ಆಧ್ಯಾತ್ಮಿಕ ಉಪಾಯ (ಕರ್ಪೂರ-ಅತ್ತರು)
ಅ. ಇಂದು ನಾವು ಒಂದು ಪ್ರಭಾವಶಾಲಿ ಆಧ್ಯಾತ್ಮಿಕ ಉಪಾಯದ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ. ನಮ್ಮ ಪೈಕಿ ಹಲವರಿಗೆ ಆ ರೀತಿಯ ಅನುಭವಗಳಿರಬಹುದು, ಅಂದರೆ ನಾಮಸ್ಮರಣೆಗೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸಿದಾಗ ನಮಗೆ ಕುಳಿತುಕೊಳ್ಳುವುದು ಬೇಡ ಎಂದು ಅನಿಸುತ್ತದೆ. ನಾಮಜಪ ಸತ್ಸೇವೆ ಅಥವಾ ಧರ್ಮಸೇವೆ ಮಾಡುತ್ತಿರುವಾಗ ಸಮಯಕ್ಕೆ ಸರಿಯಾಗಿ ನಮಗೇನಾದರೂ ಕೆಲಸ ಬರುತ್ತದೆ, ಸೇವೆ ಮಾಡುವಾಗ ಇದ್ದಕ್ಕಿದ್ದಂತೆ ಆಯಾಸವುಂಟಾಗಿ ನಿರುತ್ಸಾಹವೆನಿಸುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗುವುದಿಲ್ಲ. ಕೌಟುಂಬಿಕ ಸಮಾಧಾನವಿರುವುದಿಲ್ಲ. ನಮ್ಮಪೈಕಿ ಯಾರಿಗಾದರೂ ಈ ರೀತಿಯ ತೊಂದರೆಗಳಾಗುತ್ತಿದ್ದರೆ ಅದಕ್ಕೆ ಆಧ್ಯಾತ್ಮಿಕ ಕಾರಣಗಳಿರಬಹುದು, ಎಂಬುದನ್ನು ಅರ್ಥಮಾಡಿಕೊಳ್ಳೋಣ. ಕಲಿಯುಗದಲ್ಲಿ ಹೆಚ್ಚಿನವರಿಗೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ತೊಂದರೆಗಳಾಗುತ್ತದೆ. ಈ ತೊಂದರೆಗಳನ್ನು ದೂರಮಾಡಲು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಆವಶ್ಯವಾಗಿರುತ್ತದೆ. ಆಧ್ಯಾತ್ಮಿಕ ಉಪಾಯಗಳಿಂದ ನಮ್ಮ ಶರೀರ, ಮನಸ್ಸು ಹಾಗೂ ಬುದ್ಧಿಯ ಮೇಲೆ ಬಂದಿರುವ ನಕಾರಾತ್ಮಕ ಹಾಗೂ ಅನಿಷ್ಟ ಆವರಣವು ದೂರವಾಗಲು ಸಹಾಯವಾಗುತ್ತದೆ. ನಮ್ಮ ಸುತ್ತಲು ಒಂದು ರೀತಿಯ ಸುರಕ್ಷಾಕವಚ ನಿರ್ಮಾಣವಾಗುತ್ತದೆ. ಈಗ ನಾವು ನಾವು ಸಾತ್ವಿಕ ಕರ್ಪೂರ-ಅತ್ತರುಗಳ ಉಪಾಯದ ಬಗ್ಗೆ ತಿಳಿದುಕೊಳ್ಳೋಣ.
ಅ. ಸೂಕ್ಷ್ಮದಲ್ಲಿನ ಪ್ರಯೋಗ
ಅತ್ತರನ ಉಪಾಯದ ಬಗ್ಗೆ ತಿಳಿದುಕೊಳ್ಳುವ ಮೊದಲು ನಾವೊಂದು ಸಣ್ಣ ಪ್ರಯೋಗವನ್ನು ಮಾಡೋಣ. ನಾವು ಸುಗಂಧ ಎಂಬ ಶಬ್ದವನ್ನು ಮನಸ್ಸಿನಲ್ಲಿ ಸ್ವಲ್ಪ ಸಮಯ ಉಚ್ಚರಿಸೋಣ ಹಾಗೂ ಅನಂತರ ದುರ್ಗಂಧ ಎಂಬ ಶಬ್ದವನ್ನು ಮನಸ್ಸಿನಲ್ಲಿಯೇ ಸ್ವಲ್ಪ ಸಮಯ ಉಚ್ಚರಿಸೋಣ.
