ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ ಆ ವ್ಯಕ್ತಿಯ ತೊಂದರೆ, ಅವನ ಆಧ್ಯಾತ್ಮಿಕ ಮಟ್ಟ, ಅವರ ಮೇಲೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ಆಕ್ರಮಣ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು !
ಸಾಧಕರು ಮತ್ತು ಸಂತರಿಗಾಗುವ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಿಗಾಗಿ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಕಂಡುಹಿಡಿದು ಕೊಡುವ ಸಮಯದಲ್ಲಿ ಸಾಧಕರ ಅಥವಾ ಸಂತರ ಆಧ್ಯಾತ್ಮಿಕ ಮಟ್ಟ, ಅವರು ಮಾಡುತ್ತಿರುವ ಸಮಷ್ಟಿ ಕಾರ್ಯ, ಅವರಿಗಾಗುವ ಆಧ್ಯಾತ್ಮಿಕ ತೊಂದರೆಗಳು, ಅವರ ಮೇಲೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ಹಲ್ಲೆ ಇತ್ಯಾದಿ ಘಟಕಗಳ ವಿಚಾರವನ್ನು ಮಾಡಿ ಅವರಿಗೆ ನಾಮಜಪ, ಬೆರಳುಗಳ ಮುದ್ರೆ ಮತ್ತು ಆ ಮುದ್ರೆಯಿಂದ ಮಾಡಬೇಕಾದ ನ್ಯಾಸವನ್ನು ಕಂಡುಹಿಡಿದು ಕೊಡಬೇಕು.
೧. ಆಧ್ಯಾತ್ಮಿಕ ಮಟ್ಟ
ತೊಂದರೆಗೊಳಗಾದ ಸಾಧಕ ಅಥವಾ ಸಂತರ ಆಧ್ಯಾತ್ಮಿಕ ಮಟ್ಟ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಅವರಿಗೆ ಸದ್ಯದ ಆಪತ್ಕಾಲಕ್ಕನುಸಾರ ಆಗುವ ತೊಂದರೆಗಳು ಹೆಚ್ಚಿರುತ್ತವೆ. ಆದುದರಿಂದ ಅವರ ತೊಂದರೆಗಳು ದೂರವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಅವರಿಗೆ ತೊಂದರೆಗಳು ದೂರವಾಗುವವರೆಗೆ ಪ್ರತಿದಿನ ನಾಮಜಪಾದಿ ಉಪಾಯಗಳನ್ನು ಹೇಳುವುದು ಆವಶ್ಯಕವಾಗಿರುತ್ತದೆ. ಇಂತಹ ಸಮಯದಲ್ಲಿ ಆ ಸಾಧಕನ ಅಥವಾ ಸಂತರ ತೊಂದರೆಗಳ ಬಗ್ಗೆ ಪ್ರತಿದಿನ ವಿಚಾರಿಸಿ ವರದಿಯನ್ನು ಪಡೆಯುವುದು ಆವಶ್ಯಕವಾಗಿರುತ್ತದೆ.
೨. ಮಾಡುತ್ತಿರುವ ಸಮಷ್ಟಿ ಕಾರ್ಯ
ತೊಂದರೆಯಾಗುತ್ತಿರುವ ಸಾಧಕರು ಅಥವಾ ಸಂತರು ಈಶ್ವರೀ ರಾಜ್ಯದ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುತ್ತಿದ್ದರೆ, ಅವರ ಮೇಲಾಗುವ ಕೆಟ್ಟ ಶಕ್ತಿಗಳ ಹಲ್ಲೆಗಳೂ ಹೆಚ್ಚು ತೀವ್ರವಾಗಿರುತ್ತವೆ. ಇಂತಹ ಸಮಯದಲ್ಲಿ ಅವರಿಗೆ ಕೇವಲ ನಾಮಜಪದ ಉಪಾಯವನ್ನು ಹೇಳದೇ ‘ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳು ಬೇಗನೆ ದೂರವಾಗಲು ಅವರ ದೃಷ್ಟಿಯನ್ನು ತೆಗೆಯಬೇಕೇ ? ತೆಗೆಯುವುದಿದ್ದರೆ ಎಷ್ಟು ದಿನ ತೆಗೆಯಬೇಕು ?’, ಇದರ ಬಗ್ಗೆಯೂ ವಿಚಾರ ಮಾಡಬೇಕು. ದೃಷ್ಟಿಯನ್ನು ತೆಗೆದ ನಂತರ ಅವರಿಗೆ ಮತ್ತೊಮ್ಮೆ ನಾಮಜಪಾದಿ ಉಪಾಯ ಕಂಡು ಹಿಡಿದು ಹೇಳಬೇಕು.
