೧. ಸಾಧಕರು ವಿಷ್ಣುವಿಗೆ ಪ್ರಿಯಳಾಗಿರುವ ತುಳಸಿಗೆ ಮಾಡಬೇಕಾದ ಪ್ರಾರ್ಥನೆ ಇತ್ಯಾದಿ ಉಪಾಯ !
೧ ಅ. ಸಾಧಕರು ಸೇವೆಗಾಗಿ ಮನೆಯಿಂದ ಹೊರಗೆ ಹೋಗುವಾಗ ತುಳಸಿಗೆ ಪ್ರಾರ್ಥನೆ ಮಾಡಬೇಕು ಮತ್ತು ಸೇವೆಯನ್ನು ಮುಗಿಸಿ ಮನೆಗೆ ಬಂದ ಬಳಿಕ ತುಳಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ! : ಪ್ರತಿಯೊಬ್ಬ ಸಾಧಕರ ಮನೆಯ ಮುಂದೆ ತುಳಸಿ ಇರಬೇಕು. ಮನೆಯಿಂದ ಸೇವೆಗಾಗಿ ಹೊರಗೆ ಹೋಗುವಾಗ ಸಾಧಕರು ತುಳಸಿಯನ್ನುದ್ದೇಶಿಸಿ ಮುಂದಿನಂತೆ ಪ್ರಾರ್ಥಿಸಬೇಕು – ‘ಹೇ ವಿಷ್ಣುಪ್ರಿಯೆ, ನಾವು ಗುರುಸೇವೆಗಾಗಿ ಹೊರಗೆ ಹೋಗುತ್ತಿದ್ದೇವೆ. ನೀನು ನಮ್ಮ ಮನೆಯ ರಕ್ಷಣೆಯನ್ನು ಮಾಡು, ನಮ್ಮ ಧನಧಾನ್ಯಗಳ ರಕ್ಷಣೆಯನ್ನು ಮಾಡು’. ಎಲ್ಲ ಸೇವೆಯನ್ನು ಮುಗಿಸಿ ಮನೆಗೆ ಮರಳಿ ಬಂದ ಬಳಿಕ ಮನೆಯ ರಕ್ಷಣೆಯನ್ನು ಮಾಡಿರುವ ಬಗ್ಗೆ ಮೊದಲು ತುಳಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಮತ್ತು ಬಳಿಕವೇ ಮನೆಯೊಳಗೆ ಹೋಗಬೇಕು.
೧ ಆ. ಅನೇಕ ದಿನಗಳಿಗಾಗಿ ಪರವೂರಿಗೆ ಹೋಗುವಾಗ ಸಾಧಕರು ತುಳಸಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ಅವಳಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು ! : ಸಾಧಕರು ಅನೇಕ ದಿನಗಳಿಗಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಉದಾ. ಸಾಧಕರು ಪರವೂರಿಗೆ ಹೋಗುತ್ತಿದ್ದರೆ ಅವರು ತುಳಸಿಗೆ ಪ್ರಾರ್ಥನೆಯನ್ನು ಮಾಡಬೇಕು ಮತ್ತು ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು. ಪರವೂರಿನಿಂದ ಮನೆಗೆ ಮರಳಿ ಬಂದ ಬಳಿಕವೂ ಸಾಧಕರು ಒಮ್ಮೆ ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು.
– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮ ದಿಂದ, ೨೧.೪.೨೦೨೧ (ಶ್ರೀರಾಮನವಮಿ), ರಾತ್ರಿ ೯ ಗಂಟೆಗೆ)
(ಸಪ್ತರ್ಷಿಗಳಿಂದ ಇಂತಹ ಉಪಾಯ ತಿಳಿಯುವುದಕ್ಕಿಂತ ಕೆಲವು ತಿಂಗಳು ಮೊದಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ರವಾಸದಲ್ಲಿದ್ದಾಗ ಸಾಧಕರಿಗೆ ಚೆನ್ನೈಯಲ್ಲಿರುವ ಸನಾತನದ ಸೇವಾಕೇಂದ್ರದ ಹೊರಗೆ ತುಳಸಿಯನ್ನು ಇಡಲು ಹೇಳಿದ್ದರು. ಇದರಿಂದ ‘ಗುರುತತ್ತ್ವ ಮತ್ತು ಸಪ್ತರ್ಷಿ ಒಂದೇ ಆಗಿದ್ದಾರೆ’, ಎನ್ನುವುದು ಗಮನಕ್ಕೆ ಬರುತ್ತದೆ. – ಸಂಕಲನಕಾರರು)
೨. ಸಾಧಕರು ಮೇಲಿನಂತೆ ಉಪಾಯಗಳನ್ನು ಮಾಡಿದರೂ ಮನೆಯಲ್ಲಿ ಏನಾದರೂ ಅನಪೇಕ್ಷಿತ ಸಂಭವಿಸಿದರೆ ಅದರ ಹಿಂದಿರುವ ಕಾರಣಗಳು !
ಮೇಲಿನಂತೆ ಉಪಾಯಗಳನ್ನು ಮಾಡಿದರೂ ಮನೆಯಲ್ಲಿ ಏನಾದರೂ ಅನಪೇಕ್ಷಿತ ಸಂಭವಿಸಿದರೆ ಸಾಧಕರು ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು,
ಅ. ಸಾಧಕರು ಅಥವಾ ಅವರ ಕುಟುಂಬದವರಿಂದ ಅಯೋಗ್ಯ ಕ್ರಿಯಮಾಣ ಘಟಿಸಿರುವುದು
ಆ. ಸಾಧಕರ ಪ್ರಾರಬ್ಧದಲ್ಲಿರುವ ಕೊಡು-ಕೊಳ್ಳುವಿಕೆ ಲೆಕ್ಕಚಾರವು ತಪ್ಪಿಸಲು ಆಗದಿರುವುದು
ಇ. ಸಾಧಕರ ದೇವರ ಮೇಲಿರುವ ಶ್ರದ್ಧೆ ಕಡಿಮೆ ಬೀಳುವುದು
ಈ. ಸಾಧಕರ ಸಾಧನೆ ಕಡಿಮೆಯಿರುವುದು
ಈ ಎಲ್ಲ ವಿಷಯಗಳು ಕಾರಣವಾಗಿರುವ ಸಾಧ್ಯತೆಯಿರುತ್ತದೆ. ಹಾಗಾಗಿ ಸಾಧಕರೇ, ಸಪ್ತರ್ಷಿಗಳು ಹೇಳಿದ ಉಪಾಯಗಳ ಲಾಭ ಪಡೆಯಲು ನಿಮ್ಮ ಸಾಧನೆ ಮತ್ತು ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಿರಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