ಸಾಧಕರನ್ನು ತಮ್ಮಲ್ಲಿ ಸಿಲುಕಲು ಬಿಡದೇ ತತ್ತ್ವನಿಷ್ಠರನ್ನಾಗಿಸುವ ವಿಶ್ವವ್ಯಾಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶಿಷ್ಯನೆಂದು ಸಾಧಕರು ಮಾಡಬೇಕಾದ ಕರ್ತವ್ಯಗಳು !

೧. ಸ್ವತಃ ಅವತಾರಿ ಗುರುಗಳಾಗಿದ್ದರೂ ಸನಾತನದ ಸಾಧಕರನ್ನು ತತ್ತ್ವನಿಷ್ಠರಾಗಿರಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಪರಾತ್ಪರ ಗುರುದೇವರು ಮೊದಲಿನಿಂದಲೇ ಸಾಧಕರಿಗೆ, ‘ಸಂತರ ದೇಹದಲ್ಲಿ ಸಿಲುಕಬೇಡಿ; ಏಕೆಂದರೆ ಸಂತರು ದೇಹಧಾರಿಯಾಗಿರುವುದರಿಂದ ಅವರಿಗೆ ಮೃತ್ಯು ಇದ್ದೇ ಇರುತ್ತದೆ. ಸಂತರ ತತ್ತ್ವವೇ ಮಹತ್ವದ್ದಾಗಿದೆ’, ಎಂದು ಕಲಿಸಿದ್ದಾರೆ. ತತ್ತ್ವವು ಅವಿನಾಶಿಯಾಗಿರುವುದರಿಂದ ಅದು ನಮಗೆ ಚಿರಕಾಲ ಮಾರ್ಗದರ್ಶನವನ್ನು ಮಾಡಬಹುದು; ಆದರೆ ಸಂತರ ದೇಹವು ಹಾಗಿರುವುದಿಲ್ಲ. ಸಂತರು ಜೀವಂತವಾಗಿರುವ ತನಕ ಮಾತ್ರ ತಮ್ಮ ವಾಣಿಯ ಮೂಲಕ ಸಾಧಕರಿಗೆ ಮಾರ್ಗದರ್ಶನವನ್ನು ಮಾಡುತ್ತಿರುತ್ತಾರೆ. ಹೆಚ್ಚಿನ ಸಂಪ್ರದಾಯಗಳಲ್ಲಿ ಸಾಧಕರು ಸಂತರ ದೇಹದಲ್ಲಿಯೇ ಸಿಲುಕಿಕೊಳ್ಳುತ್ತಾರೆ. ನಂತರ ಸಂತರು ದೇಹತ್ಯಾಗ ಮಾಡಿದಾಗ, ಅವರಿಗೆ ಬಹಳ ದುಃಖವಾಗುತ್ತದೆ. ಕೆಲವರು, ‘ಈಗ ಮಠದಲ್ಲಿ ಸಂತರಿಲ್ಲ, ಹಾಗಾದರೆ ಅಲ್ಲಿಗೆ ಹೋಗಿ ಉಪಯೋಗವಿಲ್ಲ’, ಎಂದು ಹೇಳಿ ಅವರು ಸಾಧನೆ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಇಂತಹ ಸ್ಥಿತಿಯು ನಮ್ಮದಾಗಬಾರದೆಂದು ಗುರುದೇವರು ಎಲ್ಲ ಸಾಧಕರಿಗೆ ಮೊದಲಿನಿಂದಲೇ ತತ್ತ್ವನಿಷ್ಠರಾಗಿರಲು ತರಬೇತಿಯನ್ನು ನೀಡಿದ್ದಾರೆ. ಆದುದರಿಂದಲೇ ಸನಾತನದ ಅನೇಕ ಸಾಧಕರು ಗುರುದೇವರನ್ನು ನೋಡಿರದಿದ್ದರೂ ಅವರು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುತ್ತಿದ್ದಾರೆ; ಏಕೆಂದರೆ ಗುರುದೇವರು ಹೇಳಿದ ‘ಗುರುಕೃಪಾಯೋಗಾನುಸಾರ ಸಾಧನೆ’ಯ ತತ್ತ್ವಗಳ ಮೇಲೆ ಅವರಿಗೆ ಸಂಪೂರ್ಣ ಶ್ರದ್ಧೆ ಇದೆ.

