ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾಗುತ್ತಿರುವ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ…
೧. ಪರಾತ್ಪರ ಗುರು ಡಾ. ಆಠವಲೆಯವರಿಂದಾದ ಅದ್ವಿತೀಯ ಗ್ರಂಥ ನಿರ್ಮಿತಿ
೧ ಅ. ಸನಾತನದ ವಿವಿಧ ಗ್ರಂಥಗಳು ಎಂದರೆ ‘ಐದನೇ ವೇದವೇ’ ಆಗಿದೆ ! : ಪರಾತ್ಪರ ಗುರು ಡಾ. ಆಠವಲೆಯವರು (ಪ. ಪೂ. ಗುರುದೇವರು) ರಚಿಸಿದ ಸನಾತನದ ವಿವಿಧ ಗ್ರಂಥಗಳು ಎಂದರೆ ‘ಐದನೇ ವೇದವೇ’ ಆಗಿದೆ ! ಜನವರಿ ೨೦೨೨ ತನಕ ೩೫೦ ಗ್ರಂಥಗಳ ಮೂಲಕ ಗುರುದೇವರು ಎಲ್ಲಾ ವಿಷಯಗಳನ್ನೂ ಸ್ಪರ್ಶಿಸಿದ್ದಾರೆ. ಗುರುದೇವರು ಇದುವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲದ ಸೂಕ್ಷ್ಮ ಜ್ಞಾನವನ್ನು ಸಂಕಲನ ಮಾಡಿ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಇನ್ನೂ ಸಾವಿರಾರು ಗ್ರಂಥಗಳಿಗಾಗುವಷ್ಟು ಬರಹಗಳನ್ನು ವಿಷಯಕ್ಕೆ ಅನುಗುಣವಾಗಿ ಸಂಕೇತಾಂಕ ಕೊಟ್ಟು ಸಂಗ್ರಹಿಸಿಟ್ಟಿದ್ದಾರೆ. ಇಂದಿಗೂ ಗುರುದೇವರ ಗ್ರಂಥ ಸಂಕಲನದ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ.
೧ ಆ. ಶ್ರೇಷ್ಠ ಲೇಖನ ಕಾರ್ಯದ ಪರಂಪರೆ – ಮಹರ್ಷಿ ವೇದವ್ಯಾಸರು, ಸಮರ್ಥ ರಾಮದಾಸಸ್ವಾಮಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ! : ದ್ವಾಪರಯುಗದಲ್ಲಿ ಮಹರ್ಷಿ ವೇದವ್ಯಾಸರು ಮಹಾನ್ ಲೇಖನಕಾರ್ಯ ಮಾಡಿದ್ದಾರೆ. ಮಹರ್ಷಿ ವ್ಯಾಸರ ನಂತರ ಈ ಕಲಿಯುಗದಲ್ಲಿ ಮಹಾನ್ ಸಂತರಾದ ಸಮರ್ಥ ರಾಮದಾಸಸ್ವಾಮಿಯವರು ಇಂತಹ ಕಾರ್ಯ ಮಾಡಿದ್ದರು. ಸಮರ್ಥ ರಾಮದಾಸ ಸ್ವಾಮಿಯವರ ನಂತರ ಯಾರಾದರೂ ಈ ಮಹಾನ್ ಅವತಾರಿ ಕಾರ್ಯವನ್ನು ಮಾಡಿದ್ದರೆ, ಅದು ಕೇವಲ ಮತ್ತು ಕೇವಲ ನಮ್ಮ ಪ.ಪೂ. ಗುರುದೇವರು ಮಾತ್ರ.
೧ ಇ. ಪರಾತ್ಪರ ಗುರುದೇವರ ಚೈತನ್ಯಮಯ ಬರಹಗಳ ಮೂಲಕ ಸನಾತನದ ಗ್ರಂಥಗಳು ಸಿದ್ಧವಾಗುತ್ತಿವೆ. ಈ ಗ್ರಂಥಗಳು ಎಂದರೆ ಜ್ಞಾನಗುರು ಪರಾತ್ಪರ ಗುರುದೇವರ ಜ್ಞಾನಮಯ ರೂಪವಾಗಿದೆ. ಈ ಗ್ರಂಥಗಳ ಪ್ರಶಂಸೆಯಿಂದಲೇ ಜ್ಞಾನಗುರುಗಳ ಸ್ತುತಿಯಾಗುತ್ತದೆ.
೨. ಸನಾತನದ ಗ್ರಂಥಗಳ ಶ್ರೇಷ್ಠತೆ !