೩. ಅವರಿಗಿರುವ ಆಧ್ಯಾತ್ಮಿಕ ತೊಂದರೆ ಮತ್ತು ಅದರ ತೀವ್ರತೆ
೩ ಅ. ಕುಲದೇವತೆಯ ಅವಕೃಪೆ : ಯಾವುದಾದರೊಂದು ಕುಟುಂಬದ ಮೇಲೆ ಅವರ ಕುಲದೇವತೆಯ ಅವಕೃಪೆಯಿದ್ದರೆ, ಆ ಕುಟುಂಬದಲ್ಲಿನ ವ್ಯಕ್ತಿಗಳಿಗೆ ಸತತವಾಗಿ ಶಾರೀರಿಕ ತೊಂದರೆಗಳಾಗುವುದು, ಕುಟುಂಬದಲ್ಲಿ ವಿವಾದಗಳಾಗುವುದು, ಆರ್ಥಿಕ ಅಡಚಣೆಗಳು ಬರುವುದು ಇಂತಹ ತೊಂದರೆಗಳಾಗುತ್ತವೆ. ಇಂತಹವರಿಗೆ ಕುಲದೇವತೆಯ ದರ್ಶನವನ್ನು ಪಡೆದು ಅವರಿಗೆ ಮನೆಯಲ್ಲಿನ ಎಲ್ಲರ ಸಾಧನೆಯಲ್ಲಿನ ಅಡಚಣೆಗಳು ದೂರವಾಗಲು ಪ್ರಾರ್ಥನೆ ಮಾಡುವುದು, ಕುಲದೇವತೆಯ ದುರ್ಲಕ್ಷವಾಗುತ್ತಿದ್ದಲ್ಲಿ ಅವರಲ್ಲಿ ಕ್ಷಮೆಯಾಚನೆ ಮಾಡುವುದು, ದೇವರಕೋಣೆಯಲ್ಲಿ ಕಲಶದ ಮೇಲೆ ತೆಂಗಿನಕಾಯಿಯನ್ನು ನೇರವಾಗಿಟ್ಟು ಕುಲದೇವತೆಗೆ ಪ್ರತಿದಿನ ಪ್ರಾರ್ಥನೆ ಮಾಡುವುದು, ಮುಂತಾದ ಉಪಾಯಗಳನ್ನು ಹೇಳಬೇಕು.
೩. ಆ. ಪೂರ್ವಜರ ತೊಂದರೆ : ಕುಟುಂಬದವರಿಗೆ ಪೂರ್ವಜರ ತೊಂದರೆಗಳಿದ್ದರೆ, ಇದಕ್ಕಿಂತಲೂ ಹೆಚ್ಚು ತೀವ್ರ ತೊಂದರೆಗಳಾಗುತ್ತವೆ, ಉದಾ. ಮನೆಯಲ್ಲಿನ ಯಾರಿಗಾದರೂ ಸರಾಯಿ ಕುಡಿಯುವ ವ್ಯಸನ ಇರುವುದು, ಚರ್ಮರೋಗಗಳಿರುವುದು, ಮನೆಯಲ್ಲಿ ಹಣ ಉಳಿಯದಿರುವುದು, ಮನೆಯಲ್ಲಿ ಯಾವಾಗಲೂ ಅಶಾಂತಿ ಇರುವುದು ಇತ್ಯಾದಿ. ಇಂತಹವರಿಗೆ ಮನೆಯಲ್ಲಿ ದಿನವಿಡಿ ದತ್ತನ ನಾಮಜಪದ ಆಡಿಯೋವನ್ನು ಮಂದ ಧ್ವನಿಯಲ್ಲಿ ಹಾಕಿಡುವುದು, ಹುಡುಕಿ ಕೊಟ್ಟಿರುವ ನಾಜಪದೊಂದಿಗೆ ದತ್ತನ ನಾಮಜಪವನ್ನೂ ಸ್ವಲ್ಪ ಸಮಯ ನಿಯಮಿತವಾಗಿ ಮಾಡುವುದು, ಶ್ರಾದ್ಧ ವಿಧಿಯನ್ನು ಮಾಡುವುದು, ಇಂತಹ ಉಪಾಯಗಳನ್ನು ಹೇಳಬೇಕು.
