ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು – 2

Article also available in :

ಸದ್ಗುರು (ಡಾ.) ಮುಕುಲ ಗಾಡಗೀಳ

ಯಾವುದಾದರೂ ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?, ಎಂಬುದನ್ನು ಧ್ಯಾನದಲ್ಲಿ ಶೋಧಿಸಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಕೊರೋನಾ ವಿಷಾಣುಗಳ ವಿರುದ್ಧ ಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಲು ನಾನು ಮೊದಲ ಬಾರಿಗೆ ಇಂತಹ ಜಪವನ್ನು ಶೋಧಿಸಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಶೋಧಿಸಲು ಸ್ಫೂರ್ತಿ ದೊರಕಿತು. ಕಳೆದ ಒಂದು ವರ್ಷದಿಂದ ಸಾಧಕರಿಗೆ ನಾನು ಶೋಧಿಸಿದ ಜಪಗಳನ್ನು ಅವರ ರೋಗಗಳಿಗಾಗಿ ನೀಡುತ್ತಿದ್ದೇನೆ. ‘ಆ ಜಪಗಳಿಂದ ಉತ್ತಮ ಲಾಭವಾಗುತ್ತಿದೆ’ ಎಂದು ಅವರು ಹೇಳಿದಾಗ ಇದು ನನ್ನ ಗಮನಕ್ಕೆ ಬಂದಿತು. ಆ ರೋಗಗಳು ಮತ್ತು ಅವುಗಳ ಶಮನಕ್ಕಾಗಿ ಜಪಗಳನ್ನು ಇಲ್ಲಿ ಕೊಡಲಾಗಿದೆ. ಈ ಜಪಗಳೆಂದರೆ ಅಗತ್ಯವಿರುವ ವಿವಿಧ ದೇವತೆಗಳ ಒಟ್ಟು ಜಪಗಳಾಗಿವೆ.

ಸೂಚನೆ : ಇಲ್ಲಿ ಪ್ರತಿಯೊಂದು ಸಮಸ್ಯೆಯ ಕೆಳಗೆ ನೀಡಿರುವ ಎಲ್ಲ ದೇವತೆಗಳ ಹೆಸರು ಸೇರಿ ‘ಒಂದು’ ಜಪ ಆಗುತ್ತದೆ.

ರೋಗ ಅನ್ವಯಿಸುವ ೫ ನಾಮಜಪಗಳು ಸೇರಿಸಿ ಆಗುವ ನಾಮಜಪ
೧. ದಮ್ಮು (ಅಸ್ತಮಾ) ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೨. ಮೂತ್ರನಾಳದ ಸೋಂಕು ಶ್ರೀ ಗುರುದೇವ ದತ್ತ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೩. ದೇಹದಲ್ಲಿ ಯಾವುದಾದರೊಂದು ಕಡೆಯಲ್ಲಿ ಉರಿ ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತ ನಮಃ | ಓಂ ನಮಃ ಶಿವಾಯ |
೪. ಸ್ಲಿಪ್ ಡಿಸ್ಕ್’ದಿಂದಾಗಿ ಆಗುವ ವೇದನೆ ಕಡಿಮೆಯಾಗಲು ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಗುರುದೇವ ದತ್ತ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೫. ತೂಕ ಹೆಚ್ಚಿಸಲು ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೬. ಓ.ಸಿ.ಡಿ. (ಆಬ್ಸೆಸಿವ್ ಕಂಪಲ್ಸಿವ್ ಡಿಸ್ಆರ್ಡರ) ಅಕಾರಣವಾಗಿ ಅದೇ ಅದೇ ವಿಚಾರ ಮನಸ್ಸಿನಲ್ಲಿ ಬರುವುದು ಅಥವಾ ದಕ್ಕನುಸಾರ ಒಂದೇ ಕ್ರಿಯೆಯನ್ನು ಅನೇಕ ಬಾರಿ ಮಾಡುವುದು ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೭. ಜೀರ್ಣಶಕ್ತಿ ಮತ್ತು ಕರುಳುಗಳ ಶಕ್ತಿ ಕ್ಷೀಣವಾಗುವುದು ಓಂ ನಮೋ ಭಗವತೇ ವಾಸುದೇವಾಯ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಗುರುದೇವ ದತ್ತ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೮. ಎಲ್ಲ ರೀತಿಯ ಮಾನಸಿಕ ರೋಗಗಳು ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಶ್ರೀ ಗುರುದೇವ ದತ್ತ |
೯. ಕಾರಣವಿಲ್ಲದೇ ದೇಹಕ್ಕೆ ಒಂದೇ ಸಮ ತುರಿಕೆಯಾಗುವುದು ಶ್ರೀ ಗಣೇಶಾಯ ನಮಃ | ಶ್ರೀ ಗುರುದೇವ ದತ್ತ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೦. ಪಾರ್ಕಿಂಸನ್ಸ್ ಶ್ರೀ ದುರ್ಗಾದೇವ್ಯೈ ನಮಃ | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ |
೧೧. ಒಂದೇ ಸಮ ಬಿಕ್ಕಳಿಕೆ ಬರುವುದು ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಓಂ ನಮೋ ಭಗವತೇ ವಾಸುದೇವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೨. ಮೆದುಳಿನ ರೋಗ (ಮೆದುಳಿನಲ್ಲಿ ರಕ್ತಸ್ರಾವವಾಗಿ ರಕ್ತ ಗಟ್ಟಿಯಾಗುವುದು ಅಥವಾ ರಕ್ತದ ಗಂಟು ಆಗುವುದು, ಪ್ಯಾರಾಲಿಸಿಸ್ (ಪಾರ್ಶ್ವವಾಯು) ಆಗುವುದು, ಫಿಟ್ಸ್ (ಅಪಸ್ಮಾರ, ಮೂರ್ಛೆ ರೋಗ) ಬರುವುದು ಇತ್ಯಾದಿ ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೩. ಸಂಧಿವಾತರೋಗ ಶ್ರೀ ಗುರುದೇವ ದತ್ತ | ಶ್ರೀ ಗುರುದೇವ ದತ್ತ | ಓಂ ನಮೋ ಭಗವತೇ ವಾಸುದೇವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೪. ಕುರು (ವ್ರಣ) (ಒಂದು ರೀತಿಯ ಚರ್ಮರೋಗ) ಆಗುವುದು ಶ್ರೀ ದುರ್ಗಾದೇವ್ಯೈ ನಮಃ | ಓಂ ನಮೋ ಭಗವತೆ ವಾಸುದೇವಾಯ | ಶ್ರೀ ಗುರುದೇವ ದತ್ತ | ಶ್ರೀ ಗುರುದೇವ ದತ್ತ | ಶ್ರೀ ಗುರುದೇವ ದತ್ತ |
೧೫. ಡೆಂಗ್ಯೂ (ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಜ್ವರ) (ಪ್ಲೇಟಲೆಟ್ಸ್ ಕಡಿಮೆ ಆಗುವುದು) ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ |
೧೬. ನಿದ್ರೆ ಬರದಿರುವುದು ಶ್ರೀ ಗುರುದೇವ ದತ್ತ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೭. ಹೊಟ್ಟೆಯಲ್ಲಿ ಜಂತುಗಳಾಗುವುದು (ಎಲ್ಲ ರೀತಿಯ ಜಂತುಗಳು) ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೮. ವಾಂತಿಯ ಭಾವನೆ (nausea) ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಗುರುದೇವ ದತ್ತ | ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೯. ಮೆದುಳಿನಲ್ಲಿ ಗಂಟು ಆಗಿದ್ದರಿಂದ ತಲೆ ಸುತ್ತುವುದು ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೨೦. ರಕ್ತನಾಳದಲ್ಲಿ ಗಂಟುಗಳಾಗುವುದು ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೇ ನಮಃ । ಓಂ ನಮಃ ಶಿವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |

ಕೋಷ್ಟಕದಲ್ಲಿ ನೀಡಲಾದ ರೋಗಗಳಲ್ಲಿ ಕೆಲವು ರೋಗಗಳ ವಿಷಯದಲ್ಲಿ ಹೇಳಿದ ಜಪಗಳ ಕುರಿತು ಸಂತರಿಗೆ ಹಾಗೂ ಸಾಧಕರಿಗೆ ಬಂದಿರುವ ವಿಶೇಷ ಅನುಭವಗಳು

೧ ಅ. ಮೂತ್ರನಾಳದ ಸೋಂಕು : ಓರ್ವ ಸಂತರ ‘ಪ್ರೊಸ್ಟೇಟ’ ಗ್ರಂಥಿಗೆ ಊತ ಬರುತ್ತಿತ್ತು. ಆದ್ದರಿಂದ ಮೂತ್ರನಾಳದಲ್ಲಿ ಅಡಚಣೆಯನ್ನುಂಟಾಗಿ ಅಪೂರ್ಣ ಮೂತ್ರ ವಿಸರ್ಜನೆಗೆ ಕಾರಣವಾಯಿತು. ಇದು ಸೋಂಕು ಮತ್ತು ಆಗಾಗ್ಗೆ ಜ್ವರಕ್ಕೆ ಕಾರಣವಾಯಿತು. ಔಷಧಿ ಸೇವಿಸಿದರೂ ಪರಿಣಾಮ ಬೀರಲಿಲ್ಲ. ಅವರು ೨ ತಿಂಗಳು ಪ್ರತಿದಿನ ೧ ಗಂಟೆ ಈ ರೋಗಕ್ಕಾಗಿ ಮೇಲೆ ಹೇಳಿದ ಜಪ ಮಾಡಿದ ನಂತರ ಅವರ ರೋಗವು ಬಹಳಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂತು. ಈಗಂತೂ ಜಪ ಮಾಡುವುದನ್ನು ನಿಲ್ಲಿಸಿದಾಗ ಅವರಿಗೆ ಮತ್ತೆ ತೊಂದರೆ ಶುರುವಾಗುತ್ತದೆ; ಹಾಗಾಗಿ ಅರ್ಧ ಗಂಟೆಯಾದರೂ ಜಪ ಮಾಡುತ್ತಲೇ ಇದ್ದಾರೆ.

೧ ಆ. ದೇಹದ ಯಾವುದಾದರೊಂದು ಭಾಗದಲ್ಲಿ ಉರಿತ : ಓರ್ವ ಸಾಧಕಿಗೆ (೭೯ ವರ್ಷ) ಮೊದಲು ಪೈಲ್ಸ್ ಶಸ್ತ್ರಚಿಕಿತ್ಸೆಯಾಗಿತ್ತು. ಅಕ್ಟೋಬರನಲ್ಲಿ ತಾಪಮಾನ ಹೆಚ್ಚಾದಂತೆ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಆ ತಿಂಗಳಲ್ಲಿ ಮಲವಿಸರ್ಜನೆಯ ನಂತರ ಸಾಧಕಿಗೆ ಗುದದ್ವಾರದಲ್ಲಿ ಉರಿ ಉಂಟಾಗುತ್ತದೆ. ಉರಿಯನ್ನು ನಿಲ್ಲಿಸಲು ನಾನು ಅವರಿಗೆ ಜಪ ಮಾಡಲು ಹೇಳಿದೆ. ಈಗ ಜಪಿಸಿದ ನಂತರ ಗುದದ್ವಾರದಲ್ಲಿ ಉರಿಯು ೧೫ ನಿಮಿಷದಲ್ಲಿ ನಿಲ್ಲುತ್ತದೆ. ಹಿಂದೆ ಉರಿಯನ್ನು ನಿಲ್ಲಿಸಲು ೪೫ ನಿಮಿಷದಿಂದ ಒಂದೂವರೆ ಗಂಟೆ ಬೇಕಾಗುತ್ತಿತ್ತು.