೨ ಅ. ಸಂಸಾರಸಾಗರದ ಮೇಲಿನ ಸೇತುವೆ : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಎಂದರೆ ‘ಈಶ್ವರನ ಭಕ್ತಿ ಮಾಡುವುದರಿಂದ ಅವನು (ಈಶ್ವರನು) ನಮ್ಮನ್ನು ಸಂಸಾರಸಾಗರದ ಇನ್ನೊಂದು ತೀರಕ್ಕೆ ಅಂದರೆ ಮೋಕ್ಷಕ್ಕೆ ಕರೆದೊಯ್ಯುತ್ತಾನೆ’ ಎಂಬ ಮಹಾನ್ ಬೋಧನೆ ನೀಡುವಂತಹವುಗಳಾಗಿವೆ. ಸನಾತನ ಗ್ರಂಥಗಳು ಇಹದಿಂದ ಪರಕ್ಕೆ ಕರೆದೊಯ್ಯುವ ಸೇತುವೆಯಂತೆ ಸಂಸಾರಸಾಗರದ ಮೇಲಿರುವ ಸೇತುವೆಯೇ ಆಗಿದೆ.
೨ ಆ. ಆಧ್ಯಾತ್ಮಿಕ ಮನೋಕಾಮನೆಗಳನ್ನು ಈಡೇರಿಸುವ ಚಿಂತಾಮಣಿ ! : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಅಂದರೆ ಜಿಜ್ಞಾಸು, ವಾಚಕರು ಮತ್ತು ಸಾಧಕರ ಆಧ್ಯಾತ್ಮಿಕ ಮನೋಕಾಮನೆಗಳನ್ನು ಪೂರ್ಣಗೊಳಿಸುವಂತಹವುಗಳಾಗಿವೆ. ಈ ಗ್ರಂಥಗಳಲ್ಲಿ ಮಾಡಿರುವ ಆಳವಾದ ವಿಶ್ಲೇಷಣೆಯು ವಾಚಕರ ಎಲ್ಲಾ ಸಂದೇಹಗಳನ್ನು ಪರಿಹರಿಸುತ್ತದೆ. ಆದ್ದರಿಂದ, ಈ ಗ್ರಂಥಗಳು ಯೋಗ್ಯ ನಿರ್ದೇಶನವನ್ನು ನೀಡುವ ಚಿಂತಾಮಣಿಯಾಗಿದೆ. (ಎಲ್ಲ ಇಷ್ಟಾರ್ಥಗಳನ್ನು ಪೂರೈಸುವುದು ಚಿಂತಾಮಣಿಯ ವೈಶಿಷ್ಟ್ಯವಾಗಿರುತ್ತದೆ. – ಸಂಕಲನಕಾರರು)
೨ ಇ. ಸನಾತನದ ಗ್ರಂಥಗಳು ಎಂದರೆ ಆತ್ಮರಾಜ್ಯ ಮತ್ತು ಸ್ವರಾಜ್ಯದ ಅನುಭೂತಿಯನ್ನು ನೀಡುವ ಕಲ್ಪವೃಕ್ಷ ! : ಸನಾತನದ ಮೂಲಕ ಸಾಧನೆ ಮಾಡುವ ಜೀವಗಳಿಗೆ ‘ಈಶ್ವರಪ್ರಾಪ್ತಿ’ (ಆತ್ಮರಾಜ್ಯ) ಇದು ವ್ಯಷ್ಟಿ ಧ್ಯೇಯವಾಗಿದ್ದು ‘ಹಿಂದೂ ರಾಷ್ಟ್ರದ ಸ್ಥಾಪನೆ’ಯು (ಸ್ವರಾಜ್ಯ) ಸಮಷ್ಟಿ ಧ್ಯೇಯವಾಗಿದೆ. ಈ ಧ್ಯೇಯವನ್ನು ಸಾಧಿಸಲು ಸನಾತನದ ಗ್ರಂಥಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ, ಪರಾತ್ಪರ ಗುರುದೇವರು ರಚಿಸಿದ ಸನಾತನದ ಗ್ರಂಥಗಳು ಆತ್ಮರಾಜ್ಯ ಮತ್ತು ಸ್ವರಾಜ್ಯ, ಅಂದರೆ ಇದು ಆಂತರಿಕ ಮತ್ತು ಬಾಹ್ಯ ಹಿಂದೂ ರಾಷ್ಟ್ರದ ಸ್ಥಾಪನೆಯ ಅನುಭವವನ್ನು ನೀಡುವ ಕಲ್ಪವೃಕ್ಷವೇ ಆಗಿವೆ.