(ದತ್ತಗುರುಗಳ ನಾಮಜಪವನ್ನು ಕೇಳಲು ಸನಾತನ ಚೈತನ್ಯವಾಣಿ ಆ್ಯಪ್ ಡೌನಲೋಡ್ ಮಾಡಿಕೊಳ್ಳಬಹುದು – ಕ್ಲಿಕ್ ಮಾಡಿ)
೩ ಇ. ಕೆಟ್ಟ ಶಕ್ತಿಗಳ ತೊಂದರೆ : ಯಾವುದೇ ಕಾರಣವಿಲ್ಲದೇ ಕೋಪಗೊಳ್ಳಬೇಕೆಂದೆನಿಸುವುದು ಮತ್ತು ಕೋಪಿಸಿಕೊಳ್ಳುವುದು (ಮನೆಯಲ್ಲಿನ ವಸ್ತುಗಳನ್ನು ಎಸೆಯುವುದು, ಮುರಿಯುವುದು, ಒಡೆಯುವುದು ಇತ್ಯಾದಿ), ಇತರರಿಗೆ ಕಾರಣವಿಲ್ಲದೇ ಬೈಯ್ಯುವುದು, ಕೂಗಬೇಕೆಂದೆನಿಸುವುದು ಅಥವಾ ಕೂಗಾಡುವುದು, ಕೆಟ್ಟ ಶಕ್ತಿಗಳ ಪ್ರಕಟೀಕರಣವಾಗುವುದು, ಇಂತಹ ತೊಂದರೆಗಳು ಕೆಟ್ಟ ಶಕ್ತಿಗಳ ತೊಂದರೆಗಳಿಂದ ಆಗುತ್ತವೆ. ಇಂತಹವರಿಗೆ ನಾಮಜಪವನ್ನು ಕಂಡುಹಿಡಿದು ಕೊಟ್ಟು ಅದನ್ನು ನಿಶ್ಚಿತ ಕಾಲಾವಧಿಯವರೆಗೆ ಮಾಡಲು ಹೇಳಬೇಕು ಮತ್ತು ಅನಂತರ ಪುನಃ ನಾಮಜಪವನ್ನು ಕಂಡುಹಿಡಿದು ಕೊಡಬೇಕು. ಕೆಟ್ಟ ಶಕ್ತಿಗಳ ತೊಂದರೆಯು ಮಂದ, ಮಧ್ಯಮ ಅಥವಾ ತೀವ್ರ ಸ್ವರೂಪದ್ದಾಗಿದೆಯೇ ? ಎಂಬುದನ್ನು ಕಂಡುಹಿಡಿದು ಅದಕ್ಕನುಸಾರ ನೀಡಿದ ನಾಮಜಪವನ್ನು ಮಾಡುವ ಕಾಲಾವಧಿಯನ್ನು ನಿಶ್ಚಯಿಸಬಹುದು. ತೊಂದರೆಯು ತೀವ್ರ ಸ್ವರೂಪದ್ದಾಗಿದ್ದರೆ ಅದು ದೂರವಾಗಲು ಹೆಚ್ಚು ಸಮಯ ಬೇಕಾಗುವುದರಿಂದ ಒಂದೇ ನಾಮಜಪವನ್ನು ಹೆಚ್ಚು ಕಾಲಾವಧಿಯ ವರೆಗೆ ಮಾಡಲು ಹೇಳಬಹುದು.