೧ ಇ. ಜೀರ್ಣಶಕ್ತಿ ಮತ್ತು ಕರುಳಿನ ಶಕ್ತಿ ಕ್ಷೀಣವಾಗುವುದು : ಓರ್ವ ಸಂತರಿಗೆ ಜೀರ್ಣಕ್ರಿಯೆಯು ಸರಿಯಾಗಿ ಆಗದೇ ಹೊಟ್ಟೆಯು ಭಾರವಾಗುತ್ತಿತ್ತು ಮತ್ತು ಮಲವಿಸರ್ಜನೆಯಾಗುತ್ತಿರಲಿಲ್ಲ. ಹಾಗಾಗಿ ಅವರು ಸಣ್ಣಗಾಗಿದ್ದರು. ಅವರು ನಿತ್ಯ ೧ ಗಂಟೆ ಜಪ ಮಾಡಲು ಆರಂಭಿಸಿದಾಗ ೧ ತಿಂಗಳಲ್ಲೇ ಲಾಭವಾಯಿತು. ಈಗ ಅವರಿಗೆ ಹೊಟ್ಟೆನೋವು ಇಲ್ಲ ಎಂದು ಜಪ ಮಾಡುವುದನ್ನು ನಿಲ್ಲಿಸಿದ್ದಾರೆ.

೧ ಈ. ಕುರು (ವ್ರಣ) ಆಗುವುದು : ಓರ್ವ ಸಾಧಕಿಗೆ ಎಡ ಕಂಕುಳಿಗೆ ಕುರು ಆಗಿತ್ತು. ಅವರು ನೋವಿನಿಂದ ತುಂಬಾ ಬಳಲುತ್ತಿದ್ದರು ಮತ್ತು ನೋವು ನಿವಾರಕವನ್ನು ತೆಗೆದುಕೊಂಡರೂ ನೋವು ನಿಲ್ಲಿಸಲು ಸಾಧ್ಯವಾಗಲಿಲ್ಲ. ಮೇಲೆ ನೀಡಿದ ಜಪ ಮಾಡಿದ ೨ ಗಂಟೆಗಳಲ್ಲಿ ಅವರ ಕಂಕುಳಲ್ಲಿನ ನೋವು ನಿಂತಿತು ಮತ್ತು ಅವರ ಆ ಕೈ ಹಗುರವಾಗಲು ಪ್ರಾರಂಭವಾಯಿತು. ಅದರ ನಂತರ ಕುರು ಒಡೆದು ಕೀವು ಹೊರ ಹಾಕುವಾಗಲೂ ವಿಶೇಷ ನೋವು ಆಗಲಿಲ್ಲ. ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು.

೧ ಉ. ಡೆಂಗ್ಯೂ (ಪ್ಲೇಟ್ಲೆಟ್ಸ್ ಕಡಿಮೆ ಆಗುವುದು) : ಡೆಂಗ್ಯೂದಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ಸಗಳು ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ಅವು ೧.೫ ಲಕ್ಷದಿಂದ ೪ ಲಕ್ಷದ ವರೆಗೆ ಇರುತ್ತವೆ. ಓರ್ವ ಸಾಧಕನಿಗೆ ಡೆಂಗ್ಯೂ ಬಂದಾಗ ಅವನ ಪ್ಲೇಟ್ಲೆಟ್ಸ್ ಸಂಖ್ಯೆ ೬೦,೦೦೦ ಆಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸಂಜೆ ೬ ಗಂಟೆಗೆ ಅವರು ಈ ಬಗ್ಗೆ ಮಾಹಿತಿ ನೀಡಿದರು. ನಾನು ಅವರಿಗೆ ಪ್ಲೇಟ್ಲೆಟ್ಸ್ ಹೆಚ್ಚಿಸಲು ಜಪ ಹೇಳಿದೆನು. ಅದನ್ನು ಹೆಚ್ಚು ಹೆಚ್ಚು ಮಾಡಲು ಹೇಳಿದೆನು. ಮರುದಿನ ಮಧ್ಯಾಹ್ನ ೧ ಗಂಟೆಗೆ ಮತ್ತೆ ಅವರ ರಕ್ತ ಪರೀಕ್ಷೆ ನಡೆಸಿದಾಗ ಅವರ ರಕ್ತದಲ್ಲಿ ಪ್ಲೇಟ್ಲೆಟ್ಸಗಳ ಸಂಖ್ಯೆ ೧ ಲಕ್ಷ ೨೦ ಸಾವಿರ ಆಗಿತ್ತು. ಜಪವು ಕೇವಲ ಅರ್ಧ ದಿನದಲ್ಲಿ ಪ್ಲೇಟ್ಲೆಟ್ಸಗಳಲ್ಲಿ ಅದ್ಭುತ ಹೆಚ್ಚಳವನ್ನುಂಟು ಮಾಡಿತು. ಓರ್ವ ಸಾಧಕಿ ಮತ್ತು ಅವಳ ಸಹೋದರನಿಗೆ ಇದೇ ರೀತಿಯ ಅನುಭವವಾಗಿತ್ತು.