೨. ಸಂತರ ದೇಹಕ್ಕಿಂತ ಅವರ ಬೋಧನೆಯೇ (ಶಿಕ್ಷಣ) ಶ್ರೇಷ್ಠವಾಗಿದೆ ಎಂದು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

ಗುರುದೇವರು ಸಾಧಕರಿಗೆ ಯಾವಾಗಲೂ, ‘ಸಂತರ ದೇಹಕ್ಕಿಂತ ಅವರ ಬೋಧನೆಯೇ ಶ್ರೇಷ್ಠವಾಗಿದೆ. ಅದರಲ್ಲಿಯೇ ಈಶ್ವರ ಪ್ರಾಪ್ತಿಯ ತಾತ್ಪರ್ಯ(ಸಾರ)ವಿದೆ’. ‘ಅರೇ, ನನಗೇಕೆ ನಮಸ್ಕಾರ ಮಾಡುತ್ತೀರಿ, ದೇವರಿಗೆ ನಮಸ್ಕರಿಸಿ, ಅವನೊಬ್ಬನೇ ಶಾಶ್ವತನಾಗಿದ್ದಾನೆ. ನನ್ನ ದೇಹವೇನು, ಇಂದಿದೆ, ನಾಳೆ ಇಲ್ಲ’, ಎಂದು ಹೇಳುತ್ತಾರೆ. ಅವರು ಯಾವತ್ತೂ ಯಾರಿಂದಲೂ ನಮಸ್ಕಾರವನ್ನು ಮಾಡಿಸಿಕೊಂಡಿಲ್ಲ. ಇದರಿಂದಲೇ ಅವರು ಸಾಧಕರಿಗೆ ಸಹಜವಾಗಿಯೇ ವ್ಯಕ್ತಿ ನಿಷ್ಠೆಯಿಂದ ತತ್ತ್ವನಿಷ್ಠೆಯತ್ತ ಸಾಗುವ ಮಹಾಮಂತ್ರವನ್ನು ನೀಡಿದರು.

೩. ತಮ್ಮ ಛಾಯಾಚಿತ್ರದ ಪೂಜೆಗಿಂತ ಶಾಶ್ವತವಾದ ದೇವತೆಗಳ ಚಿತ್ರಗಳ ಪೂಜೆಯನ್ನು ಮಾಡಲು ಹೇಳುವ ಗುರುದೇವರು !

ಒಂದು ಬಾರಿ ಓರ್ವ ಸಂತರು ಗುರುದೇವರಿಗೆ, ‘ಸಾಧಕರ ಮನೆಮನೆಗಳಲ್ಲಿ ನಿಮ್ಮ ಛಾಯಾಚಿತ್ರವು ಪೂಜೆಯಲ್ಲಿರಬೇಕು’, ಎಂದು ಹೇಳಿದರು. ಆಗ ಗುರುದೇವರು, ‘ನನ್ನದೇನು, ನನ್ನ ದೇಹತ್ಯಾಗದ ನಂತರ ಹೆಚ್ಚೆಂದರೆ ೧೦೦ ವರ್ಷಗಳ ಕಾಲ ಜನರ ಗಮನದಲ್ಲಿರುವೆನು; ಆದರೆ ನಮ್ಮ ದೇವತೆಗಳು ಮಾತ್ರ ಶಾಶ್ವತವಾಗಿದ್ದಾರೆ. ಅವರ ಪೂಜೆಯನ್ನು ಮಾಡಿದರೆ ಸಾಧಕರಿಗೆ ಹೆಚ್ಚು ಲಾಭವಾಗುತ್ತದೆ’, ಎಂದು ಹೇಳಿದರು. ನಿಜವಾದ ಸಂತರು ಮಾತ್ರ ಹೀಗೆ ಹೇಳಬಲ್ಲರು.

೪. ಪ್ರಸಿದ್ಧಿಯನ್ನು ಗಳಿಸುವ ಕೇಂದ್ರಗಳಾಗಿರುವ ಮಠಗಳು ಮತ್ತು ಆಶ್ರಮಗಳು ಈಶ್ವರಪ್ರಾಪ್ತಿಯ ಕುರಿತಾದ ಯಾವ ಶಿಕ್ಷಣವನ್ನು ನೀಡಬಲ್ಲವು ?