೪. ಕೆಟ್ಟ ಶಕ್ತಿಗಳು ಮಾಡುತ್ತಿರುವ ಹಲ್ಲೆಗಳು
ಒಳ್ಳೆಯ ಆಧ್ಯಾತ್ಮಿಕ ಮಟ್ಟವಿರುವ ಮತ್ತು ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ವಹಿಸಿ ಸೇವೆಯನ್ನು ಮಾಡುವ ಸಾಧಕರ ಅಥವಾ ಸಂತರ ಮೇಲೆ ಆಕ್ರಮಣ ಮಾಡಲು ಕೆಟ್ಟ ಶಕ್ತಿಗಳಿಗೆ ಹೆಚ್ಚು ಶಕ್ತಿ ಬೇಕಾಗುತ್ತದೆ. ಇಂತಹ ಕೆಟ್ಟ ಶಕ್ತಿಗಳು ಹೆಚ್ಚಾಗಿ ೫ ನೇ ಅಥವಾ ೬ ನೇ ಪಾತಾಳದ್ದಾಗಿರುತ್ತವೆ. ಆದುದರಿಂದ ಅವುಗಳ ಆಕ್ರಮಣಗಳು ಹೆಚ್ಚು ನಿರ್ಗುಣ ಸ್ವರೂಪದ್ದಾಗಿರುವುದರಿಂದ ಅವು ನಮಗೆ ಸಹಜವಾಗಿ ತಿಳಿಯುವುದಿಲ್ಲ. ಇದರ ಕೆಲವು ಉದಾಹರಣೆಗಳೆಂದರೆ ತೊಂದರೆಯ ಲಕ್ಷಣಗಳು ಒಂದು ಚಕ್ರದ ಮೇಲೆ ಅರಿವಾಗುತ್ತವೆ; ಆದರೆ ಕೆಟ್ಟ ಶಕ್ತಿಗಳ ಸ್ಥಾನವು ಬೇರೆಯೇ ಚಕ್ರದ ಮೇಲೆ ಇರುತ್ತದೆ ಅಥವಾ ಕೆಟ್ಟ ಶಕ್ತಿಗಳು ಚಕ್ರದ ಮೇಲೆ ತಂದ ಆವರಣವನ್ನು ಎಷ್ಟು ದೂರ ಮಾಡಿದರೂ (ತೆಗೆದರೂ) ಅದು ಪುನಃ ಪುನಃ ಬರುತ್ತದೆ (ಆಗ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯ ಪ್ರವಾಹವನ್ನು ಮೇಲಿನಿಂದ ಬಿಟ್ಟಿರುತ್ತವೆ) ಅಥವಾ ಕೆಟ್ಟ ಶಕ್ತಿಗಳು ನಮ್ಮೆದುರು ಕಪ್ಪು ಶಕ್ತಿಯ ಪರದೆಯನ್ನು ನಿರ್ಮಿಸಿದುದರಿಂದ ನಮಗೆ ಶರೀರದ ಮೇಲಿನ ಆವರಣದ ಅರಿವಾಗುವುದಿಲ್ಲ; ಆದರೆ ತೊಂದರೆಯಂತೂ ಆಗುತ್ತಿರುತ್ತದೆ, ಇತ್ಯಾದಿ. ಆದುದರಿಂದ ಕೆಟ್ಟ ಶಕ್ತಿಗಳ ಇಂತಹ ಆಕ್ರಮಣಗಳನ್ನು ನಿಖರವಾಗಿ ಗುರುತಿಸುವುದು ಆವಶ್ಯಕವಾಗಿರುತ್ತದೆ. ಕೆಟ್ಟ ಶಕ್ತಿಗಳು ಚಕ್ರಗಳ ಮೇಲಿನ ಆಕ್ರಮಣದ ಸ್ಥಾನಗಳನ್ನೂ ಬದಲಾಯಿಸುತ್ತವೆ. ಆದುದರಿಂದ ನಾಮಜಪ, ಮುದ್ರೆ ಮತ್ತು ನ್ಯಾಸಸ್ಥಾನವನ್ನು ಪುನಃ ಪುನಃ ಕಂಡುಹಿಡಿಯಬೇಕಾಗುತ್ತದೆ.
