ಪ್ರತಿಯೊಂದು ಪರಿಸ್ಥಿತಿಯಲ್ಲಿ ಸಾಧನೆಯ ದೃಷ್ಟಿಕೋನವನ್ನು ಕೃತಿಯಲ್ಲಿ ತರಲು ಸಾಧ್ಯವಾಗಬೇಕೆಂದು ಸಾಧನೆಯ ಪ್ರಯತ್ನಗಳನ್ನು ಅಂತರ್ಮನಸ್ಸಿನಿಂದ ಮಾಡುವುದು ಆವಶ್ಯಕ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ
೭.೧೨.೨೦೨೧ ರಂದು ಸಾಧಕ ಕುಟುಂಬಗಳಿಗೆ ಒಂದು ಸತ್ಸಂಗವನ್ನು ಆಯೋಜಿಸಲಾಗಿತ್ತು. ಆ ಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, ‘ಸಾಧಕರು ಕುಟುಂಬದವರ ಸಹವಾಸದಲ್ಲಿ ಸಾಧನೆಯ ಪ್ರಯತ್ನವನ್ನು ಹೇಗೆ ಮಾಡಬೇಕು ?’ ಎಂಬುವುದರ ಮಾರ್ಗದರ್ಶನ ಮಾಡಿದರು. ಅದರ ಆಯ್ದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ೨೪ ಗಂಟೆಗಳ ಕಾಲ ಭಗವಂತನಿಗೆ ಅಪೇಕ್ಷಿತವಿದ್ದಂತೆ ಕೃತಿ ಮಾಡುವುದು ಎಂದರೆ ಸಾಧನೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಕಲಿಯುಗವು ವಿಜ್ಞಾನ ಯುಗವಾಗಿದೆ. ಈ ಕಲಿಯುಗದಿಂದ ಪಾರಾಗಲು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ವಿಹಂಗಮ ರೀತಿಯಲ್ಲಿ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು ಗುರುಕೃಪಾಯೋಗನುಸಾರ ಸಾಧನೆಯನ್ನು ಹೇಳಿದರು. ಇದು ಎಲ್ಲಕ್ಕಿಂತ ಸುಲಭ ಸಾಧನಾಮಾರ್ಗವಾಗಿದೆ. ಗುರುಕೃಪಾಯೋಗದಲ್ಲಿ ಧ್ಯಾನಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಇವೆಲ್ಲ ಯೋಗಗಳ ಸಂಗಮವಿದೆ.
ಪ್ರತಿಯೊಬ್ಬರ ಪ್ರಕೃತಿಗನುಸಾರ, ಕೌಶಲ್ಯಕ್ಕನುಸಾರ ಅವರಿಗೆ ಸೇವೆ ಲಭ್ಯವಾಗುತ್ತದೆ. ಪ್ರತಿಯೊಬ್ಬ ಸಾಧಕನ ಸೇವೆಯ ಕ್ಷೇತ್ರ ಮತ್ತು ಕೌಶಲ್ಯ ಬೇರೆಯಾಗಿದ್ದರೂ, ನಮ್ಮೆಲ್ಲರ ಧ್ಯೇಯವು ಒಂದೇ ಆಗಿದೆ. ಈ ಧ್ಯೇಯವನ್ನು ಸಾಧಿಸಲು ನಾವು ಸಾಧನೆಯನ್ನು ಉತ್ಸಾಹದಿಂದ ಆರಂಭಿಸುತ್ತೇವೆ; ಆದರೆ ಒಂದು ಹಂತದಲ್ಲಿ ಪ್ರಯತ್ನ ಕಡಿಮೆಯಾಗಿ ನಿಶ್ಚಯಿಸಿದ ಗಂಟೆಗಳ ಸೇವೆ ಮತ್ತು ವ್ಯಷ್ಟಿ ಸಾಧನೆಗಾಗಿ ನಿಶ್ಚಯಿಸಿದ ಪ್ರಯತ್ನ ಮಾಡುವುದು, ಇಷ್ಟಕ್ಕೇ ಅಲ್ಪಸಂತುಷ್ಟರಾಗುತ್ತೇವೆ. ನಮ್ಮ ಅಲ್ಪ ಬುದ್ಧಿಗೆ ಏನು ಸಿಕ್ಕಿತೋ ಅದಕ್ಕನುಸಾರ ನಾವು ಪ್ರಯತ್ನಿಸುತ್ತೇವೆ. ಪ್ರತ್ಯಕ್ಷ ಸಾಧನೆ ಎಂದರೆ ಏನು ? ೨೪ ಗಂಟೆಗಳ ಕಾಲ ಈಶ್ವರನಿಗೆ ಅಪೇಕ್ಷಿತವಿರುವಂತೆ ಕೃತಿ ಮಾಡುವುದೇ ಸಾಧನೆಯಾಗಿದೆ !
