ವ್ಯಕ್ತಿಯ ಪ್ರಕೃತಿ ಮತ್ತು ಶಾರೀರಿಕ ಸ್ಥಿತಿಗನುಸಾರ ಯೋಗ್ಯ ಮಗ್ಗುಲಲ್ಲಿ ಮಲಗುವುದರಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗಿ ಬೇಗನೇ ಶಾಂತ ನಿದ್ರೆ ತಗಲುವುದು !
ವ್ಯಕ್ತಿಯ ಎಡ ಬದಿಯಲ್ಲಿ ಚಂದ್ರನಾಡಿ, ಬಲ ಬದಿಯಲ್ಲಿ ಸೂರ್ಯನಾಡಿ ಮತ್ತು ಮಧ್ಯ ಭಾಗದಲ್ಲಿ ಸುಷುಮ್ನಾನಾಡಿ ಇರುತ್ತವೆ. ಸೂರ್ಯನಾಡಿ ಕಾರ್ಯನಿರತವಾದಾಗ ಬಲ ಕೈ ಮತ್ತು ಬಲ ಕಾಲಿನ ಚಲನವಲನ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಮಲಗಿದಾಗ ಇದರ ವಿರುದ್ಧವಾದ ಪರಿಣಾಮವಾಗುತ್ತದೆ. ನಾವು ಎಡ ಮಗ್ಗುಲಾಗಿ ಮಲಗಿದಾಗ ನಮ್ಮ ಚಂದ್ರನಾಡಿಯ ಚಲನೆ ನಿಲ್ಲುತ್ತದೆ, ಸೂರ್ಯನಾಡಿ ಕಾರ್ಯನಿರತವಾಗುತ್ತದೆ. ನಾವು ಬಲ ಮಗ್ಗುಲಾಗಿ ಮಲಗಿದಾಗ ನಮ್ಮ ಸೂರ್ಯನಾಡಿಯ ಚಲನೆ ನಿಲ್ಲುತ್ತದೆ, ಚಂದ್ರನಾಡಿ ಕಾರ್ಯನಿರತವಾಗುತ್ತದೆ.
ಸ್ವರೋದಯ ಶಾಸ್ತ್ರಕ್ಕನುಸಾರ ಚಂದ್ರನಾಡಿಯಲ್ಲಿ ಅಡತಡೆಯುಂಟಾದರೆ ಸೂರ್ಯನಾಡಿ ಜಾಗೃತವಾಗುತ್ತದೆ, ಸೂರ್ಯನಾಡಿಯಲ್ಲಿ ಅಡತಡೆಯುಂಟಾದರೆ ಚಂದ್ರನಾಡಿ ಜಾಗೃತವಾಗುತ್ತದೆ. ಬಲ ಮಗ್ಗುಲಲ್ಲಿ ಮಲಗಿದಾಗ ಎಡಗಡೆಯ ಚಂದ್ರನಾಡಿ ಕಾರ್ಯನಿರತವಾಗುವುದು ಮತ್ತು ಎಡ ಮಗ್ಗುಲಲ್ಲಿ ಮಲಗಿದಾಗ ಬಲಗಡೆಯ ಸೂರ್ಯನಾಡಿ ಕಾರ್ಯನಿರತವಾದಾಗ ಅದರದ್ದೇ ಅನುಭವದ ಅರಿವಾಗುತ್ತದೆ. ಯಾವುದಾದರೊಂದು ಮಗ್ಗುಲಲ್ಲಿ ಮಲಗಿದಾಗ ಆಗುವ ಪರಿಣಾಮವೇ ಯಾವುದಾದರೊಂದು ಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡಾಗಲೂ ಆಗುತ್ತದೆ. ಬಲಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡು ಕಿವಿ ಮುಚ್ಚಿಕೊಂಡರೆ ಚಂದ್ರನಾಡಿ ಕಾರ್ಯನಿರತವಾಗುತ್ತದೆ ಹಾಗೂ ಎಡಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡು ಕಿವಿ ಮುಚ್ಚಿಕೊಂಡರೆ ಸೂರ್ಯನಾಡಿ ಕಾರ್ಯನಿರತವಾಗುತ್ತದೆ. ನಮ್ಮ ವ್ಯಾವಹಾರಿಕ ಜೀವನದಲ್ಲಿ ಸ್ತ್ರೀಯರು ಮೂಗಿನ ಎಡ ಬದಿಗೆ ಮೂಗುತಿಯನ್ನು ಧರಿಸುತ್ತಾರೆ ಅದೇ ರೀತಿ ಸೊಂಟದ ಎಡಬದಿಗೆ ಕೀಲಿಕೈ ಗೊಂಚಲು ಧರಿಸುತ್ತಾರೆ. ಸೂರ್ಯನಾಡಿಯನ್ನು ಕಾರ್ಯನಿರತಗೊಳಿಸುವುದೇ ಇದರ ಹಿಂದಿನ ಕಾರಣವಾಗಿದೆ. ಅದೇ ರೀತಿ ಧಾರ್ಮಿಕ ವಿಧಿಗಳಲ್ಲಿ ಪಂಚೆ-ಅಂಗವಸ್ತ್ರ ಧರಿಸುವಾಗ ಅಂಗವಸ್ತ್ರವನ್ನು ಎಡ ಹೆಗಲಿನ ಮೇಲೆ ಹಾಕಿಕೊಳ್ಳುತ್ತಾರೆ. ಇದರಿಂದ ಕಾರ್ಯಕ್ಕಾಗಿ ಸೂರ್ಯನಾಡಿ ಕಾರ್ಯನಿರತವಾಗಿರುತ್ತದೆ. ಸಮರ್ಥ ರಾಮದಾಸ ಸ್ವಾಮಿಯವರು ದಂಡವನ್ನು ಉಪಯೋಗಿಸುತ್ತಿದ್ದರು ಹಾಗೂ ಕುಳಿತಾಗ ಅದನ್ನು ಭೂಮಿಯ ಮೇಲೆ ನಿಲ್ಲಿಸಿ ಅದರ ಮೇಲೆ ತನ್ನ ಎಡ ಕೈಯನ್ನಿಡುತ್ತಿದ್ದರು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂದು ತಿಳಿದುಕೊಳ್ಳಲು ಇದನ್ನೂ ಓದಿ !
ವ್ಯಕ್ತಿಯ ಪ್ರಕೃತಿಗನುಸಾರ ಅವರು ಮಲಗುವ ಯೋಗ್ಯ ಪದ್ಧತಿ
ಅ. ವಾತ ಪ್ರಕೃತಿ ಇದ್ದರೆ ಅಂಗಾತ ಮಲಗಬೇಕು
ವಾತ ಪ್ರಕೃತಿಯ ವ್ಯಕ್ತಿಯು ಹೆಚ್ಚಿನ ಸಮಯ ಅಂಗಾತ ಮಲಗಬೇಕು. ಅದರಿಂದ ಅವರ ಸುಷುಮ್ನಾನಾಡಿ ಜಾಗೃತವಾಗಿ ದೇಹದಲ್ಲಿ ಚೈತನ್ಯ ಹರಡುತ್ತದೆ ಹಾಗೂ ವಾಯುರೂಪಿ ವಾತ ಕಡಿಮೆಯಾಗುತ್ತದೆ. ಒಂದು ವೇಳೆ ಅಂಗಾತ ಮಲಗುವುದರಿಂದ ಲಾಭವಾಗದಿದ್ದರೆ, ಎಡ ಅಥವಾ ಬಲ ಮಗ್ಗುಲಿಗೆ ಮಲಗಿ ನೋಡಬೇಕು. ಸೂರ್ಯನಾಡಿಯಿಂದ ಉಷ್ಣ ಸ್ಪಂದನಗಳು, ಚಂದ್ರನಾಡಿಯಿಂದ ತಂಪು ಸ್ಪಂದನಗಳು ಹಾಗೂ ಸುಷುಮ್ನಾನಾಡಿಯಿಂದ ಆಹ್ಲಾದದಾಯಕ ಸ್ಪಂದನಗಳು ದೇಹದಲ್ಲಿ ಹರಡಿ ದೇಹದಲ್ಲಿನ ವಾತಪ್ರಕೋಪವು ಶಾಂತವಾಗುತ್ತದೆ. ಅದರಿಂದ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ. ಯಾವ ಮಗ್ಗುಲಿಗೆ ಮಲಗಿದರೆ ವಾತ ಕಡಿಮೆಯಾಗುತ್ತದೆ, ಎಂಬುದನ್ನು ನಿರೀಕ್ಷಣೆ ಮಾಡಿ ಆ ಮಗ್ಗುಲಲ್ಲಿ ಹೆಚ್ಚು ಸಮಯ ಮಲಗಬೇಕು ಅಥವಾ ಬದಲಾಯಿಸುತ್ತಾ ಪ್ರಯೋಗ ಮಾಡಬೇಕು.