೧ ಊ. ಮೆದುಳಿನಲ್ಲಿ ಗಂಟಿನಿಂದಾಗಿ ಗೊಂದಲ : ಓರ್ವ ಸಾಧಕಿಯ ತಂದೆ (೭೪ ವರ್ಷ) ಯವರಿಗೆ ಮೆದುಳಿನಲ್ಲಿ ಗಂಟು ಆಗಿದ್ದರಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ ನಾನು ರೋಗಕ್ಕಾಗಿ ಜಪ ಮಾಡಲು ಹೇಳಿದೆ. ಅವರಿಗಾಗಿ ಸಾಧಕಿಯ ತಾಯಿ ಪ್ರತಿದಿನ ೨ ಗಂಟೆ ಜಪ ಮಾಡುತ್ತಿದ್ದರು. ಈ ಜಪದಿಂದ ತುಂಬಾ ಲಾಭವಾಯಿತು. ಅವರ ತಂದೆ ಐದನೇ ದಿನದಲ್ಲಿ ಗುಣಮುಖರಾಗತೊಡಗಿದರು. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ನಂತರ ಮೆದುಳನ್ನು ‘ಸ್ಕ್ಯಾನಿಂಗ್’ ಮಾಡಿದ ನಂತರ ಮೆದುಳಿನ ಗಂಟು ಶೇ. ೩೦-೪೦ ರಷ್ಟು ಕರಗಿರುವುದು ಗಮನಕ್ಕೆ ಬಂತು. ಮತ್ತೆ ೮ ದಿನಗಳ ನಂತರ ಗಂಟು ಶೇ. ೬೦ ರಷ್ಟು ಕರಗಿತ್ತು. ಇನ್ನು ೧ ತಿಂಗಳ ನಂತರ ಗಂಟು ಕೇವಲ ಶೇ. ೧೦ ರಷ್ಟಿತ್ತು. ಆ ವ್ಯಕ್ತಿ ಈ ವಯಸ್ಸಿನಲ್ಲಿಯೂ ತುಂಬಾ ಚೇತರಿಸಿಕೊಂಡರು. ಅಲ್ಲಿನ ವೈದ್ಯರಿಗೂ ಆಶ್ಚರ್ಯವಾಯಿತು.

ಜಪಗಳ ಮಹತ್ವ

ಆಪತ್ಕಾಲದಲ್ಲಿ ಔಷಧಗಳು ಮತ್ತು ವೈದ್ಯರ ಕೊರತೆ ಉಂಟಾದಾಗ ಈ ಜಪಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.

ಕೃತಜ್ಞತೆ

ಪರಾತ್ಪರ ಗುರು ಡಾಕ್ಟರರ (ಪರಾತ್ಪರ ಗುರು ಡಾ. ಜಯಂತ ಆಠವಲೆ) ಕೃಪೆಯಿಂದ ನನಗೆ ಈ ಜಪಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು ಮತ್ತು ಅ ಜಪದಿಂದಾಗುವ ಉತ್ತಮ ಪರಿಣಾಮವು ನನ್ನ ಗಮನಕ್ಕೆ ಬಂತು. ಇದಕ್ಕಾಗಿ ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೧೦.೨೦೨೧)

Leave a Comment