕರ (ವಯಸ್ಸು ೧೫ ವರ್ಷಗಳು) ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಶರ್ವರಿ ಕಾನಸ್ಕರ (ವಯಸ್ಸು ೧೫ ವರ್ಷಗಳು) ಇವರೊಂದಿಗೆ ಇತರ ಸಾಧಕಿಯರು ೩ ಸ್ಥಳಗಳಲ್ಲಿ ನೃತ್ಯಸೇವೆಯನ್ನು ಅರ್ಪಿಸಿದರು. ರಾಮನಾಥಿಯಿಂದ ನಾಗೇಶಿ ಈ ೧ ಕಿಲೋಮೀಟರ್ ಪರಿಸರದಲ್ಲಿ ನೂರಾರು ಭಕ್ತರು ಮತ್ತು ಗ್ರಾಮಸ್ಥರು ಶ್ರೀವಿಷ್ಣುರೂಪದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ಭಾವಪೂರ್ಣ ದರ್ಶನವನ್ನು ಪಡೆದರು.
ರಥೋತ್ಸವಕ್ಕೆ ಸನಾತನದ ಸದ್ಗುರು ಮತ್ತು ಸಂತರ ವಂದನೀಯ ಉಪಸ್ಥಿತಿ ಲಭಿಸಿತು. ಸನಾತನದ ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಶ್ರೀ. ವಿನಾಯಕ ಶಾನಭಾಗ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಮನ್ವಯಕಿ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ತೇಜಲ ಪಾತ್ರೀಕರ ಇವರು ರಥೋತ್ಸವದ ಭಾವಪೂರ್ಣ ನಿರೂಪಣೆ ಮಾಡಿದರು. ಸನಾತನದ ರಾಮನಾಥಿ ಆಶ್ರಮ, ರಾಮನಾಥಿ ದೇವಸ್ಥಾನ, ಪಾರಪತಿವಾಡಾ ಈ ಮಾರ್ಗದಿಂದ ನಾಗೇಶಿಗೆ ಹೋಗಿ ಪುನಃ ಸನಾತನದ ಆಶ್ರಮಕ್ಕೆ ಬಂದು ರಥೋತ್ಸವದ ಭಾವಪೂರ್ಣ ಮುಕ್ತಾಯವಾಯಿತು.
ಶ್ರೀವಿಷ್ಣುವಿನ ವಸ್ತ್ರಾಂಲಕಾರವನ್ನು ಧರಿಸಿದ ಬಗ್ಗೆ ಪರಾತ್ಪರ ಗುರು ಡಾಕ್ಟರರ ವಿಚಾರ !
– (ಪರಾತ್ಪರ ಗುರು) ಡಾ. ಆಠವಲೆ (೨೨.೫.೨೦೨೨)
ಸಂತರು ಪರಾತ್ಪರ ಗುರು ಡಾ. ಆಠವಲೆಯವರನ್ನು ಅವತಾರವೆಂದು ಸಂಬೋಧಿಸುವುದರ ಹಿಂದಿನ ಕಾರಣ !
ಪರಾತ್ಪರ ಗುರು ಡಾ. ಆಠವಲೆ ಇವರು ಎಂದಿಗೂ ತಮ್ಮನ್ನು ಅವತಾರ ಎಂದು ಹೇಳಿಲ್ಲ. ಸನಾತನ ಸಂಸ್ಥೆಯೂ ಯಾವತ್ತೂ ಹಾಗೆ ಹೇಳುವುದಿಲ್ಲ. ‘ನಾಡಿ ಭವಿಷ್ಯ’ ಎಂಬ ಪ್ರಾಚೀನ ಹಾಗೂ ಪ್ರಭಾವಿ ಜ್ಯೋತಿಷ್ಯ ಶಾಸ್ತ್ರಾನುಸಾರ ಸಪ್ತರ್ಷಿಗಳು ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವನ್ನು ಬರೆದಿಟ್ಟಿದ್ದಾರೆ. ತಮಿಳುನಾಡಿನ ಜೀವನಾಡಿಪಟ್ಟಿಯ ವಾಚಕರಾರ ಪೂ. ಡಾ. ಓಂಉಲಗನಾಥನ್ ಇವರ ಮಾಧ್ಯಮದಿಂದ ಸಪ್ತರ್ಷಿಗಳು ಜೀವನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರು ಶ್ರೀವಿಷ್ಣುವಿನ ಅವತಾರ ಆಗಿದ್ದಾರೆ ಎಂದು ಬರೆದಿಟ್ಟಿದ್ದಾರೆ. ಸಪ್ತರ್ಷಿಗಳ ಆಜ್ಞೆಯಂತೆ ಮತ್ತು ನಾಡಿಪಟ್ಟಿಯಲ್ಲಿ ಹೇಳಿದಂತೆ ಜನ್ಮೋತ್ಸವದ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರು ಶ್ರೀವಿಷ್ಣುವಿನ ರೂಪದಲ್ಲಿ ವಸ್ತ್ರಾಲಂಕಾರ ಮಾಡಿಕೊಂಡಿದ್ದಾರೆ.