ಸದ್ಯ ಅನೇಕ ಸ್ಥಳಗಳಲ್ಲಿ ಬೆಳಿಗ್ಗೆ ಹೊರಗೆ ವಾಯುವಿಹಾರಕ್ಕೆ ಹೋಗಲು ಅಡಚಣೆ ಇರುತ್ತದೆ. ವಿಶೇಷವಾಗಿ ಹಿರಿಯ ವ್ಯಕ್ತಿಗಳು ಹೊರಗೆ ಹೋಗಬಾರದು, ಎಂದು ಮನೆಯವರಿಗೆ ಅನಿಸುತ್ತದೆ. ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೊರಗೆ ಹೋಗಲು ಕಠಿಣವೆನಿಸುತ್ತದೆ, ಆದ್ದರಿಂದ ಕಡಿಮೆ ಸ್ಥಳದಲ್ಲಿ ಸಹಜವಾಗಿ ಮಾಡಲು ಸಾಧ್ಯವಾಗುವ ವ್ಯಾಯಾಮ ಪದ್ಧತಿಯೆಂದರೆ ಆಂಗ್ಲ 8 ರ ಆಕಾರದಲ್ಲಿನ ನಡಿಗೆ !
೧. ಚಮತ್ಕಾರಿ ಲಾಭವನ್ನು ನೀಡುವ ಪದ್ಧತಿ !
ನಡಿಗೆಯ ವ್ಯಾಯಾಮಗಳಲ್ಲಿ 8 ರ ಆಕಾರದಲ್ಲಿನ ನಡಿಗೆಯು ಚಮತ್ಕಾರಿ ಲಾಭವನ್ನು ನೀಡುವ ಉತ್ತಮ ಪದ್ಧತಿಯಾಗಿದೆ. ಈ ಪದ್ಧತಿಗನುಸಾರ ನಾವು ಪ್ರತಿದಿನ ೧೫ ರಿಂದ ೩೦ ನಿಮಿಷ ನಡೆದಾಡಬಹುದು. ದ್ವಿಚಕ್ರವಾಹನ ನಡೆಸಲು ವಾಹನ ಪರವಾನಿಗೆಯನ್ನು ತೆಗೆದುಕೊಳ್ಳುವಾಗ 8 ರ ಆಕಾರದಲ್ಲಿ ವಾಹನವನ್ನು ನಡೆಸಲು ಹೇಳಲಾಗುತ್ತದೆ. 8 ರ ಆಕಾರದ ರೇಖೆಯಲ್ಲಿ ನಡೆದಾಡಿದರೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಇತ್ತೀಚೆಗೆ ಕೆಲವು ಉದ್ಯಾನಗಳಲ್ಲಿ ಈ ಆಕಾರದ ‘ವಾಕ್ ಫೂಟೇಜ್’ (ನಡಿಗೆಯ ಮಾರ್ಗ) ಇರುತ್ತದೆ.
೨. ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಖ್ಯೆ 8 ರ ಆಕಾರದಲ್ಲಿ ಬಣ್ಣವನ್ನು ಬಳಿದಿಟ್ಟುಕೊಳ್ಳಿ !
ಬೆಳಿಗ್ಗೆ ಅಥವಾ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಯಾವುದಾದರೊಂದು ಪ್ರಶಾಂತ ಸ್ಥಳದಲ್ಲಿ ಈ ವ್ಯಾಯಾಮವನ್ನು ಮಾಡಬಹುದು. ಕೋಣೆ ದೊಡ್ಡದಾಗಿದ್ದರೆ, ಕೋಣೆಯಲ್ಲಿ ವರಾಂಡದಲ್ಲಿ, ಟೆರೇಸ್‌ನಲ್ಲಿ ಅಥವಾ ಸೊಸೈಟಿಯ ವಾಹನ ನಿಲುಗಡೆ ಜಾಗದಲ್ಲಿ 8 ರ ಆಕಾರದಲ್ಲಿ ಬಣ್ಣ ಬಳಿದಿಡಬಹುದು. ಆರಂಭದಲ್ಲಿ ಚಾಕ್ ನಿಂದ ಸಂಖ್ಯೆಯನ್ನು ಬರೆಯಬಹುದು.
೩. ಸಂಖ್ಯೆ 8 ರ ಪ್ರಕಾರದ ನಡಿಗೆಯ ವ್ಯಾಯಾಮವನ್ನು ಹೇಗೆ ಮಾಡಬಹುದು ?