ಇಂದು ಸಮಾಜದಲ್ಲಿ ಡಂಭಾಚಾರವು ಬಹಳ ಹೆಚ್ಚಾಗಿದೆ. ಸದ್ಯ ತಮ್ಮನ್ನು ತಾವು ಸಂತರೆಂದು ಹೇಳಿಕೊಳ್ಳುವವರ ಸಂಖ್ಯೆಯು ಎಲ್ಲೆಡೆ ಹೆಚ್ಚಾಗಿದೆ. ಎಷ್ಟೋ ಮಠಗಳು ಮತ್ತು ಆಶ್ರಮಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿದಿಲ್ಲ, ಅವು ಕೇವಲ ಪ್ರಸಿದ್ಧಿಯನ್ನು ಗಳಿಸುವ ಕೇಂದ್ರಗಳಾಗಿವೆ. ಅಲ್ಲಿ ಅಧ್ಯಾತ್ಮವು ಅಧ್ಯಾತವಾಗಿರದೆ, ಅದು ಸಹ ಒಂದು ವ್ಯವಸಾಯವೇ ಆಗಿದೆ. ಇಂತಹ ಮಠಗಳು ಮತ್ತು ಸಂಪ್ರದಾಯಗಳು ಜನರಿಗೆ ಈಶ್ವರಪ್ರಾಪ್ತಿಯ ಬಗ್ಗೆ ಯಾವ ಶಿಕ್ಷಣವನ್ನು ನೀಡಬಲ್ಲವು ?

೫. ಸಮಾಜದಿಂದ ಸಾಧನೆಯನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುವುದು, ಇದುವೇ ‘ಶಿಷ್ಯ’ನೆಂದು ಸನಾತನದ ಸಾಧಕರ ಕರ್ತವ್ಯವಾಗಿದೆ !

ಸಂಪ್ರದಾಯದಲ್ಲಿ ಹೋಗುವುದು ಮತ್ತು ಅಲ್ಲಿಗೆ ಹೋಗಿ ಏನಾದರೂ ಸಾಧನೆಯನ್ನು ಮಾಡುವುದು, ಇದು ಸಹ ಜನರ ದೃಷ್ಟಿಯಿಂದ ಒಂದು ಆಡಂಬರವೇ ಆಗಿಬಿಟ್ಟಿದೆ. ಆದುದರಿಂದ ಅನೇಕ ಮಠಗಳು ಮತ್ತು ಆಶ್ರಮಗಳಲ್ಲಿನ ಚೈತನ್ಯವು ನಾಶವಾಗಿದೆ. ಇದೆಲ್ಲವನ್ನು ಬದಲಾಯಿಸಬೇಕಾಗಿದೆ. ಅದಕ್ಕಾಗಿ ಪರಾತ್ಪರ ಗುರುದೇವರು ಹೇಳಿದಂತೆ ‘ಎಲ್ಲರಿಗೂ ನಿಜವಾದ ಈಶ್ವರಪ್ರಾಪ್ತಿಯು ಯಾವುದರಿಂದ ಆಗುವುದು ?’, ಎಂಬ ಬಗ್ಗೆ ಶಾಸ್ತ್ರಬದ್ಧ ಶಿಕ್ಷಣವನ್ನು ನೀಡಿ ಸಮಾಜದಿಂದ ಆ ರೀತಿ ಸಾಧನೆಯನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುವುದು, ಇದನ್ನು ಮಾಡುವುದೇ ‘ಶಿಷ್ಯ’ ನೆಂದು ಸನಾತನದ ಸಾಧಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೬.೩.೨೦೨೦)

2 thoughts on “ಸಾಧಕರನ್ನು ತಮ್ಮಲ್ಲಿ ಸಿಲುಕಲು ಬಿಡದೇ ತತ್ತ್ವನಿಷ್ಠರನ್ನಾಗಿಸುವ ವಿಶ್ವವ್ಯಾಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶಿಷ್ಯನೆಂದು ಸಾಧಕರು ಮಾಡಬೇಕಾದ ಕರ್ತವ್ಯಗಳು !”

  1. I have a doubt. While describing Lord Ganesh we say, Wakra tundaa is it correct. It must be vaktra tundaa
    Vaktra means, face, aayana, trunk in case of elephant.

    Reply
    • ನಮಸ್ಕಾರ
      ಶ್ಲೋಕಗಳಲ್ಲಿ ವಕ್ರತುಂಡ ಎಂದಿದೆ. ಅದರ ಆಧ್ಯಾತ್ಮಿಕ ಅರ್ಥ ಮುಂದಿನಂತಿದೆ – ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ ದೇವತೆ ಎಂದು.

      Reply

Leave a Comment