ಆ. ಪಿತ್ತ ಪ್ರಕೃತಿ ಇದ್ದರೆ ಬಲ ಮಗ್ಗುಲಿಗೆ ಮಲಗುವುದು
ಪಿತ್ತ ಪ್ರಕೃತಿ ಇದ್ದರೆ ಬಲ ಮಗ್ಗುಲಿಗೆ ಮಲಗಬೇಕು. ಅದರಿಂದ ಸೂರ್ಯನಾಡಿಯ ಚಲನೆ ನಿಂತು ಚಂದ್ರನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಸಂಪೂರ್ಣ ದೇಹದಲ್ಲಿ ಶೀತಲತೆ ಹರಡುತ್ತದೆ. ಪಿತ್ತ ಹೆಚ್ಚಾದುದರಿಂದ ದೇಹದಲ್ಲಿ ನಿರ್ಮಾಣವಾದ ಉಷ್ಣತೆಯು ಇದರಿಂದ ಕಡಿಮೆಯಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ.
ಇ. ಕಫ ಪ್ರಕೃತಿ ಇದ್ದರೆ ಎಡ ಮಗ್ಗುಲಿಗೆ ಮಲಗುವುದು
ಕಫ ಪ್ರಕೃತಿ ಇದ್ದರೆ ಎಡ ಮಗ್ಗುಲಿಗೆ ಮಲಗಬೇಕು. ಅದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಸಂಪೂರ್ಣ ದೇಹದಲ್ಲಿ ಉಷ್ಣತೆಯು ಹರಡುತ್ತದೆ. ಇದರಿಂದ ಕಫ ಹೆಚ್ಚಾಗಿ ದೇಹದಲ್ಲಿ ನಿರ್ಮಾಣವಾಗಿರುವ ಶೀತಲತೆಯು ಕಡಿಮೆಯಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ಬರುತ್ತದೆ.
ವಿವಿಧ ಪ್ರಕಾರದ ಶಾರೀರಿಕ ತೊಂದರೆ ಆಗುತ್ತಿರುವಾಗ ಮಲಗುವ ಪದ್ಧತಿ
ಅ. ಅಜೀರ್ಣದ ತೊಂದರೆಯಾಗುವುದು
ಆಹಾರ ಜೀರ್ಣವಾಗದಿದ್ದರೆ ಊಟದ ನಂತರ ಸ್ವಲ್ಪ ಹೊತ್ತು ಎಡ ಮಗ್ಗುಲಿಗೆ ಮಲಗಬೇಕು. ಜಠರದ ಹೆಚ್ಚು ಭಾಗ ಎಡಬದಿಯಲ್ಲಿ ಇರುವುದರಿಂದ ಎಡ ಮಗ್ಗುಲಿಗೆ ಮಲಗುವುದರಿಂದ ಜಠರಕ್ಕೆ ಹೆಚ್ಚು ಪ್ರಮಾಣದಲ್ಲಿ ರಕ್ತ ಪೂರೈಕೆಯಾಗಿ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಅದೇ ರೀತಿ ಎಡ ಮಗ್ಗುಲಿಗೆ ಮಲಗುವುದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಜಠರಾಗ್ನಿ ಚೆನ್ನಾಗಿ ಪ್ರಜ್ವಲಿಸುತ್ತದೆ. ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ.
