ಚಂದ್ರಾಮೃತ ರಸ (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಶ್ವಾಸಕಾಂಗವ್ಯೂಹವನ್ನು ಬಲಪಡಿಸುವ ಔಷಧಿಯಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
ಎಲ್ಲ ರೀತಿಯ ಕೆಮ್ಮು | ದಿನದಲ್ಲಿ 2-3 ಸಲ 1 ರಿಂದ 4 ಮಾತ್ರೆಗಳ ಚೂರ್ಣವನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ನೆಕ್ಕಬೇಕು ಅಥವಾ ಅಷ್ಟೇ ಮಾತ್ರೆಗಳನ್ನು ಮಾತ್ರ ಚೀಪಿ ತಿನ್ನಬೇಕು. | 4-5 ದಿನ |
ಶ್ವಾಸಕ್ಕೆ ಸಂಬಂಧಿಸಿದ ಎಲ್ಲ ರೋಗಗಳಲ್ಲಿ ಶ್ವಾಸಕಾಂಗವ್ಯೂಹಕ್ಕೆ ಬಲ ನೀಡಲು ಉಪಯುಕ್ತ | ದಿನದಲ್ಲಿ 2-3 ಸಲ 1-2 ಮಾತ್ರೆಗಳ ಚೂರ್ಣವನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಅಥವಾ ನೀರಿನೊಂದಿಗೆ ಸೇವಿಸಬೇಕು | 1-3 ತಿಂಗಳು |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)