ದಕ್ಷಿಣ ದಿಕ್ಕಿನಲ್ಲಿ ನಿಂತು ಉತ್ತರ ದಿಕ್ಕಿಗೆ ಮುಖ ಮಾಡಬೇಕು. ಗಡಿಯಾರದ ದಿಕ್ಕಿನಲ್ಲಿ ಆರಂಭಿಸಿ ಸಂಖ್ಯೆ ೮ ಕ್ಕನುಸಾರ ನಡೆದು ಪುನಃ ಮೂಲ ಸ್ಥಾನಕ್ಕೆ ಬರಬೇಕು. ಹೀಗೆ ೫ ನಿಮಿಷ ನಡೆಯಬೇಕು. ನಂತರ ವಿರುದ್ಧ ದಿಕ್ಕಿನಲ್ಲಿ ಅಂದರೆ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ೫ ನಿಮಿಷ ನಡೆಯಬೇಕು. ಹೀಗೆ ಮೂರು ಆವರ್ತನಗಳನ್ನು ಮಾಡಿದರೆ ೩೦ ನಿಮಿಷದ ನಡಿಗೆಯ ವ್ಯಾಯಾಮ ಆಗುತ್ತದೆ. ಸಮಯಕ್ಕನುಸಾರ ಆವರ್ತನವನ್ನು ಹೆಚ್ಚು-ಕಡಿಮೆ ಮಾಡಬಹುದು. ಕೆಲವರು ಒಂದೇ ಸಮಯದಲ್ಲಿ ೧೫ ನಿಮಿಷ ಒಂದು ದಿಕ್ಕಿಗೆ ಹಾಗೂ ನಂತರ ೧೫ ನಿಮಿಷ ಇನ್ನೊಂದು ದಿಕ್ಕಿನಲ್ಲಿ ವ್ಯಾಯಾಮ ಮಾಡುತ್ತಾರೆ. ಇದರ ಜೊತೆಗೆ ಗುರುಮಂತ್ರವನ್ನು ಜಪಿಸಿದರೆ ಹೆಚ್ಚು ಲಾಭವಾಗುತ್ತದೆ !
೪. ಪ್ರಾಚೀನ ನಾಡಿಪಟ್ಟಿಗಳಲ್ಲಿ 8 ಸಂಖ್ಯೆಯ ವ್ಯಾಯಾಮ ಪದ್ಧತಿಯ ಮೂಲವಿರುವುದು ವೈಶಿಷ್ಟ್ಯಪೂರ್ಣವಾಗಿದೆ !
ಈ ಪದ್ಧತಿಗೆ ‘ಇನ್ಫಿನಿಟೀ ವಾಕಿಂಗ್’ ಎನ್ನುವ ಒಂದು ಹೆಸರನ್ನು ಕೂಡ ಕೊಡಲಾಗುತ್ತದೆ. ಈ ವ್ಯಾಯಾಮ ಪದ್ಧತಿಯ ಮೂಲವು ಪ್ರಾಚೀನ ನಾಡಿಪಟ್ಟಿಗಳಲ್ಲಿ ನೋಡಲು ಸಿಗುತ್ತದೆ. ತಮಿಳು ಸಿದ್ಧಪುರುಷರು ಸಾವಿರಾರು ವರ್ಷಗಳ ಹಿಂದೆ ಈ ವಿಷಯದಲ್ಲಿ ಸವಿಸ್ತಾರವಾಗಿ ಬರೆದಿಟ್ಟಿದ್ದಾರೆ. ಆಧುನಿಕ ಕಾಲದಲ್ಲಿ ೧೯೮೦ ರ ಸುಮಾರಿಗೆ ಉಪಚಾರಾತ್ಮಕ ಮಾನವಶಾಸ್ತ್ರಜ್ಞ ದೆಬೋರಾ ಸನ್‌ಬೆಕ್ ಇವರು ಈ ವಿಷಯದಲ್ಲಿ ಒಂದು ಗ್ರಂಥವನ್ನು ಪ್ರಕಾಶಿಸಿದ್ದಾರೆ. ವಿದೇಶದಲ್ಲಿ ಅನೇಕ ರೋಗಗಳ ಉಪಚಾರಕ್ಕಾಗಿ ನಡಿಗೆಯ ಈ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.
೫. 8 ರ ಆಕಾರದಲ್ಲಿ ನಡಿಗೆಯಿಂದಾಗುವ ಲಾಭ
ಅ. ನಾವು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ನಡೆಯುವ ಕ್ರಿಯೆ ಮಾಡುವಾಗ ಪೃಥ್ವಿಯ ನೈಸರ್ಗಿಕ ಅಯಸ್ಕಾಂತದ ಕ್ಷೇತ್ರದ ವಿರುದ್ಧ ದಿಕ್ಕಿಗೆ ಹೋಗುತ್ತೇವೆ. ಅದರಿಂದ ನಮ್ಮ ಶರೀರದ ಷಟ್ಚಕ್ರಗಳು ಹಾಗೂ ಇಂದ್ರಿಯಗಳು ಕೂಡ ಕಾರ್ಯನಿರತವಾಗುತ್ತವೆ.
