ಲಶುನಾದಿ ವಟಿ (ಮಾತ್ರೆ)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಒಂದು ಉತ್ತಮ ಪಾಚಕ (ಜೀರ್ಣ ಕ್ರಿಯೆ ಉತ್ತಮಗೊಳಿಸುವ) ಎಂದು ಪ್ರಸಿದ್ಧ ಔಷಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
ಬಾಯಿಗೆ ರುಚಿ ಇಲ್ಲದಿರುವುದು, ಹಸಿವಾಗದಿರುವುದು, ಅಜೀರ್ಣವಾಗುವುದು, ಊಟದ ನಂತರ ಹೊಟ್ಟೆ ಜಡವಾಗುವುದು, ಹೊಟ್ಟೆಯಲ್ಲಿ ಗ್ಯಾಸ್ ಆಗುವುದು, ಪದೇ ಪದೇ ತೇಗು ಬರುವುದು, ಬಿಕ್ಕಳಿಕೆ ಮತ್ತು ಮೈ ತಣ್ಣಗಾಗುವುದು | ದಿನದಲ್ಲಿ 2-3 ಬಾರಿ 2-2 ಮಾತ್ರೆಗಳನ್ನು ಅಗಿದು (ಜಗಿದು) ತಿನ್ನಬೇಕು ಅಥವಾ ಬೆಚ್ಚಗಿನ ನೀರು ಅಥವಾ ಮಜ್ಜಿಗೆಯೊಂದಿಗೆ ಸೇವಿಸಬೇಕು | 1 – 2 ದಿನ |
ವಾಂತಿ – ಭೇದಿ | ಅರ್ಧ ಗಂಟೆಯ ಅಂತರದಲ್ಲಿ ದಿನವಿಡೀ ಹೆಚ್ಚೆಂದರೆ 5 ಸಲ 2 – 2 ಮಾತ್ರೆಗಳನ್ನು ಅಗಿದು ತಿನ್ನಬೇಕು. | ತಕ್ಷಣ |
ಹುಳು (ಜಂತು) ಬಾಧೆ | ಎರಡೂ ಬಾರಿ ಊಟದ ಅರ್ಧ ಗಂಟೆ ಮೊದಲು 2 ಮಾತ್ರೆಗಳು, ಹಾಗೆಯೇ ಗಂಧರ್ವ ಹರಿತಕಿ ವಟಿ 2 ಮಾತ್ರೆಗಳು ಅಥವಾ 1 ಚಮಚ ತ್ರಿಫಲಾ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಬೇಕು | 15 ದಿನಗಳು |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಉಷ್ಣತೆಯ ಲಕ್ಷಣಗಳು (ಉಷ್ಣ ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ಮೈಕೈ ಉರಿಯುವುದು, ಉರಿ ಮೂತ್ರ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆ ಸುತ್ತುವಿಕೆ ಇತ್ಯಾದಿ) ಇರುವಾಗ ಮತ್ತು ಮಲವು ಗಟ್ಟಿಯಾಗುತ್ತಿದ್ದರೆ ಈ ಔಷಧಿಯನ್ನು ಉಪಯೋಗಿಸಬಾರದು.
3. ಈ ಔಷಧ ಉಷ್ಣವಾಗಿರುವುದರಿಂದ ಬೇಸಿಗೆ ಮತ್ತು ಮಳೆಗಾಲದ ನಂತರ ಶರದ ಋತು (ಅಕ್ಟೋಬರ್ ಬಿಸಿಲು)ವಿನ ಕಾಲಾವಧಿಯಲ್ಲಿ ಜಾಗರೂಕತೆಯಿಂದ ಉಪಯೋಗಿಸಬೇಕು.
4. ಈ ಮಾತ್ರೆಗಳಲ್ಲಿ ಸೈಂಧವ ಉಪ್ಪು ಇರುವುದರಿಂದ ಇವು ಹೆಚ್ಚು ಸಮಯ ಗಾಳಿಯ ಸಂಪರ್ಕಕ್ಕೆ ಬಂದರೆ ಆರ್ದ್ರತೆಯಿಂದ ಒದ್ದೆಯಾಗಿ ಹಾಳಾಗುತ್ತವೆ. ಹಾಗಾಗಬಾರದೆಂದು ಡಬ್ಬದ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)