ಆ. ಉಬ್ಬಸದ ತೊಂದರೆ ಇದ್ದರೆ
ಉಬ್ಬಸದ ತೊಂದರೆಯಾಗುತ್ತಿದ್ದರೆ, ಎಡ ಮಗ್ಗುಲಿಗೆ ಮಲಗಬೇಕು. ಇದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ದೇಹದಲ್ಲಿ ಉಷ್ಣತೆಯು ಹೆಚ್ಚಾಗಿ ಶ್ವಾಸಮಾರ್ಗದಲ್ಲಿನ ಕಫದ ಕಣಗಳು ಕರಗಿ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ. ಇದರಿಂದ ಶಾಂತನಿದ್ರೆ ತಗಲುತ್ತದೆ.
ವಿವಿಧ ರೀತಿಯ ತೊಂದರೆಗಳು | ಯಾವ ಮಗ್ಗುಲಲ್ಲಿ ಮಲಗಬೇಕು ? | ಯಾವ ಮುದ್ರೆ ಮಾಡಬೇಕು ? |
---|---|---|
೧. ಪ್ರಕೃತಿಗನುಸಾರ | ||
೧ ಅ. ವಾತ ಹೆಚ್ಚಾಗುವುದು | ಅಂಗಾತ ಮಲಗುವುದು | ತರ್ಜನಿಯ ತುದಿಯನ್ನು ಹೆಬ್ಬೆರಳಿನ ತುದಿಗೆ ತಗಲಿಸುವುದು (ವಾಯುತತ್ತ್ವದ ಮುದ್ರೆ) |
೧ ಆ. ಪಿತ್ತ ಹೆಚ್ಚಾಗುವುದು | ಬಲ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಅನಾಮಿಕದ ಬುಡಕ್ಕೆ ತಗಲಿಸುವುದು (ಆಪತತ್ತ್ವದ ಮುದ್ರೆ) |
೧ ಇ. ಕಫ ಹೆಚ್ಚಾಗುವುದು | ಎಡ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ) |
೨. ಇತರ ವ್ಯಾಧಿಗಳು | ||
೨ ಅ. ಆಹಾರ ಜೀರ್ಣವಾಗದಿರುವುದು | ಎಡ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ) |
೨ ಆ. ಉಚ್ಚ ರಕ್ತದೊತ್ತಡ | ಬಲ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಅನಾಮಿಕದ ಬುಡಕ್ಕೆ ತಗಲಿಸುವುದು (ಆಪತತ್ವದ ಮುದ್ರೆ) |
೨ ಇ. ಕಡಿಮೆ ರಕ್ತದೊತ್ತಡ | ಎಡ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ವದ ಮುದ್ರೆ) |
೨ ಈ. ಉಬ್ಬಸದ ತೊಂದರೆ | ಎಡ ಮಗ್ಗುಲಿಗೆ | ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ) |
೩.ಆಧ್ಯಾತ್ಮಿಕ ತೊಂದರೆಯಾಗುವುದು | ಎಡ, ಬಲ ಅಥವಾ ಅಂಗಾತ ಮಲಗುವುದು | ಯಾವ ತತ್ವದ ಮುದ್ರೆ ಮಾಡುವುದರಿಂದ ತೊಂದರೆ ಕಡಿಮೆಯಾಗುವುದೋ, ಆ ಮುದ್ರೆಯನ್ನು ಹುಡುಕಿತೆಗೆದು ಮಾಡಬೇಕು |
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೧.೧೧.೨೦೨೧)
Very best Impomation thank you lot
Good information🙏