೨ ಈ. ಮಾರ್ಗದರ್ಶಕ ಮತ್ತು ಪ್ರಕಾಶಮಯ ದಿವ್ಯ ದೀಪ : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಎಂದರೆ ವ್ಯವಹಾರ ಮತ್ತು ಸಾಧನೆಯ ಸಮನ್ವಯವನ್ನು ಹೇಗೆ ಸಾಧಿಸಬೇಕು ? ಎಂದು ಉಪದೇಶಿಸುವ ಹೊಸ್ತಿಲಲ್ಲಿರುವ ದೀಪದಂತಿದೆ. ‘ಸಂಸಾರದಲ್ಲಿದ್ದು ವ್ಯವಹಾರಗಳನ್ನು ಸಂಭಾಳಿಸಿಕೊಂಡು ಸಾಧನೆ ಮಾಡುವುದು ಹೇಗೆ ?’ ಎಂದು ಕಲಿಸುವ, ಮಾಯೆಯಲ್ಲಿಯೂ ಬ್ರಹ್ಮವನ್ನು ಅನುಭವಿಸಲು ಸಾಧನೆಯ ಪ್ರಾಯೋಗಿಕ ಸ್ತರದ ಅಂಶಗಳನ್ನು ಕಲಿಸುವ ಮಾರ್ಗದರ್ಶಕ ಮತ್ತು ಪ್ರಕಾಶಮಯ ದಿವ್ಯ ದೀಪದಂತಿದೆ.
೨ ಉ. ಅಜ್ಞಾನವೆಂಬ ಅಂಧಕಾರವನ್ನು ತಕ್ಷಣವೇ ದೂರಗೊಳಿಸಿ ಚೈತನ್ಯವನ್ನು ಪ್ರದಾನಿಸುವ ಚೈತನ್ಯಸೂರ್ಯ! : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಚೈತನ್ಯದ ಸೂರ್ಯನಂತಿವೆ. ಸನಾತನ ಗ್ರಂಥಗಳು ಎಲ್ಲೇ ಇದ್ದರೂ, ಅವು ಸಾಧಕರ ಅಥವಾ ಜಿಜ್ಞಾಸುಗಳ ಬಳಿಯಲ್ಲಿದ್ದರೂ, ಅವರ ಅಜ್ಞಾನದ ಅಂಧಃಕಾರವನ್ನು ತಕ್ಷಣವೇ ದೂರಗೊಳಿಸಿ ಅವರಿಗೆ ಚೈತನ್ಯದ ಸೂರ್ಯನಂತೆ ಜ್ಞಾನ ಮತ್ತು ಚೈತನ್ಯವನ್ನು ನೀಡುತ್ತವೆ.
೨ ಊ. ಭವಸಾಗರವನ್ನು ಪಾರು ಮಾಡಲು ಸಹಾಯಕ : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಎಂದರೆ ಭವಸಾಗರದಿಂದ ರಕ್ಷಿಸುವ ದೋಣಿಯಾಗಿದೆ. ವಿವಿಧ ವಿಷಯಗಳ ಬಯಕೆ ಮತ್ತು ಕಾಮನೆಗಳಿಂದಾಗಿ ಜನನ ಮತ್ತು ಮರಣದ ಚಕ್ರದಿಂದ ಜೀವಕ್ಕೆ ಭವಸಾಗರದಲ್ಲಿ ಮೇಲೆ ಕೆಳಗೆ ಎಡವಿ ಬೀಳಬೇಕಾಗುತ್ತದೆ; ಆದರೆ ಸಾಧನೆ ಮಾಡುವುದರಿಂದ ಮಾನವನ ಎಲ್ಲಾ ಆಸೆಗಳು ಇಲ್ಲದಂತಾಗಿ ಭವಸಾಗರವನ್ನು ಪಾರು ಮಾಡಲು ಸಾಧ್ಯವಾಗುತ್ತದೆ. ಈ ಗ್ರಂಥಗಳು ನಮಗೆ ಈಶ್ವರನ ದೋಣಿಯಲ್ಲಿ ಕುಳ್ಳಿರಿಸಿ ಭವಸಾಗರವನ್ನು ದಾಟಲು ಸಹಾಯ ಮಾಡುತ್ತವೆ.