ಈ ರೀತಿ ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹೇಳುವಾಗ ನಮ್ಮ ಸೂಕ್ಷ್ಮ ಕ್ಷಮತೆಯ ಪರೀಕ್ಷೆಯೂ ಆಗುತ್ತದೆ, ಹಾಗೆಯೇ ಉಪಾಯವನ್ನು ಕಂಡು ಹಿಡಿಯುವಾಗ ಪ್ರತಿ ಸಲ ಹೊಸ ಹೊಸ ವಿಷಯಗಳು ಕಲಿಯಲು ಸಿಗುತ್ತವೆ. ಕೆಟ್ಟ ಶಕ್ತಿಗಳಿಂದಲೂ ನಮಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಅವು ಮಿತವ್ಯಯಿಯಾಗಿರುತ್ತವೆ, ಅವು ತಮ್ಮ ಶಕ್ತಿಯನ್ನು ಅನಾವಶ್ಯಕ ಖರ್ಚು ಮಾಡುವುದಿಲ್ಲ. ಯಾವ ಸಾಧಕರ ಅಥವಾ ಸಂತರ ಯಾವ ಚಕ್ರಕ್ಕೆ ಸಂಬಂಧಿಸಿದ ಸೇವೆ ಇರುತ್ತದೆಯೋ, ಆ ಚಕ್ರದ ಮೇಲೆಯೇ ಅವು ಆಕ್ರಮಣ ಮಾಡುತ್ತವೆ, ಉದಾ. ಸಾಧಕ-ನ್ಯಾಯವಾದಿಗೆ (ವಕೀಲನಿಗೆ) ಹೆಚ್ಚು ಮಾತುಕತೆ ಸೇವೆ ಇರುವುದರಿಂದ ಕೆಟ್ಟ ಶಕ್ತಿಗಳು ಅವನ ವಿಶುದ್ಧ ಚಕ್ರದ ಮೇಲೆ ಹಲ್ಲೆ ಮಾಡುತ್ತವೆ. ಜ್ಞಾನವನ್ನು ಪಡೆಯುವ ಸಾಧಕರ ಆಜ್ಞಾಚಕ್ರದ ಮೇಲೆಯೇ ಕೆಟ್ಟ ಶಕ್ತಿಗಳು ಹಲ್ಲೆ ಮಾಡುತ್ತವೆ.
ಉಪಾಯಗಳನ್ನು ಕಂಡು ಹಿಡಿಯುವಾಗ ಈಶ್ವರನು ಸಹ ಹೊಸ ಹೊಸ ಪದ್ಧತಿಗಳಿಂದ ಉಪಾಯವನ್ನು ಮಾಡಲು ಕಲಿಸುತ್ತಾನೆ. ಬೀಜಮಂತ್ರಗಳ ಉಪಾಯ, ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದರ ಮೂಲಕ ಉಪಾಯ, ಚೈತನ್ಯದ ಪ್ರವಾಹವನ್ನು ಎಲ್ಲ ಚಕ್ರಗಳ ಮೇಲೆ ಬಿಡುವುದು, ಸೂಕ್ಷ್ಮದಿಂದ ದೃಷ್ಟಿ ನಿವಾಳಿಸುವುದು ಇಂತಹ ಉಪಾಯಗಳಿಂದ ಕೂಡಲೇ ಪರಿಣಾಮವಾಗುತ್ತದೆ. ಆದುದರಿಂದ ‘ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ’ ಮತ್ತು ‘ಜಿಜ್ಞಾಸೆ ಇದ್ದಲ್ಲಿ ಈಶ್ವರನು ಬಹಳಷ್ಟು ಕಲಿಸುತ್ತಾನೆ’ ಎಂಬ ಅಂಶಗಳು ಮನಸ್ಸಿನ ಮೇಲೆ ಮೂಡುತ್ತವೆ. ಕೊನೆಗೆ ಇವೆಲ್ಲವನ್ನು ಗುರುಕೃಪೆಯಿಂದಲೇ ಕಲಿಯಬಹುದು. ಗುರುಗಳಿಗೆ ನಮ್ಮ ಕಲಿಯುವ ವೃತ್ತಿ ಇಷ್ಟವಾಗುತ್ತದೆ ಮತ್ತು ಅವರು ನಮ್ಮ ಮೇಲೆ ಬಹಳಷ್ಟು ಕೃಪೆ ಮಾಡುತ್ತಾರೆ !
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೧.೨೦೨೧)