೨. ಸಾಧನೆಯ ಎಲ್ಲ ದೃಷ್ಟಿಕೋನಗಳನ್ನು ಎಲ್ಲ ಕಡೆಗಳಲ್ಲಿ ಕೃತಿಯಲ್ಲಿ ತರಲು ಪ್ರಯತ್ನಿಸುವುದೇ ‘ಅಧ್ಯಾತ್ಮಿಕ ಜೀವನವಾಗಿದೆ’ !
ಸೇವೆ ಮತ್ತು ವ್ಯಷ್ಟಿ ಸಾಧನೆಗಾಗಿ ಕೇವಲ ಮೇಲುಮೇಲಿನ ಪ್ರಯತ್ನ ಮಾಡುವುದು ಪರಾತ್ಪರ ಗುರುದೇವರಿಗೆ ಅಪೇಕ್ಷಿತವಲ್ಲ. ‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುತ್ತಿರುವಾಗ ತನ್ನಲ್ಲಿ ಯಾವ ಬದಲಾವಣೆಯಾಗುವುದು ಈಶ್ವರನಿಗೆ ಅಪೇಕ್ಷಿತವಿದೆಯೋ, ಅಂತಹ ಬದಲಾವಣೆ ಆಗುತ್ತಿದೆಯಲ್ಲವೇ ? ತನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂನ ತೀವ್ರತೆ ಕಡಿಮೆಯಾಗುತ್ತಿದೆಯಲ್ಲವೇ ? ಈಶ್ವರನ ಬಗೆಗಿನ ಭಾವ, ಭಕ್ತಿ ಮತ್ತು ಶ್ರದ್ಧೆ ಹೆಚ್ಚೆಚ್ಚು ದೃಢವಾಗುತ್ತಿದೆಯಲ್ಲವೇ ?’ ಎಂಬುದರ ಚಿಂತನೆಯನ್ನು ಮಾಡುವ ಸಾಧಕನು ಸಾಧನೆಯಲ್ಲಿ ಶೀಘ್ರವಾಗಿ ಪ್ರಗತಿ ಮಾಡಿಕೊಳ್ಳುತ್ತಾನೆ. ಸಾಧನೆಯ ಎಲ್ಲ ದೃಷ್ಟಿಕೋನಗಳನ್ನು ಎಲ್ಲ ಕಡೆಗಳಲ್ಲಿ, ಎಲ್ಲ ಪರಿಸ್ಥಿತಿಗಳಲ್ಲಿ ಹಾಗೂ ೨೪ ಗಂಟೆ ಕೃತಿಯಲ್ಲಿ ತರಲು ಪ್ರಯತ್ನಿಸುವುದೇ ನಿಜವಾಗಿ ಅಧ್ಯಾತ್ಮಿಕ ಜೀವನವನ್ನು ಜೀವಿಸುವುದಾಗಿದೆ.
೩. ಅಂತರ್ಮನಸ್ಸಿನಿಂದ ಸಾಧನೆಗಾಗಿ ಪ್ರಯತ್ನಿಸುವ ಸಾಧಕರ ವರ್ತನೆ ಕುಟುಂಬದವರು, ಸಾಧಕರು ಮತ್ತು ಎಲ್ಲರೊಂದಿಗೆ ಒಂದೇ ರೀತಿಯದ್ದಾಗಿರುತ್ತದೆ !
ವ್ಯಾವಹಾರಿಕ ಜೀವನದಲ್ಲಿ ಶಾಲೆ, ಮಹಾವಿದ್ಯಾಲಯಗಳಲ್ಲಿ ನಾವು ಶಿಕ್ಷಣವನ್ನು ಪಡೆದರೆ, ನಮಗೆಷ್ಟು ಗ್ರಹಣವಾಗಿದೆ ಎಂದು ತಿಳಿಯಲು ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ. ನಾವು ಕಲಿತ ವಿಷಯವು ನಮಗೆಷ್ಟು ತಿಳಿದಿದೆ ಎಂದು ಪರೀಕ್ಷೆಯಿಂದ ಗೊತ್ತಾಗುತ್ತದೆ ! ಅದರಂತೆ ಸಾಧನೆ ಮಾಡುತ್ತಿರುವಾಗ ‘ನಾವು ಸಾಧನೆಯ ದೃಷ್ಟಿಕೋನವನ್ನು ಎಷ್ಟು ಅಳವಡಿಸಿಕೊಂಡಿದ್ದೇವೆ ?’ ಎಂಬುದರ ನಿಜವಾದ ಪರೀಕ್ಷೆಯು ನಾವು ಕುಟುಂಬದವರೊಂದಿಗೆ ಇರುವಾಗ ಆಗುತ್ತಿರುತ್ತದೆ. ಅವರೊಂದಿಗಿನ ನಮ್ಮ ವರ್ತನೆ ಹೇಗಿರುತ್ತದೆ ಎಂಬುದು ಇದರಿಂದ ನಮ್ಮ ಗಮನಕ್ಕೆ ಬರುತ್ತದೆ. ನಾವು ಸಾಧನೆಯಲ್ಲಿ ಕಲಿತಿದ್ದು ಬಾಹ್ಯಮನದ ಸ್ತರದಲ್ಲಿದೆಯೋ ಅಥವಾ ಅಂತರ್ಮನದಲ್ಲಿದೆಯೋ; ಅಂದರೆ ನಾವು ಅದನ್ನು ನಮ್ಮಲ್ಲಿ ಅಳವಡಿಸಿಕೊಂಡಿದ್ದೇವೆಯೋ ಹೇಗೆ ಎಂಬುವುದು ತಿಳಿಯಬಹುದು. ನಮ್ಮ ಸಾಧನೆಯ ಪ್ರಯತ್ನ ಬಾಹ್ಯಮನದ ಸ್ತರದಲ್ಲಿ, ಅಂದರೆ ಮೇಲುಮೇಲಿನದ್ದಾಗಿದ್ದರೆ, ಕುಟುಂಬದವರೊಂದಿಗಿನ ವರ್ತನೆ ಬೇರೆ ಮತ್ತು ಹೊರಗೆ ಅಥವಾ ಸಾಧಕರೊಂದಿಗಿನ ವರ್ತನೆ ಬೇರೆಯಾಗಿರುತ್ತದೆ. ಯಾರ ಸಾಧನೆಯು ಸ್ವಭಾವದಲ್ಲಿಯೇ ಬಂದಿದೆಯೋ, ಅಂತರ್ಮನಸ್ಸಿನಿಂದ ಸಾಧನೆಯಾಗುತ್ತಿದೆಯೋ, ಅವರು ಎಲ್ಲ ಕಡೆಗೆ ಒಂದೇ ರೀತಿಯಲ್ಲಿ ಮತ್ತು ಸಹಜವಾಗಿ ವರ್ತಿಸುತ್ತಾರೆ. ಸಾಧಕ ಕುಟುಂಬದಲ್ಲಿಯೂ ಕೆಲವು ಜನರು ಪರಸ್ಪರರನ್ನು ಮಾನಸಿಕ ಸ್ತರದಲ್ಲಿ ಸಂಬಾಳಿಸುತ್ತಾರೆ. ತಾವು ಸ್ವತಃ ಸಾಧನೆಯ ಸ್ತರದಲ್ಲಿರದೆ ಕುಟುಂಬದ ಸದಸ್ಯರಿಗೂ ಸಾಧನೆಯಲ್ಲಿ ಸಹಾಯ ಮಾಡುವುದನ್ನು ತಪ್ಪಿಸುತ್ತಾರೆ. ಇದರಿಂದ ತಮ್ಮೊಂದಿಗೆ ಕುಟುಂಬದವರ ಆಧ್ಯಾತ್ಮಿಕ ಹಾನಿಯೂ ಆಗುತ್ತದೆ. ಕೆಲವು ಸಾಧಕರಿಗೆ, ‘ಕುಟುಂಬದವರು ನನ್ನ ತಪ್ಪು ಹೇಳುವುದಿಲ್ಲ’ ಎಂದು ಅನಿಸುತ್ತದೆ, ಇಂತಹ ಸಾಧಕರು ‘ಕುಟುಂಬದವರು ನನಗೆ ನನ್ನ ತಪ್ಪುಗಳನ್ನು ಏಕೆ ಹೇಳುವುದಿಲ್ಲ ? ನಾನು ನನ್ನಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಳ್ಳಬೇಕು ?’ ಎಂದು ಚಿಂತನೆ ಮಾಡಬೇಕು. ಎಲ್ಲ ಸಾಧಕ ಕುಟುಂಬದವರು ಸಾಧನೆಯ ಸ್ತರದಲ್ಲಿ ಪರಸ್ಪರರನ್ನು ಸಂಬಾಳಿಸಲು ತಮ್ಮ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಬೇಕು.
ಕುಟುಂಬದವರ ಸಹವಾಸದಲ್ಲಿ ಸಾಧನೆಯ ಪ್ರಯತ್ನ ಮಾಡುವುದು ಸಾಧ್ಯವಾಗತೊಡಗಿದರೆ ಅದು ಸಾಧಕತ್ವದ ಲಕ್ಷಣವಾಗಿದೆ !’ ಸಾಧನೆಯ ಪ್ರಯತ್ನ ಅಂತರ್ಮನಸ್ಸಿನಿಂದ ಆಗತೊಡಗಿದರೆ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಆತ್ಮೀಯರಾಗಲು ಸಾಧ್ಯವಾಗುತ್ತದೆ.