ನಮಗೆ ದುರ್ಗಂಧಕ್ಕಿಂತ ಸುಗಂಧ ಈ ಶಬ್ದವನ್ನು ಉಚ್ಚರಿಸಿದ ಬಳಿಕ ಒಳ್ಳೆಯದೆನಿಸುತ್ತದೆ. ಈಗ ನಾವು ಪ್ರತ್ಯಕ್ಷವಾಗಿ ಯಾವ ಸುಗಂಧವನ್ನೂ ಕೂಡ ತೆಗೆದುಕೊಳ್ಳಲಿಲ್ಲ. ಆದರೂ ಕೇವಲ ಆ ಶಬ್ದವನ್ನು ಉಚ್ಚರಿಸಿದ ಬಳಿಕ ಅದರಲ್ಲಿರುವ ಸ್ಪಂದನಗಳು ಗೊತ್ತಾದವು. ಇದಕ್ಕೆ ಕಾರಣ ಶಬ್ದ, ಸ್ಪರ್ಶ, ರೂಪ, ರಸ ಗಂಧ ಹಾಗೂ ಅದರೊಂದಿಗೆ ಸಂಬಂಧಪಟ್ಟ ಶಕ್ತಿಯು ಒಟ್ಟಿಗೆ ಇರುತ್ತದೆ. ನಾವು ರಾಮನ ಜಪ ಮಾಡುವಾಗ ರಾಮನ ಸ್ಪರ್ಶ, ರೂಪ, ರಸ, ರಾಮನ ಗಂಧಗಳು, ರಾಮನ ಶಕ್ತಿ ಅದರಲ್ಲಿರುತ್ತದೆ. ಸುಗಂಧವು ದೇವತೆಗಳ ಗುಣಧರ್ಮವಾಗಿದೆ. ದೇವರ ಪೂಜೆ ಮಾಡುವಾಗ ನಾವು ಊದುಬತ್ತಿ ಹಚ್ಚುತ್ತೇವೆ, ಹತ್ತಿಯಿಂದ ದೇವತೆಯ ಮೂರ್ತಿಗೆ ಅತ್ತರನ್ನು ಹಚ್ಚುತ್ತೇವೆ, ಇವೆಲ್ಲವುಗಳ ಹಿಂದೆ ಇದೇ ಕಾರಣವಿದೆ ! ದೈವೀ ಶಕ್ತಿಗಳು ಸುಗಂಧದೆಡೆಗೆ ಆಕರ್ಷಿತಗೊಳ್ಳುತ್ತವೆ ಹಾಗೂ ದುರ್ಗಂಧವಿರುವಲ್ಲಿ ಅನಿಷ್ಟ ಶಕ್ತಿಗಳಿರುತ್ತವೆ; ಆದ್ದರಿಂದ ನಮಗೆ ದೇವಾಲಯದಲ್ಲಿ ಒಳ್ಳೆಯದೆನಿಸುತ್ತದೆ; ಆದರೆ ಕಸದತೊಟ್ಟಿಯಿರುವ ಸ್ಥಳದಲ್ಲಿ ಒಳ್ಳೆಯದೆನಿಸುವುದಿಲ್ಲ. ನಮ್ಮ ಅಕ್ಕಪಕ್ಕದಲ್ಲಿ; ಅಂದರೆ ಸೊಸೈಟಿಯಲ್ಲಿ ಅಥವಾ ಕಛೇರಿಯಲ್ಲಿ ವಾತಾವರಣವು ಸಾಧಾರಣವಾಗಿ ಅಸ್ವಚ್ಛ ಅಥವಾ ಅಸಾತ್ತ್ವಿಕವಾಗಿರುತ್ತದೆ. ಅಸ್ವಚ್ಛವಾಗಿದ್ದರೆ, ಅಲ್ಲಿ ದೈವೀ ಶಕ್ತಿ ಹೇಗೆ ತಾನೆ ಬರಲು ಸಾಧ್ಯ. ಬರಲು ಸಾಧ್ಯವೇ ಇಲ್ಲ. ಅಲ್ಲಿ ಅನಿಷ್ಟ ಶಕ್ತಿಗಳ ಪ್ರಾಬಲ್ಯವಿರುತ್ತದೆ ! ಆ ರೀತಿಯ ವಾತಾವರಣದಲ್ಲಿ ನಮ್ಮ ರಕ್ಷಣೆಯಾಗಲು ಸತತವಾಗಿ ಸುಗಂಧ ಬರುತ್ತಿರಬೇಕೆಂದರೆ ನಾವು ಅದಕ್ಕೋಸ್ಕರ ಪ್ರಯತ್ನಿಸಬೇಕು. ಅತ್ತರನ ಉಪಾಯದಿಂದ ಅದು ಸಾಧ್ಯವಾಗುತ್ತದೆ.