ಆ. ಶರೀರದ ಪ್ರತಿಯೊಂದು ಅವಯವ, ಉದಾ. ಕಾಲುಗಂಟು, ಮೊಣಕಾಲು ಹೊಟ್ಟೆ, ಕುತ್ತಿಗೆ, ಭುಜಗಳ ಚಲನವಲನವಾಗುತ್ತದೆ. ಈ ಪ್ರಕಾರದ ನಡಿಗೆಯಲ್ಲಿ ನಿಯಮಿತ ನಡಿಗೆಗಿಂತ ಶರೀರದ ಎಲ್ಲ ಅವಯವಗಳಿಗೆ ವ್ಯಾಯಾಮ ಸಿಗುತ್ತದೆ.
ಇ. ನಾವು ಚಪ್ಪಲಿ ಹಾಕಿಕೊಳ್ಳದೆ ಬರಿಗಾಲಿನಲ್ಲಿ ಭೂಮಿಯ ಮೇಲೆ ನಡೆದಾಡುವಾಗ ಬಿಂದು ಒತ್ತಡ ಪದ್ಧತಿಗನುಸಾರ ಅಂಗಾಲಿನ ಎಲ್ಲ ಸಂವೇದನಾಬಿಂದುಗಳು ಜಾಗೃತವಾಗುತ್ತವೆ. ಕೆಲವು ವಾರಗಳ ನಿಯಮಿತ ನಡಿಗೆಯ ನಂತರ ಹಳೆಯ ಕಾಯಿಲೆಗಳು ಬಹಳ ಪ್ರಮಾಣದಲ್ಲಿ ಗುಣಮುಖವಾಗುತ್ತವೆ.
ಈ. ಸಾಮಾನ್ಯವಾಗಿ ನಡೆಯುವಾಗ ಮಿತ್ರರೊಂದಿಗೆ ಅಥವಾ ಸಂಚಾರಿವಾಣಿಯಲ್ಲಿ ಮಾತನಾಡುತ್ತೇವೆ; ಆದರೆ ಸಂಖ್ಯೆ 8 ರಲ್ಲಿ ನಡೆಯುವಾಗ ಮಾತನಾಡುವ ಸಾಧ್ಯತೆ ಇಲ್ಲ.
ಉ. ನಿಯಮಿತವಾಗಿ ಅಭ್ಯಾಸ ಮಾಡಿದರೆ ಥೈರಾಯಿಡ್, ಅಜೀರ್ಣ, ಬೊಜ್ಜು, ಮಂಡಿನೋವು, ಮಲಬದ್ಧತೆ, ಸಂಧಿವಾತ ಇತ್ಯಾದಿ ಅನಾರೋಗ್ಯಗಳು ಗುಣವಾಗುವ ಸಾಧ್ಯತೆಯಿದೆ.
ಊ. ಇಂತಹ ನಡಿಗೆಯಿಂದ ರಕ್ತದೊತ್ತಡವು ನಿಯಮಿತವಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗಿ ಮಧುಮೇಹದಂತಹ ರೋಗದಿಂದಲೂ ಸ್ವಲ್ಪ ಪ್ರಮಾಣದಲ್ಲಿ ಆರಾಮ ಸಿಗುತ್ತದೆ.
ಎ. ಮನಸ್ಸಿನ ಸ್ತರದ ಒತ್ತಡ ದೂರವಾಗಿ ಮನಸ್ಸು ಶಾಂತವಾಗುತ್ತದೆ. ದಿನವಿಡೀ ಉತ್ಸಾಹವಿರುತ್ತದೆ.
ಏ. ಸಂಖ್ಯೆ 8 ರ ಆಕಾರದಲ್ಲಿನ ನಡಿಗೆಯಲ್ಲಿರುವ ಏಕಾಗ್ರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ.
ಐ. ಪಾರಂಪರಿಕ ನಡಿಗೆಯ ವ್ಯಾಯಾಮಕ್ಕಿಂತ ಸೀಮಿತ ಸ್ಥಳದಲ್ಲಿ ಈ ರೀತಿಯ ನಡಿಗೆಯಿಂದ ಅನೇಕ ಲಾಭಗಳಾಗುತ್ತವೆ. ವಿಶೇಷವಾಗಿ ಹಿರಿಯ ವ್ಯಕ್ತಿಗಳಿಗೆ ಈ ವ್ಯಾಯಾಮವು ತುಂಬಾ ಲಾಭದಾಯಕವಾಗಿದೆ.
‘ಈ ಮೇಲಿನ ಎಲ್ಲ ವಿಷಯಗಳನ್ನು ಓದಿ ಬಿಟ್ಟುಬಿಡದೆ ಅದೇ ರೀತಿ ಕೃತಿ ಮಾಡಿ ತಮ್ಮ ಜೀವನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವಂತಾಗಲಿ’, ಎಂದು ಗುರುಚರಣಗಳಲ್ಲಿ ಪ್ರಾರ್ಥನೆ !
– ಶ್ರೀ. ಶ್ರೀರಾಮ ಕಾಣೆ, ದೆಹಲಿ (೨೪.೧೧.೨೦೨೧)