೨ ಎ. ಆಪತ್ಕಾಲದಿಂದ ರಕ್ಷಿಸುವ ದೋಣಿ ! : ಪರಾತ್ಪರ ಗುರುದೇವರು ರಚಿಸಿದ ಸನಾತನದ ಗ್ರಂಥಗಳು ಆಪತ್ಕಾಲದಿಂದ ರಕ್ಷಿಸುವ ದೋಣಿಯಂತಿವೆ. ‘ಭೀಕರ ವಿಪತ್ತು ಬರಲಿದೆ’ ಎಂದು ಅನೇಕ ದಾರ್ಶನಿಕರು ಹೇಳಿದ್ದಾರೆ; ಆದರೆ ಪರಾತ್ಪರ ಗುರುದೇವರು ಮಾತ್ರ ಈ ಸಂದರ್ಭದಲ್ಲಿನ ಪರಿಹಾರೋಪಾಯಗಳ ಮಾರ್ಗದರ್ಶನ ನೀಡಿದ್ದಾರೆ. ಈ ಆಪತ್ಕಾಲವನ್ನು ಸಹನೀಯವಾಗಿಸಲು ಪ್ರತಿನಿತ್ಯ ಕೈಗೊಳ್ಳಬೇಕಾದ ಸಿದ್ಧತೆಗಳ ಜತೆಗೆ ಮಾನಸಿಕ, ಕೌಟುಂಬಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಮಟ್ಟದಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಗ್ರಂಥಮಾಲಿಕೆಯ ಮೂಲಕ ಎಲ್ಲರಿಗೂ ತಿಳಿಸಿದರು. ಪರಾತ್ಪರ ಗುರುದೇವರು ಸಮಸ್ತ ಮನುಕುಲದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದರಿಂದ, ‘ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜೀವಂತವಾಗಿರಲು ಯಾವ ಪರಿಹಾರೋಪಾಯಗಳನ್ನು ಮಾಡಬೇಕು ?’ ಎಂಬ ಸಂದರ್ಭದಲ್ಲಿಯೂ ಮಾರ್ಗದರ್ಶನ ಮಾಡಿದ್ದಾರೆ. ಗ್ರಂಥಗಳಲ್ಲಿರುವ ಚೈತನ್ಯವೇ ಮುಂದಿನ ದಿನಗಳಲ್ಲಿ ನಮ್ಮನ್ನು ರಕ್ಷಿಸಲಿದೆ.
೨ ಏ. ಜೀವನವನ್ನು ಚಿನ್ನವಾಗಿಸುವ ಸ್ಪರ್ಶಮಣಿ : ಪರಾತ್ಪರ ಗುರುದೇವರು ರಚಿಸಿದ ಸನಾತನ ಗ್ರಂಥಗಳು ಎಂದರೆ ಕಬ್ಬಿಣವನ್ನೂ ಚಿನ್ನವಾಗಿಸುವ ಸ್ಪರ್ಶಮಣಿಯಂತಿವೆ. ಈ ಗ್ರಂಥಗಳನ್ನು ಓದಿದ ನಂತರ, ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಅನುಭವಿಸಿದ್ದಾರೆ. ಈ ಗ್ರಂಥಗಳ ಮೂಲಕ, ನಮ್ಮ ಜೀವನಕ್ಕೆ ಗುರುಭಕ್ತಿ ಮತ್ತು ಈಶ್ವರಭಕ್ತಿಗಳ ಸ್ಪರ್ಶಮಣಿಯ ಸ್ಪರ್ಶವಾಗುತ್ತದೆ ಮತ್ತು ಅವು ನಮ್ಮ ಜೀವನವನ್ನು ಬೆಳಗಿಸುತ್ತವೆ.
೩. ಕೃತಜ್ಞತೆ
‘ಸಾಕ್ಷಾತ್ ಜ್ಞಾನಮಯ ಗುರುಗಳ ರೂಪವಾಗಿರುವ ಸನಾತನದ ಈ ಅಮೂಲ್ಯ ಗ್ರಂಥ ಸಂಪತ್ತಿಗೆ ಕೋಟಿಕೋಟಿ ವಂದನೆಗಳು ! ಇಂದಿನ ಈ ಘೋರ ಕಲಿಯುಗದಲ್ಲಿಯೂ ಇಷ್ಟೊಂದು ಮಹಾನ್ ಕಾರ್ಯ ಮಾಡಿ ವಿಶ್ವದ ಉದ್ಧಾರ ಮಾಡುತ್ತಿರುವ ಮಹಾನ್ ಜ್ಞಾನಗುರುಗಳ ಅಂದರೆ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ (೧೮.೨.೨೦೨೨)