ಆ. ಅತ್ತರಿನ ಉಪಾಯವನ್ನು ಹೇಗೆ ಮಾಡಬೇಕು?
ಆಗಾಗ ಅತ್ತರನ್ನು ನಮ್ಮ ಕೈಗೆ ಹಚ್ಚಿಕೊಂಡು ಸುಗಂಧ ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಸುಗಂಧದ ಮಾಧ್ಯಮದಿಂದ ಒಂದು ರೀತಿಯ ಸಕಾರಾತ್ಮಕ ಹಾಗೂ ದೈವೀ ಶಕ್ತಿಯು ಆ ಸ್ಥಳದಲ್ಲಿ ಕಾರ್ಯನಿರತವಾಗುತ್ತದೆ. ನಮಗೆ ಈಶ್ವರೀಯ ಚೈತನ್ಯವು ಸಿಗುತ್ತದೆ, ಅದೇ ರೀತಿ ಮನಸ್ಸಿಗೂ ಕೂಡ ಉತ್ಸಾಹವೆನಿಸುತ್ತದೆ. ನಾವು ಗಂಟೆಗೆ ಒಂದು ಸಲ ಅತ್ತರಿನ ಉಪಾಯವನ್ನು ಮಾಡಬಹುದು. ದೇವರ ಪೂಜೆಯಲ್ಲಿ ಬಳಸಲಾಗುವ ಅತ್ತರು ಹಾಗೂ ನಾವು ಹಚ್ಚಿಕೊಳ್ಳುವ ಅತ್ತರನ್ನು ಬೇರೆ ಬೇರೆಯಾಗಿಡಬೇಕು.
ಇ. ಸುಗಂಧದ ಉಪಾಯವನ್ನು ಮಾಡುವುದರ ಹಿಂದಿರುವ ಶಾಸ್ತ್ರ
ಸುಗಂಧದಿಂದ ಒಳ್ಳೆಯದೆನಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣಗಳೂ ಇವೆ. ಅತ್ಯಂತ ಬೇಗ ಮನಸ್ಸಿನ ಒಳಗೆ ಹೋಗುವ ತತ್ತ್ವವೆಂದರೆ ಧ್ವನಿ ಹಾಗೂ ಗಂಧ ! ಧ್ವನಿಯು ವಾಯುವಿನ ಮೂಲಕ ಮುಂದೆ ಹೋಗುತ್ತದೆ ಹಾಗೂ ಗಂಧವು ಗಾಳಿಯ ಮಾಧ್ಯಮದಿಂದ, ಅಂದರೆ ಶ್ವಾಸದ ಮೂಲಕ ಮುಂದೆ ಹೋಗುತ್ತದೆ. ಆದ್ದರಿಂದ ಸುಗಂಧ ತೆಗೆದುಕೊಂಡರೆ, ಮನಸ್ಸಿನ ದಣಿವು ಬೇಗ ದೂರವಾಗುತ್ತದೆ. ನಾವು ದೇವರಿಗೆ ಡೇಲಿಯಾ, ಆರ್ಕಿಡ್ ಮುಂತಾದ ಹೂವುಗಳನ್ನು ಅರ್ಪಿಸುವುದಿಲ್ಲ; ಏಕೆಂದರೆ ಅವುಗಳಲ್ಲಿ ಸುಗಂಧವಿರುವುದಿಲ್ಲ. ಅಪವಾದವಾತ್ಮಕವಾಗಿ ಕೆಲವೊಂದು ಹೂವುಗಳನ್ನು ಬಿಟ್ಟು ದೇವರಿಗೆ ಕೇವಲ ಸುಗಂಧವಿರುವ ಹೂವುಗಳನ್ನು ಮಾತ್ರ ಅರ್ಪಿಸಲಾಗುತ್ತದೆ. ಅದರಲ್ಲಿ ಕೂಡ ನಿರ್ದಿಷ್ಟ ದೇವತೆಗೆ ನಿರ್ದಿಷ್ಟ ವಾದ ಹೂವನ್ನು ಸರ‍್ಪಿಸಲಾಗುತ್ತದೆ. ಉದಾ. ಶ್ರೀಲಕ್ಷ್ಮೀದೇವಿಗೆ ಕಮಲದ ಹೂವನ್ನು ಅರ್ಪಿಸಲಾಗುತ್ತದೆ ಇದರ ಹಿಂದೆ ತುಂಬಾ ಗಾಢವಾದ ಅಭ್ಯಾಸವಿದ್ದು ಅದೊಂದು ಶಾಸ್ತ್ರವೇ ಆಗಿದೆ.
ಉ. ಕರ್ಪೂರ ಉಪಾಯವನ್ನು ಮಾಡುವ ಪದ್ಧತಿ
ಕರ್ಪೂರದಿಂದ ಆಧ್ಯಾತ್ಮಿಕ ಉಪಾಯವನ್ನು ಸಹಜವಾಗಿ ಮಾಡಬಹುದಾಗಿದೆ. ಕರ್ಪೂರದ ಉಪಾಯ ಮಾಡುವಾಗ ಭೀಮಸೇನೀ ಕರ್ಪೂರದ ಸಣ್ಣ ತುಣಕನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಒಂದು ಅಂಗೈಯಲ್ಲಿ ಹಿಡಿದುಕೊಳ್ಳಿರಿ, ನಂತರ ಎರಡೂ ಕೈಗಳ ಅಂಗೈಯಿಂದ ತಮ್ಮ ಮುಖವನ್ನು ಮುಚ್ಚಿ ದೀರ್ಘ ಶ್ವಾಸದಿಂದ ಆ ಸುಗಂಧವನ್ನು ತೆಗೆದುಕೊಳ್ಳಿರಿ. ಅದೇ ಸಮಯದಲ್ಲಿ ತಮ್ಮ ಕಣ್ಣುರಪ್ಪೆಯನ್ನು ತೆರೆದು ಮುಚ್ಚಿರಿ. ತಮ್ಮ ಬಳಿ ಈಗೇನಾದರೂ ಭೀಮಸೇನೀ ಕರ್ಪೂರವಿದ್ದರೆ, ಈಗ ಹೇಳಿದಂತೆ ಉಪಾಯ ಮಾಡಬಹುದು. ನಾವು ರಾತ್ರಿ ಮಲಗಿಕೊಳ್ಳುವಾಗ ನಮ್ಮ ಹಾಸಿಗೆಯ ಮೇಲೆ ಕರ್ಪೂರದ ಪುಡಿಯನ್ನು ಹಾಕಬಹುದು. ನಾವು ನಮ್ಮ ಕಪಾಟಿನಲ್ಲಿ ಬಟ್ಟೆಗಳ ನಡುವೆ ಕರ್ಪೂರವನ್ನಿಡಬಹುದು.