೪. ‘ಪಿಂಡದಿಂದ ಬ್ರಹ್ಮಾಂಡ’ ಈ ಉಕ್ತಿಗನುಸಾರ ಹಿಂದೂ ರಾಷ್ಟ ಸ್ಥಾಪನೆಗಾಗಿ ಮೊದಲು ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕು !
ಪರಾತ್ಪರ ಗುರುದೇವರು ನಮಗೆ ಹಿಂದೂ ರಾಷ್ಟ ನಿರ್ಮಿಸುವ ಧ್ಯೇಯವನ್ನು ನೀಡಿದ್ದಾರೆ. ‘ಪಿಂಡದಿಂದ ಬ್ರಹ್ಮಾಂಡ’ ಈ ಉಕ್ತಿಗನುಸಾರ ನಮ್ಮ ಮನಸ್ಸಿನಲ್ಲಿ ಹಿಂದೂ ರಾಷ್ಟವು ಸಾಕಾರಗೊಂಡರೆ (ಅಂದರೆ ತನ್ನಲ್ಲಿ ಸಾಧಕತ್ವವು ಅಂಕುರಿಸಿದರೆ) ಅದು ಸಮಷ್ಟಿಯಲ್ಲಿ ಸಾಕಾರಗೊಳ್ಳುತ್ತದೆ. ಕೌಟುಂಬಿಕ ಸ್ತರದಲ್ಲಿ ಸಾಧನೆಗಾಗಿ ಪ್ರಯತ್ನಿಸಿ ಇದನ್ನು ಆರಂಭಿಸಬೇಕಾಗಿದೆ. ಕೌಟುಂಬಿಕ ಸ್ತರದಲ್ಲಿ ಇದು ಸಾಧ್ಯವಾದರೆ ಸಹಸಾಧಕರು, ಹಾಗೆಯೇ ಸಮಾಜದಲ್ಲಿನ ವ್ಯಕ್ತಿಗಳೊಂದಿಗೂ ಆತ್ಮೀಯತೆಯನ್ನು ಸಾಧಿಸಬಹುದು. ಇಂತಹ ಪ್ರಯತ್ನಗಳಿಂದಲೇ ಮುಂದೆ ‘ವಸುಧೈವ ಕುಟುಂಬಕಮ್’ ಅಂದರೆ ‘ಸಂಪೂರ್ಣ ಪೃಥ್ವಿಯು ಒಂದು ಕುಟುಂಬವೇ ಆಗಿದೆ’ ಎಂಬ ಉಕ್ತಿಯ ಅನುಭೂತಿ ಬರುತ್ತದೆ.
ನಮ್ಮ ವೃತ್ತಿ(ಸ್ವಭಾವ)ಯಲ್ಲಿ ಬದಲಾವಣೆ ತರಲು ಜೀವವನ್ನು ಪಣಕ್ಕಿಟ್ಟು ಪ್ರಯತ್ನಿಸುವುದೇ ಶ್ರೀ ಗುರುಗಳ ಬಗ್ಗೆ ನಿಜವಾದ ಕೃತಜ್ಞತೆ ವ್ಯಕ್ತಪಡಿಸುವುದಾಗಿದೆ. ಕುಟುಂಬ, ವೈಯುಕ್ತಿಕ ಜೀವನ, ಪ್ರಸಾರ ಮತ್ತು ಆಶ್ರಮ ಹೀಗೆ ಎಲ್ಲ ಕಡೆಗಳಲ್ಲಿ ಪ್ರಾಮಾಣಿಕವಾಗಿ, ತಳಮಳದಿಂದ ಹಾಗೂ ಪಾರದರ್ಶಕರಾಗಿದ್ದು ಸಾಧನೆಗಾಗಿ ಪ್ರಯತ್ನಿಸುವುದೇ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿಯ ವ್ಯಷ್ಟಿ ಧ್ಯೇಯ ಮತ್ತು ಹಿಂದೂ ರಾಷ್ಟ ಸ್ಥಾಪನೆಯ ಸಮಷ್ಟಿ ಧ್ಯೇಯವನ್ನು ಸಾಧಿಸುವ ಗುರುಕೀಲಿಕೈಯಾಗಿದೆ ! ನಾವು ಎಷ್ಟು ಪರಿಶ್ರಮ ಪಟ್ಟು ಪ್ರಯತ್ನಿಸಬೇಕೆಂದರೆ, ಭಗವಂತನಿಗೆ ‘ಸಾಧಕರು ಹಿಂದೂ ರಾಷ್ಟಕ್ಕಾಗಿ ಪಾತ್ರರಾಗಿದ್ದಾರೆ !’ ಎಂದು ಅನಿಸಬೇಕು. ಆಗಲೇ ಅವರು ಹಿಂದೂ ರಾಷ್ಟ ನೀಡುವರು !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