ಕರ್ಪೂರ-ಅತ್ತರನ ಉಪಾಯ ಮಾಡಿದ ಬಳಿಕ ಹಲವರಿಗೆ ಒಳ್ಳೆಯ ಅನುಭವಗಳಾಗಿರಬಹುದು. ಮೀರಜನಲ್ಲಿರುವವರೊಬ್ಬರು ಒಂದು ವರ್ಷಕ್ಕಾಗುವಷ್ಟು ಗೋಧಿಯಲ್ಲಿ ಸನಾತನದ ಸಾತ್ತ್ವಿಕ ಭೀಮಸೇನೀ ಕರ್ಪೂರವನ್ನಿಟ್ಟರು. ಪ್ರತೀವರ್ಷ ಧಾನ್ಯದಲ್ಲಿ ಹುಳುಗಳಾಗದೇ ಇರಲಿ ಎಂಬುದಕ್ಕಾಗಿ ಕಲ್ಲುಪ್ಪು, ಲವಂಗ, ಬೋರಿಕ್ ಪಾವಡರ್, ಹರಳೆಣ್ಣೆ ಇತ್ಯಾದಿಗಳನ್ನು ಹಾಕಿಡುತ್ತಿದ್ದರು. ಎಲ್ಲಾ ರೀತಿಯ ಕಾಳಜಿವಹಿಸಿದರೂ ಕೂಡ ಧಾನ್ಯಗಳಿಗೆ ಹುಳು ಬೀಳುತ್ತಿತ್ತು; ಆದರೆ ಸನಾತನದ ಕರ್ಪೂರವನ್ನು ಹಾಕಿಟ್ಟ ಬಳಿಕ ಆ ವರ್ಷ ಗೋಧಿಯಲ್ಲಿ ಒಂದು ಹುಳು ಕೂಡ ಇರಲಿಲ್ಲ. ನಾವು ಶ್ರದ್ಧೆಯಿಂದ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದರೆ, ಆಗ ಬುದ್ಧಿಯ ಆಚೆಗಿನ ಪ್ರಚೀತಿಯು ಬರುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ !
ಭೀಮಸೇನೀ ಕರ್ಪೂರವು ಆಯುರ್ವೇದದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಕರ್ಪೂರದ ಸುಗಂಧದಿಂದ ನಮ್ಮ ಮೇಲಾಗುವ ನಕಾರಾತ್ಮಕ ಹಾಗೂ ಅನಿಷ್ಟ ಶಕ್ತಿಗಳ ಆವರಣದ ವಿಘಟನೆಯಾಗುತ್ತದೆ.
ಕರ್ಪೂರ-ಅತ್ತರನ ಉಪಾಯವನ್ನು ಹೇಗೆ ಮಾಡಬೇಕು ಎಂಬುದು ತಮ್ಮೆಲ್ಲರ ಗಮನಕ್ಕೆ ಬಂತಲ್ಲ ! ಈ ವಾರದಲ್ಲಿ ನಾವು ಗಂಟೆಗೊಮ್ಮೆ ಕರ್ಪೂರ-ಅತ್ತರನ ಉಪಾಯ ಮಾಡಲು ಪ್ರಯತ್ನಿಸೋಣ. ಬೆಳಿಗ್ಗೆ ೯ ಗಂಟೆಗೆ ನಾವು ಉಪಾಯ ಮಾಡಿದರೆ, ಮುಂದೆ ೧೦ ಗಂಟೆಗೆ ಮತ್ತೆ ಉಪಾಯ ಮಾಡಬಹುದು.. ಇಡೀ ದಿನದಲ್ಲಿ ಕಡಿಮೆಪಕ್ಷ ೭-೮ ಸಲ ಕರ್ಪೂರ-ಅತ್ತರನ ಉಪಾಯವಾಗುವಂತೆ ಪ್ರಯತ್ನಿಸೋಣ. ಪ್ರತಿನಿತ್ಯ ಉಪಾಯ ಮಾಡಿದ ಬಳಿಕ ನಮಗೇನು ತಿಳಿದುಬಂತು ಎಂದು ನಮಗೆ ತಿಳಿಸಿ.
ಹೋಮಿಯೋಪಥಿ ಔಷಧಿಗಳನ್ನೇನಾದರೂ ಸೇವಿಸುತ್ತಿದ್ದರೆ ಆಗ ಕರ್ಪೂರ-ಅತ್ತರು ತೀವ್ರ ಸುಗಂಧವಿರುವುದರಿಂದ ಅವನ್ನು ಉಪಯೋಗಿಸಬಹುದೇನು ಎಂದು ಸಂದೇಹಗಳಿದ್ದರೆ, ಹೋಮಿಯೋಪಥಿ ವೈಧ್ಯರ ಸಲಹೆ ಪಡೆದುಕೊಂಡು ಅದರಂತೆ ಕೃತಿ ಮಾಡಬಹುದು.